ಕೊಡಗು ಪ್ರವಾಸಿಗರಿಗೆ ನಿರಾಸೆ ಮೂಡಿಸಿದ 2020ರ ಕೊನೆಯ ಸೂರ್ಯಾಸ್ತ!

ಕೊರೋನಾ ನಿಯಮಗಳ ನಡುವೆಯೂ ಹೊಸ ವರ್ಷಕ್ಕೆ ಸ್ವಾಗತ ಕೋರಲು ತುದಿಗಾಲಿನಲ್ಲಿ ನಿಂತಿದ್ದ ಪ್ರವಾಸಿಗರಿಗೆ ಅದು ಕೂಡ ನಿರಾಸೆ ತಂದಿತು. ಒಟ್ಟಿನಲ್ಲಿ ವಿಶ್ವಕ್ಕೆ ಆವರಿಸಿರುವ ಕೊರೋನಾ ಮಹಾಮಾರಿಯಿಂದ 2020 ರ ಇಡೀ ವರ್ಷವು ಪ್ರವಾಸಿಗರಿಗೆ ನಿರಾಸೆಯಾಗಿಯೇ ಮುಗಿದು ಹೋಗಿದ್ದು ಮಾತ್ರ ವಿಪರ್ಯಾಸ.

ಕೊಡಗಿನ ರಾಜಾಸೀಟ್.

ಕೊಡಗಿನ ರಾಜಾಸೀಟ್.

  • Share this:
ಕೊಡಗು: 2020ರ ವರ್ಷವೂ ವಿಶ್ವದ ಜನರಿಗೆ ಬಹುತೇಕ ನಿರಾಸೆಯ ವರ್ಷವಾಗಿಯೇ ಮುಗಿದು ಹೋಗಿದೆ. ಆದರೆ ಪ್ರತೀ ವರ್ಷ ಕೊನೆಯ ಸೂರ್ಯಾಸ್ತವನ್ನು ನೋಡಿ ಸಂಭ್ರಮಿಸುತ್ತಾ ಇಡೀ ವರ್ಷದ ಕಹಿ ನೆನಪುಗಳಿಗೆ ಬಾಯ್ ಬಾಯ್ ಹೇಳುತ್ತಿದ್ದ ಜನರಿಗೆ ವರ್ಷದ ಕೊನೆಯ ಸೂರ್ಯಾಸ್ತವೂ ಕೂಡ ನಿರಾಸೆ ಮೂಡಿಸಿದ್ದು ಸುಳ್ಳಲ್ಲ. ಹೌದು ಪ್ರವಾಸಿತಾಣಗಳ ಜಿಲ್ಲೆಯಾದ ಕೊಡಗಿಗೆ ರಾಜ್ಯ, ಹೊರ ರಾಜ್ಯದ ಪ್ರವಾಸಿಗರು ಕೂಡ ಆಗಮಿಸಿ ಇಯರ್ ಎಂಡಿಂಗ್ ಅನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅಷ್ಟೇ ಅಲ್ಲ ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಮಡಿಕೇರಿ ರಾಜಾಸೀಟ್ ನಲ್ಲಿ ವೀವ್ ಪಾಯಿಂಟ್ ನಲ್ಲಿ ಕುಳಿತು ಸನ್ ಸೈಟ್ ನೋಡಿ ಎಂಜಾಯ್ ಮಾಡುತ್ತಿದ್ದರು. ಈ ಬಾರಿಯೂ 2020 ಕ್ಕೆ ಬಾಯ್ ಬಾಯ್ ಹೇಳಿ ಸಂಭ್ರಮಿಸೋದಕ್ಕೆ ಭಾರೀ ಪ್ರಮಾಣದಲ್ಲಿ ಅಲ್ಲದಿದ್ದರೂ, ಒಂದಷ್ಟು ಪ್ರಮಾಣದಲ್ಲಿ ಬಂದಿದ್ದರು. ಆದರೆ ಈ ಬಾರಿ ಮಡಿಕೇರಿಯಲ್ಲಿ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಇದರಿಂದಾಗಿ 2020 ನೇ ವರ್ಷದ ಕೊನೆಯ ಸೂರ್ಯಾಸ್ತವನ್ನೂ ನೋಡಲು ಸಾಧ್ಯವಾಗಲೇ ಇಲ್ಲ.

ಮೋಡಗಳ ಮರೆಯಿಂದಲೇ ಸೂರ್ಯ ಕಾಣದಂತೆ ಹೋಗಿಬಿಟ್ಟ. ಹೀಗಾಗಿ ವೀವ್ ಪಾಯಿಂಟ್ ನಲ್ಲಿ ಈಗ ಸೂರ್ಯಾಸ್ತದ ಕ್ಷಣಗಳು ಕಾಣಬಹುದು ಅಂತಾ ಕಾದು ಕುಳಿತಿದ್ದ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದಿದ್ದ ಪ್ರವಾಸಿಗರು ನಿರಾಸೆ ಅನುಭವಿಸಿದ್ದರು. ಎಂದಿನಂತೆ ರಾಜಾಸೀಟ್ ನಲ್ಲಿ ತಿರುಗಾಡಿ ಕೇವಲ ಪ್ರಾಕೃತಿಕ ಸೌಂದರ್ಯ ನೋಡಿ ಎಂಜಾಯ್ ಮಾಡಿ ವಾಪಸ್ ಆದ್ರು. ಇನ್ನು ಕೊರೋನಾ ಎರಡನೆ ಅಲೆ ಎದುರಾಗಬಹುದು ಅಥವಾ ಯುಕೆ ಇಂದ ಬಂದಿರುವ ಹೊಸ ರೂಪಾಂತರ ಕೊರೋನಾ ಹರಡಬಹುದು ಎನ್ನೋ ಆತಂಕ ಎಲ್ಲೆಡೆ ಮನೆ ಮಾಡಿದೆ. ಹೀಗಾಗಿಯೇ ಪ್ರತೀ ವರ್ಷ ಅತ್ಯಂತ ಸಂಭ್ರಮ ಸಡಗರದಿಂದ ಕೊಡಗಿನ ಸ್ವಚ್ಛ ಪರಿಸರದಲ್ಲಿ ನ್ಯೂಯರ್ ಆಚರಿಸಲು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ದಾಂಗುಡಿ ಇಡುತ್ತಿದ್ದರು. ಆದರೆ ಈ ಬಾರಿ ಅದೆಲ್ಲವಕ್ಕೂ ಕೊಡಗು ಜಿಲ್ಲಾಡಳಿತ ಬ್ರೇಕ್ ಹಾಕಿತ್ತು.

ಇದನ್ನು ಓದಿ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಭಾರಿ ಚಳಿ; ಥಂಡಿ, ಕೊರೋನಾಗೆ ಹೆದರಿ ಹೊರಬಾರದ ಜನರು!

ಯಾವುದೇ ಹೋಂಸ್ಟೇ ರೆಸಾರ್ಟ್‍ಗಳಲ್ಲೂ ಐದಕ್ಕಿಂತ ಹೆಚ್ಚು ಜನರು ಸೇರಿ ನ್ಯೂ ಇಯರ್ ಆಚರಣೆ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಈ ಕುರಿತು ಕೊಡಗು ಪೊಲೀಸ್ ಇಲಾಖೆ ಹೋಂಸ್ಟೇ ರೆಸಾರ್ಟ್ ಮಾಲೀಕರೊಂದಿಗೆ ಸಭೆ ನಡೆಸಿ, ಡಿಜೆ ಸೌಂಡ್ ಬಳಸದಂತೆ ಮತ್ತು ಫೈಯರ್ ಕ್ಯಾಂಪ್ ಮಾಡದಂತೆ ಕಟ್ಟುನಿಟ್ಟಾಗಿ ಸೂಚಿಸಿತ್ತು. ಮೊದಲೇ ಬಂದು ಹೋಂಸ್ಟೇ ರೆಸಾರ್ಟ್ ಮತ್ತು ಹೊಟೇಲ್ ಗಳಲ್ಲಿ ಉಳಿದಿರುವ ಪ್ರವಾಸಿಗರು ತಮ್ಮ ರೂಮುಗಳಲ್ಲಿ ಮಾತ್ರ ಆಚರಣೆ ಮಾಡಿಕೊಳ್ಳಬೇಕು. ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರಿ ಯಾವುದೇ ರೀತಿಯಿಂದ ಹೊಸ ವರ್ಷ ಆಚರಿಸಬಾರದು ಎಂದು ತಿಳಿಸಿತ್ತು.

ಹೀಗಾಗಿ ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲೂ ನ್ಯೂಯರ್ ಆಚರಣೆ ಮಾಡುವುದಿಲ್ಲ ಎಂಬ ನಿಯಮಕ್ಕೆ ಮಾಲೀಕರು ತಮ್ಮ ರೆಸಾರ್ಟ್‍ಗಳಲ್ಲಿ ಇದ್ದ ಪ್ರವಾಸಿಗರು ಸೂಚನೆ ನೀಡಿದರು. ಇದರಿಂದಾಗಿ ಕೊರೋನಾ ನಿಯಮಗಳ ನಡುವೆಯೂ ಹೊಸ ವರ್ಷಕ್ಕೆ ಸ್ವಾಗತ ಕೋರಲು ತುದಿಗಾಲಿನಲ್ಲಿ ನಿಂತಿದ್ದ ಪ್ರವಾಸಿಗರಿಗೆ ಅದು ಕೂಡ ನಿರಾಸೆ ತಂದಿತು. ಒಟ್ಟಿನಲ್ಲಿ ವಿಶ್ವಕ್ಕೆ ಆವರಿಸಿರುವ ಕೊರೋನಾ ಮಹಾಮಾರಿಯಿಂದ 2020 ರ ಇಡೀ ವರ್ಷವು ಪ್ರವಾಸಿಗರಿಗೆ ನಿರಾಸೆಯಾಗಿಯೇ ಮುಗಿದು ಹೋಗಿದ್ದು ಮಾತ್ರ ವಿಪರ್ಯಾಸ.
Published by:HR Ramesh
First published: