ಕೋಲಾರದಲ್ಲಿ ದಿನೇ ದಿನೇ ಕೊರೋನಾ ವ್ಯಾಪಕ ; 365 ಕ್ಕೇರಿದ ಸೋಂಕಿತರ ಸಂಖ್ಯೆ

ಜುಲೈ 15 ರಂದು ಒಂದೇ ದಿನ‌ 37 ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಹೆಚ್ಚಾಗುವಂತೆ ಮಾಡಿದೆ. ಈ ಮೂಲಕ ಒಟ್ಟು ಕೇಸ್​ಗಳ ಸಂಖ್ಯೆ 365 ಕ್ಕೆ ಏರಿದೆ.

news18-kannada
Updated:July 16, 2020, 10:32 AM IST
ಕೋಲಾರದಲ್ಲಿ ದಿನೇ ದಿನೇ ಕೊರೋನಾ ವ್ಯಾಪಕ ; 365 ಕ್ಕೇರಿದ ಸೋಂಕಿತರ ಸಂಖ್ಯೆ
ಕೋಲಾರ ಜಿಲ್ಲಾ ಕೋವಿಡ್ ಆಸ್ಪತ್ರೆ
  • Share this:
ಕೋಲಾರ(ಜುಲೈ.16): ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದೆ, ಕೋಲಾರ ಜಿಲ್ಲೆಯಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಜುಲೈ 15 ರಂದು ಒಂದೇ ದಿನ‌ 37 ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಹೆಚ್ಚಾಗುವಂತೆ ಮಾಡಿದೆ. ಈ ಮೂಲಕ ಒಟ್ಟು 365 ಕೇಸ್​ಗಳು ದೃಢವಾಗಿವೆ. ಇದರಲ್ಲಿ 218 ಸಕ್ರಿಯ ಪ್ರಕರಣಗಳಿದ್ದು, 143 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ, ಚಿಕಿತ್ಸೆ ಫಲಕಾರಿಯಾಗದೆ 4 ಮಂದಿ ಸಾವನ್ನಪ್ಪಿರುವುದಾಗಿ ಹೆಲ್ತ್ ಬುಲೆಟಿನ್ ನಲ್ಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾ ಕೇಂದ್ರ ಕೋಲಾರದಲ್ಲೆ ಅತಿಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಕಂಟೈನ್​ಮೆಂಟ್ ಝೋನ್ ಗಳ ಸಂಖ್ಯೆಯು ಏರುತ್ತಿದೆ. ಇಲ್ಲಿಯವರೆಗೆ 166 ಪ್ರಕರಣಗಳು ದಾಖಲಾಗಿದೆ. 56 ಮಂದಿ ಗುಣಮುಖರಾಗಿದ್ದು, 110 ಮಂದಿ ಸಕ್ರಿಯರಾಗಿದ್ದಾರೆ. ಸೋಂಕು ಸಮುದಾಯಕ್ಕೆ ಹರಡುತ್ತಿರುವ ಭೀತಿ, ಸೆಲ್ಪ್ ಲಾಕ್ ಡೌನ್ ಆಗುವಂತೆ ಜಿಲ್ಲಾ ವೈದ್ಯಾಧಿಕಾರಿ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸೋಂಕು ಸಮುದಾಯಕ್ಕೆ ಹರಡುತ್ತಿರುವ ಸೂಚನೆ ಹಿನ್ನಲೆ, ಕೋಲಾರ ಜಿಲ್ಲೆಯಲ್ಲು ಆತಂಕ ಮನೆ ಮಾಡಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ ವಿಜಯ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ,

ನ್ಯೂಸ್ 18 ಕನ್ನಡ ಜೊತೆಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಲಾಕ್ ಡೌನ್ ಇಲ್ಲವೆಂದು ಜನರು ಬೇಕಾಬಿಟ್ಟಿ ಓಡಾಡಬಾರದೆಂದು ಕಿವಿಮಾತು ಹೇಳಿದ್ದಾರೆ, ಹೀಗಾಗಿ ಕೋಲಾರ ಜಿಲ್ಲೆಯಲ್ಲಿ ಕೊರೋನಾತಂಕ ಮತ್ತಷ್ಟು ಹೆಚ್ಚಾಗಿದೆ, ಅನಗತ್ಯವಾಗಿ ಮನೆಯಿಂದ ಹೊರಗೇ ಬರಬೇಡಿ ಎಂದಿರುವ ಅವರು, ಬೆಂಗಳೂರಿನಿಂದ ಹಲವರು ಬಂದಿದ್ದಾರೆ, ಹೀಗಾಗಿ ಪ್ರಕರಣಗಳು ಹೆಚ್ಚುವ ಆತಂಕವಿದೆ ಎಂದಿದ್ದಾರೆ.

ಇನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಗಳ ಸಂಖ್ಯೆಯನ್ನ ಏರಿಸಲು ಹೆಚ್ಚುವರಿ ಸಿಬ್ಬಂದಿಯನ್ನ ನೇಮಿಸಿಕೊಂಡಿದ್ದು, ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಡಿಎಚ್ಒ ತಿಳಿಸಿದ್ದಾರೆ.

ಬಂಗಾರಪೇಟೆ ಪಟ್ಟಣ ಒಂದು ವಾರ್ ಲಾಕ್ ಡೌನ್ :  ಸಚಿವ ಎಚ್ ನಾಗೇಶ್

ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿದ್ದು, ಈಗಾಗಲೇ ಜಿಲ್ಲೆಗೆ ಲಾಕ್ ಡೌನ್ ಅವಶ್ಯವಿಲ್ಲ. ಆದರೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ ಹಾಗು ಸೋಂಕಿತರ ಸಾವು ಹೆಚ್ಚು ಸಂಭವಿಸುವುದರಿಂದ, ಬಂಗಾರಪೇಟೆ ಪಟ್ಟಣ ಒಂದು ವಾರ್ ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗಿದೆ ಎಂದು ಉಸ್ತುವಾರಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ.ಇದನ್ನೂ ಓದಿ : ನಿರ್ಬಂಧಿತ ಅಕೇಶಿಯಾ ಗಿಡ ನೆಡಲು ಮುಂದಾದ ಅರಣ್ಯ ಇಲಾಖೆ ; ಉತ್ತರ ಕನ್ನಡ ಜಿಲ್ಲೆಯ ಜನರ ಆಕ್ರೋಶ

ಶಾಸಕ ಎಸ್ ಎನ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಸಭೆ ನಡೆಸಿ, ಇಂದಿನಿಂದ ಒಂದು ವಾರ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ನಿರ್ಧಾರ ಮಾಡಲಾಗಿದೆ, ಈ ಹಿನ್ನಲೆ ಬೆಳಗ್ಗೆ 7 ರಿಂದ ಮಧ್ಯಾಹ್ನ‌ 1 ಗಂಟೆ ವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ, ಲಾಕ್ ಡೌನ್ ನಿರ್ಧಾರ ಘೋಷಿಸುತ್ತಿದ್ದಂತೆ ಸ್ಥಳೀಯ ಪುರಸಭೆ ಅಧಿಕಾರಿಗಳು ಪ್ರಮುಖ ರಸ್ತೆಗಳಲ್ಲಿ ಮೈಕ್ ಮೂಲಕ ಲಾಕ್ ಡೌನ್ ಪಾಲಿಸುವಂತೆ ಮನವಿ ಮಾಡಿದ್ದಾರೆ.

ಇತ್ತ  ಜಿಲ್ಲೆಯನ್ನ ಲಾಕ್ ಡೌನ್ ಮಾಡುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ್ಯ ಸಿಎಸ್ ವೆಂಕಟೇಶ್ ಆಗ್ರಹಿಸಿದ್ದು, ಬೆಂಗಳೂರಿನಿಂದ ಜನರು ಬರುತ್ತಿರುವ‌ ಹಿನ್ನಲೆ ಗ್ರಾಮಗಳ ಜಮರು ಯಾರೊಂದಿಗು ಬೆರೆಯದೆ, ಮನೆಯಲ್ಲೆ‌ ಇದ್ದು ಸೆಲ್ಪ್ ಲಾಕ್ ಡೌನ್ ಆಗಬೇಕಿದೆ, ಸರ್ಕಾರವೇ ಜಿಲ್ಲೆಯನ್ನ ಲಾಕ್ ಮಾಡಿದರೆ ಇನ್ನು ಉತ್ತಮ ಎಂದು ಮನವಿ ಮಾಡಿದ್ದಾರೆ.
Published by: G Hareeshkumar
First published: July 16, 2020, 10:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading