Tumkur: ಪಾವಗಡ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಕೊಡಿ- ಕುಮಾರಸ್ವಾಮಿ ಆಗ್ರಹ

ಸರ್ಕಾರ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಕೊಟ್ಟು ಕೈ ತೊಳೆದು ಕೊಳ್ಳುವುದು ಸರಿಯಲ್ಲ, ಕನಿಷ್ಠ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು ಎಂದು ಕುಮಾಸ್ವಾಮಿ ಆಗ್ರಹಿಸಿದ್ದಾರೆ.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ತುಮಕೂರು (ಮಾ.20): ಪಾವಗಡ (Pavgada) ಬಸ್​ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ (Families) ತಲಾ 25 ಲಕ್ಷ ಪರಿಹಾರ ನೀಡುವಂತೆ ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamy) ಆಗ್ರಹಿಸಿದ್ದಾರೆ. ಸರ್ಕಾರ ಹಾಗೂ ಸಾರಿಗೆ ಇಲಾಖೆಯೇ ದುರಂತಕ್ಕೆ ಕಾರಣ ಎಂದು ನಿನ್ನೆ ಕಿಡಿಕಾರಿದ್ದ ಮಾಜಿ ಸಿ.ಎಂ ಕುಮಾರಸ್ವಾಮಿ ಇಂದು ಟ್ವೀಟ್​ ಮೂಲಕ ದುರಂತದಲ್ಲಿ ಸಾವನ್ನಪ್ಪಿದವರಿಗೆ 25 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಸರ್ಕಾರ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಕೊಟ್ಟು ಕೈ ತೊಳೆದು ಕೊಳ್ಳುವುದು ಸರಿಯಲ್ಲ, ಕನಿಷ್ಠ 25 ಲಕ್ಷ ರೂಪಾಯಿ ಪರಿಹಾರ (compensation) ಘೋಷಣೆ ಮಾಡಬೇಕು ಎಂದು ಕುಮಾಸ್ವಾಮಿ ಆಗ್ರಹಿಸಿದ್ದಾರೆ.

ಸಾರಿಗೆ ಇಲಾಖೆಯ ಕರ್ತವ್ಯಲೋಪವೇ ಕಾರಣ

ತುಮಕೂರಿನ ಪಾವಗಡದಲ್ಲಿ ನಡೆದ ಬಸ್​ ದುರಂತಕ್ಕೆ ಸಾರಿಗೆ ಇಲಾಖೆಯ ಕರ್ತವ್ಯಲೋಪ ಮತ್ತು ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಕುಮಾರಸ್ವಾಮಿ ಆರೋಪಿಸಿದ್ದರೆ. ಇನ್ನು ಅಪಘಾತದಲ್ಲಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಎಷ್ಟೋ ಕನಸ್ಸುಗಳನ್ನು ಕಟ್ಟಿಕೊಂಡಿದ್ದ ವಿದ್ಯಾರ್ಥಿಗಳ ಜೀವ ಬಲಿಯಾಗಿವೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ದೊಡ್ಡ ಮೊತ್ತದ ಪರಿಹಾರ ನೀಡಬೇಕು ಎಂದು ಮಾಜಿ ಸಿಎಂ ಆಗ್ರಹಿಸಿದ್ದಾರೆ

ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ

ಅಪಘಾತದಲ್ಲಿ ಗಾಯಗೊಂಡವರನ್ನು ತುಮಕೂರು ಆಸ್ಪತ್ರೆ ಹಾಗೂ ಗಂಭೀರ ಸ್ಥಿತಿಯಲ್ಲಿರೋರನ್ನು  ಬೆಂಗಳೂರು ಆಸ್ಪತ್ರೆ ಗಳಿಗೆ ದಾಖಲಿಸಲಾಗಿದೆ. ಅಲ್ಲಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಗಳು ಸಿಗುತ್ತಿಲ್ಲ ಎಂಬ ವರದಿಗಳು ಬರ್ತಿವೆ. ಈ   ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಬೇಕು, ಓರ್ವ ಉಸ್ತುವಾರಿ ಅಧಿಕಾರಿ ನಿಯೋಜಿಸಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಎಲ್ಲರಿಗೂ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ಕೊಡಿಸಬೇಕು ಎಂದು ಟ್ವೀಟ್​ ಮೂಲಕ ಆಗ್ರಹಿಸಿದ್ದಾರೆ.

ಈ ಮಾರ್ಗದಲ್ಲಿ ಬಸ್​ ಸಂಚಾರ ಯಾಕಿಲ್ಲ?

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಸುತ್ತಮುತ್ತಲಿನ ಗ್ರಾಮಕ್ಕೆ ಸಾರಿಗೆ ಬಸ್​ ವ್ಯವಸ್ಥೆಯನ್ನು ಯಾಕೆ ಮಾಡಿಲ್ಲ, ನೂರಾರು ಜನರು ಇಲ್ಲಿಂದ ಪಟ್ಟಣ ಪ್ರದೇಶಕ್ಕೆ ಓಡಾಡುತ್ತಾರೆ. ಸಾವಿರಾರು ವಿದ್ಯಾರ್ಥಿಗಳು ಓದಲು ಹೋಗ್ತಾರೆ, ಇಂಥಾ ಸ್ಥಳಕ್ಕೆ ಯಾಕೆ ಇಲಾಖೆ ಬಸ್​ ಸಂಚಾರವನ್ನು ನೀಡಿಲ್ಲ ಅಂತ ಕಿಡಿಕಾರಿದ್ರು.

ಇದನ್ನೂ ಓದಿ: Bhagavad Gita: ಭಗವದ್ಗೀತೆ ಓದಿದವರು ಭಯೋತ್ಪಾದಕರು ಆಗಿಲ್ಲ: CT Ravi

ಅಧಿಕಾರಿಗಳ ನಾನಾ ಕಾರಣಗಳನ್ನು ಕೊಡ್ತಿದ್ದಾರೆ ಖಾಸಗಿ ಬಸ್​ ಚಾಲಕನ ನಿರ್ಲಕ್ಷ್ಯದಿಂದ ದೊಡ್ಡ ಅನಾಹುತ ಸಂಭವಿಸಿದೆ. ಇಲ್ಲಿಗೆ ಬಸ್​ ಸಂಚಾರ ವ್ಯವಸ್ಥೆ ಇದ್ದಿದ್ದರೆ ಈ ದುರಂತ ತಪ್ಪಿಸಬಹುದಿತ್ತು. ಪಾವಗಡ ಗಡಿ ತಾಲೂಕು, ಹಿಂದುಳಿದ ಪ್ರದೇಶ ಕೂಡ ಆಗಿದೆ. ಈ ಭಾಗದ ಜನರು ಸೂಕ್ತ ಸಾರಿಗೆ ಸೌಕರ್ಯ ಇಲ್ಲದೇ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಈ ತಾಲೂಕಿನ ಶೇಕಡಾ 25ರಷ್ಟು ಗ್ರಾಮಗಳಿಗೆ ಬಸ್ ಸಂಪರ್ಕವೇ ಇಲ್ಲ. ಸರ್ಕಾರ ಹಾಗೂ ಸಾರಿಗೆ ಏನ್​ ಮಾಡ್ತಿದೆ ಶೀಘ್ರವೇ ಹಳ್ಳಿಗಳಿಗೆ KSRTC ಬಸ್​ ಸಂಚಾರ ಕಲ್ಪಿಸಬೇಕು.

ದುರಂತಕ್ಕೆ RTO ಅಧಿಕಾರಿಗಳ ನಿರ್ಲಕ್ಷ್ಯ ಕಾರಣ

ಈ ದುರಂತಕ್ಕೆ ಆರ್‌ಟಿಓ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಜೊತೆಗೆ ಪಾವಗಡದಲ್ಲಿ ಬಸ್‌ ಡಿಪೋ ಇದ್ದರೂ ಸೂಕ್ತ ಬಸ್‌ ವ್ಯವಸ್ಥೆ ಮಾಡದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಉಪೇಕ್ಷೆಯೂ ಎದ್ದು ಕಾಣುತ್ತದೆ. ಸರಕಾರ ಸೂಕ್ತ ತನಿಖೆ ನಡೆಸಿ ಕರ್ತವ್ಯ ಲೋಪ ಎಸಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ

ಇದನ್ನೂ ಓದಿ: DC Grama vastavya: ಮೇದಿನಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ, ಕುಗ್ರಾಮದ ಜನರ ಸಮಸ್ಯೆ ಆಲಿಸಿದ ಡಿಸಿ

ಶನಿವಾರ ಬೆಳಗ್ಗೆ ವೈ. ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಖಾಸಗಿ ಬಸ್ ಹೊರಟಿತ್ತು. ಬಸ್‌ನ ಒಳಗೆ ಜನರು ಕಿಕ್ಕಿರಿದು ತುಂಬಿದ್ದರು. ಟಾಪ್‌ನಲ್ಲೇ ಸುಮಾರು 40 ವಿದ್ಯಾರ್ಥಿಗಳಿದ್ದರು. ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಬಸ್ ಉರುಳಿಬಿದ್ದ ಪರಿಣಾಮ, 6 ಮಂದಿ ಮೃತಪಟ್ಟು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
Published by:Pavana HS
First published: