ಹಾಸನ ಜಿಲ್ಲೆಯಲ್ಲಿ ಇಂದು 21 ಕೋವಿಡ್-19 ಪ್ರಕರಣ: ಮೃತರ ಸಂಖ್ಯೆ 15ಕ್ಕೆ ಏರಿಕೆ

ಇಂದು ಪತ್ತೆಯಾದ 21 ಪ್ರಕರಣಗಳಲ್ಲಿ 4 ಜನ ಆಲೂರು ತಾಲ್ಲೂಕಿನವರು, 6 ಮಂದಿ ಹಾಸನ ತಾಲ್ಲೂಕಿನವರು, 6 ಜನ ಚನ್ನರಾಯಪಟ್ಟಣ ತಾಲ್ಲೂಕಿನವರಾಗಿದ್ದಾರೆ. ಬೇಲೂರು ತಾಲೂಕಿನಲ್ಲಿ ಒಬ್ಬರು, ಹೊಳೆನರಸೀಪುರ ತಾಲೂಕಿನಲ್ಲಿ 3 ಮಂದಿ ಹಾಗೂ  ಒಬ್ಬರು ಅರಸೀಕೆರೆ ತಾಲೂಕಿನವರಾಗಿದ್ದಾರೆ.

ಸಾಂದರ್ಭಿ ಚಿತ್ರ

ಸಾಂದರ್ಭಿ ಚಿತ್ರ

  • Share this:
ಹಾಸನ; ಹಾಸನ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಮತ್ತು ಅದರಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಮಾರಕ ಸೋಂಕಿಗೆ ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಂದು ಹೊಸದಾಗಿ 21 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 615 ಕ್ಕೆ ಏರಿಕೆಯಾಗಿದೆ. ಈವರೆಗೆ 390 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 210 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 15 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಇದನ್ನು ಓದಿ: ಕೊರೋನಾ ಕಾರ್ಯಪಡೆ ಸಮಿತಿಗೆ ಕಾಂಗ್ರೆಸ್ ನಾಯಕರನ್ನು ಸೇರಿಸಿಕೊಳ್ಳಿ; ಸರ್ಕಾರಕ್ಕೆ ಎಚ್.ಡಿ.ಕುಮಾರಸ್ವಾಮಿ ಸಲಹೆ

ಇಂದು ಪತ್ತೆಯಾದ 21 ಪ್ರಕರಣಗಳಲ್ಲಿ 4 ಜನ ಆಲೂರು ತಾಲ್ಲೂಕಿನವರು, 6 ಮಂದಿ ಹಾಸನ ತಾಲ್ಲೂಕಿನವರು, 6 ಜನ ಚನ್ನರಾಯಪಟ್ಟಣ ತಾಲ್ಲೂಕಿನವರಾಗಿದ್ದಾರೆ. ಬೇಲೂರು ತಾಲೂಕಿನಲ್ಲಿ ಒಬ್ಬರು, ಹೊಳೆನರಸೀಪುರ ತಾಲೂಕಿನಲ್ಲಿ 3 ಮಂದಿ ಹಾಗೂ  ಒಬ್ಬರು ಅರಸೀಕೆರೆ ತಾಲೂಕಿನವರಾಗಿದ್ದಾರೆ.
Published by:HR Ramesh
First published: