HOME » NEWS » District » TROUBLE OF WILD ANIMALS DESTROY CROPS IN GADAG HK

ಕಪ್ಪತ್ತಗುಡ್ಡದ ಬಳಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶ : ಬೆಳೆ ರಕ್ಷಣೆಗೆ ಅಂಗಲಾಚುತ್ತಿರುವ ಅನ್ನದಾತರು

ಇನ್ನೆನ್ನೂ ಗೋವಿನ ಜೋಳ ಫಸಲು ನೀಡುವ ಸಮಯದಲ್ಲಿ ಕಾಡು ಹಂದಿಗಳು ಜಮೀನಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಜೊತೆ ಜೊತೆಗೆ ತೆನೆಗಳನ್ನು ತಿಂದು ಹಾಳು ಮಾಡಿವೆ.

news18-kannada
Updated:August 31, 2020, 2:43 PM IST
ಕಪ್ಪತ್ತಗುಡ್ಡದ ಬಳಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶ : ಬೆಳೆ ರಕ್ಷಣೆಗೆ ಅಂಗಲಾಚುತ್ತಿರುವ ಅನ್ನದಾತರು
ಹಾಳಾಗಿರುವ ಗೋವಿನ ಜೋಳದ ಬೆಳೆ
  • Share this:
ಗದಗ(ಆಗಸ್ಟ್​. 31): ಮುದ್ರಣ ಕಾಶಿ ಗದಗ ಜಿಲ್ಲೆಯ ಅನ್ನದಾತರ ಹಣೆಬರಹ ಚೆನ್ನಾಗಿ ಇಲ್ಲದಂತೆ ಕಾಣುತ್ತಿದೆ. ಇಷ್ಟು ದಿನ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ ರೈತರಿಗೆ ಈಗ ಹೊಸದೊಂದು ಸಂಕಷ್ಟ ಆರಂಭವಾಗಿದೆ. ಪ್ರವಾಹದಿಂದ ಬೆಳೆದ ಬೆಳೆ ಹಾಳಾಗಿ ಹೋಗಿದೆ. ಇನ್ನೊಂದೆಡೆ ರೈತರು ಬೆಳೆದ ಬೆಳೆ ಕಾಡು ಪ್ರಾಣಿಗಳ ಹಾವಳಿಯಿಂದ ಹಾಳಾಗಿ ಹೋಗುತ್ತಿದೆ. 

ಉತ್ತರ ಕರ್ನಾಟಕದ ಸಹ್ಯಾದ್ರಿ ಅಂತಾ ಕರೆಸಿಕೊಳ್ಳುವ ಕಪ್ಪತ್ತಗುಡ್ಡ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲಕರವಾಗಿದೆ. ತನ್ನ ಒಡಲಿನಲ್ಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತನ್ನು ಹಿಡೆದಿಕೊಟ್ಟುಕೊಂಡಿದೆ. ಚಿರತೆ ಸೇರಿದಂತೆ ಕಾಡು ಹಂದಿ, ನರಿ, ಸೇರಿದಂತೆ ಹಲವು ಜಾತಿಯ ಕಾಡು ಪ್ರಾಣಿಗಳಿಗೆ ಆಶ್ರಯ ನೀಡುತ್ತಿದೆ. ಆದರೆ, ಈಗ ಅದೇ ಕಾಡು ಪ್ರಾಣಿಗಳು ರೈತರ ಬದುಕನ್ನು ಮೂರಾಭಟ್ಟಿ ಮಾಡತ್ತಿವೆ.‌

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ, ಡೋಣಿ ತಾಂಡಾ, ಕಡಕೋಳ, ಜಲ್ಲಿಗೇರಿ, ಹೊಸಳ್ಳಿ, ಹಿರೇವಡ್ಡಟ್ಟಿ ಸೇರಿದಂತೆ ಕಪ್ಪತ್ತಗುಡ್ಡದ ಸುತ್ತಮುತ್ತಲಿನ ಜಮೀನುಗಳಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕಪ್ಪತ್ತಗುಡ್ಡಕ್ಕೆ ಹೊಂದಿಕೊಂಡಿರುವ ಜಮೀನುಗಳಿಗೆ ಹಿಂಡು ಹಿಂಡು ಕಾಡು ಹಂದಿಗಳು ಲಗ್ಗೆ ಇಡುತ್ತಿವೆ. ಜಮೀನಿನಲ್ಲಿ ಬೆಳೆದ ಗೋವಿನ ಜೋಳ ಹಾಗೂ ಸೂರ್ಯಕಾಂತಿ ಬೆಳೆಯನ್ನು ನಾಶ ಮಾಡಿವೆ.

ಕಳೆದ ಭಾರಿ ಮಳೆಯಿಂದ ಬೆಳೆದ ಬೆಳೆ ನಾಶವಾಗಿದೆ, ಈ ಭಾರಿ ಕಾಡು ಪ್ರಾಣಿಗಳ ಉಪಟಳದಿಂದ ಹಾಳಾಗುತ್ತಿದೆ. ಗೋವಿನ ಜೋಳ ಫಸಲು ನೀಡುವ ಸಮಯದಲ್ಲಿ ಜಮೀನುಗಳಿಗೆ ಲಗ್ಗೆ ಇಡುವ ಈ ಕಾಡು ಪ್ರಾಣಿಗಳು ಗೋವಿನ ಜೋಳದ ತೆನೆಗಳನ್ನು ತಿಂದು ಹಾಕುತ್ತಿವೆ. ಹೀಗಾಗಿ ರೈತರು ಈ ಕಾಡು ಪ್ರಾಣಿಗಳಿಂದ ನಮಗೆ ಮುಕ್ತಿ ನೀಡಿ ಅಂತಿದ್ದಾರೆ  ಡೋಣಿ ಗ್ರಾಮದ ರೈತ ಶಂಕ್ರಗೌಡ.

ಇನ್ನೂ ಕಪ್ಪತ್ತಗುಡ್ಡದ ಸೆರಗಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ಗೋವಿನ ಜೋಳ, ಸೂರ್ಯಕಾಂತಿ ಬೆಳೆಯನ್ನು ಬೆಳೆಯಲಾಗಿದೆ. ಮೊದಲೇ ರೈತರು ಸಾಲ ಸೂಲಾ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಹಾಕಿ ಉತ್ತಮವಾಗಿ ಬೆಳೆಯನ್ನು ಬೆಳೆದಿದ್ದರು. ಇನ್ನೆನ್ನೂ ಗೋವಿನ ಜೋಳ ಫಸಲು ನೀಡುವ ಸಮಯದಲ್ಲಿ ಕಾಡು ಹಂದಿಗಳು ಜಮೀನಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಜೊತೆ ಜೊತೆಗೆ ತೆನೆಗಳನ್ನು ತಿಂದು ಹಾಳು ಮಾಡಿವೆ.

ಇದನ್ನೂ ಓದಿ : ಕೊರೋನಾ ಸೋಂಕಿತ ವ್ಯಕ್ತಿ ಸಾವು- ಸಂಬಂಧಿಕ ಮಹಿಳೆಯರಿಂದ ಕಲ್ಲು ತೂರಾಟ, ಆ್ಯಂಬುಲೆನ್ಸ್ ಗಾಜು ಪುಡಿಪುಡಿ

ಮೊದಲು ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣ ಮಾಡಲು ಪಟಾಕಿ ಸಿಡಿಸಿ ಓಡಿಸಲಾಗುತ್ತಿತ್ತು. ಆದರೆ, ಈಗ ಅರಣ್ಯ ಇಲಾಖೆ ಅಂತಹ ಚಟುವಟಿಕೆಗೆ ಬ್ರೆಕ್ ಹಾಕಿದೆ. ಹೀಗಾಗಿ ರಾತ್ರಿ ಹಗಲು ಎನ್ನುದೆ ಕಾಡು ಪ್ರಾಣಿಗಳನ್ನು ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ. ಆದರೂ ಸಹ ರೈತರ ಕಣ್ಣು ತಪ್ಪಿಸಿ ರೈತರ ಬೆಳೆದ ಬೆಳೆಯನ್ನು ನಾಶ ಮಾಡುತ್ತಿವೆ. ಹೀಗೆಯಾದ್ರೆ ನಮ್ಮ ಬದುಕು ಮೂರಾಭಟ್ಟಿಯಾಗುತ್ತದೆ. ಹಾಗಾಗಿ ಕಾಡು ಪ್ರಾಣಿಗಳು ಜಮೀನುಗಳಿಗೆ ಬರದಂತೆ ಅರಣ್ಯ ಇಲಾಖೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಅಂತಾ ರೈತರ ಒತ್ತಾಯವಾಗಿದೆ.
Youtube Video

ಇನ್ನೂ ಕುರಿತು ಅರಣ್ಯ ಅಧಿಕಾರಿಗಳನ್ನು ಕೇಳಿದ್ರೆ ಬೆಳೆ ಹಾನಿಯಾದ ಪ್ರದೇಶವನ್ನು ಸರ್ವೆ ಮಾಡಿ ಪರಿಹಾರ ನೀಡುತ್ತೇವೆ ಅಂತಾ ಹೇಳುತ್ತಾರೆ. ಆದರೆ, ವರ್ಷ ವಿಡೀ ಕಷ್ಟಪಟ್ಟು ದುಡಿದ ಬೆಳೆಯನ್ನು ಬೆಳೆಸಿದ ರೈತರಿಗೆ ಅರಣ್ಯ ಇಲಾಖೆ ನೀಡುವ ಅಲ್ಪಪ್ರಮಾಣದ ಪರಿಹಾರದ ಬೇಕಾಗಿಲ್ಲ. ಅದರ ಬದಲಿಗೆ ಕಾಡು ಪ್ರಾಣಿಗಳು ಜಮೀನುಗಳಿಗೆ ಬರದಂತೆ ಶಾಶ್ವತವಾದ ಕ್ರಮ ಕೈಗೊಳ್ಳಬೇಕು ಎನ್ನುವದು ರೈತರ ಒತ್ತಾಯವಾಗಿದೆ. ಇನಾದರೂ ಅರಣ್ಯ ಇಲಾಖೆ ಕಾಡು ಪ್ರಾಣಿಗಳ ನಿಯಂತ್ರಣ ಮಾಡಿ ರೈತರ ಹಿತವನ್ನು ಕಾಪಾಡಬೇಕಾಗಿದೆ.
Published by: G Hareeshkumar
First published: August 31, 2020, 2:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories