ಮಂತ್ರಾಲಯದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ತುಂಗಭದ್ರಾ ಪುಷ್ಕರ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ

ಪುಷ್ಕರದಲ್ಲಿ 60 ವರ್ಷ ಮೇಲ್ಪಟ್ಟವರು, 12 ವರ್ಷದೊಳಗಿನವರಿಗೆ ಅವಕಾಶವಿಲ್ಲ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಲಾಗುವುದು, ಪುಷ್ಕರ ಸಂದರ್ಭದಲ್ಲಿ ಪುಣ್ಯ ಸ್ನಾನಕ್ಕೆ ಸರದಿಯಂತೆ ಒಬ್ಬೊಬ್ಬರನ್ನೇ ಬಿಡಲಾಗುವುದು. ಪುಷ್ಕರದಲ್ಲಿ ಪಾಲ್ಗೊಳ್ಳುವವರು ಕರ್ನೂಲ ಜಿಲ್ಲಾಡಳಿತ ನೀಡುವ ಇ ಪಾಸ್ ಪಡೆಯಬೇಕಾಗಿದೆ ಎಂದು ತಿಳಿಸಿದರು.

ತುಂಗಭದ್ರಾ ನದಿಯ ದಡದಲ್ಲಿ ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥರು.

ತುಂಗಭದ್ರಾ ನದಿಯ ದಡದಲ್ಲಿ ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥರು.

  • Share this:
ರಾಯಚೂರು: ಪ್ರತಿ 12 ವರ್ಷಕ್ಕೊಮ್ಮೆ ಕೃಷ್ಣೆ ಹಾಗೂ ಕೃಷ್ಣಾ ನದಿಯ ಪುಷ್ಕರ ಕಾರ್ಯಕ್ರಮ ನಡೆಯುತ್ತದೆ. ಕೃಷ್ಣಾ ನದಿ ಹಾಗು ತುಂಗಭದ್ರಾ ನದಿಯ ಪುಷ್ಕರಗಳು ಬೇರೆ ಬೇರೆ ವರ್ಷ ನಡೆಯುತ್ತವೆ. ಈ ವರ್ಷ ತುಂಗಭದ್ರಾ ನದಿಯ ಪುಷ್ಕರ ನಡೆಯಲಿದೆ. ಪವಿತ್ರ ತುಂಗಭದ್ರಾ ನದಿಯ ದಡದಲ್ಲಿರುವ ಮಂತ್ರಾಲಯದಲ್ಲಿ ಪುಷ್ಕರ ನಡೆಯಲಿದೆ. ಪುಷ್ಕರಕ್ಕಾಗಿ ಮಂತ್ರಾಲಯ ಸಿದ್ದವಾಗುತ್ತಿದೆ. ಕೊರೋನಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಸಂಪ್ರದಾಯದಂತೆ ಪುಷ್ಕರವನ್ನು ಆಚರಿಸಲಾಗುವುದೆಂದು ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.

ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಹುಟ್ಟುವ ತುಂಗ ಮತ್ತು ಭದ್ರಾ ನದಿಗಳು ಒಂದಾಗಿ ಕರ್ನಾಟಕದ ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ, ಕೊಪ್ಪಳ ರಾಯಚೂರು ಜಿಲ್ಲೆಯ ಮುಖಾಂತರ ಹರಿದು ಮಂತ್ರಾಲಯದಿಂದ ಹಾಯ್ದು ಮುಂದೆ ಕೃಷ್ಣಾ ನದಿಯಲ್ಲಿ ಒಂದಾಗುತ್ತಿವೆ. ಜೀವನದಿಯಾದ ತುಂಗಭದ್ರಾ ನದಿಯು ಹಲವರಿಗೆ ಜೀವನವನ್ನು ನೀಡಿದೆ. ಈ ನದಿಯನ್ನೇ ನಂಬಿಕೊಂಡ ಕೋಟ್ಯಾಂತರ ಜನರಿದ್ದಾರೆ. ತುಂಗಭದ್ರಾ ನದಿಯನ್ನು ಪೂಜಿಸುವ ವಿಶೇಷ ಕಾರ್ಯಕ್ರಮವಾದ ಪುಷ್ಕರ ಎಂಬ ಆಚರಣೆ ತೆಲುಗು ಭಾಷಿಗರು ಆಚರಿಸುತ್ತಾರೆ. 12 ವರ್ಷಕ್ಕೊಮ್ಮೆ ನದಿಯ ದಡದಲ್ಲಿ ಪುಣ್ಯ ಸ್ನಾನ ಮಾಡಿ ನದಿಯನ್ನು ಪೂಜಿಸುತ್ತಾರೆ. ಈ ಪದ್ದತಿ ಹಿಂದಿನ‌ ತಲೆಮಾರಿನಿಂದಲೂ ನಡೆದುಕೊಂಡು ಬಂದಿದೆ ಎಂದು ಶ್ರೀಗಳು ಮಾಹಿತಿ ನೀಡಿದರು.

ಈ ವರ್ಷ ನವಂಬರ್ 20 ರಿಂದ ಡಿಸೆಂಬರ್ 1 ರವರೆಗೆ ತುಂಗಭದ್ರಾ ಪುಷ್ಕರ ನಡೆಯಲಿದೆ. ಪುಷ್ಕರಕ್ಕೆ ಪ್ರಸಿದ್ದ ಧಾರ್ಮಿಕ ಕೇಂದ್ರವಾಗಿರುವ ಮಂತ್ರಾಲಯ ಮಠ ಹಾಗೂ ಮಠದ ಪಕ್ಕದ ತುಂಗಭದ್ರಾ ನದಿಯಲ್ಲಿ ಸಿದ್ದತೆ ನಡೆದಿದೆ. ನದಿಯಲ್ಲಿ ಸ್ನಾನ ಘಟ್ಟ, ನದಿಯಲ್ಲಿ ಬರುವ ಭಕ್ತರಿಗೆ ಯಾವುದೇ ರೀತಿ ಅನಾನುಕೂಲವಾಗದಂತೆ ಸಕಲ ಸಿದ್ದತೆಗಳನ್ನು ಈಗಾಗಲೇ ಮಾಡಲಾಗುತ್ತಿದೆ. ಆಂಧ್ರ ಪ್ರದೇಶ ಸರಕಾರ ಪುಷ್ಕರಕ್ಕೆ 200ಕೋಟಿ ರೂಪಾಯಿ ಅನುದಾನ ನೀಡಲಿದೆ. ಈ ವರ್ಷ ಕೊರೋನಾ ಇರುವ ಹಿನ್ನೆಲೆಯಲ್ಲಿ ಪುಷ್ಕರವನ್ನು ಎಚ್ಚರಿಕೆಯಿಂದ ಮಾಡಲಾಗುತ್ತಿದೆ. ಕೊರೋನಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಪುಷ್ಕರ ಆಚರಿಸಲಾಗುವುದು, ಪುಷ್ಕರದಲ್ಲಿ 60 ವರ್ಷ ಮೇಲ್ಪಟ್ಟವರು, 12 ವರ್ಷದೊಳಗಿನವರಿಗೆ ಅವಕಾಶವಿಲ್ಲ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಲಾಗುವುದು, ಪುಷ್ಕರ ಸಂದರ್ಭದಲ್ಲಿ ಪುಣ್ಯ ಸ್ನಾನಕ್ಕೆ ಸರದಿಯಂತೆ ಒಬ್ಬೊಬ್ಬರನ್ನೇ ಬಿಡಲಾಗುವುದು. ಪುಷ್ಕರದಲ್ಲಿ ಪಾಲ್ಗೊಳ್ಳುವವರು ಕರ್ನೂಲ ಜಿಲ್ಲಾಡಳಿತ ನೀಡುವ ಇ ಪಾಸ್ ಪಡೆಯಬೇಕಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: ಜೋ ಬೀಡೆನ್ ಭಾರೀ ಮತಗಳಿಂದ ಮುನ್ನಡೆ; ಅಮೆರಿಕ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ

ಪುಷ್ಕರಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿದೆ. ಕೇಂದ್ರದ ಹಲವಾರು ಸಚಿವರು ಸಹ ಭಾಗಿಯಾಗಲಿದ್ದಾರೆ. 12 ದಿನ ನಡೆಯುವ ಪುಷ್ಕರವನ್ನು ಕಟ್ಟುನಿಟ್ಟಾಗಿ ಆಚರಿಸಲಾಗುವುದು. ಬರುವ ಭಕ್ತರಿಗೆ ತೊಂದರೆಯಾಗದಂತೆ ಸಂಪ್ರದಾಯಗಳನ್ನು ಬಿಡದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮಂತ್ರಾಲಯದ ಶ್ರೀಗಳು ತಿಳಿಸಿದ್ದಾರೆ.
Published by:HR Ramesh
First published: