ಸರ್ಕಾರ ಪಾಸ್ ಮಾಡೋದು ಬೇಡ.. ಕೊಪ್ಪಳದಲ್ಲಿ ಪಿಯು ಪರೀಕ್ಷೆ ಬರೆದ ಏಕೈಕ ವಿದ್ಯಾರ್ಥಿನಿ

ಭೂಮಿಕಾ ಶೇ 37 ರಷ್ಟು ಅಂಕ ಪಡೆದು ಪಾಸಾಗಿದ್ದಾಳೆ. ಆದರೆ ನಾನು ಚನ್ನಾಗಿ ಓದಿದ್ದೇನೆ ನನಗೆ ಜಸ್ಟ್ ಪಾಸ್ ಆಗೋದು ಇಷ್ಟವಿಲ್ಲ. ನಾನು ಮತ್ತೆ ಪರೀಕ್ಷೆ ಬರೆಯುತ್ತೇನೆ ಎಂದು ಇಂದು ಗಣಿತ ಪರೀಕ್ಷೆ ಬರೆದಿದ್ದಾಳೆ. ಒಬ್ಬ ವಿದ್ಯಾರ್ಥಿನಿಗಾಗಿ 20 ಮಂದಿ ಪರೀಕ್ಷಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ.

ವಿದ್ಯಾರ್ಥಿನಿ ಭೂಮಿಕಾ

ವಿದ್ಯಾರ್ಥಿನಿ ಭೂಮಿಕಾ

  • Share this:
ಕೊಪ್ಪಳ: ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ  ಪಾಸ್ ಮಾಡಲಾಗಿದೆ. ಇಲ್ಲೊಬ್ಬ ವಿದ್ಯಾರ್ಥಿನಿ ನಾನು ಚೆನ್ನಾಗಿ ಓದಿದ್ದೇನೆ, ನಿಮ್ಮ ಜಸ್ಟ್ ಪಾಸ್ ಆಫರ್ ಬೇಡ ಎಂದು ತಿರಸ್ಕರಿಸಿ ಇಂದು ಗಣಿತ ಪರೀಕ್ಷೆಯನ್ನು ಬರೆದಿದ್ದಾರೆ. ಇಡೀ ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಏಕ್ಯಕ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ. ಒಬ್ಬ ವಿದ್ಯಾರ್ಥಿಗಾಗಿ 20 ಮಂದಿ ಪರೀಕ್ಷಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ. ವಿದ್ಯಾರ್ಥಿನಿಯ ಹೆಸರು ಭೂಮಿಕಾ ತಾವರಗೆರೆ, ಗಂಗಾವತಿಯ ಅಕ್ಷರಾ ಶ್ರೀ ವೆಂಕಟೇಶ್ವರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ.

ಈ ವಿದ್ಯಾರ್ಥಿನಿ ಇಂದಿನಿಂದ ಆರಂಭವಾದ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದಾಳೆ, ಕೊರೊನಾ ಕಾರಣದಿಂದಾಗಿ ಈ ವರ್ಷ ವಿದ್ಯಾರ್ಥಿಯ ಎಸ್ಎಸ್ಎಲ್ ಸಿ, ಪ್ರಥಮ ಪಿಯುಸಿ, ಇಂಟರ್ನಲ್​​ ಮಾರ್ಕ್ಸ್​​ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಅಂಕ ನೀಡಿ ಪಾಸ್​​ ಮಾಡಲಾಗಿದೆ. ಅದರಂತೆ ಭೂಮಿಕಾ ಸಹ ಶೇ 37 ರಷ್ಟು ಅಂಕ ಪಡೆದು ಪಾಸಾಗಿದ್ದಾಳೆ. ಆದರೆ ನಾನು ಚನ್ನಾಗಿ ಓದಿದ್ದೇನೆ ನನಗೆ ಜಸ್ಟ್ ಪಾಸ್ ಆಗೋದು ಇಷ್ಟವಿಲ್ಲ. ನಾನು ಮತ್ತೆ ಪರೀಕ್ಷೆ ಬರೆಯುತ್ತೇನೆ ಎಂದು ಇಂದು ಗಣಿತ ಪರೀಕ್ಷೆ ಬರೆದಿದ್ದಾಳೆ.

ಗಂಗಾವತಿಯ ಸೆಂಟ್ ಪೌಲ್ ಶಾಲೆಯಲ್ಲಿ ಉತ್ತಮ ಅಂಕ ಪಡೆದು ಪಾಸಾಗಿದ್ದ ಭೂಮಿಕಾಳು 2020 ರಲ್ಲಿ ನಡೆದ ಪಿಯುಸಿ ಪರೀಕ್ಷೆಗೆ ಹಾಜರಾಗಲು ಆಗಿರಲಿಲ್ಲ, ಅನಾರೋಗ್ಯದ ಕಾರಣಕ್ಕಾಗಿ ಪರೀಕ್ಷೆಯಿಂದ ದೂರ ಉಳಿದಿದ್ದರು, ಇದೇ ಹಿನ್ನಲೆಯಲ್ಲಿ ಆಕೆಯನ್ನು ರಿಪೀಟರ್ಸ್ ಎಂದು ಆಕೆ ಕಡಿಮೆ ಅಂಕ ನೀಡಲಾಗಿದೆ. ನನಗೆ ಶೇ 85 ಕ್ಕಿಂತ ಅಧಿಕ ಅಂಕ ಪಡೆಯುವ ಸಾಮಾರ್ಥ್ಯ ಇದೆ. ಈ ಕಾರಣಕ್ಕಾಗಿ ಸರ್ಕಾರದ ಪಾಸ್​​ ಆಫರ್ ತಿರಸ್ಕರಿಸಿ ಇಂದು ಪರೀಕ್ಷೆ ಬರೆದಿದ್ದಾಳೆ.

ಇಲ್ಲಿ ಆಕೆಗೆ ಕಡಿಮೆ ಅಂಕ ಬರಲು ಕಾರಣ ರಿಪೀಟರ್ ಆಗಿದ್ದರಿಂದ ಪ್ರಾಯೋಗಿಕ ಪರೀಕ್ಷೆಯ ಅಂಕ ನೀಡಿಲ್ಲ, ಈಗ ಮತ್ತೆ ಪರೀಕ್ಷೆ ಬರೆಯುತ್ತಿರುವದರಿಂದ ಪ್ರಾಯೋಗಿಕ ಪರೀಕ್ಷೆಗೂ ಅವಕಾಶ ನೀಡಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇಲಾಖೆಯ ನಿರ್ದೇಶಕರಿಂದ ಮಾರ್ಗದರ್ಶನ ಪಡೆಯಲಾಗುವುದು ಎಂದು ಡಿಡಿಪಿಯು ಹೇಳಿದ್ದಾರೆ.

ಇದನ್ನೂ ಓದಿ: Second PUC Exams- ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ; 18414 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 476 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆಯಲಿದ್ದಾರೆ. ಆದರೆ ಇಂದು ಜಿಲ್ಲೆಯ ನಾಲ್ಕು ಪರೀಕ್ಷಾ ಕೇಂದ್ರದಲ್ಲಿ ಗಂಗಾವತಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಭೂಮಿಕಾ  ಮಾತ್ರ ಪರೀಕ್ಷೆ ಬರೆದಿದ್ದಾರೆ. ಇಂದಿನ ಪರೀಕ್ಷಾ ವಿಷಯಗಳಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಪರೀಕ್ಷೆ ಬರೆಯಬೇಕಾಗಿದ್ದರು ಸಹ ಪರೀಕ್ಷೆ ಬರೆದಿದ್ದಾಳೆ. ಒಬ್ಬ ವಿದ್ಯಾರ್ಥಿಯಾಗಿದ್ದರೂ ಪರೀಕ್ಷಾ ನಿಯಮದಂತೆ ಸುಮಾರು 20 ಸಿಬ್ಬಂದಿಯನ್ನು ನೇಮಿಸಲಾಗಿತ್ತು.

ಇಂದಿನ ದಿನಗಳಲ್ಲಿ ಪಾಸಾದರೆ ಸಾಕು ಎನ್ನುತ್ತಿರುವಾಗ ಪಾಸಾಗುವ ಆಫರ್ ತಿರಸ್ಕರಿಸಿ ಭೂಮಿಕಾ ತಮ್ಮ ಓದಿನ ಸಾಮಾರ್ಥ್ಯ ಒರೆಗೆ ಹಚ್ಚಿದ್ದಾರೆ.ಈ ಮಧ್ಯೆ ಇಲ್ಲಿಯವರೆಗೂ ಪುನಾರಾವರ್ತಿತ ಅಭ್ಯರ್ಥಿಗಳಿಗೆ ಪರೀಕ್ಚೆ ಬರೆಯಲು ಅವಕಾಶ ನೀಡಿಲ್ಲ, ಆದರೆ ಭೂಮಿಕಾ ಪ್ರಯೋಗ ಪರೀಕ್ಷೆಯನ್ನು ಎದುರಿಸಿಲ್ಲ, ಈ ಕಾರಣಕ್ಕೆ ಪ್ರಯೋಗ ಪರೀಕ್ಷೆಗೆ ಅವಕಾಶ ಕೋರುತ್ತಿದ್ದಾರೆ. ಪದವಿ ಪೂರ್ವ ಶಿಕ್ಷಣ ಮಂಡಳಿ ಅವಕಾಶ ನೀಡುವುದೊ ಕಾದು ನೋಡಬೇಕು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: