Udupi lawyer: ಬಡ ಕೂಲಿ ಕಾರ್ಮಿಕನ ಕುಟುಂಬಕ್ಕೆ ವಂಚನೆ, ಉಡುಪಿ ವಕೀಲನಿಗೆ ಜೀವಾವಧಿ ಶಿಕ್ಷೆ

ಉಡುಪಿ ವಕೀಲ ನಕಲಿ ದಾಖಲೆ ಸೃಷ್ಟಿಸಿ ವಿಮಾ ಪರಿಹಾರವನ್ನು ಲಪಟಾಯಿಸಿ ಸಂತ್ರಸ್ತರಿಗೆ 2.5 ಲಕ್ಷ ರೂ. ವಂಚಿಸಿದ್ದ, ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಅಲೆವೂರು ಪ್ರೇಮರಾಜ ಕಿಣಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ

ಉಡುಪಿ ನ್ಯಾಯಾಲಯ

ಉಡುಪಿ ನ್ಯಾಯಾಲಯ

  • Share this:
ಬಡ ಕೂಲಿ ಕಾರ್ಮಿಕರೊಬ್ಬರ (Mercenary labor) ಕುಟುಂಬಕ್ಕೆ ಅಪಘಾತ ವಿಮಾ (Accident Insurance) ಪರಿಹಾರ ಹಣ ಕೊಡಿಸಬೇಕಿದ್ದ ವಕೀಲ, ಆ ಹಣವನ್ನು ತಾನೇ ಲಪಟಾಯಿಸಿ ವಂಚಿಸಿದ್ದ ವಕೀಲನಿಗೆ (Lawyer) ತಕ್ಕ ಶಾಸ್ತಿಯಾಗಿದೆ. ವಕೀಲ ಅಲೆವೂರು ಪ್ರೇಮರಾಜ ಕಿಣಿಗೆ ನಕಲಿ ದಾಖಲೆ ಸೃಷ್ಟಿಸಿ ಅಪಘಾತ ವಿಮೆ ಪರಿಹಾರವನ್ನು ಲಪಟಾಯಿಸಿ ಸಂತ್ರಸ್ತರಿಗೆ 2.5ರೂ ಲಕ್ಷ ವಂಚಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಭೀತಾದ ಹಿನ್ನೆಲೆ ಉಡುಪಿ ನ್ಯಾಯಾಲಯವು (Udupi Court) ವಕೀಲ ಪ್ರೇಮರಾಜ ಕಿಣಿಗೆ (Premaraja Kinige) ಎಂಬಾತನಿಗೆ ಜೀವಾವದಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶುಕ್ರವಾರ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದು, ಎರಡನೇ ಆರೋಪಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಿದ್ದಾರೆ.

ದಲಿತ ಕೂಲಿ ಕಾರ್ಮಿಕ ಕುಟುಂಬಕ್ಕೆ ಅನ್ಯಾಯ

ಪ್ರಕರಣದ ಎರಡನೇ ಆರೋಪಿ ವಿನಯ ಕುಮಾರ್‌, ಮೃತಪಟ್ಟಿರುವ ಮೂರನೇ ಆರೋಪಿ ಹರಿಶ್ಚಂದ್ರ ಆಚಾರ್ಯ ಅವರೊಂದಿಗೆ ಸೇರಿ ಬೆಳ್ತಂಗಡಿ ತಾಲೂಕಿನ ನಾರಾವಿಯ ಬಡ ದಲಿತ ಕೂಲಿ ಕಾರ್ಮಿಕ ಸಾಧು ಮತ್ತು ಕುಟುಂಬಕ್ಕೆ ವಂಚಿಸಿ ಸುಮಾರು 2.5 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಅಪಘಾತ ವಿಮಾ ಪರಿಹಾರವನ್ನು ಕಬಳಿಸಿರುವ ಬಗ್ಗೆ ಉಡುಪಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.

ಪ್ರೇಮರಾಜ ಕಿಣಿಗೆಗೆ ಜೀವಾವಧಿ ಶಿಕ್ಷೆ

ದಲಿತ ಕುಟುಂಬದ ಪರವಾಗಿ ಉಡುಪಿಯ ದಲಿತ ಮುಖಂಡ ಜಯನ್‌ ಮಲ್ಪೆ ನೇತೃತ್ವದಲ್ಲಿ ದಸಂಸ ಹೋರಾಟ ನಡೆಸಿತ್ತು. ಪ್ರಕರಣದ 3ನೇ ಆರೋಪಿ ಮೃತಪಟ್ಟಿದ್ದು, ಪ್ರಕರಣದ ವಿಚಾರಣೆ ವೇಳೆ ಪ್ರೇಮರಾಜ ಕಿಣಿಗೆಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಇದನ್ನೂ ಓದಿ: Hijab Row: ಉಡುಪಿಯ MGM ಕಾಲೇಜಿನ PUC ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ; ನಿಲ್ಲದ ಹಿಜಾಬ್ ಗೊಂದಲ

ಅಪಘಾತ ವಿಮೆ ಹಣ ಕೊಡಿಸೋದಾಗಿ ವಂಚನೆ

ಬೆಳ್ತಂಗಡಿ ತಾಲೂರು ನಾರವ ಮಡಕೋಡು ಗ್ರಾಮದ ಕಡಂಬಿಲದ ಬಡ ಕೂಲಿ ಕಾರ್ಮಿಕರಾದ ಚಂಬು ಅವರ ಪತ್ನಿ ಕುಂದಾದು 2002 ರ ಮೇ 13 ರಂದು ಕೊಲ್ಲೂರಿಗೆ ತೆರಳುತ್ತಿರುವಾಗ ಕಾರ್ಕಳದ ಕಸಬಾ ಗ್ರಾಮದ ಸಾಲ್ಮರದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಪತಿ ಚಂಬು ಹಾಗೂ ಅವರ ಮಕ್ಕಳಾದ ಅಣ್ಣು, ಸಾಧು ಅಕ್ಕು ಹಾಗೂ ಕಜವೆ ಅಪಘಾತ ವಿಮಾ ಪರಿಹಾರ ಕೊರಿ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಪರಿಹಾರಕ್ಕೆ ಮೇಲ್ಮನವಿ ಸಲ್ಲಿಸಿದ್ದ ಕುಟುಂಬ

ಈ ಪ್ರಕರಣ ಉಡುಪಿ ನ್ಯಾಯಾಲಯದಲ್ಲಿ ತನಿಖೆಯಾಗಿದ್ದು, ನ್ಯಾಯಾಲಯ 2003ರ ಆಗಸ್ಟ್‌ನಲ್ಲಿ 1,22,400 ರೂ. ಪರಿಹಾರ ಹಾಗೂ ಬಡ್ಡಿ ಸೇರಿ 1,33,246 ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು. ಅದನ್ನು ಪಡೆದ ಚಂಬು ಕುಟುಂಬ ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ಪುರಸ್ಕರಿಸಿದ್ದ ಹೈಕೋರ್ಟ್‌ ಪರಿಹಾರ ನೀಡುವಂತೆ ಆದೇಶ ನೀಡಿತ್ತು.

ನಕಲಿ ವ್ಯಕ್ತಿಗಳನ್ನ ಸೃಷ್ಟಿಸಿ ವಂಚನೆ

ಹೈಕೋರ್ಟ್‌ ಆದೇಶದಂತೆ ವಿಮಾ ಕಂಪನಿ 1,85,600 ರೂ. ಬಡ್ಡಿ ಸೇರಿ ಒಟ್ಟು 2,57,549 ರೂ. ಮೊತ್ತದ ಹಣವನ್ನು ನ್ಯಾಯಾಲಯದಲ್ಲಿ ಜಮೆ ಮಾಡಿತ್ತು. ಆದರೆ ಈ ಹಂತದಲ್ಲಿ ಆರೋಪಿಗಳು ಪಿರ್ಯಾದುದಾರರು, ನ್ಯಾಯಾಲಯ ಹಾಗೂ ಬ್ಯಾಂಕ್‌ ಅಧಿಕಾರಿಗಳನ್ನು ವಂಚಿಸಿ ಬಡ ಕುಟುಂಬಕ್ಕೆ ಸಿಗಬೇಕಿದ್ದ ಪರಿಹಾರ ಮೊತ್ತವನ್ನು ನಕಲಿ ದಾಖಲೆ ಹಾಗೂ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಪೂರ್ತಿ ಹಣವನ್ನು ಪಿರ್ಯಾದುದಾರರ ಅರಿವಿಗೆ ಬಾರದಂತೆ ಲಪಟಾಯಿಸಿದ್ದರು.

ಇದನ್ನೂ ಓದಿ: Holiday Plan: ಉಡುಪಿಗೆ ಹೋಗೋಣ ಬನ್ನಿ, ಪುಟ್ಟ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಇವು

ಅಪಘಾತ ವಿಮೆ ಪಡೆಯಲು ನಕಲಿ ದಾಖಲೆ ಸೃಷ್ಟಿಸಿ ವಿಮಾ ಪರಿಹಾರವನ್ನು ಲಪಟಾಯಿಸಿ ಸಂತ್ರಸ್ತರಿಗೆ 2.5 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉಡುಪಿ ವಕೀಲ ಅಲೆವೂರು ಪ್ರೇಮರಾಜ ಕಿಣಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ಆದೇಶಿಸಿದೆ. ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದು, ಎರಡನೇ ಆರೋಪಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಿದ್ದಾರೆ.
Published by:Pavana HS
First published: