HOME » NEWS » District » TROUBLE WITH TENANTS FROM CORONA 10 LAKH RUPEES RENT WAIVER COMPLEX OWNERS HUMANITY HK

ಕೊರೋನಾದಿಂದ ಬಾಡಿಗೆದಾರರ ಸಂಕಷ್ಟ ; 10 ಲಕ್ಷ ರೂಪಾಯಿ ಬಾಡಿಗೆ ಮನ್ನಾ ಮಾಡಿ ಕಾಂಪ್ಲೆಕ್ಸ್ ಮಾಲೀಕನ ಮಾನವೀಯತೆ

ಮಳಿಗೆ ಬಾಡಿಗೆ ಜೊತೆ, ಮನೆ ಬಾಡಿಗೆ ಕಟ್ಟದ ಸ್ಥಿತಿಯಲ್ಲಿ ಬಾಡಿಗೆದಾರರಿದ್ದರು. ಇಂತಹ ಸಂಕಷ್ಟದಲ್ಲಿದ್ದ ವೇಳೆಯಲ್ಲಿಯೇ ಕಾಂಪ್ಲೆಕ್ಸ್ ಮಾಲೀಕರ ಸ್ವತಃ ಮುಂದೆ ಬಂದು ಮೂರು ತಿಂಗಳ ಬಾಡಿಗೆ ಮನ್ನಾ ಮಾಡಿದ್ದಾರೆ.

news18-kannada
Updated:June 18, 2020, 6:50 PM IST
ಕೊರೋನಾದಿಂದ ಬಾಡಿಗೆದಾರರ ಸಂಕಷ್ಟ ; 10 ಲಕ್ಷ ರೂಪಾಯಿ ಬಾಡಿಗೆ ಮನ್ನಾ ಮಾಡಿ ಕಾಂಪ್ಲೆಕ್ಸ್ ಮಾಲೀಕನ ಮಾನವೀಯತೆ
ಅಶೋಕ್ ಕಾಂಪ್ಲೆಕ್ಸ್ ಮಾಲೀಕ ಲಕ್ಷ್ಮೀನಾರಾಯಣ ಮನೋವರಕರ್
  • Share this:
ಕಲಬುರ್ಗಿ(ಜೂ.18): ಕೊರೋನಾ ಸೋಂಕಿನಿಂದ ಎಲ್ಲರೂ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಾಡಿಗೆದಾರರ ಸುಮಾರು 10 ಲಕ್ಷ ರೂಪಾಯಿ ಬಾಡಿಗೆ ಮನ್ನಾ ಮಾಡುವ ಮೂಲಕ  ಮಾಲೀಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಕೊರೋನಾ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಿದೆ. ಕೊರೋನಾ ಲಾಕ್ ಡೌನ್ ನಿಂದಾಗಿ ಜನ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅದರಲ್ಲಿಯೂ ವ್ಯಾಪಾರ ವಹಿವಾಟು ನಡೆಸುವವರ ಮೇಲೆ ಇದು ತೀವ್ರ ಪರಿಣಾಮ ಬೀರಿದೆ. ಹಲವಾರು ಜನ ತಮ್ಮ ಮಳಿಗೆಗಳ ಬಾಡಿಗೆ ಕಟ್ಟಲಾಗದೆ ಪರಿತಪಿಸುವಂತಾಗಿದೆ. ಕೊರೋನಾ ಸಂಕಷ್ಟದಲ್ಲಿಯೂ ಬಾಡಿಗೆಗಾಗಿ ಪೀಡಿಸುವವರನ್ನು ನೋಡಿದ್ದಾರೆ. ಆದರೆ ಕಲಬುರ್ಗಿಯಲ್ಲೊಬ್ಬರು ಬಾಡಿಗೆಯನ್ನೇ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅದೂ ಸಹ ಬರೋಬ್ಬರು 10 ಲಕ್ಷ ರೂಪಾಯಿಗಳಷ್ಟು ಬಾಡಿಗೆಯನ್ನು ಬಿಟ್ಟಿದ್ದಾರೆ.

ಕಲಬುರ್ಗಿಯ ಗೋವಾ ಹೋಟೆಲ್ ಬಳಿ ಇರುವ ಅಶೋಕ್ ಕಾಂಪ್ಲೆಕ್ಸ್ ನಲ್ಲಿರುವ ಎಲ್ಲ ಮಳಿಗೆಗಳ ಬಾಡಿಗೆ ಮನ್ನಾ ಮಾಡಲಾಗಿದೆ. ಹೀಗೆ ಮಾನವೀಯತೆ ಮೆರೆದವರು ಅಶೋಕ್ ಕಾಂಪ್ಲೆಕ್ಸ್ ಮಾಲೀಕ ಲಕ್ಷ್ಮೀನಾರಾಯಣ ಮನೋವರಕರ್. ಅಶೋಕ್ ಕಾಂಪ್ಲೆಕ್ಸ್ ನಲ್ಲಿ 65 ಮಳಿಗೆಗಳಿದ್ದು, ಪ್ರತಿ ತಿಂಗಳು 3.15 ಲಕ್ಷ ರೂಪಾಯಿ ಬಾಡಿಗೆ ಬರುತ್ತಿತ್ತು.

ಆದರೆ, ಕೊರೋನಾ ಲಾಕ್ ಡೌ‌ನ್ ನಿಂದಾಗಿ ಮಾರ್ಚ್, ಏಪ್ರಿಲ್ ಮತ್ತು ಮೇ ಮೂರು ತಿಂಗಳು ಬಾಡಿಗೆದಾರರು ಅಂಗಡಿ ತೆರೆಯಲಾಗದೆ ಬಂದ್ ಮಾಡಿದ್ದರು. ವ್ಯಾಪಾರ ವಹಿವಾಟು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಬಾಡಿಗೆದಾರರು, ಅಂಗಡಿ ಬಾಡಿಗೆ ಕಟ್ಟುವುದು ಹೇಗೆಂಬ ಚಿಂತೆಯಲ್ಲಿದ್ದರು. ಈ ವೇಳೆ ಆಪದ್ಬಾಂಧವರಂತೆ ಬಂದ ಕಾಂಪ್ಲೆಕ್ಸ್ ಮಾಲೀಕರು, ಮೂರು ತಿಂಗಳ ಬಾಡಿಗೆ ಮನ್ನಾ ಮಾಡಿದ್ದಾರೆ.

ಎಲ್ಲರೂ ಸಂಕಷ್ಟದಲ್ಲಿರುವಾಗ ಅವರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಬಾಡಿಗೆ ಮನ್ನಾ ಮಾಡಿರುವದಾಗಿ ಕಾಂಪ್ಲೆಕ್ಸ್ ಮಾಲೀಕ ಲಕ್ಷ್ಮಿನಾರಾಯಣ ಮನೋವರಕರ್ ತಿಳಿಸಿದ್ದಾರೆ. ಮಳಿಗೆ ಬಾಡಿಗೆ ಜೊತೆ, ಮನೆ ಬಾಡಿಗೆ ಕಟ್ಟದ ಸ್ಥಿತಿಯಲ್ಲಿ ಬಾಡಿಗೆದಾರರಿದ್ದರು. ಇಂತಹ ಸಂಕಷ್ಟದಲ್ಲಿದ್ದ ವೇಳೆಯಲ್ಲಿಯೇ ಕಾಂಪ್ಲೆಕ್ಸ್ ಮಾಲೀಕರ ಸ್ವತಃ ಮುಂದೆ ಬಂದು ಮೂರು ತಿಂಗಳ ಬಾಡಿಗೆ ಮನ್ನಾ ಮಾಡಿದ್ದಾರೆ.

9.45 ಲಕ್ಷ ರೂಪಾಯಿ ಮನ್ನಾ ಮಾಡಿರುವುದಾಗಿ ಬಾಡಿಗೆದಾರರಿಗೆ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ. ಕಾಂಪ್ಲೆಕ್ಸ್ ಮಾಲೀಕರ ಔದಾರ್ಯತೆಗೆ ಬಾಡಿಗೆದಾರರು ಕೃತಜ್ಞತೆ ಸಲ್ಲಿಸಿದ್ದಾರೆ. ಇಂತಹ ಮಾಲೀಕರು ಸಿಗುವುದು ಅಪರೂಪ ಎಂದಿದ್ದಾರೆ. ಅಶೋಕ ಕಾಂಪ್ಲೆಕ್ಸ್ ಮಾಲೀಕರ ಹೃದಯ ವೈಶಾಲ್ಯತೆಗೆ ಬಾಡಿಗೆದಾರರು ಫಿದಾ ಆಗಿದ್ದಾರೆ.
ಅನ್ ಲಾಕ್ ಆರಂಭಗೊಂಡ ನಂತರ ಮಳಿಗೆಗಳನ್ನು ಪುನರಾರಂಭಿಸಿದ್ದು, ತಮ್ಮ ವ್ಯಾಪಾರ ವಹಿವಾಟಿನಲ್ಲಿ ಬಾಡಿಗೆದಾರರು ತೊಡಗಿಕೊಂಡಿದ್ದಾರೆ. ಬಾಡಿಗೆದಾರರ ಸಂಕಷ್ಟಕ್ಕೆ ಸ್ಪಂದಿಸಿದ ಕಾಂಪ್ಲೆಕ್ಸ್ ಮಾಲೀಕರ ಕಾರ್ಯ ಅನುಕರಣೀಯವಾಗಿದೆ.
First published: June 18, 2020, 6:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories