Bus Fight- ಯುವತಿಯರನ್ನ ಚುಡಾಯಿಸಿದ್ದಕ್ಕೆ ರಾಜಾಹುಲಿ ಸಿನಿಮಾದಂತೆ ಬಸ್​ನಲ್ಲೇ ಫೈಟಿಂಗ್

ಒಂದು ಗ್ರಾಮದ ಕೆಲ ಯುವತಿಯರನ್ನ ಬಸ್ಸಿನಲ್ಲಿ ಮತ್ತೊಂದು ಗ್ರಾಮದ ಯುವಕರು ಚುಡಾಯಿಸುತ್ತಾರೆ. ಈ ಘಟನೆಯು ಎರಡೂ ಗ್ರಾಮಗಳ ಕೆಲ ವ್ಯಕ್ತಿಗಳ ಮಧ್ಯೆ ಗಲಾಟೆಗೆ ಕಾರಣವಾಗಿದೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೋಲಾರದ ಶ್ರೀನಿವಾಸಪುರದಲ್ಲಿ ಬಸ್​ನೊಳಗೆ ನಡೆದ ಫೈಟ್

ಕೋಲಾರದ ಶ್ರೀನಿವಾಸಪುರದಲ್ಲಿ ಬಸ್​ನೊಳಗೆ ನಡೆದ ಫೈಟ್

  • Share this:
ಕೋಲಾರ: ರಾಕಿಂಗ್ ಸ್ಟಾರ್ ಯಶ್ ನಟನೆಯ ರಾಜಾಹುಲಿ (Rajahuli movie of Yash) ಸಿನಿಮಾ ಎಲ್ಲರೂ ನೋಡಿಯೇ ಇರ್ತೀರಾ. ಆ ಸಿನಿಮಾದಂತೆಯೇ ಕೋಲಾರದಲ್ಲೂ ಒಂದು ಘಟನೆ ನಡಿದಿದೆ. ಬಸ್​ನಲ್ಲಿ ಹೋಗ್ತಿರೊ ಹುಡುಗೀನ ಚುಡಾಯಿಸಿದ್ದಕ್ಕೆ ರೊಚ್ಚಿಗೆದ್ದ ಹುಡುಗಿ ಕಡೆಯವರು ಹಿಗ್ಗಾ ಮುಗ್ಗಾ ಥಳಿಸಿದ್ರೆ, ಇತ್ತ ಒದೆ ತಿಂದವರು ಮತ್ತೆ ದೊಣ್ಣೆಗಳಿಂದ ದಾಳಿ ಮಾಡಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೊಳ್ ಗ್ರಾಮದ ಯುವಕರು ಹಾಗು ಪಕ್ಕದಲ್ಲೇ ಇರುವ ಕೊಂಡಾಮರಿ ಮತ್ತು ಗೌನಿನಪಲ್ಲಿ ಗ್ರಾಮದ ಯುವಕರ ಮಧ್ಯೆ ಇತ್ತೀಚೆಗೆ ನಡೆದಿರುವ ಸ್ಟ್ರೀಟ್ ಪೈಟಿಂಗ್ ಇದು.

ಇದೇ ಗುರುವಾರ ತಾಡಿಗೋಳ್ ಗ್ರಾಮದ ಯಶಸ್ವಿನಿ, ಗೌರಿ ಹಾಗು ಭಾವನಾ ಅವರು ಕಾಲೇಜು ಮುಗಿಸಿ ಚಿಂತಾಮಣಿಯಿಂದ ವಾಪಾಸ್ ಆಗ್ತಿದ್ದಾಗ, ಕೊಂಡಾಮರಿ ಗ್ರಾಮದ ಬಾಬು, ಅನಿಲ್, ಮಧು ಹಾಗು ಪವನ್ ಎನ್ನುವರು ಬಸ್‍ನಲ್ಲೇ ಅಸಹ್ಯವಾಗಿ ಚುಡಾಯಿಸಿದ್ದಾರೆ. ಅದಕ್ಕೆ ಬೇಸರಗೊಂಡ ಯಶಸ್ವಿನಿ ತನ್ನ ಅಣ್ಣ ಆಭಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದಾಳೆ. ಚಿಂತಾಮಣಿ ಮಾರ್ಗದ ಶೀಗಲಪಾಳ್ಯ ಬಳಿ ಬಸ್ ಹತ್ತಿದ ಅಭಿ ಹಾಗು ಸ್ನೇಹಿತರು, ಚುಡಾಯಿಸಿದ್ದ ಬಾಬು, ಪವನ್, ಅನಿಲ್ ಅವರಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಗುರುವಾರ ಈ ಘಟನೆ ನಡೆದಿದ್ದು ಶುಕ್ರವಾರ ಬಸ್​ನಲ್ಲಿ ನಡೆದ ಹಲ್ಲೆಯ ವಿಡಿಯೋ ವಾಟ್ಸಾಪ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿಹೋಗಿದೆ. ಇದರಿಂದ ಕೆರಳಿದ ಬಾಬು ಹಾಗು ಪವನ್ ಕಡೆಯವರು ನಿನ್ನೆ ಶನಿವಾರ ಸಿನಿಮೀಯ ರೀತಿಯಲ್ಲಿ ಯುವತಿಯ ಅಣ್ಣ ಹಾಗು ಸ್ನೇಹಿತರ ಮೇಲೆ ದೊಣ್ಣೆಗಳಿಂದ ದಾಳಿ ಮಾಡಿದ್ದಾರೆ.

ಗುರುವಾರ ಏಟು ತಿಂದವರಿಂದಲೇ ಶನಿವಾರ ದೊಣ್ಣೆಗಳಿಂದ ದಾಳಿ:

ಶನಿವಾರ ಬೆಳಗ್ಗೆ 9 ಗಂಟೆಯಲ್ಲಿ ತಾಡಿಗೋಳ್ ಕ್ರಾಸ್ ಬಳಿ ಬಾಬು ಹಾಗು ಪವನ್ ಕಡೆಯವರು ಯಶಸ್ವಿನಿ, ಗೌರಿ, ಭಾವನ ಮೂವರು ಯುವತಿಯರು ಹೋಗುತ್ತಿದ್ದ ಬಸ್ ತಡೆದು ಕಪಾಳಕ್ಕೆ ಮನಬಂದಂತೆ ಹೊಡೆದಿದ್ದಾರೆ. ಅಲ್ಲದೆ ಗುರುವಾರ ಹಲ್ಲೆ ಮಾಡಿದ್ದ ನಿಮ್ಮ ಅಣ್ಣ ಅಭಿ ಹಾಗು ಅವರ ಸ್ನೇಹಿತರನ್ನ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ತಾಡಿಗೋಳ್ ಗ್ರಾಮದ ಬಳಿ ಯುವತಿಯ ಪೋಷಕರು ಬರುತ್ತಿದ್ದಂತೆ‌ ಪಕ್ಕಾ ಪ್ಲಾನ್​ನಿಂದಲೇ ಸುತ್ತುವರೆದ ಬಾಬು ಕಡೆಯ 60 ಕ್ಕೂ ಹೆಚ್ಚು ಜನರು, ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಯಶಸ್ವಿನಿ ತಂದೆ ಮಂಜುನಾಥ್ ಹಾಗು ಅಣ್ಣ ಅಭಿ, ಮತ್ತು ಆತನ ಸ್ನೇಹಿತರಾದ ಮಂಜುನಾಥ್, ಶ್ರೀನಾಥ್, ಧನಂಜಯ ಮೇಲೆ ದೊಣ್ಣೆಗಳಿಂದ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುಗಳನ್ನ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Bangalore Central Jail: ಜೈಲಿನಲ್ಲಿ ಕೈದಿಗಳು ತಯಾರಿಸಿರುವ ಫೆನಾಯಿಲ್​​ಗೆ ಎಲ್ಲಿಲ್ಲದ ಬೇಡಿಕೆ

ಈ ಘಟನೆ ಸಂಬಂಧ ಶ್ರೀನಿವಾಸಪುರದ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಕಡೆಯವರು ದೂರು ಕೊಟ್ಟಿದ್ದಾರೆ. ಘಟನೆ ಸಂಬಂಧ 20 ಮಂದಿ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ ಎಂದು ಕೋಲಾರ ಎಸ್​ಪಿ ಕಿಶೋರ್ ಬಾಬು ಅವರು ನ್ಯೂಸ್18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ನಮ್ಮ ವಾಹಿನಿ ಜೊತೆ ಮಾತನಾಡಿದ ಯುವತಿಯರ ಸಂಬಂಧಿಕರು, ಬಾಬು, ಅನಿಲ್, ಪವನ್ ಎನ್ನುವ ಯುವಕರ ತಂಡ ನಮ್ಮ ಗ್ರಾಮದ ಹೆಣ್ಣು ಮಕ್ಕಳನ್ನ ಚುಡಾಯಿಸುತ್ತಾ ಇನ್ನಿಲ್ಲದ ಕಿರುಕುಳ ಕೊಡ್ತಿದ್ದಾರೆಂದ ಆರೋಪಿಸಿದ್ದಾರೆ. ಆರು ತಿಂಗಳಿಂದ ನಮ್ಮ ಹುಡುಗಿಯರನ್ನ ಚುಡಾಯಿಸಿದ್ದಾರೆ. ಈ ಬಗ್ಗೆ ಎಚ್ಚರಿಕೆ ನೀಡಿದರೂ ಮತ್ತೆ ಚುಡಾಯಿಸಿದ್ದಾರೆ. ಹೀಗಾದರೆ ನಮ್ಮ ಹೆಣ್ಣು ಮಕ್ಕಳನ್ನ ಕಾಲೇಜಿಗೆ ಹೇಗೆ ಕಳಿಸೋದು ಎಂದು ಯುವತಿಯ ತಂದೆ ಮಂಜುನಾಥ್ ನೋವು ತೋಡಿಕೊಂಡಿದ್ದಾರೆ.

ಸದ್ಯ ಎರಡೂ ಕಡೆಯವರ ಗಲಾಟೆಯಿಂದ ಅಕ್ಕ ಪಕ್ಕದ ಗ್ರಾಮಗಳ ಮಧ್ಯೆ ವೈಷಮ್ಯ ಉಂಟಾಗಿದೆ. ಎರಡು ಗ್ರಾಮಗಳಲ್ಲಿ ಯಾವುದೇ ಅಹಿತರಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇತ್ತ ದೊಣ್ಣೆಗಳಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಬಾಬು ಹಾಗು ಅನಿಲ್, ಪವನ್ ಮತ್ತು ಅವರ ಕಡೆಯವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವರದಿ: ರಘುರಾಜ್
Published by:Vijayasarthy SN
First published: