HOME » NEWS » District » TRANSPORT DEPARTMENT HAS NO MONEY FOR FUEL EXPENSES DUE TO COVID 19 EFFECTS SAYS MINISTER LAXMAN SAVADI MAK

ಕೊರೋನಾ ಸಂಕಷ್ಟದಿಂದಾಗಿ ಡೀಸಲ್ ದುಡ್ಡಿಗೂ ಸಾರಿಗೆ ಇಲಾಖೆಯಲ್ಲಿ ಹಣವಿಲ್ಲ: ಲಕ್ಷ್ಮಣ ಸವದಿ

ಕೊರೋನಾ ಬಂದ ಮೊದಲ ಎರಡು ತಿಂಗಳಲ್ಲಿ ಒಟ್ಟು  652 ಕೋಟಿ ಹಣವನ್ನು ಸರ್ಕಾರದ ಅನುದಾನದಿಂದ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ವೇತನ ನೀಡಲಾಗಿದೆ. ಮೂರನೇ ತಿಂಗಳ ಸಹ ಸರ್ಕಾರದಿಂದ ಶೇ.75 ರಷ್ಟು ಹಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾಹಿತಿ ನೀಡಿದ್ದಾರೆ.

news18-kannada
Updated:July 6, 2020, 7:10 PM IST
ಕೊರೋನಾ ಸಂಕಷ್ಟದಿಂದಾಗಿ ಡೀಸಲ್ ದುಡ್ಡಿಗೂ ಸಾರಿಗೆ ಇಲಾಖೆಯಲ್ಲಿ ಹಣವಿಲ್ಲ: ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ
  • Share this:
ದೊಡ್ಡಬಳ್ಳಾಪುರ (ಜುಲೈ 06): ಮಾರಣಾಂತಿಕ ಕೊರೋನಾ ಕಾರಣದಿಂದ ಯಾವ ಇಲಾಖೆಯಲ್ಲೂ ಇಲ್ಲದ ಸಮಸ್ಯೆ ಸಾರಿಗೆ ಇಲಾಖೆಯಲ್ಲಿದೆ. ಪ್ರಸ್ತುತ ಸಾರಿಗೆ ಇಲಾಖೆ 2,600 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಅಲ್ಲದೆ, ಕಳೆದ ನಾಲ್ಕು ತಿಂಗಳಿಂದ ಬಸ್ ಗಳ ಡೀಸೆಲ್ ಖರ್ಚಿಗೂ ನೌಕರರ ಸಂಬಳಕ್ಕೂ ಸಹ ಹಣವಿಲ್ಲದಂತಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ನಗರದ ಹೃದಯ ಭಾಗದಲ್ಲಿ 4.98 ಕೋಟಿ ರೂ.ಗಳಲ್ಲಿ ನಿರ್ಮಾಣವಾಗಿರುವ ನೂತನ ಹೈಟೆಕ್ ಬಸ್ ನಿಲ್ದಾಣವನ್ನ ಉಪ ಮುಖ್ಯ ಮಂತ್ರಿ  ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಂದು  ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿರುವ ಅವರು, "ಇಂದು ಸಾರಿಗೆ ಇಲಾಖೆಯ ಬಸ್ ಗಳಿಗೆ ಬರಲು ಜನ ಹಿಂದೆ ಮುಂದೆ  ನೋಡುತ್ತಿದ್ದಾರೆ. ಕನಿಷ್ಟ 50-55 ಜನ ಪ್ರಯಾಣಿಸುತ್ತಿದ್ದ ಬಸ್‌ಗಳಲ್ಲಿ ಪ್ರಸ್ತುತ 8 ರಿಂದ 10 ಜನ ಪ್ರಯಾಣಿಸುವಂತಾಗಿದೆ.

ಕೊರೋನಾ ಕಾರಣದಿಂದ ಯಾವ ಇಲಾಖೆಯಲ್ಲೂ ಇಲ್ಲದ ಸಮಸ್ಯೆ ಸಾರಿಗೆ ಇಲಾಖೆಯಲ್ಲಿದೆ. ಸದ್ಯ ಸಾರಿಗೆ ಇಲಾಖೆ 2,600 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಕಳೆದ ನಾಲ್ಕು ತಿಂಗಳಿಂದ ಬಸ್ ಗಳ ಡೀಸೆಲ್ ಖರ್ಚಿಗೂ  ಹಣವಿಲ್ಲದಂತಾಗಿದೆ. ಪ್ರತಿ ತಿಂಗಳು ಸಿಬ್ಬಂದಿಗಳ ವೇತನಕ್ಕಾಗಿ 326  ಕೋಟಿ ಹಣ ಬೇಕಿತ್ತು.

ಕೊರೋನಾ ಬಂದ ಮೊದಲ ಎರಡು ತಿಂಗಳಲ್ಲಿ ಒಟ್ಟು  652 ಕೋಟಿ ಹಣವನ್ನು ಸರ್ಕಾರದ ಅನುದಾನದಿಂದ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ವೇತನ ನೀಡಲಾಗಿದೆ. ಮೂರನೇ ತಿಂಗಳ ಸಹ ಸರ್ಕಾರದಿಂದ ಶೇ.75 ರಷ್ಟು ಹಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಉಗ್ರಗಾಮಿ ಪ್ರಕರಣ; ಕೊನೆಗೂ ಪೊಲೀಸ್‌ ಅಧಿಕಾರಿ ದೇವಿಂದರ್‌ ಸಿಂಗ್ ವಿರುದ್ದ ಚಾರ್ಜ್‌‌ಶೀಟ್‌ ಸಲ್ಲಿಸಿದ ಎನ್‌ಐಎ
Youtube Video

"ಕೊರೋನಾ ಸಾಮಾಜಿಕವಾಗಿ ಹರಡಿದೆ. ಬೆಂಗಳೂರಿನಲ್ಲಿ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸೋಂಕಿಗೆ ಈವರೆಗೆ ಔಷಧ ಕಂಡುಹಿಡಿದಿಲ್ಲ. ಸಾಮಾಜಿಕ  ಅಂತರ ಕಾಯ್ದುಕೊಳ್ಳುವುದು, ಮಾಸ್ಕ್  ಧರಿಸುವುದರಿಂದ ಮುಂಜಾಗ್ರತಾ ಕ್ರಮವೊಂದೆ ಮದ್ದು. ಕೊರೋನಾ ತಡೆಗಟ್ಟಲು ಕೊರೋನಾ ವಾರಿಯರ್ಸ್‌‌ಗಳ ಸೂಚನೆಗಳನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು" ಎಂದು ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ. 
Published by: MAshok Kumar
First published: July 6, 2020, 7:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories