HOME » NEWS » District » TODAY SIX PERSON DIED FROM CORONAVIRUS IN BIDAR DISTRICT RH

ಮಹಾರಾಷ್ಟ್ರ ನಂಟಿಗೆ ಬೆಚ್ಚಿದ ಬೀದರ್; ಗಡಿ ಜಿಲ್ಲೆಯಲ್ಲಿ ಮಾರಕ ಕೊರೋನಾ ಸೋಂಕಿಗೆ ಒಂದೇ ದಿನ 6 ಮಂದಿ ಬಲಿ!

ಬೀದರ್ ತಾಲೂಕಿನ ಇಬ್ಬರು, ಭಾಲ್ಕಿ ತಾಲೂಕಿನಲ್ಲಿ ಓರ್ವ, ಬಸವಕಲ್ಯಾಣ ತಾಲೂಕಿನಲ್ಲಿ ಇಬ್ಬರು ಹಾಗೂ ಹುಮನಾಬಾದ ತಾಲೂಕಿನ ಓಬ್ಬರು ಇಂದು ಮಾರಕ ಸೋಂಕಿಗೆ ಬಲಿಯಾಗಿದ್ದಾರೆ.

news18-kannada
Updated:July 4, 2020, 6:28 PM IST
ಮಹಾರಾಷ್ಟ್ರ ನಂಟಿಗೆ ಬೆಚ್ಚಿದ ಬೀದರ್; ಗಡಿ ಜಿಲ್ಲೆಯಲ್ಲಿ ಮಾರಕ ಕೊರೋನಾ ಸೋಂಕಿಗೆ ಒಂದೇ ದಿನ 6 ಮಂದಿ ಬಲಿ!
ಸಾಂದರ್ಭಿಕ ಚಿತ್ರ
  • Share this:
ಬೀದರ್; ಶರಣರ ನಾಡು ಬೀದರ್ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಲೇ ಇದ್ದು, ಮೃತಪಡುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇಂದು ಒಂದೇ ದಿನ ಆರು ಜನ ಮಾರಕ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೇ 51 ಹೊಸ ಪ್ರಕರಣಗಳು ದಾಖಲಾಗಿವೆ. ಇದರಿಂದ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದು, ಮಹಾರಾಷ್ಟ್ರ ನಂಟಿಗೆ ಗಡಿ ಜಿಲ್ಲೆ ಬೀದರ್ ತತ್ತರಿಸಿದೆ.

‌ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ವಾಪಸಾಗುವವರೆಗೂ ಕೊರೋನಾ ಸೋಂಕಿತರ ಅಂಕಿ ಸಂಖ್ಯೆಗಳು ಬೀದರ್ ಜಿಲ್ಲೆಯಲ್ಲಿ ನೂರರ ಆಸುಪಾಸಿನಲ್ಲಿತ್ತು. ಆದರೆ, ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಬೀದರ್ ಜಿಲ್ಲೆಯ ತಮ್ಮ‌ ತಮ್ಮ ಸ್ವ ಗ್ರಾಮಗಳಿಗೆ ವಾಪಸಾದ ನಂತರ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಸಾಗಿತು. ಪ್ರಸ್ತುತ ಜಿಲ್ಲೆಯಲ್ಲಿ 726 ಸೋಂಕಿತ  ಪ್ರಕರಣಗಳಿದ್ದು, ಮೃತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ಬೀದರ್ ತಾಲೂಕಿನ ಇಬ್ಬರು, ಭಾಲ್ಕಿ ತಾಲೂಕಿನಲ್ಲಿ ಓರ್ವ, ಬಸವಕಲ್ಯಾಣ ತಾಲೂಕಿನಲ್ಲಿ ಇಬ್ಬರು ಹಾಗೂ ಹುಮನಾಬಾದ ತಾಲೂಕಿನ ಓಬ್ಬರು ಇಂದು ಮಾರಕ ಸೋಂಕಿಗೆ ಬಲಿಯಾಗಿದ್ದಾರೆ.

ಇದನ್ನು ಓದಿ: ಶಾಸಕ, ತಹಸೀಲ್ದಾರ್, ಪೊಲೀಸ್, ಪತ್ರಕರ್ತರೆಲ್ಲರೂ ಕ್ವಾರಂಟೈನ್; ಹೆಚ್‌.ಡಿ.ಕೋಟೆ ತಾಲ್ಲೂಕಿಗೆ ಕೊರೋನಾ ಗ್ರಹಣ

ಬೀದರ್ ಜಿಲ್ಲೆಯ ಭಾಲ್ಕಿ, ಔರಾದ್, ಬಸವ ಕಲ್ಯಾಣ ಈ ಮೂರು ತಾಲೂಕುಗಳು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿವೆ. ಈ ಮೂರು ಪಟ್ಟಣದ ಜನ ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರದ ಸೋಲಾಪುರ್, ಪುಣೆ, ಮುಂಬೈನಂತಹ ನಗರಗಳನ್ನೇ ನೆಚ್ಚಿಕೊಂಡಿದ್ದಾರೆ. ಅಲ್ಲಿಯೇ ಅವರು ಕಾರ್ಮಿಕರಾಗಿ ದುಡಿಯಲು ವಲಸೆ ಹೋಗುತ್ತಾರೆ. ಅಲ್ಲಿಂದ ವಾಪಸಾದವರ ಸಂಖ್ಯೆ ಹೆಚ್ಚಿದ್ದರಿಂದ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರ ನಂಟಿಗೆ ಬೀದರ್ ಜಿಲ್ಲೆ ಅಂಜುವಂತಾಗಿದೆ.
Published by: HR Ramesh
First published: July 4, 2020, 6:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading