ನೇರ ರೈಲು ಮಾರ್ಗಕ್ಕೆ ವರ್ಷಾಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭ; ಚಿತ್ರದುರ್ಗ ಡಿಸಿ ವಿನೋತ್ ಪ್ರಿಯಾ
ಯೋಜನೆಯಡಿ ತಾಲ್ಲೂಕಿನಲ್ಲಿ ಶೇ. 50 ಕ್ಕಿಂತ ಹೆಚ್ಚು ಭೂಮಿ ಕಳೆದುಕೊಳ್ಳುವ 09 ಕುಟುಂಬಗಳನ್ನು ಈಗಾಗಲೆ ಗುರುತಿಸಿದ್ದು, ಇವರಿಗೆ ನಿಯಮಾನುಸಾರ ಹೆಚ್ಚುವರಿ 05 ಲಕ್ಷ ರೂ. ಪರಿಹಾರ ದೊರೆಯಲಿದೆ.
news18-kannada Updated:June 24, 2020, 1:09 PM IST

ರೈಲು
- News18 Kannada
- Last Updated: June 24, 2020, 1:09 PM IST
ಚಿತ್ರದುರ್ಗ(ಜೂ.24): ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ನಿರ್ಮಿಸುವಂತೆ ಚಿತ್ರದುರ್ಗ ಜಿಲ್ಲೆಯ ಹೋರಾಟಗಾರರು ಸತತ ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಇದನ್ನೇ ದಾಳವಾಗಿಸಿಕೊಂಡ ಆಳುವ ಸರ್ಕಾರಗಳು ಹಾಗೂ ರಾಜಕೀಯ ನಾಯಕರು ನೇರ ರೈಲು ಮಾರ್ಗಕ್ಕಾಗಿ ಶ್ರಮಿಸಿ ನೇರೆ ರೈಲು ಮಾರ್ಗ ನಿರ್ಮಾಣ ಮಾಡಿಸಿಯೇ ಬಿಡುತ್ತೇವೆ ಎಂಬ ಆಶ್ವಾಸನೆಗಳನ್ನ ನೀಡಿ ಪ್ರತಿ ಚುನಾವಣೆಗಳಲ್ಲೂ ಇದನ್ನ ದಾಳವಾಗಿ ಬಳಸಿ ಮುಂದೆ ಸಾಗುತ್ತಿದ್ದಾರೆ. ಆದರೆ ತುಮಕೂರು, ಚಿತ್ರದುರ್ಗ, ದಾವಣಗೆರೆ ರೈಲು ಮಾರ್ಗ ಮಾತ್ರ ಇನ್ನು ಪ್ರಾರಂಭ ಆಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಕಾರಣ ಈ ನೇರ ರೈಲು ಮಾರ್ಗಕ್ಕೆ ರೈತರ ನೂರಾರು ಎಕರೆ ಜಮೀನು ಭೂ ಸ್ವಾಧೀನ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿದೆ.
ನೆನೆಗುದಿಗೆ ಬಿದ್ದಿರುವ ನೂತನ ರೈಲ್ವೆ ಮಾರ್ಗಕ್ಕೆ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲು ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ ನೇತೃತ್ವ ವಹಿಸಿ, ಶಾಸಕರು, ಡಿಸಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ನೂತನ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ವಿಳಂಬವಾಗಿದ್ದು, ಆದಷ್ಟು ತ್ವರಿತಗತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಶೇ. 90 ಕ್ಕೂ ಹೆಚ್ಚು ಭೂಮಿ ಕಳೆದುಕೊಂಡು, ಉಳಿಯುವ ಅಲ್ಪ ಪ್ರಮಾಣದ ಭೂಮಿಯಲ್ಲಿ ರೈತರು ಏನನ್ನೂ ಮಾಡಲು ಆಗುವುದಿಲ್ಲ. ಹೀಗಾಗಿ ರೈಲ್ವೆಯ ಭವಿಷ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು, ಅಂತಹ ರೈತರಿಗೆ ಪೂರ್ಣ ಸ್ವಾಧೀನವೆಂದು ಪರಿಗಣಿಸಿ ಪರಿಹಾರ ಮೊತ್ತವನ್ನು ನೀಡಬೇಕು. ಅಗತ್ಯಬಿದ್ದಲ್ಲಿ, ರೈಲ್ವೆ ಇಲಾಖೆಯು ಮುಂದಿನ ದಿನಗಳಲ್ಲಿ ಈ ಭೂಮಿಯನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದು ಸಂಸದ ಎ. ನಾರಾಯಣಸ್ವಾಮಿ ಹೇಳಿದ್ದಾರೆ. ರೈಲು ಮಾರ್ಗಕ್ಕೆ ಚಿತ್ರದುರ್ಗ ತಾಲೂಕಿನಲ್ಲಿ ಬರುವ 46.58 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣ ಸಲುವಾಗಿ 25 ಗ್ರಾಮಗಳ 444.12 ಎಕರೆ ಭೂ-ಸ್ವಾಧೀನಕ್ಕಾಗಿ ಕ್ರಮ ಕೈಗೊಳ್ಳಲಾಗಿದ್ದು, ಭೂ-ಸ್ವಾಧೀನ ಕಾಯ್ದೆ 2013 ರನ್ವಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಅಲ್ಲದೇ ಈ ರೈಲ್ವೆ ಮಾರ್ಗವು 201.47 ಕಿ.ಮೀ ಇರಲಿದ್ದು, ತುಮಕೂರು-ದಾವಣಗೆರೆ ನಡುವಿನ 53.71 ಕಿ.ಮೀ.ದೂರವನ್ನ ಕಡಿಮೆಗೊಳಿಸಲಿದೆ. ರೈಲ್ವೆ ಮಾರ್ಗದಡಿ ಚಿತ್ರದುರ್ಗ ತಾಲ್ಲೂಕಿನಲ್ಲಿ 25 ಗ್ರಾಮಗಳ ಡಿ.ಎಸ್.ಹಳ್ಳಿ ಗ್ರಾಮದಿಂದ ಹಂಪನೂರು ಗ್ರಾಮದವರೆಗೆ ಒಟ್ಟು 46.58 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣವಾಗಬೇಕಿದೆ.
ಇದಕ್ಕಾಗಿ ಒಟ್ಟು 444.12 ಎಕರೆ ಭೂಮಿಯ ಅಗತ್ಯತೆ ಇದ್ದು, ಭೂಸ್ವಾಧೀನಕ್ಕೆ ಕಳೆದ ಜೂ. 11 ರಂದು ಎಲ್ಲ ಗ್ರಾಮಗಳಲ್ಲಿ ಪುನರ್ ವ್ಯವಸ್ಥೆ ಮತ್ತು ಪುನರ್ ನಿರ್ಮಾಣ ಗ್ರಾಮಸಭೆಗಳನ್ನ ಮಾಡಿ, ಬಾಧಿತರಿಂದ ಅಹವಾಲು, ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ. ಯೋಜನಾ ವೆಚ್ಚ 286.57 ಕೋಟಿ ರೂ. ಗಳಾಗಿದ್ದು ಭೂಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ, ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಿ ವರ್ಷಾಂತ್ಯದೊಳಗೆ ಅಧಿಸೂಚನೆ ಹೊರಡಿಸಿ, ರೈಲ್ವೆ ಇಲಾಖೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸುತ್ತೇವೆ ಎಂದು ಡಿಸಿ ವಿನೋತ್ ಪ್ರಿಯಾ ಹೇಳಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಸುರಕ್ಷಾ ವಿಧಾನಗಳೊಂದಿಗೆ ಸಕಲ ಸಿದ್ದತೆ
ಆದರೆ ರೈಲ್ವೆ ಮಾರ್ಗದಲ್ಲಿ ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು, ಕಸಬಾ ಮತ್ತು ಭರಮಸಾಗರ ಹೋಬಳಿ ವ್ಯಾಪ್ತಿಯಲ್ಲಿನ 25 ಗ್ರಾಮಗಳ ವ್ಯಾಪ್ತಿಯ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಿದೆ. ಇದರಿಂದ ಬಾಧಿತರಾಗುವ ಸಂತ್ರಸ್ಥರಿಗೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಸೌಲಭ್ಯ ಕಲ್ಪಿಸಲು ಹಾಗೂ ಪರಾಮರ್ಶಿಸಲು ಹೊಸ ಭೂಸ್ವಾಧೀನ ಕಾಯ್ದೆ 2013 ರಂತೆ ಜಿಲ್ಲಾ ಮಟ್ಟದಲ್ಲಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಯೋಜನಾ ಸಮಿತಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ ದೊಡ್ಡಸಿದ್ದವ್ವನಹಳ್ಳಿ, ಸಿರಿಗೆರೆ, ಭರಮಸಾಗರ, ಚಿತ್ರದುರ್ಗ ಸೇರಿದಂತೆ 04 ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದೆ. ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ ಭೂಮಿಗೆ ಪರಿಹಾರ ಪಾವತಿ ಮಾಡಿ ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಬೇಕಿದ್ದು, ನಿರ್ಮಾಣ ವೆಚ್ಚದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ ಅರ್ಧ ವೆಚ್ಚ ಭರಿಸಲಿವೆ. ಯೋಜನೆಯಡಿ ತಾಲ್ಲೂಕಿನಲ್ಲಿ ಶೇ. 50 ಕ್ಕಿಂತ ಹೆಚ್ಚು ಭೂಮಿ ಕಳೆದುಕೊಳ್ಳುವ 09 ಕುಟುಂಬಗಳನ್ನು ಈಗಾಗಲೆ ಗುರುತಿಸಿದ್ದು, ಇವರಿಗೆ ನಿಯಮಾನುಸಾರ ಹೆಚ್ಚುವರಿ 05 ಲಕ್ಷ ರೂ. ಪರಿಹಾರ ದೊರೆಯಲಿದೆ. ಅಲ್ಲದೆ ಮನೆ, ತೋಟ ಮತ್ತಿತರ ಆಸ್ತಿ-ಪಾಸ್ತಿ ಕಳೆದುಕೊಳ್ಳುವವರಿಗೂ ಪರಿಹಾರ ದೊರೆಯಲಿದೆ. ಹಳೆಯ ಮಾರ್ಗ ಸೂಚಿಗೆ ಆಕ್ಷೇಪ ವ್ಯಕ್ತಪಡಿಸಿರುವ. ಶಾಸಕ ಜಿಹೆಚ್ ತಿಪ್ಪಾರೆಡ್ಡಿ, ದೊಡ್ಡ ಮನೆ ಕಳೆದುಕೊಳ್ಳುವವರಿಗೆ ಸರ್ಕಾರಿ ಯೋಜನೆಯಡಿ ಸಣ್ಣ ನಿವೇಶನ ನೀಡಿ ಮನೆ ನಿರ್ಮಿಸಲು ನೆರವು ನೀಡಿದರೆ, ಬಾಧಿತರಿಗೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಅವರಿಗೆ ಬೇರೆ ಕಡೆ ನಿವೇಶನ ನೀಡಿ, ಮನೆ ಕಟ್ಟಿಕೊಡುವ ಬಗ್ಗೆ ಪರಿಶೀಲಿಸಬೇಕು, ಕುಟುಂಬಕ್ಕೆ ಆಸರೆಯಾಗಿರುವ ಮನೆಯನ್ನು ಕಳೆದುಕೊಳ್ಳುವ ಸಂತ್ರಸ್ಥರಿಗೆ ಅನ್ಯಾಯವಾಗಬಾರದು ಎಂದು ಮನವಿ ಮಾಡಿದರು.
ಇನ್ನು, ಚಿತ್ರದುರ್ಗ ತಾಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆಯಿಂದ ಡಿ.ಎಸ್.ಹಳ್ಳಿ ಗ್ರಾಮದಲ್ಲಿ 65 ಕುಟುಂಬಗಳು ಬಾಧಿತವಾಗಲಿವೆ. ಅದೇ ರೀತಿ ಹಂಪನೂರು-31, ಚೀಳಂಗಿ-10, ಜಟ್ಲಹಳ್ಳಿ-11, ಕೊಳಹಾಳ್-12, ಸಾದರಹಳ್ಳಿ-11, ಮಾರಗಟ್ಟ-25, ಚಿಕ್ಕಪುರ-12, ಈಚಲನಾಗೇನಹಳ್ಳಿ-20, ಕೆಳಗೋಟೆ-14, ಸಿದ್ದಾಪುರ-30, ಬಳ್ಳೆಕಟ್ಟೆ-21, ವಿಜಾಪುರ-24, ಲಕ್ಷ್ಮೀಸಾಗರ-28, ಹಿರೇಬೆನ್ನೂರು-10, ಚಿಕ್ಕಬೆನ್ನೂರು-12 ಸೇರಿದಂತೆ ಒಟ್ಟಾರೆ 25 ಗ್ರಾಮಗಳ 389 ಕುಟುಂಬಗಳು ಬಾಧಿತವಾಗಲಿವೆ. ಈಗಾಗಲೆ ಗ್ರಾಮ ಸಭೆಗಳನ್ನು ನಡೆಸಿ, ಬಾಧಿತ ಕುಟುಂಬಗಳಿಂದ ಅಹವಾಲು, ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ ಎಂದು ಚಿತ್ರದುರ್ಗ ಎಸಿ ಪ್ರಸನ್ನ ಮಾಹಿತಿ ನೀಡಿದ್ದಾರೆ.
ನೆನೆಗುದಿಗೆ ಬಿದ್ದಿರುವ ನೂತನ ರೈಲ್ವೆ ಮಾರ್ಗಕ್ಕೆ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲು ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ ನೇತೃತ್ವ ವಹಿಸಿ, ಶಾಸಕರು, ಡಿಸಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ನೂತನ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ವಿಳಂಬವಾಗಿದ್ದು, ಆದಷ್ಟು ತ್ವರಿತಗತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಶೇ. 90 ಕ್ಕೂ ಹೆಚ್ಚು ಭೂಮಿ ಕಳೆದುಕೊಂಡು, ಉಳಿಯುವ ಅಲ್ಪ ಪ್ರಮಾಣದ ಭೂಮಿಯಲ್ಲಿ ರೈತರು ಏನನ್ನೂ ಮಾಡಲು ಆಗುವುದಿಲ್ಲ. ಹೀಗಾಗಿ ರೈಲ್ವೆಯ ಭವಿಷ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು, ಅಂತಹ ರೈತರಿಗೆ ಪೂರ್ಣ ಸ್ವಾಧೀನವೆಂದು ಪರಿಗಣಿಸಿ ಪರಿಹಾರ ಮೊತ್ತವನ್ನು ನೀಡಬೇಕು. ಅಗತ್ಯಬಿದ್ದಲ್ಲಿ, ರೈಲ್ವೆ ಇಲಾಖೆಯು ಮುಂದಿನ ದಿನಗಳಲ್ಲಿ ಈ ಭೂಮಿಯನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದು ಸಂಸದ ಎ. ನಾರಾಯಣಸ್ವಾಮಿ ಹೇಳಿದ್ದಾರೆ.