ಹೊಸ ವರ್ಷಾಚರಣೆಗೆ ಪ್ರವಾಸಿಗರ ಚಿತ್ತ ಕೊಡಗಿನತ್ತ; ಅನಧಿಕೃತ ಹೋಂಸ್ಟೇಗಳ ಮೇಲೆ ಹದ್ದಿನ ಕಣ್ಣಿಟ್ಟ ಜಿಲ್ಲಾಡಳಿತ!

ಅರ್ಧಕ್ಕಿಂತ ಹೆಚ್ಚಿನ ಪ್ರವಾಸಿಗರನ್ನು ಹೋಂಸ್ಟೇಗಳಲ್ಲಿ ಇರಿಸಿಕೊಳ್ಳದಂತೆ ಜಿಲ್ಲಾಡಳಿತ ಸೂಚಿಸಿದೆ. ಜೊತೆಗೆ ಪ್ರವಾಸಿಗರು ಕೂಡ ಪ್ರವಾಸಿ ತಾಣಗಳಲ್ಲಿ ಸುತ್ತಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಓಡಾಡಬೇಕು. ಇಲ್ಲದಿದ್ದರೆ ಅಂತಹವರಿಗೆ ದಂಡ ಹಾಕುವಂತೆ ಪೊಲೀಸ್ ಇಲಾಖೆಗೆ ಮತ್ತು ಆಯಾ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಸೂಚಿಸಿದೆ. 

ಕೊಡಗಿನ ಹೋಂ ಸ್ಟೇ.

ಕೊಡಗಿನ ಹೋಂ ಸ್ಟೇ.

  • Share this:
ಕೊಡಗು: ಕಷ್ಟಗಳಲ್ಲೇ 2020ಕ್ಕೆ ವಿದಾಯ ಹೇಳಿ ಮತ್ತೆ 2021 ಅನ್ನು ಸ್ವಾಗತಿಸಲು ವಿಶ್ವವೇ ಸಿದ್ಧವಾಗುತ್ತಿದೆ. ಆದರೆ ಕೊರೋನಾ ಮಹಾಮಾರಿಯೂ ಹಾಗೆಯೇ ಎಲರನ್ನೂ ಕಟ್ಟಿಹಾಕಿದೆ. ಹೀಗಾಗಿಯೇ ಹೊಸವರ್ಷಕ್ಕೆ ಮದುವಣಗಿತ್ತಿಯಂತೆ ಸಿದ್ಧವಾಗುತ್ತಿದ್ದ ಬೆಂಗಳೂರಿನಲ್ಲಿ ಈ ಬಾರಿ ಹೊಸ ವರ್ಷದ ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಹೀಗಾಗಿ ಈ ಬಾರಿ ಹೊಸ ವರ್ಷಚರಣೆಗೆ ಪ್ರವಾಸಿಗರು ಹಾಟ್ ಸ್ಪಾಟ್ ಆಗಿರುವ ಕೊಡಗಿನತ್ತ ಲಗ್ಗೆ ಇಡುವ ಸಾಧ್ಯತೆ ಇದೆ.

ಕೊಡಗಿನ ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಹೊಸ ವರ್ಷ ಆಚರಣೆಗೆ ಮುಗಿಬೀಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಕೊರೋನಾವನ್ನು ಬೇರೆ ಎಲ್ಲಾ ಜಿಲ್ಲೆಗಳಿಗಿಂತ ಜಾಸ್ತಿಯೇ ಕಟ್ಟಿ ಹಾಕಿರುವ ಕೊಡಗು ಜಿಲ್ಲಾಡಳಿತ ಹೊಸ ವರ್ಷಚರಣೆಗೆ ಜಿಲ್ಲೆಗೆ ಬರುವ ಪ್ರವಾಸಿಗರಿಂದಲೂ ಕೊರೋನಾ ಹರಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿದೆ.

ಇದನ್ನು ಓದಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಾಜಿ ಸಚಿವ ರೋಷನ್ ಬೇಗ್

ಹೌದು ಜಿಲ್ಲೆಯಲ್ಲಿ ಹೊಂಸ್ಟೇಗಳ ಸಂಸ್ಕೃತಿ ಮಿತಿಮೀರಿದ್ದು, ಅಧಿಕೃತವಾದ 800 ಹೋಂಸ್ಟೇಗಳಿದ್ದರೆ, ಅನಧಿಕೃತವಾಗಿ 2 ಸಾವಿರಕ್ಕೂ ಹೆಚ್ಚು ಹೋಂಸ್ಟೇಗಳಿವೆ. ಅಧಿಕೃತ ಹೋಂಸ್ಟೇಗಳ ಮೇಲೆ ಹಿಡಿತ ಹೊಂದಿರುವ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಅನಧಿಕೃತ ಹೋಂಸ್ಟೇಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇನ್ನು ಅನಧಿಕೃತ ಹೋಂಸ್ಟೇಗಳಲ್ಲಿ ಪ್ರವಾಸಿಗರನ್ನು ಉಳಿಸಿಕೊಂಡಿದ್ದೇ ಆದಲ್ಲಿ ಅಂತಹ ಹೋಂಸ್ಟೇಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ. ಹೀಗಾಗಿ ಹೊರ ಜಿಲ್ಲೆಯಿಂದ ಹೊಸವರ್ಷ ಆಚರಣೆಗೆ ಕೊಡಗಿನ ಹೋಂಸ್ಟೇಗಳಿಗೆ ಬರುವ ಮೊದಲು ಪ್ರವಾಸಿಗರು ಯಾವುದು ಅಧಿಕೃತ ಯಾವುದು ಅನಧಿಕೃತ ಎನ್ನೋದನ್ನು ಪರಿಶೀಲಿಸಿಕೊಂಡು ಬಳಿಕವಷ್ಟೇ ಹೊಂಸ್ಟೇಗಳನ್ನು ಬುಕ್ ಮಾಡಿಕೊಳ್ಳುವುದು ಒಳ್ಳೆಯದು.

ಹೊರ ಜಿಲ್ಲೆಗಳಿಂದ ಅಧಿಕೃತ ಹೋಂಸ್ಟೇಗಳಿಗೆ ಬರುವ ಪ್ರವಾಸಿಗರಿಗೂ ಕಡ್ಡಾಯವಾಗಿ ಟೆಂಪ್ರೇಚರ್ ಚೆಕ್ ಮಾಡಬೇಕು. ಸ್ಯಾನಿಟೈಸರ್ ಇರಿಸಬೇಕು. ಜೊತೆಗೆ ಅರ್ಧಕ್ಕಿಂತ ಹೆಚ್ಚಿನ ಪ್ರವಾಸಿಗರನ್ನು ಹೋಂಸ್ಟೇಗಳಲ್ಲಿ ಇರಿಸಿಕೊಳ್ಳದಂತೆ ಜಿಲ್ಲಾಡಳಿತ ಸೂಚಿಸಿದೆ. ಜೊತೆಗೆ ಪ್ರವಾಸಿಗರು ಕೂಡ ಪ್ರವಾಸಿ ತಾಣಗಳಲ್ಲಿ ಸುತ್ತಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಓಡಾಡಬೇಕು. ಇಲ್ಲದಿದ್ದರೆ ಅಂತಹವರಿಗೆ ದಂಡ ಹಾಕುವಂತೆ ಪೊಲೀಸ್ ಇಲಾಖೆಗೆ ಮತ್ತು ಆಯಾ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಸೂಚಿಸಿದೆ.
Published by:HR Ramesh
First published: