ಕೊರೋನಾ ಸೋಂಕಿಗೆ ಒಂದೇ ದಿನ ಎರಡು ಬಲಿ; ಕೊಡಗಿನಲ್ಲಿ ಮೂರಕ್ಕೇರಿದ ಸಾವಿನ ಸಂಖ್ಯೆ

ಜಿಲ್ಲೆಯಲ್ಲಿ ಇದುವರೆಗೆ 169 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 92 ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 74 ಸಕ್ರೀಯ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಮೂವರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 68 ಕ್ಕೆ ಏರಿಕೆಯಾಗಿವೆ.

news18-kannada
Updated:July 13, 2020, 10:13 AM IST
ಕೊರೋನಾ ಸೋಂಕಿಗೆ ಒಂದೇ ದಿನ ಎರಡು ಬಲಿ; ಕೊಡಗಿನಲ್ಲಿ ಮೂರಕ್ಕೇರಿದ ಸಾವಿನ ಸಂಖ್ಯೆ
ಕೊಡಗಿನಲ್ಲಿ ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ.
  • Share this:
ಕೊಡಗು: ಕೊರೋನಾ ಸೋಂಕಿಗೆ ಮತ್ತೊರ್ವ ವೃದ್ಧರು ಬಲಿಯಾಗಿರುವ ಘಟನೆ ಮಡಿಕೇರಿಯ ಜಿಲ್ಲಾ ಕೊವೀಡ್ ಆಸ್ಪತ್ರೆಯಲ್ಲಿ ನಡೆದಿದೆ. ಮಡಿಕೇರಿ ತಾಲ್ಲೂಕಿನ ಚೇರಂಬಾಣೆ ನಿವಾಸಿ (77) ವರ್ಷದ ವೃದ್ಧ ಕೊರೋನಾ ಸೋಂಕಿಗೆ ಬಲಿಯಾದ ವ್ಯಕ್ತಿ.‌

ಇವರು ತೀವ್ರ ಕಿಡ್ನಿ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು.‌ ಅಧಿಕ ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಜಿಲ್ಲಾ ಕೊವೀಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ‌ನಾಳೆ ಸರ್ಕಾರದ ನಿಯಮಾನುಸಾರ ಮೃತರ ಅಂತ್ಯಕ್ರಿಯೆ ನೆರವೇರಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯಲ್ಲಿ ಇದುವರೆಗೆ 169 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 92 ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 74 ಸಕ್ರೀಯ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಮೂವರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 68 ಕ್ಕೆ ಏರಿಕೆಯಾಗಿವೆ.

ಇನ್ನೂ ರಾಜ್ಯದಲ್ಲೂ ಸಹ ಕೊರೋನಾ ಆರ್ಭಟ ತಾರಕಕ್ಕೇರಿದೆ. ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ 71 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. 2,627 ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 38,843ಕ್ಕೆ ತಲುಪಿದ್ದು, ಸಾವಿನ ಪ್ರಮಾಣ 684ಕ್ಕೆ ಏರಿದೆ.

ಈವರೆಗೆ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆದವರ ಸಂಖ್ಯೆ 15,409 ಇದೆ. ಇದರೊದಿಗೆ ರಾಜ್ಯದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 22,746ಕ್ಕೆ ಮುಟ್ಟಿದೆ. ಐಸಿಯುನಲ್ಲಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ರಾಜ್ಯದಲ್ಲಿ ಈಗ 532 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : Lockdown – ಬೆಂಗಳೂರು ಜೊತೆ ಬೇರೆ ಕೆಲ ಜಿಲ್ಲೆಗಳೂ ಲಾಕ್​ಡೌನ್ ಆಗುತ್ತಾ? ಇಂದು ಡಿಸಿಗಳ ಸಭೆ ಬಳಿಕ ಸಿಎಂ ನಿರ್ಧಾರ


ಬೆಂಗಳೂರು ಕೊರೋನಾ ಹಾಟ್​​ಸ್ಪಾಟ್ ಆಗಿ ಮುಂದುವರಿದಿದೆ. ನಗರದಲ್ಲಿ ಹೊಸ ದಾಖಲೆಯ ಪ್ರಮಾಣದಲ್ಲಿ ಪ್ರಕರಣಗಳು ಬೆಳಕಿಗೆ ಬಂದಿವೆ. ಭಾನುವಾರ ಒಂದೇ ದಿನ 1525 ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಪ್ರಕರಣಗಳು ಬರೋಬ್ಬರಿ 18, 387ಮುಟ್ಟಿದೆ. ನಗರದಲ್ಲಿ ಇಂದು 45 ಜನ ಸಾವನ್ನಪ್ಪಿದ್ದು, ಇಲ್ಲಿ ಸಾವಿನ ಸಂಖ್ಯೆ 274 ತಲುಪಿದೆ ಎನ್ನಲಾಗುತ್ತಿದೆ.

Published by: MAshok Kumar
First published: July 13, 2020, 7:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading