• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Flood Alert - ತುಂಗಭದ್ರಾ ಪ್ರವಾಹ ಭೀತಿ; ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಆಡಳಿತ ಸೂಚನೆ

Flood Alert - ತುಂಗಭದ್ರಾ ಪ್ರವಾಹ ಭೀತಿ; ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಆಡಳಿತ ಸೂಚನೆ

ತುಂಗ ಭದ್ರಾ ಜಲಾಶಯ

ತುಂಗ ಭದ್ರಾ ಜಲಾಶಯ

ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತುಂಗಭದ್ರಾ ಆಡಳಿತ ಮಂಡಳಿಯ ಚೀಫ್ ಎಂಜಿನಿಯರ್ ಅವರು ಸೂಚನೆ ನೀಡಿದ್ದಾರೆ.

  • Share this:

    ಬಳ್ಳಾರಿ: ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆರೆ ಕಟ್ಟೆ, ಹಳ್ಳ, ಹೊಳೆ ತುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನ ಪ್ರವಾಹದ ಭೀತಿ ಎದರಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಮನವಿ ಮಾಡುತ್ತಿದ್ದಾರೆ.


    ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳವಾಗುವ ಸಂಭವ ಇದ್ದು ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತುಂಗಭದ್ರಾ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಅವರು, ಸದ್ಯ ಜಲಾಶಯದಲ್ಲಿ 1625.14 ಅಡಿ ಇದ್ದು, 73.357 ಟಿಎಂಸಿ ಸಂಗ್ರಹವಾಗಿದೆ. ಜಲಾಶಯ ಭರ್ತಿಯಾಗಲು ಇನ್ನು 8 ಅಡಿ ಮಾತ್ರ ಬಾಕಿ ಇದೆ. ಸದ್ಯ ಜಲಾಶಯಕ್ಕೆ 1,20,411 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸೆಟ್ರಂಲ್ ವಾಟರ್ ಕಮಿಷನ್ ಹವಾಮಾನದ ಬಗ್ಗೆ ತಿಳಿಸಿದ್ದು, ಶಿವಮೊಗ್ಗದಿಂದ ನದಿಗೆ 2,11,890 ಕ್ಯೂಸೆಕ್ ನೀರು ಹರಿದು ಬರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ. ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರಲಿದೆ. ಜುಲೈ 25 ರಂದು ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಹರಿಸುವ ಸಾಧ್ಯತೆ ಇರುತ್ತದೆ‌. ಹಾಗಾಗಿ ನದಿ ಪಾತ್ರದ ಜನರು ಮುನ್ನೆಚ್ಚರಿಕೆಯ ಸಲುವಾಗಿ ಸುರಕ್ಷಿತರ ಸ್ಥಳಕ್ಕೆ ತೆರಳಬೇಕು ಎಂದು ಈ ಅಧಿಕಾರಿ ಹೇಳಿದ್ಧಾರೆ.


    ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೆರೆ ಕಟ್ಟೆಗಳು ಸಂಪೂರ್ಣ ಪ್ರಮಾಣದಲ್ಲಿ ತುಂಬಿದ್ದು, ಕಟ್ಟೆ ಒಡೆಯುವ ಹಂತಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಆಣೆಕಟ್ಟುಗಳಲ್ಲಿ ಬಾರಿ ಪ್ರಮಾಣದ ನೀರು ಸಂಗ್ರಹವಾಗಿದ್ದು, ನೀರು ಹರಿ ಬಿಡುವ ಅನಿವಾರ್ಯತೆ ಇದೆ. ಹೀಗಾಗಿ ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ತೆರಳುವುದು ಅತಿ ಅಗತ್ಯವಾಗಿದೆ.


    ಮಲೆನಾಡಿನಲ್ಲಿ ಅತೀ ಹಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ, ಆಣೆಕಟ್ಟೆಗಳು ಪೂರ್ಣ ಪ್ರಮಾಣದಲ್ಲಿ ನೀರನ್ನು ತುಂಬಿಸಿಕೊಂಡಿವೆ. ಅಣೆಕಟ್ಟುಗಳು ಭರ್ತಿಯಾಗಿದ್ದು ಮೇಲಿಂದ ನೀರು ಬಿಡಲಾಗುತ್ತಿದೆ. ಹೀಗಾಗಿ ಕೆಳಮಟ್ಟದ ಆಣೆಕಟ್ಟುಗಳಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತದೆ. ಕೆಲವೊಂದಿಷ್ಟು ಮನೆಗಳು ಹೊಲಗಳು ಜಲಾವೃತವಾಗುವ ಸಂಭವ ಇದ್ದು ಜನ ಆದಷ್ಟೂ ಸುರಕ್ಷಿತ ಸ್ಥಳದಲ್ಲಿ ಇರುವುದು ಉತ್ತಮ ಎಂದು ಪ್ರಕಟಣೆ ಹೊರಡಿಸಿದ್ದಾರೆ.


    ಇದನ್ನೂ ಓದಿ: Heavy rain in Karnataka: ತತ್ತರಿಸಿದ ಉತ್ತರ ಕನ್ನಡ; ಕಾಳಿ‌ ನದಿ‌ ಮುನಿಸಿಗೆ ಹತ್ತಾರು ಗ್ರಾಮಗಳು ಜಲಾವೃತ


    ಇನ್ನೊಂದೆಡೆ ಮಹಾರಾಷ್ಟ್ರ, ಬೆಳಗಾವಿಯಲ್ಲಿ ಮಳೆ ಭೋರ್ಗರೆಯುತ್ತಿದ್ದು ಕೃಷ್ಣಾ ನದಿ ಉಕ್ಕೇರುತ್ತಿದೆ. ಕೃಷ್ಣೆಯ ನದಿಪಾತ್ರದ ಅನೇಕ ಪ್ರದೇಶಗಳು ಪ್ರವಾಹದ ಸಂಕಷ್ಟಕ್ಕೆ ಸಿಲುಕಿವೆ. ಈಗ ತುಂಗಾ ಭದ್ರೆ ಕೂಡ ಪ್ರವಾಹಕ್ಕೆ ಅಣಿಯಾಗಿದೆ.


    ಒಟ್ಟಾರೆಯಾಗಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಜನರಲ್ಲಿ ಸಂತೋಷ ಮತ್ತು ಆತಂಕ ಎರಡೂ ವ್ಯಕ್ತವಾಗಿವೆ. ಆದರೆ ಮಳೆರಾಯ ತನ್ನ ಆರ್ಭಟವನ್ನ ಇನ್ಮುಂದೆ ಕಡಿಮೆ ಮಾಡಿಕೊಂಡು ತೆರಳಿದರೆ ರೈತ ಬೆಳೆದ ಬೆಳೆ ‌ನಾಶವಾಗದೆ ಹಾಗೆ ಉಳಿಯುತ್ತದೆ. ಇಲ್ಲವಾದಲ್ಲಿ ಕೋಟ್ಯಂತರ ರೂಪಾಯಿ ಬೆಳೆ ಸಂಪೂರ್ಣ ನೀರು ಪಾಲಾಗುವುದರಲ್ಲಿ ಎರಡು ಮಾತಿಲ್ಲ.


    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)


    ವರದಿ: ವಿನಾಯಕ ಬಡಿಗೇರ

    Published by:Vijayasarthy SN
    First published: