ಸಾಮಾಜಿಕ ಅಂತರ ಕಾಪಾಡಲು ಹೊಸ ಪ್ಲಾನ್ ಮಾಡಿದ ತುಮಕೂರು ಸಿಇಓ

ಸಾಮಾಜಿಕ ಅಂತರದಿಂದ ಕೊರೋನಾ ಮಟ್ಟ ಹಾಕಬಹುದು ಅಂತಾ ಸರ್ಕಾರ ಘೋಷಿಸಿದೆ. ಸಚಿವರು, ಶಾಸಕರು ಅಲ್ಲದೆ ಹಿರಿಯ ಅಧಿಕಾರಿಗಳ  ಸಭೆಗಳಲ್ಲಿ ಎಷ್ಟೇ ಎಚ್ಚರ ವಹಿಸಿದರೂ ಕೆಲವೊಮ್ಮೆ ಹಾದಿ ತಪ್ಪುತಿತ್ತು. ಇದನ್ನ ಗಮನಿಸಿದ ತುಮಕೂರು ಜಿ.ಪಂ. ಸಿಇಒ ಶುಭಾ ಕಲ್ಯಾಣ್ ವಿನೂತನ ಪ್ರಯೋಗ ಮಾಡಿದ್ದಾರೆ. ಅದೇನೆಂದರೆ ಹಸಿರೇ ಉಸಿರು ಎನ್ನುವ ಪ್ಲಾನ್.

news18-kannada
Updated:August 10, 2020, 7:18 AM IST
ಸಾಮಾಜಿಕ ಅಂತರ ಕಾಪಾಡಲು ಹೊಸ ಪ್ಲಾನ್ ಮಾಡಿದ ತುಮಕೂರು ಸಿಇಓ
ಕೊರೋನಾ ವೈರಸ್ ಪ್ರಾತಿನಿಧಿಕ ಚಿತ್ರ
  • Share this:
ತುಮಕೂರು : ಸಾಮಾಜಿಕ ಅಂತರ ಕಾಪಾಡಿಕೊಂಡು ರಾಜ್ಯ ವಿಧಾನ ಸಭಾ ಅಧಿವೇಶನ ಹೇಗೆ ನಡೆಸೋದು? ಒಂದು ಆಸನ ಬಿಟ್ಟು ಇನ್ನೊಂದು ಆಸನದಲ್ಲಿ ಕುಂತರೂ ಕ್ರಮೇಣ ಅಂತರ ಮರೆಯಾಗುತ್ತದೆ. ಇದರಿಂದ ಮತ್ತೆ ಸೋಂಕು ಹರಡುವ ಭೀತಿ ಕಾಡುತ್ತದೆ. ಆದರೆ ತುಮಕೂರು ಜಿಲ್ಲಾ ಪಂಚಾಯತಿ ಸಿಇಒ ಶುಭಾ ಕಲ್ಯಾಣ್ ಸಭೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವಿಭಿನ್ನ ಆಲೋಚನೆಯೊಂದನ್ನು ಮಾಡಿದ್ದಾರೆ.

ಸಾಮಾಜಿಕ ಅಂತರದಿಂದ ಕೊರೋನಾ ಮಟ್ಟ ಹಾಕಬಹುದು ಅಂತಾ ಸರ್ಕಾರ ಘೋಷಿಸಿದೆ. ಸಚಿವರು, ಶಾಸಕರು ಅಲ್ಲದೆ ಹಿರಿಯ ಅಧಿಕಾರಿಗಳ  ಸಭೆಗಳಲ್ಲಿ ಎಷ್ಟೇ ಎಚ್ಚರ ವಹಿಸಿದರೂ ಕೆಲವೊಮ್ಮೆ ಹಾದಿ ತಪ್ಪುತಿತ್ತು. ಇದನ್ನ ಗಮನಿಸಿದ ತುಮಕೂರು ಜಿ.ಪಂ. ಸಿಇಒ ಶುಭಾ ಕಲ್ಯಾಣ್ ವಿನೂತನ ಪ್ರಯೋಗ ಮಾಡಿದ್ದಾರೆ. ಅದೇನೆಂದರೆ ಹಸಿರೇ ಉಸಿರು ಎನ್ನುವ ಪ್ಲಾನ್.

ಅಂದರೆ ಸಭೆಯಲ್ಲಿ ಕೂರುವ ಆಸನಗಳ ನಡುವೆ ಕುಂಡದ ಸಸಿಗಳನ್ನು ಇಡುವುದು. ಹೌದು ಜಿ.ಪಂ‌‌‌‌ ಸಭಾಂಗಣದಲ್ಲಿ ಪ್ರತಿ ಆಸನಗಳ ನಡುವೆ ಗಿಡಗಳನ್ನು ಇಟ್ಟು ಸಭೆಗೆ ಹಾಜರಾದ ಅಧಿಕಾರಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕಟ್ಟೆಚ್ಚರ ವಹಿಸಲಾಗಿದೆ. ಪರಸ್ಪರ ಎರಡು ಆಸನಗಳ ಮಧ್ಯೆ ಸಸಿ ಇರುವುದರಿಂದ ಅಧಿಕಾರಿಗಳು ಅಪ್ಪಿತಪ್ಪಿಯೂ ಸಾಮಾಜಿಕ ಅಂತರ ಉಲ್ಲಂಘಿಸಲು ಸಾಧ್ಯವಿಲ್ಲ.  ಸಿಇಒ ಶುಭಾ ಕಲ್ಯಾಣ್ ಅವರ ಈ ಪ್ಲಾನ್ ಸದ್ಯ ಸಕ್ಸಸ್ ಆಗಿದೆ.

ಇದನ್ನೂ ಓದಿ : ’ಯುವ ಜನರಿಗೆ ಉದ್ಯೋಗ ನೀಡುವ ಶಕ್ತಿ ಮೋದಿಗಿಲ್ಲ’; ಉದ್ಯೋಗ ಒದಗಿಸಿ ಅಭಿಯಾನ ಆರಂಭಿಸಿದ ರಾಹುಲ್ ಗಾಂಧಿ

ಕೊರೋನಾ ಕಾಲಿಟ್ಟಾಗಿನಿಂದ ಅಧಿಕಾರಿಗಳು ಹಗಲಿರಳು ಶ್ರಮವಹಿಸಿ ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡ್ತಾ ಇದ್ದಾರೆ. ಆಗಾಗ ಸಭೆಗಳು, ನಡೆಸಿದ ಕೆಲಸ ಕಾರ್ಯಗಳ ವಿನಿಮಯದ ಬಗ್ಗೆ ಸಭೆಗಳು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆಯುತಿತ್ತು. ಪ್ರತಿ ಬಾರಿ ಸಭೆ ಕರೆದಾಗಲೂ ಸಭೆಯ  ಆರಂಭದಲ್ಲಿ ಇದ್ದ ಸಾಮಾಜಿಕ ಅಂತರ ಕ್ರಮೇಣ ಮಾಯವಾಗಿ ಬಿಡ್ತಾ ಇತ್ತು. ಸಭೆ ಬಳಿಕ ಮತ್ತೇ ಕೊರೋನಾ ಆತಂಕ ಮನೆ ಮಾಡ್ತಾ ಇತ್ತು. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿದ ಸಿಇಓ ಶುಭಕಲ್ಯಾಣ್ ಸಹೋದ್ಯೋಗಿಗಳ ಜೊತೆ ಮಾತ್ನಾಡಿ ಹಸಿರು ವಾತಾವರಣವನ್ನೇ ಸೃಷ್ಠಿ ಮಾಡಿದ್ದರು.

ಈಗಾಗಲೇ ಒಂದು ಕೆಡಿಪಿ ಸಭೆ ನಡೆದಿದೆ. ಒಂದು ಸಾಲಿನಲ್ಲಿ ನಾಲ್ವರು ಅಧಿಕಾರಿಗಳು ಮಾತ್ರ ಕುಳಿತುಕೊಳ್ಳವಂತೆ  ವ್ಯವಸ್ಥೆ ಮಾಡಲಾಗಿದೆ.  ಇನ್ನುಮುಂದೆ ಕೊರೋನ ಕಾಟ ಮುಗಿಯುವ ವರೆಗೂ ಜಿ.ಪಂ‌ ಸಭಾಂಗಣದಲ್ಲೇ ಸರ್ಕಾರಿ ಅಧಿಕಾರಿಗಳ ಎಲ್ಲಾ ಸಭೆಗಳು ನಡೆಸುವ ಸಾಧ್ಯತೆ ಇದೆ. ಒಟ್ಟಾರೆ ಸಿಇಒ ಶುಭಾ ಕಲ್ಯಾಣ್ ಅವರ ಸಿಂಪಲ್ ಥಿಂಕಿಂಗ್ ಗೆ ಮೆಚ್ಚುಗೆ ವ್ಯಕ್ತವಾಗಿದೆ..
Published by: MAshok Kumar
First published: August 10, 2020, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading