ಚಿತ್ರದುರ್ಗ : ಪ್ರೀತಿಸಿದ ಪ್ರಿಯಕರನ ಜೊತೆ ಮದುವೆ ಆಗಲು ಯುವತಿ ಪೋಷಕರು ಒಪ್ಪಲಿಲ್ಲ ಅನ್ನೋ ಕಾರಣಕ್ಕೆ ಪ್ರೇಮಿಗಳು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿರೋ ಈ ವ್ಯಕ್ತಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ವೃಂದಾವನ ಗ್ರಾಮದ ತಿಪ್ಪೇಸ್ವಾಮಿ, ನಾಲೆಯಲ್ಲಿ ಸತ್ತುಬಿದ್ದಿರೋ ಈ ಯುವತಿ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮದ ಪುಷ್ಪಲತಾ. ಈ ಘಟನೆ ನಡೆದಿರೋದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೂನಿಕೆರೆ ಗ್ರಾಮದ ಹೊರವಲಯದ ನಾಲೆ ಬಳಿ. ಹೀಗೆ ದಾರುಣವಾಗಿ ಸಾವನ್ನಪ್ಪಿರೋ ಇವರಿಬ್ಬರು ಪರಿಚಯ ಆಕಸ್ಮಿಕ ಆದರೂ ಪರಿಚಯ ಪ್ರೇಮಕ್ಕೆ ತಿರುಗಿತ್ತು. ವೃಂದಾವನ ಗ್ರಾಮದ ತಿಪ್ಪೇಸ್ವಾಮಿ ಪೈಂಟಿಂಗ್ ಕೆಲಸಕ್ಕೆ ಅಂತ ಉಡುವಳ್ಳಿಗೆ ಬಂದು ಹೋಗುತ್ತಿದ್ದ. ಹಾಗ ಇದೇ ಗ್ರಾಮದ ಪುಷ್ಪಲತಾ ತಿಪ್ಪೇಸ್ವಾಮಿ ಜೊತೆ ಸ್ನೇಹ ಬೆಳಸಿಕೊಂಡಿದ್ದಲು, ಅಲ್ಲದೇ ಸಲಿಗೆಯ ಒಡನಾಟ ಬೆಳಸಿಕೊಂಡಿದ್ದಳು.
ಕಾಲ ಕಳೆದಂತೆ, ದಿನಗಳು ಉರುಳಿದಂತೆ ಸ್ನೇಹ ಪ್ರೇಮವಾಗಿ ಮಾರ್ಪಟ್ಟಿತ್ತು. ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿರೋ ಈಕೆ ಓದಿನಕಡೆ ಗಮನ ಬಿಟ್ಟು ಪ್ರೇಮ ಪಾಷಕ್ಕೆ ಬಿದ್ದಿದ್ದಳು ಅನ್ನೋದು ಕುಟುಂಬದ ಪೋಷಕರಿಗೆ ತಿಳಿದಿತ್ತು. ಆದ್ದರಿಂದ ಇವರಿಬ್ಬರ ಪ್ರೀತಿಗೆ ಪೋಷಕರು ನಿರಾಕರಿಸಿದ್ದರು. ಅದಕ್ಕೆ ಕಾರಣವೂ ಇದೆ. ಹೀಗೆ ಊರಿಂದ ಊರಿಗೆ ಬಂದು ಪೈಂಟಿಂಗ್ ಕೆಲಸಕ್ಕೆ ಬಂದು ಹೋಗುತ್ತಿದ್ದ ತಿಪ್ಪೇಸ್ವಾಮಿ ಇನ್ನು ಚಿರ ಯುವಕ ಅಂದುಕೊಂಡಿದ್ದವರಿಗೆ ಅಸಲಿ ಸತ್ಯ ಗೊತ್ತಾಗಿತ್ತು. ಅದೇನಂದ್ರೆ ತಿಪ್ಪೇಸ್ವಾಮಿ ಈಗಾಗಲೇ ಮದುವೆ ಆಗಿದ್ದಾನೆ, ಆತನಿಗೆ ಪತ್ನಿ ಇಬ್ಬರು ಮಕ್ಕಳಿದ್ದಾರೆ ಅಂತ.
ಆದ್ದರಿಂದಲೇ ಇಷ್ಟು ವರ್ಷಗಳ ಕಾಲ ಚೆನ್ನಾಗಿ ಸಾಕಿ ಸಲಹಿ, ವಿದ್ಯಾಭ್ಯಾಸ ಮಾಡಿಸಿರೋ ಮಗಳನ್ನ ತಿಪ್ಪೇಸ್ವಾಮಿಗೆ ಕೊಟ್ಟು ಮದುವೆ ಮಾಡೋಕೆ ಬಿಲ್ ಕುಲ್ ಒಪ್ಪಿರಲಿಲ್ಲ. ಆದ್ದರಿಂದಲೇ ತಿಪ್ಪೇಸ್ವಾಮಿ ಮತ್ತು ಪುಷ್ಪಲತಾ ಇಬ್ಬರು ಮಾತಾಡಿಕೊಂಡು ಎಲ್ಲಾದ್ರೂ ಓಡಿ ಹೋಗಿ ಮದುವೆ ಆಗೋ ಪ್ಲಾನ್ ಮಾಡಿಕೊಂಡಿದ್ದರು.
ಇದನ್ನೂ ಓದಿ: 16 ಕೋಟಿಯ ಔಷಧಕ್ಕೆ ಹಣ ಸಿಗದೇ ಮಗು ಸಾವು, ಅದಕ್ಕಾಗಿ ಕೂಡಿಸಿಟ್ಟ ಹಣವನ್ನೆಲ್ಲಾ ರೋಗಿಗಳಿಗೆ ಹಂಚುತ್ತಿರುವ ಪೋಷಕರು
ಅದರಂತೆ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದರು. ಹೀಗೆ ಮದುವೆ ಆಗಿ ಹೊಸ ಜೀವನ ಕಟ್ಟಿಕೊಳ್ಳೋ ಆಸೆ ಇಟ್ಟುಕೊಂಡಿದ್ದ ಪ್ರೇಮಿಗಳಿಗೆ ಅದೇನಾಯಿತೋ ಏನೋ ಅವರ ನಿರ್ಧಾರವನ್ನ ಅದ್ಯಾಕೆ ಬದಲಾಯಿಸಿಕೊಂಡರೋ ಗೊತ್ತಿಲ್ಲ, ಈಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡು ಜೀವ ಬಿಟ್ಟಿದ್ದಾರೆ. ಪುಷ್ಪಲತಾ ವಿಷ ಸೇವಿಸಿದ್ರೆ, ತಿಪ್ಪೇಸ್ವಾಮಿ ಬೆವಿನ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ. ವಿಪರ್ಯಾಸ ಅಂದ್ರೆ ಇವರಿಬ್ಬರು ಸತ್ತು ವಾರದ ಬಳಿಕ ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆ ಆಗಿವೆ.
ಕೂಡಲೇ ಸ್ಥಳಕ್ಕೆ ಬೇಟಿ ನೀಡಿರೋ ಹಿರಿಯೂರು ಗ್ರಾಮಾಂತರ ಠಾಣೆ ಪೋಲೀಸರು ಪ್ರಕರಣ ಕುರಿತು ತನಿಖೆ ನಡೆಸಿದ್ದಾರೆ. ಆದರೇ ಯುವತಿಯ ಪೋಷಕರು ಇದು ಆತ್ಮಹತ್ಯೆ ಅಲ್ಲ, ಮೃತದೇಹದ ಪಕ್ಕದಲ್ಲಿ ಮದ್ಯದದ ಬಾಟಲಿಗಳು ಲೋಟಗಳು ಇವೆ. ಇಬ್ಬರು ಬೇರೆ ಬೇರೆ ರೀತಿಯಾಗಿ ಸತ್ತು ಬಿದ್ದಿರೋದನ್ನ ನೋಡಿದ್ರೆ ಇದು ಕೊಲೆಯಾಗಿರೋ ಸಂಶಯ ಬರುತ್ತದೆ. ಇದನ್ನ ಪೋಲೀಸರು ತನಿಖೆ ಮಾಡಿ ನ್ಯಾಯ ಕೊಡಿಸಬೇಕು ಅಂತ ಆಗ್ರಹಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ