HOME » NEWS » District » TULU REGION GETS NEW POLITICAL OUTFIT TO FIGHT FOR AS NATIONAL PARTIES LOOK SCARED AKP SNVS

ತುಳುನಾಡು ಬೇಡಿಕೆಗೆ ರಾಜಕೀಯ ಬಲ; ತುಳುವೆರೆ ಪಕ್ಷಕ್ಕೆ ಚುನಾವಣಾ ಆಯೋಗ ಮನ್ನಣೆ

ಸಮರ್ಪಕ ರಾಜಕೀಯ ಬೆಂಬಲವಿಲ್ಲದ ಕಾರಣ ತುಳುನಾಡು ಎಲ್ಲಾ ರೀತಿಯಲ್ಲೂ ಕಡೆಗಣಿಸಲ್ಪಟ್ಟಿದೆ ಎನ್ನುವ ಆರೋಪವಿದೆ. ಇದೀಗ ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದ್ದು, ತುಳುವರಿಗಾಗಿಯೇ ತುಳುವರ ಪಕ್ಷ ಎನ್ನುವ ರಾಜಕೀಯ ವೇದಿಕೆ ಸಿದ್ಧಗೊಂಡಿದೆ.

news18-kannada
Updated:February 26, 2021, 10:56 AM IST
ತುಳುನಾಡು ಬೇಡಿಕೆಗೆ ರಾಜಕೀಯ ಬಲ; ತುಳುವೆರೆ ಪಕ್ಷಕ್ಕೆ ಚುನಾವಣಾ ಆಯೋಗ ಮನ್ನಣೆ
ತುಳುನಾಡು ಬಾವುಟ
  • Share this:
ಮಂಗಳೂರು(ಫೆ. 26): ಉಡುಪಿ ಜಿಲ್ಲೆಯ ಬಾರ್ಕೂರಿನಿಂದ ಹಿಡಿದು ಕೇರಳ ರಾಜ್ಯದ ಕಾಸರಗೋಡಿನ ಚಂದ್ರಗಿರಿವರೆಗಿನ ಪ್ರದೇಶ ತುಳುನಾಡು ಎನ್ನುವುದು ತುಳು ಸಂಸ್ಕೃತಿಗೆ ಸಂಬಂಧಪಟ್ಟ ಗ್ರಂಥಗಳಲ್ಲಿ ಕಂಡು ಬರುತ್ತದೆ. ಈ ತುಳುನಾಡನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕು ಎನ್ನುವ ಕೂಗು ಇಂದು ನಿನ್ನೆಯದಲ್ಲ. ತುಳುವಿನ ಬಗ್ಗೆ ಹೋರಾಟ ನಡೆಸುತ್ತಿರುವ ಸಂಘಟನೆಗಳಿಗೆ ವಿಶೇಷವಾಗಿ ರಾಜಕೀಯ ಬಲದ ಬೆಂಬಲವಿಲ್ಲದ ಕಾರಣ ಈ ಕೂಗು ಎದ್ದಷ್ಟೇ ವೇಗದಲ್ಲಿ ಕುಂಠಿತಗೊಂಡಿದೆ. ಆದರೆ ಇದೀಗ ತುಳುವರಿಗಾಗಿಯೇ ತುಳುವರ ಪಕ್ಷವೆನ್ನುವ ರಾಜಕೀಯ ಪಕ್ಷ ಸಿದ್ಧಗೊಂಡಿದೆ. ರಾಷ್ಟ್ರೀಯ ಚುನಾವಣಾ ಆಯೋಗದಲ್ಲಿ ಈ ಪಕ್ಷ ನೊಂದಾಯಿತಗೊಂಡಿದ್ದು, ತುಳು ಸಂಘಟನೆಗಳ ಬೇಡಿಕೆಗೆ ರಾಜಕೀಯ ಬಲ ನೀಡುವ ಕೆಲಸದಲ್ಲಿ ಈ ಪಕ್ಷ ತೊಡಗಿಕೊಳ್ಳಲಿದೆ.

ಪಂಚ ದ್ರಾವೀಡ ಭಾಷೆಗಳಲ್ಲೊಂದಾದ ತುಳು ಭಾಷೆಯು ಶೈಕ್ಷಣಿಕ, ಸಂಶೋಧನಾತ್ಮಕ ರೀತಿಯಲ್ಲಿ ಈಗಾಗಲೇ ಅಭಿವೃದ್ದಿ ಹೊಂದುತ್ತಿದೆ. ಉಳಿದ ಭಾಷೆಗಳಾದ ತಮಿಳು, ಕನ್ನಡ, ಮಲಯಾಳ ಹಾಗೂ ತೆಲುಗು ಭಾಷೆಗಳಿಗೆ ಈಗಾಗಲೇ ಸಂವಿಧಾನಾತ್ಮಕ ಮಾನ್ಯತೆ ದೊರೆತಿದ್ದರೆ, ತುಳುವಿಗೆ ಮಾತ್ರ ಈವರೆಗೆ ಈ ಸ್ಥಾನಮಾನಗಳು ದೊರೆತಿಲ್ಲ. ಈ ಕಾರಣಕ್ಕಾಗಿ ತುಳು ಭಾಷೆಯನ್ನು ಎಲ್ಲಾ ಸರಕಾರಗಳೂ, ರಾಜಕೀಯ ಪಕ್ಷಗಳೂ ನಗಣ್ಯ ರೀತಿಯಲ್ಲಿ ಕಾಣುತ್ತಿವೆ ಎನ್ನುವ ಆರೋಪವನ್ನು ತುಳು ಸಂಘಟನೆಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಸಮರ್ಪಕ ರಾಜಕೀಯ ಬೆಂಬಲವಿಲ್ಲದ ಕಾರಣ ತುಳುನಾಡು ಎಲ್ಲಾ ರೀತಿಯಲ್ಲೂ ಕಡೆಗಣಿಸಲ್ಪಟ್ಟಿದೆ ಎನ್ನುವ ಆರೋಪ ತುಳು ಸಂಘಟನೆಗಳದ್ದಾಗಿದೆ. ಇದೀಗ ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿದ್ದು, ತುಳುವರಿಗಾಗಿಯೇ ತುಳುವರ ಪಕ್ಷ ಎನ್ನುವ ರಾಜಕೀಯ ವೇದಿಕೆ ಸಿದ್ಧಗೊಂಡಿದೆ. ಈಗಾಗಲೇ ರಾಷ್ಟ್ರೀಯ ಚುನಾವಣಾ ಆಯೋಗದಲ್ಲಿ ತುಳುವರ ಪಕ್ಷ ಎಂದೇ ನೊಂದಾಯಿತಗೊಂಡಿರುವ ಈ ಪಕ್ಷ ಮುಂದಿನ ದಿನಗಳಲ್ಲಿ ರಾಜಕೀಯ ಅಖಾಡಕ್ಕೆ ಇಳಿಯಲಿದೆ.

ಇದನ್ನೂ ಓದಿ: ಪಕ್ಷದಲ್ಲಿ ಚರ್ಚಿಸದೆ ಹೇಗೆ ನಿರ್ಧಾರ ತೆಗೆದುಕೊಂಡರಿ? ನೀವೊಬ್ಬರೆ ನಿರ್ಧಾರ ಮಾಡೋಕೆ ನಾವ್ಯಾಕೆ ಇರಬೇಕು?; ಡಿಕೆಶಿ ವಿರುದ್ಧ ರಮೇಶ್ ಕುಮಾರ್ ಗರಂ

ತುಳು ನಾಡು ನುಡಿ ರಕ್ಷಣೆ ಅಭಿವೃದ್ದಿಗಾಗಿ ರಾಜಕೀಯ ಬಲ ಅತ್ಯಗತ್ಯ. ಪ್ರಸ್ತುತ ಇರುವ ಪಕ್ಷಗಳು ವಿವಿಧ ತತ್ವ ಸಿದ್ದಾಂತಗಳಿಗೆ ಪೂರಕವಾಗಿದ್ದು, ತುಳು ನಾಡು ನುಡಿ ಹಾಗೂ ತುಳು ಭಾಷೆ ಅಭಿವೃದ್ದಿಗೆ ಯಾವುದೇ ರಾಜಕೀಯ ಬೆಂಬಲ ನೀಡುತ್ತಿಲ್ಲ ಎಂಬುವುದು ಕೆಲವು ತುಳುವರ ಆಕ್ರೋಶ. ಈ ಹಿನ್ನೆಲೆಯಲ್ಲಿ ಕಳೆದ 1 ವರ್ಷದಿಂದ ತುಳುವಿಗಾಗಿ ಪ್ರಾದೇಶಿಕ ರಾಜಕೀಯ ಪಕ್ಷ ಅಸ್ಥಿತ್ವಕ್ಕೆ ತರಲು ಕೇಂದ್ರ ಚುನಾವಣಾ ಆಯೋಗದ ಕದ ತಟ್ಟಲಾಗುತ್ತಿತ್ತು. ಹಲವು ಹಂತದ ದಾಖಲೀಕರಣ, ಕಾನೂನು, ಯೋಜನಾ ವರದಿ, ಬೈಲಾ ಪರಿಶೀಲನೆ ನಂತರ ತುಳುವೆರೆ ಪಕ್ಷ ಎಂಬ ಹೆಸರಿನ ಪ್ರಾದೇಶಿಕ ರಾಜಕೀಯ ಪಕ್ಷ ಕೇಂದ್ರ ಚುನಾವಣಾ ಆಯೋಗ ಅಧಿಕೃತ ಮುದ್ರೆ ನೀಡಿದೆ.

ಚುನಾವಣಾ ಆಯೋಗ ಅನುಮತಿ ಪಡೆದಿರುವ ತುಳುವೆರೆ ಪಕ್ಷವು ಸದ್ಯದಲ್ಲೇ ನಡೆಯಲಿರುವ ತಾಪಂ, ಜಿಪಂ ಚುನಾವಣೆಗೆ ಸಿದ್ದಗೊಳ್ಳುತ್ತಿದೆ ಎನ್ನುತ್ತಾರೆ ತುಳುವೆರೆ ಪಕ್ಷದ ಕೇಂದ್ರಾಧ್ಯಕ್ಷರಾದ ಶೈಲೇಶ್ ಆರ್ ಜೆ.

ಬಾರ್ಕೂರಿನಿಂದ ಕಾಸರಗೋಡುವರೆಗಿನ ಎಲ್ಲಾ ಪ್ರಮುಖ ಕ್ಷೇತ್ರವಾರು ಚುನಾವಣೆಯಲ್ಲಿ ತುಳುವೆರೆ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಸಲ್ಲಿಸಲಿದ್ದಾರೆ. 1-2 ತಿಂಗಳೊಳಗೆ ತುಳುವೆರೆ ಪಕ್ಷದ ಚಿಹ್ನೆ ಸಿದ್ದಗೊಳ್ಳಲಿದ್ದು, ಚಿಹ್ನೆಗೆ ಚುನಾವಣಾ ಆಯೋಗದ ಎನ್‍ಓಸಿ ಲಭಿಸಿದ ಬಳಿಕ ಪಕ್ಷದ ಬಾವುಟ ಸಿದ್ದಗೊಳ್ಳಲಿದೆ.

ಇದನ್ನೂ ಓದಿ: ಕೇರಳ ಮಾಜಿ ಗೃಹ ಸಚಿವರ ಮಗ ಬಿನೀಶ್ ಡ್ರಗ್ ಕೇಸ್​ನಲ್ಲಿ ಬಚಾವ್; ಮನಿ ಲಾಂಡ್ರಿಂಗ್ ಕೇಸ್​ನಲ್ಲಿ ಫಿಕ್ಸ್ತುಳು ಹೊರತುಪಡಿಸಿ ಪಂಚ ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಳುಗು, ಮಳೆಯಾಲ ಭಾಷೆಗಳಿಗೆ ಅಯಾ ರಾಜ್ಯ ಮಾನ್ಯತೆಯಿದ್ದು, 8ನೇ ಪರಿಚ್ಛೇಧಕ್ಕೂ ಸೇರ್ಪಡೆಗೊಂಡಿದೆ. ಆದರೆ ವಿಶಿಷ್ಠ ಸಂಸ್ಕೃತಿ, ಆಚರಣೆ, ಐತಿಹಾಸಿಕತೆ ಹೊಂದಿರುವ ತುಳು ಭಾಷೆಗೆ ಭಾಷಾ ಮಾನ್ಯತೆಯೂ ಸಿಕ್ಕಿಲ್ಲ. 3-4 ದಶಕಗಳಿಂದ ತುಳು 8ನೇ ಪರಿಚ್ಛೇದಕ್ಕೆ ಸೇರಬೇಕೆಂಬ ಹೋರಾಟಕ್ಕೆ ರಾಜಕೀಯ ಬೆಂಬಲವೇ ಸಿಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಈಗಾಲೇ ದೆಹಲಿ, ಮುಂಬೈ ಸೇರಿದಂತೆ 500 ಕ್ಕೂ ಅಧಿಕ ಕಾರ್ಯಕರ್ತರು ತುಳುವೆರೆ ಪಕ್ಷದ ಅಜೀವ ಸದಸ್ಯತ್ವ ಪಡೆದಿದ್ದು, ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವುದೇ ಪಕ್ಷದ ಮೊದಲ ಕಾರ್ಯವಾಗಿದೆ. ತುಳುವರನ್ನು ನಿರಂತರವಾಗಿ ಕಡೆಗಣಿಸಿದರೆ ಮುಂದಿನ ದಿನಳಲ್ಲಿ ಪ್ರತ್ಯೇಕ ತುಳು ರಾಜ್ಯದ ಬೇಡಿಕೆ ತುಳುವೆರೆ ಪಕ್ಷದಿಂದ ಇರುವ ಸಾಧ್ಯತೆ ಇದೆ.

ತುಳುವರ ಬೇಡಿಕೆಗಳಿಗೆ ರಾಜಕೀಯ ಬಲ ಸಿಗಬೇಕಾದರೆ ಪ್ರತ್ಯೇಕ ರಾಜಕೀಯ ಪಕ್ಷದ ಅಸ್ತಿತ್ವ ಅಗತ್ಯವಿದ್ದು, ಕಳೆದ 1 ವರ್ಷದಿಂದ ಪ್ರಾದೇಶಿಕ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ತರಲು ಕಾರ್ಯಯೋಜನೆ ರೂಪುಗೊಂಡಿತ್ತು. ಪ್ರಸ್ತುತ ತುಳುವೆರೆ ಪಕ್ಷ ಎಂಬ ರಾಜಕೀಯ ಪಕ್ಷಕ್ಕೆ ಅನುಮತಿ ನೀಡಿದ್ದು, ತುಳು ಭಾಷೆ, ಸಂಸ್ಕೃತಿ, ಅಸ್ತಿತ್ವಕ್ಕಾಗಿ ಮುಂದಿನ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಅಧಿಕೃತವಾಗಿ ತುಳುವೆರೆ ಪಕ್ಷ ಚುನಾವಣಾ ಕಣಕ್ಕಿಳಿಯಳಿದೆ.

ವರದಿ: ಅಜಿತ್ ಕುಮಾರ್
Published by: Vijayasarthy SN
First published: February 26, 2021, 10:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories