Karnataka SSLC Examination: ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ: ಇತಿಹಾಸದಲ್ಲೇ ವಿಶೇಷ ರೀತಿಯ ಎಕ್ಸಾಮ್​ ನಡೆಸಲು ಮುಂದಾದ ಸರ್ಕಾರ

Karnataka SSLC Examination 2021: ಕೊರೋನಾ ಕಾರಣದಿಂದ ವಿಶೇಷ ಕಾಳಜಿ ವಹಿಸಿರುವ ಕಾರಣ ಪರೀಕ್ಷಾ ಕೇಂದ್ರಗಳು,‌ ಸಿಬ್ಬಂದಿ ಸಂಖ್ಯೆ ಇತಿಹಾಸದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿವೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಾಂದರ್ಭಿಕ ಚಿತ್ರ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಾಂದರ್ಭಿಕ ಚಿತ್ರ

  • Share this:
SSLC Exam: ಬೆಂಗಳೂರು:  ರಾಜ್ಯಾದ್ಯಂತ ಇಂದು ಎಸ್ಸೆಸ್ಸೆಲ್ಸಿ ಮೊದಲ ಪರೀಕ್ಷೆ ಶುರುವಾಗಲಿದೆ. ಈವರೆಗೆ ಎಂದೂ ಕಾಣದ ವಿಶೇಷ ರೀತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಈ ಬಾರಿ ನಡೆಯಲಿದೆ.

ಆರು ವಿಷಯಗಳ ಪರೀಕ್ಷೆಯನ್ನು ಎರಡು ದಿನಗಳಿಗೆ ಇಳಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಸೋಮವಾರ ಅಂದರೆ ಮೊದಲ ದಿನ ಕೋರ್ ವಿಷಯಗಳಾದ ಗಣಿತ, ವಿಜ್ಞಾನ , ಹಾಗೂ ಸಮಾಜ ವಿಜ್ಜಾನ ಪರೀಕ್ಷೆ ನಡೆಯಲಿದೆ. ಮೂರು ವಿಷಯಗಳಿಗೆ 120 ಅಂಕಗಳ ಪರೀಕ್ಷೆ ಇದಾಗಿದೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ಅಣಕು ಪರೀಕ್ಷೆ ಪರಿಶೀಲನೆ ನಡೆಸಿ ಸಾಧಕ- ಬಾಧಕಗಳ ಕುರಿತು ಚರ್ಚಿಸಲಾಗಿದೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅಂತಿಮ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬೆಳಗ್ಗೆ 10.30ರಿಂದ 1.30 ರವರೆಗೆ ಜರುಗಲಿದೆ. ಒಟ್ಟು 8 ಲಕ್ಷದ 76 ಸಾವಿರ 581 ವಿದ್ಯಾರ್ಥಿಗಳ ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ  4,72,643 ಬಾಲಕರು, 4,03,938 ಬಾಲಕಿಯರು ಇದ್ದಾರೆ.  ಇದು ಬಹು ಆಯ್ಕೆ ಮಾದರಿಯ ಪರೀಕ್ಷೆ ಇದಾಗಿದೆ. ಒಎಂಆರ್ ಶೀಟ್ ನಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರ ತುಂಬಬೇಕು.

ಇದೇ ಮೊದಲ ಬಾರಿಗೆ ಈ ವಿಧಾನ ಅನುಸರಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗಲು ಪ್ರತಿ ವಿಷಯದ ಒಎಂಆರ್ ಶೀಟ್ ನಲ್ಲಿ ಬಣ್ಣ ಬದಲು ಮಾಡಿ ಅನುಕೂಲ ಮಾಡಿಕೊಡಲಾಗಿದೆ. ಗಣಿತಕ್ಕೆ ಪಿಂಕ್​​ ಕಲರ್​​​, ವಿಜ್ಞಾನಕ್ಕೆ ಆರೆಂಜ್​​​​​ ಕಲರ್, ಸಮಾಜ ವಿಜ್ಞಾನಕ್ಕೆ ಗ್ರೀನ್​ ಕಲರ್ OMR ಶೀಟ್​ ಇರಲಿದೆ.

ರಾಜಧಾನಿ ಸೇರಿದಂತೆ ರಾಜ್ಯದಾದ್ಯಂತ ಪರೀಕ್ಷೆ ಬರೆಯುವ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಉಚಿತ ಬಸ್ ಸೇವೆಯನ್ನು ನಾಲ್ಕು ಸಾರಿಗೆ ನಿಗಮಗಳು ನೀಡಲಿವೆ. ಇನ್ನೂ ಶಿಕ್ಷಣ ಇಲಾಖೆ ಯಾವೆಲ್ಲ ಸಿದ್ದತೆ ಮಾಡಿಕೊಂಡಿದೆ ಎಂದು ನೋಡುವುದಾದರೆ
ಪರೀಕ್ಷೆಗೆ ನೋಂದಾಯಿಸಿರುವ ಒಟ್ಟು ಶಾಲೆಗಳ ಸಂಖ್ಯೆ 14,927ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ  4884, ಸರ್ಕಾರಿ 1831, ಅನುದಾನಿತ  1294 ಪರೀಕ್ಷಾ ಕೇಂದ್ರಗಳಿವೆ.

ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ಪರೀಕ್ಷೆ ನಂತರ ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಜ್​ ಮಾಡಲಾಗುತ್ತದೆ.  ಜಿಲ್ಲೆಗೆ ಒಬ್ಬರಂತೆ ನೋಡೆಲ್ ಆಫೀಸರ್ ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರದ 200 ಮೀ. ಸುತ್ತ ನಿಷೇದಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ‌ ಬಟ್ಟೆ ಮಾಸ್ಕ್ ಅಥವಾ ಸರ್ಜಿಕಲ್ ಮಾಸ್ಕ್ ವಿತರಣೆ ಮಾಡಲಾಗುವುದು. ಪರೀಕ್ಷಾ ಕೇಂದ್ರಗಳಲ್ಲೆ ಆರೋಗ್ಯ ಕೌಂಟರ್​ ಹಾಗೂ ಸಿಬ್ಬಂದಿಗಳು  ಮಾಸ್ಕ್, ಫೇಸ್ ಶೀಲ್ಡ್ ಧರಿಸಿರಬೇಕು ಎಂದು ಸೂಚನೆ ನೀಡಲಾಗಿದೆ. ಕೇಂದ್ರಗಳಲ್ಲೆ ತುರ್ತು ಚಿಕಿತ್ಸಾ ವಾಹನಗಳ ವ್ಯವಸ್ಥೆ ಕೋವಿಡ್​ ಬಂದಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಸಿಎಂ ಬಿಎಸ್​ವೈ, ಸಚಿವ ಸುರೇಶ್​ ಕುಮಾರ್​

ಕೊರೊನಾ‌ ಕಾರಣಕ್ಕೆ ಪರೀಕ್ಷಾ ಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಟೇಬಲ್ ಗೆ ಒಬ್ಬ ವಿದ್ಯಾರ್ಥಿ ಕುಳಿತು ಪರೀಕ್ಷೆ ಬರೆಯಬಹುದು ಎಂದು ತಿಳಿಸಲಾಗಿದೆ. ಇದರಿಂದ ಪರೀಕ್ಷಾ ಕೇಂದ್ರಗಳು,‌ ಸಿಬ್ಬಂದಿ ಸಂಖ್ಯೆ ಇತಿಹಾಸದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿವೆ. ಪರೀಕ್ಷೆ ಬರೆಯುವ  ಮಕ್ಕಳಿಗೆ ನ್ಯೂಸ್​ 18 ಕಡೆಯಿಂದ Be safe and Be strong. Wish u all the best.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: