HOME » NEWS » District » TRANSPORT EMPLOYEES STRIKE IS SOMEONE CONSPIRACY SAYS MINISTER KS ESHWARAPPA RHHSN SAKLB

ಸಾರಿಗೆ ನೌಕರರ ಮುಷ್ಕರ ಕುತಂತ್ರಿಗಳ ಷಡ್ಯಂತ್ರ; ಸಚಿವ ಈಶ್ವರಪ್ಪ ಕಿಡಿ

ಇದೀಗ ರಾಜ್ಯದಲ್ಲಿ ಕ್ಯಾಚ್ ದಿ ರೈನ್ ಯೋಜನೆ ಜಾರಿ ಮಾಡಲಾಗ್ತಿದೆ. ಮಳೆ ನೀರು ವ್ಯರ್ಥವಾಗಬಾರದೆಂದು ಈ ಯೋಜನೆ ಜಾರಿಗೆ ತರಲಾಗ್ತಿದೆ. ಕೆರೆ, ಕಲ್ಯಾಣಿ, ಗೋ ಕಟ್ಟೆ ಇತ್ಯಾದಿಗಳ ಪುನರುಜ್ಜೀವನಗೊಳಿಸಲಾಗುವುದು. ರಾಜ್ಯದಲ್ಲಿ 3.80 ಲಕ್ಷ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 4310 ಕೋಟಿ ರೂಪಾಯಿ ಹಣ ಮೀಸಲಿಟ್ಟಿರೋದಾಗಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

news18-kannada
Updated:April 9, 2021, 2:25 PM IST
ಸಾರಿಗೆ ನೌಕರರ ಮುಷ್ಕರ ಕುತಂತ್ರಿಗಳ ಷಡ್ಯಂತ್ರ; ಸಚಿವ ಈಶ್ವರಪ್ಪ ಕಿಡಿ
ಕೆಎಸ್ ಈಶ್ವರಪ್ಪ
  • Share this:
ಹುಬ್ಬಳ್ಳಿ; ಸಾರಿಗೆ ನೌಕರರ ಮುಷ್ಕರ ಕುತಂತ್ರ ವ್ಯಕ್ತಿಗಳ ಷಡ್ಯಂತ್ರವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರಿಗೆ ಮುಷ್ಕರದ ವಿರುದ್ಧ ಕಿಡಿಕಾರಿದರು. ಸಾರಿಗೆ ಸಂಸ್ಥೆ ಅದೊಂದು ನಿಗಮ. ರಾಜ್ಯದಲ್ಲಿ ಈ ರೀತಿಯ 116 ನಿಗಮಳಿವೆ. ಸಾರಿಗೆ ನೌಕರರ ಬೇಡಿಕೆಗೆ ಬಗ್ಗಿದರೆ ಉಳಿದವರೂ ಹೋರಾಟಕ್ಕೆ ಇಳಿಯುತ್ತಾರೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿದರೆ ಎಲ್ಲರನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕಾಗುತ್ತೆ. ಹಾಗಾದಲ್ಲಿ ಸರ್ಕಾರದ ಬಜೆಟ್ ಪೂರ್ತಿ ಇವರಿಗೆ ಕೊಡಬೇಕಾಗುತ್ತೆ. ಎಲ್ಲ ಇವರಿಗೇ ಕೊಟ್ಟರೆ ರಾಜ್ಯದ ಅಭಿವೃದ್ಧಿ ಮಾಡೋದು ಹೇಗೆ ಎಂದು ಪ್ರಶ್ನಿಸಿದರು.

ಇದು ಸಾರಿಗೆ ಕಾರ್ಮಿಕರು ಮಾಡ್ತಿರೋ ಹೋರಾಟವಲ್ಲ. ಸಾರಿಗೆ ಮುಷ್ಕರ ಕೆಲ ಕುತಂತ್ರ ವ್ಯಕ್ತಿಗಳ ಷಡ್ಯಂತ್ರವಾಗಿದೆ. ತಾವು ಹಿಂದೆ ಇದ್ದುಕೊಂಡು ಸಾರಿಗೆ ನೌಕರರನ್ನು ಮುಂದೆಬಿಟ್ಟಿದ್ದಾರೆ. ಷಡ್ಯಂತ್ರ ಅರ್ಥ ಮಾಡಿಕೊಂಡು ಕೊರೋನಾ ಸಂದರ್ಭದಲ್ಲಿ ಮುಷ್ಕರ ಕೈ ಬಿಡಬೇಕು. ನಂತರದಲ್ಲಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ನಿಮ್ಮ ಬಗ್ಗೆ ನಮ್ಮ ಸಹಾನುಭೂತಿ ಇದೆ. ಹೋರಾಟವನ್ನು ಕೈ ಬಿಟ್ಟು ಬನ್ನಿ. ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರು ಸಮಸ್ಯೆ ಬಗೆಹರಿಸುತ್ತಾರೆ ಎಂದರು.

ನೀರು ಸದ್ಬಳಕೆಗೆ ಮಾಡೋಕೆ ಜಲ ಶಕ್ತಿ ಯೋಜನೆ ಜಾರಿಗೆ ತರಲಾಗ್ತಿದೆ. ರಾಜ್ಯದಲ್ಲಿ ಈ ವರ್ಷದಲ್ಲಿ 3 ಲಕ್ಷ ಯೋಜನೆ ಜಾರಿಗೆ ತರಲಾಗ್ತಿದೆ. ಕ್ಯಾಚ್ ದಿ ರೈನ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದರು. ಇದೇ ವೇಳೆ ಉಪ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ಇವತ್ತು ನೀವು ಅರಮನೆಯಲ್ಲಿ ಇರಬಹುದು, ಆದರೆ ನಿಮಗೆ ವಾಸದ ಮನೆ ಕೊಟ್ಟಿದ್ದನ್ನ ನೆನೆಪಿಸಿಕೊಳ್ಳಿ: ಜಮೀರ್​‌ಗೆ ಸಾ.ರಾ.ಮಹೇಶ್ ಟಾಂಗ್!

ರಾಜ್ಯಮಟ್ಟದ ಜಲಶಕ್ತಿ ಅಭಿಯಾನ ಉದ್ಘಾಟನೆ

ಹುಬ್ಬಳ್ಳಿಯ ಡೆನಿಸನ್ ಹೋಟೆಲ್ ಆವರಣದಲ್ಲಿ ರಾಜ್ಯಮಟ್ಟದ ಜಲಶಕ್ತಿ ಅಭಿಯಾನ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕೇಂದ್ರ ಗಣಿ, ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮಾಜಿ ಸಿಎಂ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಕ್ಯಾಚ್  ದಿ ರೈನ್ ಪರಿಕಲ್ಪನೆಯೊಂದಿಗೆ ರಾಜ್ಯದಲ್ಲಿ ಜಲ ಶಕ್ತಿ ಅಭಿಯಾನವನ್ನು ಸರ್ಕಾರ ಆರಂಭಿಸಿದೆ. ರಾಜ್ಯಮಟ್ಟದ ಯೋಜನೆಗೆ ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಯಿತು.
Youtube Video
ಈ ವೇಳೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಉದ್ಯೋಗ ಖಾತ್ರಿ ಯೋಜನೆ ಅಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 800 ಕೋಟಿ ರೂಪಾಯಿ ಹೆಚ್ಚುವರಿ ಸಿಕ್ಕಿದೆ. ರಾಜ್ಯಕ್ಕೆ 13 ಕೋಟಿ ಮಾನವ ದಿನ ನೀಡಲಾಗಿತ್ತು. ರಾಜ್ಯದಲ್ಲಿ 15 ಕೋಟಿ ಮಾನವ ದಿನ ಪೂರೈಸಿದ್ದೇವೆ. ಇದೀಗ ರಾಜ್ಯದಲ್ಲಿ ಕ್ಯಾಚ್ ದಿ ರೈನ್ ಯೋಜನೆ ಜಾರಿ ಮಾಡಲಾಗ್ತಿದೆ. ಮಳೆ ನೀರು ವ್ಯರ್ಥವಾಗಬಾರದೆಂದು ಈ ಯೋಜನೆ ಜಾರಿಗೆ ತರಲಾಗ್ತಿದೆ. ಕೆರೆ, ಕಲ್ಯಾಣಿ, ಗೋ ಕಟ್ಟೆ ಇತ್ಯಾದಿಗಳ ಪುನರುಜ್ಜೀವನಗೊಳಿಸಲಾಗುವುದು. ರಾಜ್ಯದಲ್ಲಿ 3.80 ಲಕ್ಷ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 4310 ಕೋಟಿ ರೂಪಾಯಿ ಹಣ ಮೀಸಲಿಟ್ಟಿರೋದಾಗಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ವರದಿ - ಶಿವರಾಮ ಅಸುಂಡಿ
Published by: HR Ramesh
First published: April 9, 2021, 2:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories