HOME » NEWS » District » TOURIST ARE NOT FOLLOWING COVID RULES IN DUBARE SESR RSK

ದುಬಾರೆಯಲ್ಲಿ ಪ್ರವಾಸಿಗರಿಂದ ಪಾಲನೆಯಾಗುತ್ತಿಲ್ಲ ಕೋವಿಡ್​ ನಿಯಮ

ಕೋವಿಡ್  ಹಿನ್ನಲೆ ಪ್ರವಾಸಿ ತಾಣಗಳು ಆರಂಭವಾದರೂ, ಆನೆಗಳಿಗೆ ತೊಂದರೆ ಆಗಬಹುದೆಂದು ಆನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶ ನಿರ್ಭಂಧಿಸಲಾಗಿತ್ತು. ಆದರೆ ಹಲವು ಷರತ್ತುಗಳ ವಿಧಿಸಿ ಕೆಲವು ದಿನಗಳಿಂದ ಆನೆಗಳ ವೀಕ್ಷಣೆಗೆ ಪ್ರವಾಸಿಗರಿಗೆ ಅನುವು ಮಾಡಲಾಗಿದೆ.

news18-kannada
Updated:November 1, 2020, 7:28 AM IST
ದುಬಾರೆಯಲ್ಲಿ ಪ್ರವಾಸಿಗರಿಂದ ಪಾಲನೆಯಾಗುತ್ತಿಲ್ಲ ಕೋವಿಡ್​ ನಿಯಮ
ಪ್ರವಾಸಿಗರು
  • Share this:
ಕೊಡಗು (ನ.1): ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆ ಜನರು ನಿಧಾನವಾಗಿ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಕಳೆದ ಏಳು ತಿಂಗಳಿನಿಂದ ಸಂಚಾರ ಬಂದ್​ ಮಾಡಿದ್ದ ಜನರು ಮೋಜು ಮಸ್ತಿಗೆ ನಿಧಾನವಾಗಿ ತೆರೆದುಕೊಳ್ಳುತ್ತಿದ್ದಾರೆ. ಇದರಿಂದ ಕೊರೋನಾ ಸಂದರ್ಭದಲ್ಲಿಯೂ ಪ್ರವಾಸಿ ತಾಣಗಳು ಜನರಿಂದ ಕಿಕ್ಕಿರಿದು ತುಂಬಿಕೊಳ್ಳುತ್ತಿದೆ. ಅದರಲ್ಲಿಯೂ ಕಳೆದ ವಾರ, ಈ ವಾರ ಸಾಲು ರಜೆ ಹಿನ್ನಲೆ ಕೊಡಗಿಗೆ ಪ್ರವಾಸಿಗರ ಆಗಮನ ಹೆಚ್ಚುತ್ತಿದೆ. ದಸರಾ ಸಂಭ್ರಮವಾದ ಬಳಿಕ ಇಲ್ಲಿನ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ. ಇತ್ತೀಚೆಗೆ ಸಾಕಾನೆ ಶಿಬಿರದಲ್ಲಿ ಕೂಡ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ಜನರು ಕೋವಿಡ್​ ಸುರಕ್ಷತೆ ಮರೆಯುತ್ತಿರುವುದು ಮಾವುತರಲ್ಲಿ ಆತಂಕ ಮೂಡಿಸಿದೆ. 

ಕೋವಿಡ್  ಹಿನ್ನಲೆ ಪ್ರವಾಸಿ ತಾಣಗಳು ಆರಂಭವಾದರೂ, ಆನೆಗಳಿಗೆ ತೊಂದರೆ ಆಗಬಹುದೆಂದು ಆನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶ ನಿರ್ಭಂಧಿಸಲಾಗಿತ್ತು. ಆದರೆ ಹಲವು ಷರತ್ತುಗಳ ವಿಧಿಸಿ ಕೆಲವು ದಿನಗಳಿಂದ ಆನೆಗಳ ವೀಕ್ಷಣೆಗೆ ಪ್ರವಾಸಿಗರಿಗೆ ಅನುವು ಮಾಡಲಾಗಿದೆ. ಆನೆ ಶಿಬಿರಕ್ಕೆ ಹೋಗಬೇಕಾದರೆ ತುಂಬಿ ಹರಿಯುತ್ತಿರುವ ಕಾವೇರಿ ನದಿಯನ್ನು ಬೋಟ್ ಮೂಲಕ ದಾಟಬೇಕು. ಒಂದು ಬೋಟ್ ನಲ್ಲಿ 12 ಜನರಷ್ಟೇ ಕುಳಿತುಕೊಳ್ಳಲು ಅವಕಾಶ ಇರುವುದರಿಂದ ಬೋಟ್ ನಲ್ಲಿ ಸಾಗಲು ಜನರು ಸಾಲಿನಲ್ಲಿ ನಿಲ್ಲಬೇಕಾಗಿದೆ. ಈ ವೇಳೆ ಸಾಮಾಜಿಕ ಅಂತರವಿಲ್ಲ. ಬದಲಾಗಿ ಒಬ್ಬೊರಿಗೆ ಒಬ್ಬರು ಅಂಟಿಕೊಂಡೇ ನಿಲ್ಲುತ್ತಿದ್ದಾರೆ.

ಬೋಟ್ ಏರುವ ಮುನ್ನಾ ಸ್ಯಾನಿಟೈಸರ್ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಿ, ಅಲ್ಲಿ ಸ್ಯಾನಿಟೈಸರ್ ಇಡಲಾಗಿದೆ. ಜೊತೆಗೆ ನದಿ ದಾಡಿದ ಮೇಲೂ ಸ್ಯಾನಿಟೈಸರ್ ಬಳೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೂ ಆನೆಗಳನ್ನು ನೋಡಲು ಬರುತ್ತಿರುವ ಪ್ರವಾಸಿಗರ ಕಂಡರೆ ಮಾವುತರಿಗೆ ಇನ್ನಿಲ್ಲದ ಭಯವಿದೆ. ಆಕಸ್ಮಿಕವಾಗಿ ಆನೆಗಳಿಗೆ ಏನಾದರೂ ಹರಡಿದರೆ ಏನು ಮಾಡೋದು ಎಂದು ಮಾವುತ ಚಿನ್ನಪ್ಪ ಅವರ ಆತಂಕವಿದೆ.

ಇದನ್ನೂ ಓದಿ : ಉಪಚುನಾವಣೆ ಹಿನ್ನಲೆ ಪರಿಷತ್​ ಚುನಾವಣಾ ಮತ ಎಣಿಕೆ ದಿನಾಂಕ ಮುಂದೂಡಿಕೆ

ಸರ್ಕಾರದ ಆದೇಶದಂತೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಆದರೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. ಆದರೂ ಕೆಲವರು ಮಾಸ್ಕ್ ಧರಿಸಿರುವುದಿಲ್ಲ. ಅಂತವರಿಗೆ ಪೊಲೀಸರು ದಂಡ ಹಾಕುತ್ತಿದ್ದಾರೆ. ಪೊಲೀಸರ ಕಣ್ತಪ್ಪಿಸಿಯೂ ಮಾಸ್ಕ್ ಧರಿಸದೇ ಇರುವವರಿಗೆ ನಾವೇ ಕುದ್ದು ಮಾಸ್ಕ್ ಹಾಕಿಕೊಳ್ಳುವಂತೆ ಸೂಚನೆ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ ದುಬಾರೆ ಸಾಕಾನೆ ಶಿಬಿರದ ಡಿಆರ್ ಎಫ್ ಕೆ ಪಿ ರಂಜನ್.

ದುಬಾರೆಗೆ ಬರುತ್ತಿದ್ದ ಪ್ರವಾಸಿಗರು ಮೊದಲು ಆನೆಗಳಿಗೆ ಮೇವು ತಿನ್ನಿಸುತ್ತಿದ್ದರು. ಕಾವೇರಿ ಹೊಳೆಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದರು. ಈಗ ಅದೆಲ್ಲವನ್ನೂ ಬಂದ್ ಮಾಡಲಾಗಿದೆ.  ಜೊತೆಗೆ ಆನೆಗಳ ಸುತ್ತ ಸುಮಾರು 20 ಅಡಿ ದೂರದಲ್ಲೇ ಬ್ಯಾರಿಕೇಡ್ ಹಾಕಿ ಆನೆಗಳನ್ನು ಮುಟ್ಟದಂತೆ ನಿರ್ಬಂಧಿಸಲಾಗಿದೆ.
Published by: Seema R
First published: November 1, 2020, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories