ಸಾರಿಗೆ ನೌಕರರ ಮುಷ್ಕರ: ಕೆಲಸಕ್ಕೆ ಗೈರಾದ ತರಬೇತಿ ನೌಕರರಿಗೆ ಮಡಿಕೇರಿ ಘಟಕದಿಂದ ನೊಟೀಸ್ ಜಾರಿ

ನಮ್ಮ ಬೇಡಿಕೆಗಳನ್ನು ಆಲಿಸಿ ಸಮಸ್ಯೆ ಬಗೆಹರಿಸುವ ಬದಲು ಸರ್ಕಾರ ಇಂತಹ ಅಡ್ಡ ಮಾರ್ಗಗಳನ್ನು ಹಿಡಿಯುತ್ತಿದೆ. ಟ್ರೈನಿಗಳನ್ನು ಬಳಸಿಕೊಂಡು ಬಸ್ಸು ಚಲಾಯಿಸಲು ಹೋಗಿ ಒಂದು ವೇಳೆ ಅಪಘಾತಗಳಾದರೆ ಅದಕ್ಕೆ ಸರ್ಕಾರ ಹೊಣೆಯಾಗುತ್ತದೆಯೇ ಎಂದು ಹೋರಾಟಗಾರರು ಪ್ರಶ್ನಿಸಿದ್ದಾರೆ.

ಸಾರಿಗೆ ನೌಕರರ ಪ್ರತಿಭಟನೆ (ಸಾಂದರ್ಭಿಕ ಚಿತ್ರ)

ಸಾರಿಗೆ ನೌಕರರ ಪ್ರತಿಭಟನೆ (ಸಾಂದರ್ಭಿಕ ಚಿತ್ರ)

  • Share this:
ಕೊಡಗು : ಆರನೇ ವೇತನ ಆಯೋಗ ಜಾರಿ ಮಾಡುವಂತೆ ರಾಜ್ಯ ವ್ಯಾಪಿಯಾಗಿ ಕೆಎಸ್‍ಆರ್ ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ ಎರಡನೇ ದಿನವನ್ನು ಪೂರೈಸುತ್ತಿದೆ. ಹೀಗಾಗಿ ಸರ್ಕಾರಿ ಸಾರಿಗೆ ಸಂಚಾರ ಸ್ತಬ್ಧವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಹೀಗಾಗಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವಂತೆ ಸರ್ಕಾರ ಎಷ್ಟೋ ಮನವಿ ಮಾಡುತ್ತಿದ್ದರೂ ನೌಕರರು ಬಗ್ಗದ ಹಿನ್ನೆಲೆಯಲ್ಲಿ ಪುತ್ತೂರು ವಿಭಾಗದ ಮಡಿಕೇರಿ ಘಟಕದ ಟ್ರೈನಿ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೊಟೀಸ್ ನೀಡಿದೆ. ನೀವು ಟ್ರೈನಿಗಳಾಗಿರು ವುದರಿಂದ ಯಾವುದೇ ಮಾಹಿತಿ ನೀಡದೆ ಕರ್ತವ್ಯಕ್ಕೆ ಗೈರು ಆಗಿದ್ದೀರ. ಹೀಗೆ ನೀವು ಕರ್ತವ್ಯಕ್ಕೆ ಗೈರಾಗಿರುವುದು ಮತ್ತು ಪ್ರತಿಭಟನೆಗೆ ಭಾಗವಹಿಸುವುದು ಅಪರಾಧ ವಾಗಿರುತ್ತದೆ. ಕೂಡಲೇ ನೀವು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕೆಎಸ್‍ಆರ್ ಟಿಸಿ ಅಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದಾರೆ.

ಮಡಿಕೇರಿ ಘಟಕ ಸುಮಾರು ಏಳರಿಂದ ಎಂಟು ಟ್ರೈನಿ ಸಿಬ್ಬಂದಿಗಳಿಗೆ ನೊಟೀಸ್ ನೀಡಲಾಗಿದೆ. ನೊಟೀಸ್ ಸಿಗದವರಿಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡಲಾಗಿದೆ. ನೊಟೀಸ್ ನೀಡಿದರೂ ತಕ್ಷಣವೇ ನೀವು ಕರ್ತವ್ಯಕ್ಕೆ ಹಾಜರಾಗದಿದ್ದರೆ, ಆಯ್ಕೆ ಪಟ್ಟಿಯಿಂದ ನಿಮ್ಮ ಹೆಸರನ್ನು ಕೈಬಿಡಲಾಗುವುದು ಎಂದು ಅಧಿಕಾರಿಗಳು ನೊಟೀಸ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಆದರೆ ಅಧಿಕಾರಿಗಳು ಟ್ರೈನೀಗಳಿಗೆ ನೊಟೀಸ್ ನೀಡುವ ಮೂಲಕ ನಮ್ಮ ಹೋರಾಟದ ಶಕ್ತಿಯಿಂದ ಕುಂದಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ.

ನಮ್ಮ ಬೇಡಿಕೆಗಳನ್ನು ಆಲಿಸಿ ಸಮಸ್ಯೆ ಬಗೆಹರಿಸುವ ಬದಲು ಸರ್ಕಾರ ಇಂತಹ ಅಡ್ಡ ಮಾರ್ಗಗಳನ್ನು ಹಿಡಿಯುತ್ತಿರುವುದು ಎಷ್ಟು ಸರಿ. ಟ್ರೈನಿಗಳನ್ನು ಬಳಸಿಕೊಂಡು ಬಸ್ಸು ಚಲಾಯಿಸಲು ಹೋಗಿ ಒಂದು ವೇಳೆ ಅಪಘಾತಗಳಾದರೆ ಅದಕ್ಕೆ ಸರ್ಕಾರ ಹೊಣೆಯಾಗುತ್ತದೆಯೇ, ಇಲ್ಲ ಅಧಿಕಾರಿಗಳು ಹೊಣೆಯಗುತ್ತಾರೆಯೇ. ಟ್ರೈನಿಗಳು ಓಡಿಸುವ ಬಸ್ಸಿನಲ್ಲಿ ಹತ್ತಾರು ಪ್ರಯಾಣಿಕರಿರುತ್ತಾರೆ. ಅವರ ಜೀವಗಳಿಗೆ ಯಾರು ಜವಾಬ್ದಾರಿ ಎನ್ನೋದು ಪ್ರತಿಭಟನಾ ನಿರತ ನೌಕರರ ಮುಖಂಡ ಮನು ಅವರ ಆಕ್ರೋಶ.

ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೆಎಸ್‍ಆರ್ ಟಿಸಿ ನೌರರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಸಾರಿಗೆ ಬಸ್ಸುಗಳು ಇಂದು ಕೂಡ ರಸ್ತೆಗೆ ಇಳಿದಿಲ್ಲ. ಮತ್ತೊಂದೆಡೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಖಾಸಗೀ ಬಸ್ಸು ಮತ್ತು ಕ್ಯಾಬ್ ಗಳ ಮಾಲೀಕರು ಎಲ್ಲಾ ಮಾರ್ಗಗಳಲ್ಲೂ ಬಸ್ಸು, ಕ್ಯಾಬ್ ಗಳನ್ನು ಓಡಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಖಾಸಗೀ ಬಸ್ಸು ಮತ್ತು ಕ್ಯಾಬ್ ಗಳಿಗೂ ಪ್ರಯಾಣಿಕರಿಲ್ಲ.

ಇದನ್ನೂ ಓದಿ: Crime News: ಜಮ್ಮು-ಕಾಶ್ಮೀರದಲ್ಲಿ ಪೊಲೀಸ್​ ಸಿಬ್ಬಂದಿಯಿಂದಲೇ ಬಾಲಕಿ ಮೇಲೆ ಅತ್ಯಾಚಾರ; ನಾಲ್ವರ ಬಂಧನ!

ಮಡಿಕೇರಿಯಿಂದ ಮೈಸೂರು, ಮಂಗಳೂರು ಮತ್ತು ಬೆಂಗಳೂರಿಗೆ ಖಾಸಗಿ ಬಸ್ಸುಗಳು ಸಂಚರಿಸುತ್ತಿದ್ದು ನಾವು ಕೂಡ ನಷ್ಟದಲ್ಲಿ ಬಸ್ಸು ಓಡಿಸಬೇಕಾಗಿದೆ ಎನ್ನುತ್ತಿದ್ದಾರೆ ಬಸ್ಸುಗಳ ಮಾಲೀಕರಾದ ನಯನ್ ಕುಮರ್. ಎರಡನೆ ದಿನಕ್ಕೆ ಮುಷ್ಕರ ಮುಂದುವರೆದಿದ್ದರಿಂದ ಎರಡನೇ ದಿನದಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ತೀವ್ರ ತೊಂದರೆ ಆಗುತ್ತದೆ ಎನ್ನೋ ನಿರೀಕ್ಷೆ ಇತ್ತು.

ಆದರೆ ಬೆಳಿಗ್ಗೆಯಿಂದಲೇ ಮಡಿಕೇರಿ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರೇ ಇಲ್ಲದೆ ಬಿಕೋ ಎನ್ನುತಿತ್ತು. ಬಸ್ಸು, ಕ್ಯಾಬ್ ಗಳು ಸಾಕಷ್ಟು ಪ್ರಮಾಣದಲ್ಲಿ ಮಡಿಕೇರಿ ಸರ್ಕಾರಿ ಬಸ್ಸು ನಿಲ್ದಾಣದಲ್ಲೇ ನಿಂತಿದ್ದರೂ ಪ್ರಯಾಣಿಕರ ಕೊರತೆ ಎದ್ದು ಕಾಣುತಿತ್ತು.
Published by:MAshok Kumar
First published: