Karkala Utsava 2022: ಇಂದಿನಿಂದ ಕಾರ್ಕಳ ಉತ್ಸವದ ಸಡಗರ, ಪೌರಕಾರ್ಮಿಕರನ್ನು ಹೆಲಿಕಾಪ್ಟರ್​ನಲ್ಲಿ ಕರೆದೊಯ್ದ ಶಾಸಕ ಸುನೀಲ್ ಕುಮಾರ್

ಕಾರ್ಕಳ ಉತ್ಸವಕ್ಕೆ ಇಂದು ಸಂಜೆ 5 ಗಂಟೆಗೆ ಗಾಂಧಿ ಮೈದಾನದಲ್ಲಿ ಚಾಲನೆ ದೊರೆಯಲಿದೆ. ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ.

ಹೆಲಿಕಾಪ್ಟರ್​ನಲ್ಲಿ ಪೌರಕಾರ್ಮಿಕರು

ಹೆಲಿಕಾಪ್ಟರ್​ನಲ್ಲಿ ಪೌರಕಾರ್ಮಿಕರು

  • Share this:
ಉಡುಪಿ (ಮಾ 10): ಕನ್ನಡ ಹಾಗೂ ಸಂಸ್ಕೃತಿ (Kannada and Culture) ಇಲಾಖೆ ವತಿಯಿಂದ ಉಡುಪಿ (Udupi) ಕಾರ್ಕಳ ಉತ್ಸವ  2022 ಅದ್ದೂರಿಯಾಗಿ ನಡೆಯುತ್ತಿದೆ. 1916ರಲ್ಲಿ ಅಂಗ್ಲರ ಕಾಲದಲ್ಲಿ ನಿರ್ಮಾಣಗೊಂಡ ಈ ಕಾರ್ಕಳ ತಾಲೂಕಿಗೆ  105 ವರ್ಷವಾಗಿದೆ. ಕಾರ್ಕಳ ನೆಲ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಶಿಲ್ಪಕಲೆ, ಸಂಸ್ಕೃತಿ, ಪ್ರವಾಸೋದ್ಯಮಮ ಕ್ಷೇತ್ರಗಳ ತವರು ನೆಲದಲ್ಲಿ ಭಾಷೆ, ಕಲೆ, ಸಂಸ್ಕೃತಿಗಳ ಕಲರವ ಕಾರ್ಕಳ ಉತ್ಸವವಾಗಿದ್ದು, 10 ದಿನಗಳ ಕಾಲ ನಡೆಯೋ ಈ ಕಾರ್ಕಳ ಉತ್ಸವಕ್ಕೆ (Karkala Utsava 2022 ) ಇಂದು ಚಾಲನೆ ದೊರೆಯಲಿದೆ. ಕಾರ್ಕಳ ತಾಲೂಕು ಘೋಷಣೆಯಾಗಿ 105 ವರ್ಷಗಳಾಗಿದೆ. ಸುವರ್ಣ ವರ್ಷವಾಗಿ ಈ ಹಿಂದೆಯೇ ಆಚರಿಸಲ್ಪಡಬೇಕಿತ್ತು.  ಆದ್ರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಇದೀಗ ಕಾರ್ಕಳ ಉತ್ಸವದ ಸಂಭ್ರಮ ಹಿಮ್ಮಡಿಗೊಂಡಿದೆ.  ಶಾಸಕ ಸುನೀಲ್​ ಕುಮಾರ್ (MLA Sunil Kumar)​  ಪೌರಕಾರ್ಮಿಕರನ್ನು ಹೆಲಿಕಾಪ್ಟರ್​ನಲ್ಲಿ ಕರೆದೊಯ್ದಿದ್ದಾರೆ. 

ಶಾಸಕ ಸುನೀಲ್​ ಕುಮಾರ್​ ಕಾರ್ಕಳ ತಾಲೂಕನ್ನು ಸ್ವರ್ಣ ಕಾರ್ಕಳ, ಸ್ವಚ್ಛ ಕಾರ್ಕಳ ಎಂದು ಘೋಷಿಸಿದ್ದಾರೆ. ಸ್ವರ್ಣ ಕಾರ್ಕಳದ ಬಗ್ಗೆ ದೊಡ್ಡ ಕನಸು ಕಂಡಿದ್ದರೇ, ಸಾಕಾರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.

ಕಾರ್ಕಳ ಉತ್ಸವದ ಸಡಗರ

ಕಾರ್ಕಳ ತಾಲೂಕಿನ ಜನರಲ್ಲಾ ಒಂದಾಗಿ ಉತ್ಸವ ಆಚರಿಸುತ್ತಿದ್ದಾರೆ. ಜೊತೆಗೆ ರಾಜಕೀಯದ ಎಲ್ಲೆ ಮೀರಿ ಉತ್ಸವದ ಯಶಸ್ಸಿಗೆ ಎಲ್ಲರು ಕೈಜೋಡಿಸಿದ್ದಾರೆ. 6 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವೀರಪ್ಪ ಮೋಯ್ಲಿ  ಕಾರ್ಕಳ ಉತ್ಸವಕ್ಕೆ ಶುಭಕೋರಿ ಉತ್ಸವದಲ್ಲಿ ಭಾಗಿಯಾಗೋದಾಗಿ ಹೇಳಿದ್ದಾರೆ. ಶಾಸಕ ದಿ.ಗೋಪಾಲ ಭಂಡಾರಿ ಅವರ ಹೆಸರನ್ನು ವೇದಿಕೆಗೆ ಇಡಲಾಗಿದೆ. ತಾಲೂಕಿನಲ್ಲಿ ಮಹಾತ್ಮರನ್ನು ನೆನಪಿಸುವ ಕಾರ್ಯ ಹಲವು ರೂಪಗಳಲ್ಲಿ ನಡೆಯುತ್ತಿದೆ. ಉತ್ಸವಕ್ಕಾಗಿ ಮಸೀದಿ ಮಂದಿರಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

ಇಂದು ಸಂಜೆ 5 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ

ಕಾರ್ಕಳ ಉತ್ಸವಕ್ಕೆ ಇಂದು ಸಂಜೆ 5 ಗಂಟೆಗೆ ಗಾಂಧಿ ಮೈದಾನದಲ್ಲಿ ಚಾಲನೆ ದೊರೆಯಲಿದೆ. ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಯಕ್ಷರಂಗಾಯಣ ಕೇಂದ್ರದಿಂದ ದೂತ ನಾಟಕ ಪ್ರದರ್ಶನ, ದೃಶ್ಯಕಲಾ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ 10 ದಿನಗಳ ಕಾಲ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಗಾಂಧಿ ಮೈದಾನ, ಸ್ವರಾಜ್​ ಮೈದಾನಗಳಲ್ಲಿ ನಡೆಯಲಿವೆ. ಬಳಿಕ ಮಾರ್ಚ್​ 18ಕ್ಕೆ ಕಾರ್ಕಳ ಉತ್ಸವದ ಮೆರವಣಿಗೆ ಸಹ ನಡೆಯಲಿದೆ.

ಇದನ್ನೂ ಓದಿ: Karnataka Assembly: ಸದನದಲ್ಲಿ ‘ಈಗಲ್ಟನ್​ ರೆಸಾರ್ಟ್​‘ ಗದ್ದಲ, ಸಿದ್ದರಾಮಯ್ಯ, ಕುಮಾರಸ್ವಾಮಿ ಟಾಕ್​ವಾರ್​

ಪೌರಕಾರ್ಮಿಕರನ್ನು ಹೆಲಿಕಾಪ್ಟರ್​ನಲ್ಲಿ ಕರೆದೊಯ್ದ ಶಾಸಕ

ಕಾರ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರೋ ಶಾಸಕ ಸುನೀಲ್ ಕುಮಾರ ಇಂದು ಪೌರಕಾರ್ಮಿಕರನ್ನು ಹೆಲಿಕಾಪ್ಟರ್​ನಲ್ಲಿ ಕರೆದೊಯ್ದಿದ್ದಾರೆ. ಬೆಂಗಳೂರಿನಲ್ಲಿ ಪೌರಕಾರ್ಮಿಕರ ಬೃಹತ್​ ಪ್ರತಿಭಟನೆ ನೆಡಯುತ್ತಿದೆ. ಎಲ್ಲಾ ಜಿಲ್ಲೆಯ ಪೌರಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಕಾರ್ಕಳದಲ್ಲಿ ಉತ್ಸವವಿರೋ ಹಿನ್ನೆಲೆ ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪೌರಕಾರ್ಮಿಕರನ್ನು ಹೆಲಿಕಾಪ್ಟರ್​ ಮೂಲಕ ಕರೆದೊಯ್ದಿದ್ದಾರೆ.  ಶಾಸಕರಿಂದ ಹೆಲಿಕಾಪ್ಟರ್​ನಲ್ಲಿ ಓಡಾಡಿದ ಭಾಗ್ಯ ಪೌರಕಾರ್ಮಿಕ ಪಾಲಾಗಿದೆ. ಬಿಬಿಎಂಪಿ ಸಹ ಪ್ರತಿ ವರ್ಷ ಪೌರಕಾರ್ಮಿಕರನ್ನು ಸಿಂಗಾಪೂರ್ ಟ್ರಿಪ್​ಗೆ ಕರೆದುಕೊಂಡು ಹೋಗ್ತಿದ್ರು. ಆದ್ರೆ ಕೊರೊನಾ ಬಳಿಕ 2 ವರ್ಷಗಳಿಂದ ಪೌರಕಾರ್ಮಿಕರಿಗೆ ಪ್ರವಾಸದ ಚಾನ್ಸ್​ ಮಿಸ್​ ಆಗಿದೆ.

ಇದನ್ನೂ ಓದಿ:ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ CM ಸಂತಸ; ರಾಜ್ಯದಲ್ಲೂ ಮತ್ತೆ ಬರಲಿದೆ ಬಿಜೆಪಿ ಸರ್ಕಾರ ಎಂದ Basavaraja Bommai

ಸ್ವಚ್ಚ ಕಾರ್ಕಳ ಸುಂದರ ಕಾರ್ಕಳ

ಶಾಸಕ ಸುನೀಲ್​ ಕುಮಾರ್​ ಕಾರ್ಕಳ ತಾಲೂಕನ್ನು ಸ್ವರ್ಣ ಕಾರ್ಕಳ, ಸ್ವಚ್ಛ ಕಾರ್ಕಳ ಎಂದು ಘೋಷಿಸಿದ್ದಾರೆ. ಸ್ವಚ್ಛ ಕಾರ್ಕಳ ನಿರ್ಮಾಣಕ್ಕೆ ಶಾಸಕರ ಜೊತೆ ಹಲವು ಸಂಘ ಸಂಸ್ಥೆಗಳು, ಯುವ ಜನರು ಸಹ ಸಾಥ್​ ನೀಡ್ತಿದ್ದಾರೆ. ಸ್ವಚ್ಛ ಭಾರತ್​ ಅಭಿಯಾನದ ಅಡಿ ತಾಲೂಕನ್ನು ಸ್ವಚ್ಚವಾಗಿಡಲು ಶಾಸಕರು ಹಲವು ಯೋಜನೆ ಕೈಗೊಂಡಿದ್ದಾರೆ. ಉತ್ಸವದಲ್ಲೂ ಸ್ವಚ್ಛತೆ ಕಾಪಾಡಲು ಕರೆ ನೀಡಿದ್ದಾರೆ. ಹೀಗಾಗಿ ತಾವೇ ಬಂದು ಪೌರಕಾರ್ಮಿಕರನ್ನು ಪ್ರತಿಭಟನೆಯಿಂದ ಮನವೊಲಿಕೆ ಮಾಡಿ ಕರೆದೊಯ್ದಿದ್ದಾರೆ. ಹೆಲಿಕಾಪ್ಟರ್​ ಕರೆತಂದು ಕಾರ್ಯಕ್ರಮಕ್ಕಾಗಿ ಪೌರಕಾರ್ಮಿಕರನ್ನು ಕರೆದೊಯ್ದಿರೋದು ನಿಜಕ್ಕೂ ವಿಶೇಷವಾಗಿದೆ.
Published by:Pavana HS
First published: