HOME » NEWS » District » TRAVEL HISTORY HIDING IN UTTARA KANNADA INCREASE IN THE NUMBER OF CORONA INFECTIONS HK

ಉತ್ತರ ಕನ್ನಡದಲ್ಲಿ ಟ್ರಾವೆಲ್ ಹಿಸ್ಟರಿ ಮುಚ್ಚಿಡುವ ಜನ ; ಕೊರೋನಾ ಸೋಂಕಿತರ ಸಂಖ್ಯೆಯ ಪ್ರಮಾಣ ಹೆಚ್ಚಳ

ಮೃತ ಸೋಂಕಿತ ವೃದ್ದೆ ಮಾಡಿದ ಒಂದು ತಪ್ಪಿನಿಂದ ಈಗ ವೈದ್ಯಕೀಯ ಸಿಬ್ಬಂದಿ ಕೂಡಾ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಜತೆಗೆ ಜನ ಸಾಮನ್ಯರು ಕೂಡಾ ಕಂಗಾಲಾಗಿದ್ದಾರೆ.

news18-kannada
Updated:July 12, 2020, 5:02 PM IST
ಉತ್ತರ ಕನ್ನಡದಲ್ಲಿ ಟ್ರಾವೆಲ್ ಹಿಸ್ಟರಿ ಮುಚ್ಚಿಡುವ ಜನ ; ಕೊರೋನಾ ಸೋಂಕಿತರ ಸಂಖ್ಯೆಯ ಪ್ರಮಾಣ ಹೆಚ್ಚಳ
ರಸ್ತೆ ಮೇಲೆ ಓಡಾಡುತ್ತಿರುವ ಜನರು
  • Share this:
ಕಾರವಾರ(ಜುಲೈ.12): ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ವಾಗುತ್ತಿದ್ದು, ನಿಯಂತ್ರಣಕ್ಕೆ ಬರುತ್ತಿಲ್ಲ. ಇದರ ಜತೆಗೆ ಈಗ ಸೋಂಕಿತರು ತಮ್ಮ ಟ್ರಾವೆಲ್ ಹಿಸ್ಟರಿಯನ್ನ ಮುಚ್ಚಿಟ್ಟು ಇನ್ನಷ್ಟು ಸಮಸ್ಯೆ ತಂದೊಡ್ಡಿದ್ದಾರೆ. ಟ್ರಾವೆಲ್ ಹಿಸ್ಟರಿ ಮುಚ್ಚಿಟ್ಟಿದ್ದರಿಂದ ಈಗ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಜನ ಕಂಗಾಲಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಈಗ 500 ದಾಟಿದೆ ಜತಗೆ ಸಾವಿನ ಸಂಖ್ಯೆ ಮೂರಕ್ಕೇರಿದೆ. ಈ ಹೊತ್ತಲ್ಲಿ ಸುರಕ್ಷತೆ ಬಯಸಿ ಇದ್ದ ಜನ ಕಂಗಲಾಗುವುದು ಸರ್ವೇ ಸಾಮಾನ್ಯವಾಗಿದೆ. ಕೊರೋನಾ ನಿಯಂತ್ರಣಕ್ಕೆ ಸರಕಾರ ಹಾಗು ಆಯಾ ಜಿಲ್ಲಾಡಳಿತ ಹತ್ತಾರು ಯೋಜನೆ ರೂಪಿಸಿ ಶತಾಯಗತಾಯ ಪ್ರಯತ್ನ ಪಡುತ್ತಿದೆ. ಇದರ ಜತೆಗೆ ಜನಸಾಮನ್ಯರ ಕೈ ಜೋಡಿಸುವಿಕೆ ಕೂಡ ಅಷ್ಟೆ ಅಗತ್ಯ ಇದೆ.

ಆದರೆ, ಕಾರವಾರದಲ್ಲಿ ಮೊನ್ನೆ ವೃದ್ದೆಯೊಬ್ಬಳು ಕೊರೋನಾ ಸೋಂಕಿನಿಂದ ಸಾವನಪ್ಪಿದ್ದು, ಈಕೆ ತನ್ನ ಮಂಗಳೂರಿನ ಟ್ರಾವೆಲ್ ಹಿಸ್ಟರಿಯನ್ನ ಮುಚ್ಚಿಟ್ಟು ಮೂತ್ರ ಪಿಂಡ ರೋಗದ ಸಮಸ್ಯೆ ಇದೆ ಎಂದು ಚಿಕಿತ್ಸೆ ಪಡೆಯಲು ಬಂದು ಉಸಿರಾಟದ ಸಮಸ್ಯೆಯಿಂದ ಕಾರವಾರ ಜಿಲ್ಲಾ ಕ್ರಿಮ್ಸ್ ನ ಐಸಿಯು ನಲ್ಲಿ ದಾಖಲಾಗಿದ್ದಳು, ಟ್ರಾವೆಲ್ ಹಿಸ್ಟರಿ ಬಗ್ಗೆ ವೈದ್ಯಕೀಯ ಸಿಬ್ಬಂದಿ ಕೇಳಿದರು. ವೃದ್ದೆ ಮತ್ತು ಕುಟುಂಬದವರು ಬಾಯಿಬಿಟ್ಟಿರಲಿಲ್ಲ, ಆರೋಗ್ಯದಲ್ಲಿ ಏರುಪೇರಾದ ಬಳಿಕ ಕೊನೆಯಲ್ಲಿ ಸಂಶಯದ ಮೇರೆಗೆ ಇವಳ ಕೋವಿಡ್ ಪರೀಕ್ಷೆ ನಡೆಸಿದಾಗ ಈಕೆಗೆ ಕೊರೋನಾ ಇರುವುದು ದೃಢವಾದ ಬಳಿಕ ಕೊನೆಯಲ್ಲಿ ಈಕೆಯ ಟ್ರಾವೆಲ್ ಹಿಸ್ಟರಿಯನ್ನ ಮನೆಯವರು ಬಾಯ್ಬಿಟ್ಟಿದ್ದಾರೆ,

ಸೋಂಕಿತ ವೃದ್ದೆ ಸಾವು ಕಂಡ ಬಳಿಕ ವೃದ್ದೆಯ ಟ್ರಾವೆಲ್ ಹಿಸ್ಟರಿ ಕೂಡಾ ಬಯಲಾಯಿತು, ಇದರಿಂದ ಈಗ ಆಸ್ಪತ್ರೆಯಲ್ಲಿದ್ದ ಹತ್ತು ಜನರಿಗೆ ಸೋಂಕು ತಗುಲಿದ್ದು ಇನ್ನು 20 ಜನರ ಕೋವಿಡ್ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ವೃದ್ದೆ ಕುಟುಂಬದವರು ಟ್ರಾವೆಲ್ ಹಿಸ್ಟರಿ ಮುಚ್ಚಿಟ್ಟು ಸಮಾಜದಲ್ಲಿ ಇಂತ ಸಮಸ್ಯೆಯನ್ನು ಸೃಷ್ಟಿಸಿದ್ದಾರೆ.

ಇದನ್ನೂ ಓದಿ : ಲಾಕ್ ಡೌನ್ ಮೀರಿದವರಿಗೆ ಲಾಠಿ ; ಜನರ ವರ್ತನೆಗೆ ಬೇಸತ್ತು ಸಂಪೂರ್ಣ ಲಾಕ್ ಡೌನ್ ಗೆ ಮುಂದಾದ ಜಿಲ್ಲಾಡಳಿತ

ಇನ್ನೂ ಈಗಾಗಲೆ ಕಾರವಾರದ ಜನ ಕೋವಿಡ್ ಮಹಾಮಾರಿಗೆ ಬೆಚ್ಚಿಬಿದ್ದು ಸುರಕ್ಷತೆಯನ್ನ ಬಯಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಟ್ರಾವೆಲ್ ಹಿಸ್ಟರಿ ಮುಚ್ಚಿಡುವುದು ನಡೆಯುತ್ತಿದೆ. ಮೃತ ಸೋಂಕಿತ ವೃದ್ದೆ ಮಾಡಿದ ಒಂದು ತಪ್ಪಿನಿಂದ ಈಗ ವೈದ್ಯಕೀಯ ಸಿಬ್ಬಂದಿ ಕೂಡಾ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಜತೆಗೆ ಜನ ಸಾಮನ್ಯರು ಕೂಡಾ ಕಂಗಾಲಾಗಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಸುರಕ್ಷತೆ ಬಯಸುವ ಜನ ಶಿಕ್ಷೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.
ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರು ತಮ್ಮ ಟ್ರಾವೆಲ್ ಹಿಸ್ಟರಿ ಹೇಳದೆ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಲು ಮುಂದಾಗುತ್ತಿದ್ದಾರೆ. ಜಿಲ್ಲಾಡಳಿತದ ಜತೆಗೆ ತಾವು ಕೂಡಾ ಕೈ ಜೋಡಿಸಿ ಕೊರೋನಾ ನಿಯಂತ್ರಣಕ್ಕೆ ಮುಂದಾಗಬೇಕೆನ್ನುವ ಸಮಾನ್ಯ ಜ್ಙಾನವನ್ನ ಮರೆತಿದ್ದಾರೆ.
Published by: G Hareeshkumar
First published: July 12, 2020, 4:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories