ಗದಗ: ಅದ್ಯಾಕೋ ಗೊತ್ತಿಲ್ಲ ಈ ಬಾರಿ ರೈತರ ಹಣೆ ಬರಹವೇ ಸರಿ ಇಲ್ಲ ಎನ್ನುವಂತಾಗಿದೆ. ಈ ಹಿಂದೇ ಅತೀವೃಷ್ಠಿ ಮಳೆಯಿಂದ ಮೊದಲೆ ಬೆಳೆ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದರು.ಈಗ ಮತ್ತೆ ಧಿಡೀರನೇ ಟೊಮ್ಯಾಟೊ ಬೆಳೆಯ ಬೆಲೆ ಕುಸಿತದಿಂದ ರೈತ ಕುಲವೇ ನಲುಗವಂತಾಗಿದೆ. ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತವಾದ ಬೆಲೆ ಸಿಗದೆ ಇರೋದು ರೈತರನ್ನು ಗೋಳಾಡುವಂತೆ ಮಾಡಿದೆ. ಏಕಾಏಕಿ ಕುಸಿದ ಟೊಮ್ಯಾಟೊ ದರದಿಂದ ಅನ್ನದಾತರು ಕಂಗಾಲಾಗಿದ್ದಾರೆ.
ಹೌದು, ಕಳೆದ ಒಂದೂವರೆ ತಿಂಗಳಿನಿಂದ ಏರುಗತಿಯಲ್ಲಿ ಸಾಗಿದ್ದ ಟೊಮ್ಯಾಟೊ ಬೆಲೆ ದಿಢೀರ್ ಕುಸಿತ ಕಂಡಿದ್ದು, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪೂರ ಲಕ್ಷ್ಮಣನ ಲಮಾಣಿ ಎಂಬ ರೈತ ಒಂದು ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆ ಬೆಳೆದಿದ್ದರು. ಸುಮಾರು 15 ರಿಂದ 20 ಸಾವಿರ ರೂಪಾಯಿ ಟೊಮ್ಯಾಟೊ ಬೆಳೆಯಲು ಖರ್ಚು ಮಾಡಿದ್ದರು. ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡು ಸಮೃದ್ಧಿಯಾಗಿ ಬೆಳೆ ಬೆಳೆದಿದ್ದರು. ಉತ್ತಮ ಇಳಿವರಿ ಸಹ ಬಂದಿತ್ತು. ಈಗಲಾದ್ರೂ ಬೆಳೆ ಕೈ ಹಿಡಿತಲಾಂತ ರೈತ ಲಕ್ಷ್ಮಣ ಖುಷಿಯಾಗಿದ್ದರು. ಆದರೆ ಮಾರುಕಟ್ಟೆಗೆ ಟೊಮ್ಯಾಟೊ ತಗೆದುಕೊಂಡು ಹೋಗಿ ಬೆಲೆ ಕುಸಿತ ಕಂಡು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೇಳುವವರೇ ಇಲ್ಲ. ಹೀಗಾಗಿ ರಾತ್ರಿ -ಹಗಲು ಎನ್ನದೆ ಕಷ್ಟಪಟ್ಟು ದುಡಿದು ಬೆಳೆ ಬೆಳೆದಿದ್ದಾರೆ. ಆದರೆ ಈ ಬಾರಿ ಬೆಲೆ ಕುಸಿತದಿಂದ ರೈತ ಲಕ್ಷ್ಮಣ ಗೋಳಾಡುತ್ತಿದ್ದಾರೆ.
ಇದನ್ನು ಓದಿ: ಕೊಡಗಿನ ಸಂಸ್ಕೃತಿ ಅನಾವರಣಗೊಳಿಸಿದ ಜಲವರ್ಣ ಚಿತ್ರಕಲಾ ಶಿಬಿರ!
ಹೌದು, ರೈತರು ಬೆಲೆ ಕುಸಿತ ಕಾರಣದಿಂದ ಟೊಮ್ಯಾಟೊ ಬೆಳೆಯನ್ನು ತಮ್ಮ ಹೊಲದಲ್ಲಿಯೇ ಗುಡ್ಡೆ ಹಾಕಿದ್ದಾರೆ. ಹೊಲದಲ್ಲಿಯೇ ಟೊಮ್ಯಾಟೋ ಕೊಳೆತು ಹೋಗುತ್ತಿದೆ. ಟೊಮ್ಯಾಟೊ ಕುಸಿತದಿಂದ ನೊಂದ ರೈತ ಕಂಗಾಲಾಗಿದ್ದಾರೆ. ಉತ್ತಮ ಬೆಲೆ ನಿರೀಕ್ಷೆಯಿಂದ ಮಾರುಕಟ್ಟೆಗೆ ಟೊಮೆಟೊ ತಗೆದುಕೊಂಡು ಬರುವ ರೈತರಿಗೆ ಬೆಲೆ ಕುಸಿತ ದಿಂದ ಅವರು ಬಿತ್ತನೆಗೆ ಖರ್ಚು ಮಾಡಿದ ಹಣವು ವಾಪಸು ಬರದೆ ಇರುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಹಾಕಿದ ಬಂಡವಾಳ ಕೈಗೆ ಬರುವಷ್ಟರಲ್ಲಿ ಏಕಾಏಕಿ ಬೆಲೆ ಕುಸಿತದ ಕಂಡಿರೋದು ರೈತರನ್ನು ಗೋಳಾಡುವಂತೆ ಮಾಡಿದೆ. ಸಾಲಾಸೂಲ ಮಾಡಿ ಬೆಳೆದ ಬೆಳೆಗೆ ಬೆಲೆ ಸಿಗದೆ ರೈತರ ಬಾಳು ಹೇಳತ್ತಿರದಾಗಿದೆ.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ