• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Gadag Govt Hospital: ಒಂದೇ ಬೆಡ್ ಮೇಲೆ ಇಬ್ಬರು ಮಕ್ಕಳಿಗೆ ಚಿಕಿತ್ಸೆ.. ಗದಗ ಸರ್ಕಾರಿ ಆಸ್ಪತ್ರೆಯ ಅವಸ್ಥೆ!

Gadag Govt Hospital: ಒಂದೇ ಬೆಡ್ ಮೇಲೆ ಇಬ್ಬರು ಮಕ್ಕಳಿಗೆ ಚಿಕಿತ್ಸೆ.. ಗದಗ ಸರ್ಕಾರಿ ಆಸ್ಪತ್ರೆಯ ಅವಸ್ಥೆ!

ಗದಗದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ

ಗದಗದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ

ನಮಗೆ ಇಷ್ಟು ಸಿಕ್ಕಿದ್ದೇ ಪುಣ್ಯ ಕೆಲವು ಮಕ್ಕಳನ್ನ ವೈದ್ಯರು ವಾಪಸ್ ಕಳೆಸಿದ್ದಾರೆ ಅಂತ ಆ ಮಕ್ಕಳ ಪೋಷಕರು ಗೋಳು ತೊಡಿಕೊಳ್ತಿದ್ದಾರೆ. ಕಳೆದ ಒಂದು ವಾರದಿಂದ ಇಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದೆ.

  • Share this:

ಗದಗ: ಬೆಡ್ ಗಳ ಮೇಲೆ ಬೆಡ್ ಶೀಟ್ ಗಳು ಇಲ್ಲ. ಅವ್ಯವಸ್ಥೆ ವಾರ್ಡ್ ಗಳಲ್ಲೇ ಒಂದೇ ಬೆಡ್​​ನಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಜೀವದ ಜೊತೆಗೆ ಚೆಲ್ಲಾಟ. ಮಕ್ಕಳ ಜೀವಕ್ಕೀಲ್ಲ ಕಿಮ್ಮತ್ತು . ಇಂತಹ ಅಮಾನವೀಯ ಪರಿಸ್ಥಿತಿ ಇರುವುದು ನಗರದ ಕೆಸಿ ರಾಣಿ ರಸ್ತಯಲ್ಲಿ ಇರೋ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ. ಕೊರೊನಾ ಮೂರನೇ ಅಲೆ ಇನ್ನೂ ಆರಂಭವಾಗಿಲ್ಲ. ಈಗಲೇ ಗದಗನಲ್ಲಿ ಬೆಡ್ ಗಾಗಿ ಹಾಹಾಕಾರ ಶುರುವಾಗಿದೆ. ಮಕ್ಕಳಿಗೆ ಬೆಡ್ ಸಿಗದೆ ಪೋಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಒಂದೇ ಬೆಡ್ ನಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡಲಾಗ್ತಿದೆ‌. ಹೀಗ್ಯಾಕೆ ಅಂತ ಆ ಮಕ್ಕಳ ತಾಯಿಯನ್ನ ಕೇಳಿದರೆ ಬೆಡ್ ಇಲ್ಲಂತ ಹೇಳ್ತಿದ್ದಾರೆ.


ನಮಗೆ ಇಷ್ಟು ಸಿಕ್ಕಿದ್ದೇ ಪುಣ್ಯ ಕೆಲವು ಮಕ್ಕಳನ್ನ ವೈದ್ಯರು ವಾಪಸ್ ಕಳೆಸಿದ್ದಾರೆ ಅಂತ ಆ ಮಕ್ಕಳ ಪೋಷಕರು ಗೋಳು ತೊಡಿಕೊಳ್ತಿದ್ದಾರೆ. ಕಳೆದ ಒಂದು ವಾರದಿಂದ ಇಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದೆ. ಮಕ್ಕಳಿಗೆ ಜ್ವರ, ಕೆಮ್ಮು ನೆಗಡಿ ಸೇರಿ ನ್ಯುಮೋನಿಯಾದಂತ ಬಾದೆಗಳು ಕಾಣಿಕೊಂಡಿದ್ದು ತಂಡೋಪತಂಡವಾಗಿ ಮಕ್ಕಳನ್ನ ಆಸ್ಪತ್ರೆಗೆ ಕರೆದುಕೊಂಡು ಬರ್ತಿದ್ದಾರೆ. ಆದ್ರೆ ಇಲ್ಲಿ ಮಕ್ಕಳ ಆಸ್ಪತ್ರೆಯಲ್ಲಿ ಬೆಡ್ ಗಳು ಖಾಲಿಯಾಗಿವೆ. ಇದರಿಂದ ಇನ್ನಷ್ಟು ಬೆಡ್ ಗಳ ವ್ಯವಸ್ಥೆ ಮಾಡಬೇಕು ಅಂತ ಪೋಷಕರು ಒತ್ತಾಯ ಮಾಡ್ತಿದ್ದಾರೆ
ಇನ್ನು ಮೂರನೆ ಅಲೆಯನ್ನು ಸಮರ್ಥವಾಗಿ ಎದುರಿಸಲು ಜಿಮ್ಸ್ ಆಸ್ಪತ್ರೆಯಲ್ಲಿ 100 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಅಂತ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಜಂಬಾ ಕೊಚ್ಚಿಕೊಳ್ತಿದ್ದಾರೆ. ಹೋದಲ್ಲೆಲ್ಲ ಭಾಷಣ ಮಾಡಿ ಕರೊನಾ ನಿಯಂತ್ರಣಕ್ಕೆ ನಾವು ಕಟಿಬದ್ಧವಾಗಿದ್ದೇವೆ ಅಂತ ಚೆಪ್ಪಾಳೆ ಗಿಟ್ಟಿಸಿಕೊಳ್ತಿದ್ದಾರೆ.


ಆದ್ರೆ, ಗದಗ ಹೆರಿಗೆ ಆಸ್ಪತ್ರೆಗೆ ಬೇರೆ ಬೇರೆ ಊರುಗಳಿಂದ, ಪಕ್ಕದ ಜಿಲ್ಲೆಗಳಿಂದ ಬರುವ ಪೋಷಕರು ಮಕ್ಕಳ ಚಿಕಿತ್ಸೆಗೆ ಪರದಾಡ್ತಿದ್ದಾರೆ. ಹೀಗಾಗಿ ನಿಮ್ಮ 100 ಬೆಡ್ ಗಳು ಜಿಮ್ಸ್ ಆಸ್ಪತ್ರೆಯಲ್ಲಿ ತುಕ್ಕು ಹಿಡಿಯುತ್ತಿವೆ ಇಲ್ಲಿ ಯಾಕೆ ಬಳಸಿಕೊಳ್ಳಬಾರದು ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಡಳಿತ ನಿರ್ದೇಶನ ನೀಡಿದ್ರೂ ಜಿಮ್ಸ್ ನಿರ್ದೇಶಕ ಡಾ. ಪಿ ಎಸ್ ಭೂಸರೆಡ್ಡಿ ಮಕ್ಕಳ ವಾರ್ಡ್ ನಲ್ಲಿ ಚಿಕಿತ್ಸೆ ಆರಂಭ ಮಾಡಿಲ್ವಾ ಅಂತ ಕಿಡಿಕಾರಿದ್ದಾರೆ.


ಜಿಲ್ಲಾಡಳಿತ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ. ಇಲ್ಲಿ ಮಕ್ಕಳ ಜೀವಕ್ಕೆ ಬೆಲೆ ಇಲ್ಲ ಅಂತ ಕಿಡಿಕಾರುತ್ತಿದ್ದಾರೆ‌. ಇನ್ನು ಈ ಸಂಬಂಧ ಹೆರಿಗೆ ಆಸ್ಪತ್ರೆಯ ಡಿಸ್ಟ್ರಿಕ್ಟ್ ಸರ್ಜನ್ ಬಸನಗೌಡ ಕರಿಗೌಡರನ್ನು ಕೇಳಿದ್ರೆ  ಇನ್ನೋಂದು ವಾರದಲ್ಲಿ ಹೆಚ್ಚುವರಿ ಬೆಡ್ ಗಳ ವ್ಯವಸ್ಥೆ ಮಾಡಿ ಸಮಸ್ಯೆ ಬಗ್ಗೆ ಹರಿಸುತ್ತೇನೆ ಎಂದ್ರು.


ಇದನ್ನೂ ಓದಿ: Terrorist Link: ದುಬೈನಲ್ಲಿ ಕೆಲಸ ಮಾಡಿರುವ ಹೆಂಡತಿಗೆ ಉಗ್ರ ಸಂಘಟನೆ ಸಂಪರ್ಕ ಶಂಕೆ: ಗಂಡನಿಂದ ದೂರು


ಇನ್ನು ಕಳೆದ ಒಂದು ವಾರದಿಂದ ಸರ್ಕಾರಿ ಆಸ್ಪತ್ರೆ ಸೇರಿ ನಗರದಲ್ಲಿ ಇರುವ ಬಹುತೇಕ ಆಸ್ಪತ್ರೆಗಳು ಮಕ್ಕಳಿಂದ ತುಂಬಿ ತುಳುಕುತ್ತಿವೆ‌. ಆದ್ರೆ ವೈದ್ಯರು, ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ್ದು ಮಾತ್ರ ವಿಪರ್ಯಾಸ. ಇನ್ನಾದ್ರೂ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಜಿಮ್ಸ್ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

First published: