ಕೊಪ್ಪಳ(ಆ.18): ಸಾಮಾನ್ಯವಾಗಿ ಕೋವಿಡ್ ಸೋಂಕಿತರಲ್ಲಿ ಕ್ಷಯ ರೋಗ ಲಕ್ಷಣ ಕಾಣುವ ಸಾಧ್ಯತೆ ಅಧಿಕವಾಗಿದೆ. ಕೋವಿಡ್ ಅಪೌಷ್ಠಿಕತೆ ಹೊಂದಿದವರಲ್ಲಿ ಅಪಾಯ ತರುತ್ತದೆ. ಕ್ಷಯ ಹಾಗೂ ಕೊವಿಡ್ ಲಕ್ಷಣಗಳು ಬಹುತೇಕ ಒಂದೇ ರೀತಿ ಇರುತ್ತವೆ. ಕೋವಿಡ್ ಸೋಂಕಿತರಲ್ಲಿ ಒಂದು ವಾರದೊಳಗೆ ಲಕ್ಷಣ ಗೊತ್ತಾದರೆ , ಕ್ಷಯ ರೋಗವು ಎರಡು ವಾರಗಳಿಗಿಂತ ಅಧಿಕವಾಗಿರುತ್ತದೆ. ಈ ಮಧ್ಯೆ ಕೋವಿಡ್ ಸೋಂಕು ತಗುಲಿ ಗುಣಮುಖರಾದವರಲ್ಲಿಯೂ ಈಗ ಕ್ಷಯ ಕಾಣಿಸಿಕೊಳ್ಳಬಹುದು. ಈ ಕಾರಣಕ್ಕಾಗಿ ಆರೋಗ್ಯ ಇಲಾಖೆಯು ಮನೆ-ಮನೆ ಸಮಿಕ್ಷೆ ನಡೆಸಿ ಕ್ಷಯ ಸಕ್ರಿಯ ಪ್ರಕರಣಗಳ ಪತ್ತೆ ಕಾರ್ಯ ನಡೆಸಲಿದೆ.
ಕ್ಷಯವು ವೇಗವಾಗಿ ಹರಡುತ್ತದೆ. ಶೇ 33 ಕ್ಷಯರೋಗಿಗಳು ಸಾವನ್ನಪ್ಪುತ್ತಿದ್ದಾರೆ. ದೇಶದಲ್ಲಿ ಶೇ 40 ರಷ್ಟು ಜನರಲ್ಲಿ ಕ್ಷಯ ರೋಗದ ಸೋಂಕು ಇದೆ. ಯಾರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆಯೋ ಅವರಲ್ಲಿ ಕ್ಷಯ ರೋಗ ಕಾಣಿಸಿಕೊಳ್ಳುತ್ತವೆ. ಕ್ಷಯವು ಕೋವಿಡ್ ಗಿಂತ ಭೀಕರವಾಗಿದೆ ಎಂದು ಕೊಪ್ಪಳ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ ಮಹೇಶ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಜನವರಿಯಿಂದ ಜೂನ್ವರೆಗೂ 2800 ಜನರಿಗೆ ಕೋವಿಡ್ ತಗುಲಿದೆ, ಅದರಲ್ಲಿ 250 ಕ್ಷಯರೋಗಿಗಳು ಇದ್ದಾರೆ. ಆದರೆ ಕೋವಿಡ್ನಿಂದ ಕ್ಷಯ ರೋಗಿಗಳು ಸಾವನ್ನಪ್ಪಿಲ್ಲ ಎನ್ನುವುದು ಸಮಾಧಾನದ ವಿಷಯವಾಗಿದೆ. ಕ್ಷಯ ಕೋವಿಡ್ ಗಿಂತ ವೇಗವಾಗಿ ಹರಡುತ್ತಿದೆ. ದೇಶದಲ್ಲಿ ಶೇ 40 ರಷ್ಟು ಜನರಲ್ಲಿ ಸೋಂಕು ಇದೆ. ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ 1615 ಜನರಲ್ಲಿ ಕ್ಷಯರೋಗ ಪತ್ತೆಯಾಗಿದೆ. ಇಲ್ಲಿಯವರೆಗೂ 95 ಜನ ಕ್ಷಯದಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:Karnataka: ಸಿಡಿಲು ಮತ್ತು ಚಂಡಮಾರುತದ ಬಗ್ಗೆ ಜನರಿಗೆ ಅಲರ್ಟ್ ನೀಡುವ ವ್ಯವಸ್ಥೆ; ರಾಜ್ಯದಲ್ಲಿ ಶೀಘ್ರದಲ್ಲೇ ಜಾರಿ
ಕ್ಷಯ ರೋಗಿಗಳಲ್ಲಿ ಮದ್ಯಪಾನಿಗಳು, ತಂಬಾಕು ಸೇವನೆ ಮಾಡುವವರು ಅಧಿಕ ಜನ ಸಾವನ್ನಪ್ಪಿದ್ದಾರೆ. ಶೇ 33 ರಷ್ಟು ಮದ್ಯಪಾನಿಗಳಲ್ಲಿ ಕ್ಷಯ ಕಾಣಿಸಿಕೊಂಡು ಅವರು ಮದ್ಯಪಾನ, ತಂಬಾಕು ಸೇವನೆ ಮಾಡುವುದನ್ನು ಬಿಡದ ಹಿನ್ನಲೆಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಕೊಪ್ಪಳ ಜಿಲ್ಲೆಯಲ್ಲಿ 3143 ಜನರಲ್ಲಿ ಕ್ಷಯ ರೋಗ ಕಾಣಿಸಿಕೊಂಡು 203 ಜನರು ಸಾವನ್ನಪ್ಪಿದ್ದಾರೆ.
ಒಬ್ಬ ಕ್ಷಯ ರೋಗಿಯು 15 ಜನರಿಗೆ ಕ್ಷಯವನ್ನು ಅಂಟಿಸುತ್ತಾನೆ. ಈ ಕಾರಣಕ್ಕಾಗಿ ಸಕಾಲಕ್ಕೆ ಚಿಕಿತ್ಸೆ ಮಾಡಿಸಿಕೊಂಡು ತಾವು ಗುಣಮುಖರಾಗಬೇಕು. ಕ್ಷಯ ಹರಡುವದನ್ನು ತಪ್ಪಿಸಬೇಕಾಗಿದೆ. 2025 ಕ್ಕೆ ದೇಶದಲ್ಲಿ ಕ್ಷಯ ಮುಕ್ತ ಮಾಡುವ ಉದ್ದೇಶ ಹೊಂದಲಾಗಿದೆ. ಇದೇ ಕಾರಣಕ್ಕೆ ಈಗ ಸಕ್ರಿಯ ಪ್ರಕರಣಗಳ ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ ಕೆಲವು ಕಡೆ ಕ್ಷಯ ರೋಗಿಗಳು ತಪಾಸಣೆಗೆ ಸಹಕರಿಸುತ್ತಿಲ್ಲ.
ಕೊಪ್ಪಳ ಜಿಲ್ಲೆಯಲ್ಲಿಯೇ ಇಲ್ಲಿಯವರೆಗೂ 70 ಗ್ರಾಮಗಳಲ್ಲಿ ಕ್ಷಯ ರೋಗ ಸಮಿಕ್ಷೆಗೆ ಅವಕಾಶ ನೀಡುತ್ತಿಲ್ಲ, ಎಲ್ಲರೂ ಕ್ಷಯ ರೋಗದ ಬಗ್ಗೆ ಭಯ, ಹಿಂಜರಿಕೆ ಇಲ್ಲದೆ ಪರೀಕ್ಷೆ ಮಾಡಿಸಿಕೊಂಡು ಕ್ಷಯ ಇದೆಯೋ, ಇಲ್ಲವೊ ಎಂಬುವದನ್ನು ಪತ್ತೆ ಮಾಡಲು ಸಮೀಕ್ಷೆಗೆ ಜನರು ಸಹಕರಿಸಲು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ ಮಹೇಶರಿಂದ ಮನವಿ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕ್ಷಯ ರೋಗದ ಸೋಂಕು ಅಧಿಕವಾಗಿದೆ. ಇಲ್ಲಿ ಶೇ 88 ರಷ್ಟು ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಇದು ಶೇ 90 ಕ್ಕಿಂತ ಅಧಿಕ ಜನರು ಗುಣಮುಖರಾಗಬೇಕು. ಕ್ಷಯ ರೋಗಿಗಳು ಚಿಕಿತ್ಸೆ ಅರ್ಧದಲ್ಲಿ ಬಿಟ್ಟರೆ, ಕ್ಷಯ ರೋಗಿಗಳು ವೈದ್ಯರ ಸಲಹೆ ಪಡೆಯದೆ ಇದ್ದರೆ, ಕ್ಷಯವು ಸಹ ರೂಪಾಂತರಗೊಳ್ಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ