ಉಡುಪಿಯಲ್ಲಿ ಕೃಷ್ಣ ದರ್ಶನಕ್ಕೆ ಸದ್ಯಕ್ಕಿಲ್ಲ ಅವಕಾಶ: ಪರ್ಯಾಯ ಶ್ರೀ ಈಶಪ್ರಿಯ ತೀರ್ಥ

ಲಾಕ್ ಡೌನ್ ಅವಧಿಯಲ್ಲಿ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಆಗುತ್ತಿತ್ತು. ಮುಂದಿನ ಹದಿನೈದು ದಿನಗಳವರೆಗೆ ಇದು ಮುಂದುವರಿಯಲಿದೆ. ಕೃಷ್ಣ ಮಠದ ಒಳಗೆ ನಡೆಯುವ ಷೋಡಶೋಪಚಾರ ಪೂಜೆಗಳು ನಿರಂತರವಾಗಿ ನಡೆಯಲಿದೆ.

news18-kannada
Updated:May 30, 2020, 7:11 AM IST
ಉಡುಪಿಯಲ್ಲಿ ಕೃಷ್ಣ ದರ್ಶನಕ್ಕೆ ಸದ್ಯಕ್ಕಿಲ್ಲ ಅವಕಾಶ: ಪರ್ಯಾಯ ಶ್ರೀ ಈಶಪ್ರಿಯ ತೀರ್ಥ
ಉಡುಪಿ ಶ್ರೀ ಕೃಷ್ಣ ದೇಗುಲ.
  • Share this:
ಉಡುಪಿ: ಸರ್ಕಾರ ಜೂನ್ 1ರಿಂದ ರಾಜ್ಯದ ಎಲ್ಲ ದೇವಾಲಯಗಳನ್ನ ತೆರೆಯುವಂತೆ ಸೂಚನೆ ನೀಡಿದರೂ ಕೃಷ್ಣನಗರಿಯ ಜನತೆಗೆ ಮಾತ್ರ ಕೃಷ್ಣ ದೇವರ ದರ್ಶನ ಪಡೆಯುವ ಸಮಯ ಇನ್ನೂ ಬಂದಿಲ್ಲ. ಜೂನ್  ಹದಿನೈದರವರೆಗೆ  ಉಡುಪಿ ಶ್ರೀಕೃಷ್ಣ ಮಠದಲ್ಲಿ  ಶ್ರೀಕೃಷ್ಣ ದರ್ಶನ ಇಲ್ಲ ಎಂದು ಪರ್ಯಾಯ ಅದಮಾರು ಮಠ ಪ್ರಕಟಣೆ ಹೊರಡಿಸಿದೆ.

ಜೂನ್ ಒಂದರಿಂದ ರಾಜ್ಯದ ಎಲ್ಲ ಮಠ-ಮಂದಿರಗಳನ್ನು ತೆರೆಯಬಹುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಆದರೆ ಮುಂದಿನ 15 ದಿನಗಳ ಕಾಲ ರಾಜ್ಯದಲ್ಲಿ ಕೊರೋನಾ ಹಾವಳಿ ಮತ್ತಷ್ಟು ಮಿತಿಮೀರುವುದರಿಂದ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಕೊರೋನಾ ರಾಜ್ಯದಲ್ಲಿ ಆವರಿಸಲಿರುವ ಚಿತ್ರಣ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಾಹಿತಿ ನೀಡಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಆಗುತ್ತಿತ್ತು. ಮುಂದಿನ ಹದಿನೈದು ದಿನಗಳವರೆಗೆ ಇದು ಮುಂದುವರಿಯಲಿದೆ. ಕೃಷ್ಣ ಮಠದ ಒಳಗೆ ನಡೆಯುವ ಷೋಡಶೋಪಚಾರ ಪೂಜೆಗಳು ನಿರಂತರವಾಗಿ ನಡೆಯುತ್ತಾ ಇರುತ್ತೆ. ಮಠದ ಸಿಬ್ಬಂದಿಗೆ ಮಾತ್ರ ಒಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಪರಿಸ್ಥಿತಿಯ ಪರಾಮರ್ಶೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅದಮಾರು ಮಠ ಹೇಳಿದೆ.

ಇದನ್ನು ಓದಿ: ಜೆಡಿಎಸ್-ಕಾಂಗ್ರೆಸ್ ನಡುವೆ ಮುಂದುವರೆದ ಜಟಾಪಟಿ; ಜಿಪಂ ಅಧ್ಯಕ್ಷೆ, ಎಚ್.ಡಿ.ರೇವಣ್ಣ ಆರೋಪ-ಪ್ರತ್ಯಾರೋಪ

 
First published: May 30, 2020, 7:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading