ತುಂಗಭದ್ರಾ - ಕೃಷ್ಣಾ ನದಿಗಳಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಭೀತಿ : ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುತ್ತಿರುವ ಗ್ರಾಮಸ್ಥರು

ಲಿಂಗಸಗೂರು ತಾಲೂಕಿನ ಕಡದರಗಡ್ಡೆ, ಹಂಚಿನಾಳ, ಯರಗೋಡ, ಯಾನಗುಂದಾ ಸೇರಿದಂತೆ ಹಲವಾರು ಗ್ರಾಮಗಳ ಜನತೆ ಈಗ ಲಿಂಗಸಗೂರಿಗೆ ಬರಲು ಸುಮಾರು 30 ಕಿಮೀ ದೂರ ಕ್ರಮಿಸಿ ಬರಬೇಕಾಗಿದೆ.

ತೆಪ್ಪದಲ್ಲಿ ನದಿ ಡಾಟುತ್ತಿರುವ ಜನರು

ತೆಪ್ಪದಲ್ಲಿ ನದಿ ಡಾಟುತ್ತಿರುವ ಜನರು

  • Share this:
ರಾಯಚೂರು(ಆಗಸ್ಟ್​.09): ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ಹಾಗೂ ನಾರಾಯಣಪುರ ಜಲಾಶಯಗಳಿಂದ ಪ್ರವಾಹದ ಭೀತಿ ಎದುರಾಗಿದೆ. ಅಗತ್ಯ ಕೆಲಸಗಳಿಗಾಗಿ ಜನ ನದಿ‌ ದಾಟಲು ಹರಸಾಹಸ ಪಡುತ್ತಿದ್ದಾರೆ. ಪ್ರವಾಹದ ಮಧ್ಯೆಯೂ ಗ್ರಾಮಸ್ಥರು ನದಿಯಲ್ಲಿ ತೆಪ್ಪದಲ್ಲಿ ಪ್ರಯಾಣಿಸುತ್ತಿದ್ದಾರೆ.

ನದಿಭಾಗದ ಜನರಿಗೆ ನದಿಯ ಮೂಲಕವೇ ಪ್ರಯಾಣಿಸುವ ಅನಿವಾರ್ಯತೆ ಇದೆ, ನಾರಾಯಣಪುರದ ಬಸವಸಾಗರ ಜಲಾಶಯದಿಂದ ಈಗ 1.80 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ, ಇದರಿಂದ‌ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ.

ಈ ಮಧ್ಯೆ ಲಿಂಗಸಗೂರು ತಾಲೂಕಿನ ಕಡದರಗಡ್ಡೆ, ಹಂಚಿನಾಳ, ಯರಗೋಡ, ಯಾನಗುಂದಾ ಸೇರಿದಂತೆ ಹಲವಾರು ಗ್ರಾಮಗಳ ಜನತೆ ಈಗ ಲಿಂಗಸಗೂರಿಗೆ ಬರಲು ಸುಮಾರು 30 ಕಿಮೀ ದೂರ  ಕ್ರಮಿಸಿ ಬರಬೇಕಾಗಿದೆ. ಇಷ್ಟು ದೂರು ಪ್ರಯಾಣಿಸಲು ಆಗದೆ ಗ್ರಾಮಸ್ಥರು ಹರಗೋಲ ಮುಖಾಂತರ ಪ್ರಯಾಣಿಸುತ್ತಿದ್ದಾರೆ. ಈ ಮಧ್ಯೆ ಗ್ರಾಮಸ್ಥರು ಕಡದರಗಡ್ಡೆ ಹಾಗು ಗೋನವಾಟ್ಲ ಮಧ್ಯೆ ಸೇತುವೆ ನಿರ್ಮಿಸಲು ಹಲವು ಬಾರಿ ಹೋರಾಟ ಮಾಡಿದ್ದಾರೆ.

2018 ರಲ್ಲಿ ಕಡದರಗಡ್ಡೆ  ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದ್ದರು. ಆದರೆ, ಇಲ್ಲಿ ಸೇತುವೆ ನಿರ್ಮಾಣಕ್ಕೆ ಮೂಹೂರ್ತ ಕೂಡಿ ಬಂದಿಲ್ಲ, ಕಡದರಗಡ್ಡೆ ಗ್ರಾಮಸ್ಥರು ಸುತ್ತಿ ಬಳಸಿ ಬರುವದಕ್ಕೆ ಹಿಂಜರಿದು ತುಂಬಿ ಹರಿಯುವ ನದಿಯಲ್ಲಿಯೇ ಹರಗೋಲು ಹಾಕಿಕೊಂಡು ತೆಪ್ಪದಲ್ಲಿ ಪ್ರಯಾಣಿಸುತ್ತಿದ್ದಾರೆ.

ಬಾಳಪ್ಪ ಎಂಬ ದೋಣಿ ನಡೆಸುವ ನಾವಿಕ ನಿನ್ನೆ(ಶನಿವಾರ) ನದಿಯಲ್ಲಿ 2.20 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದರೂ ಇದೇ ನೀರಿನಲ್ಲಿ ಗ್ರಾಮಸ್ಥರನ್ನು ಕರೆದುಕೊಂಡು ಹೋಗಿದ್ದಾನೆ, ಇಲ್ಲಿ ಇದು ಸಾಮಾನ್ಯ ಹಾಗೂ ಅನಿವಾರ್ಯವಾಗಿದೆ.

ಇದನ್ನೂ ಓದಿ : ಬಾದಾಮಿಯಲ್ಲಿ ನೆರೆ ಭೀತಿ : ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸಿದ್ದರಾಮಯ್ಯ ಸೂಚನೆ

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೇಳಿದರೆ ಈ ಪರಿಶೀಲಿಸುವುದಾಗಿ ಹೇಳಿದ್ದಾರೆ. ಇಲ್ಲಿಯ ಸಮಸ್ಯೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಆಗ ಸೇತುವೆ ನಿರ್ಮಾಣಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ‌ 4 ಕೋಟ ರೂಪಾಯಿ ಮಂಜೂರು ಮಾಡಲಾಗಿತ್ತು. ಆದರೆ, ಇದು ಸೇತುವೆ ಪೂರ್ಣವಾಗುವುದಿಲ್ಲ ಎನ್ನುವ ಕಾರಣಕ್ಕೆ 18 ಕೋಟಿ ರೂಪಾಯಿಯ ಯೋಜ‌ನೆ ಸಿದ್ದವಾಗಿದೆ, ಇದಕ್ಕೆ ಸರಕಾರದಿಂದ ಮಂಜೂರಾತಿ ಸಿಗಬೇಕಾಗಿದೆ.

ಪ್ರತಿ ವರ್ಷ ಪ್ರವಾಹ ಸಂದರ್ಭದಲ್ಲಿ ಜೀವವನ್ನು ಕೈಯಲ್ಲಿಟ್ಟುಕೊಂಡು ತುಂಬಿ ಹರಿಯುವ ನದಿಯಲ್ಲಿ ದಾಟುವುದನ್ನು ತಪ್ಪಿಸಲು ಸರಕಾರ ಸೇತುವೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾಗಿದೆ. ನದಿಪಾತ್ರದ ಜನರಿಗೆ ಪ್ರವಾಹದ‌ ಬಗ್ಗೆ ಅರಿವು ಹಾಗೂ ಎಚ್ಚರಿಕೆ ಮೂಡಿಸುವ ಕಾರ್ಯ ಲಿಂಗಸಗೂರು ಹಾಗು ದೇವದುರ್ಗ ತಾಲೂಕು ಆಡಳಿತ ಮಾಡಬೇಕಿದೆ.
Published by:G Hareeshkumar
First published: