HOME » NEWS » District » TIPS FOR THOSE INTIMIDATED BY THE ELDERLY COUPLE WHO WON CORONA MAK

ಕೊರೋನಾ ಗೆದ್ದು ಬಂದ ವೃದ್ದ ದಂಪತಿಗಳಿಂದ ಭಯಪಡುವವರಿಗೆ ಟಿಪ್ಸ್..!

 ಹಿರಿಯ ಜೋಡಿಯ ಧೈರ್ಯದ ಮಾತು ಕೇಳಿ ಹಾಸನ ಜನ ಕೂಡ ನೀವು ಹೇಳ್ತಿರೋದು ಅಪ್ಪಟ ಸತ್ಯ ಎಂದು ಹೇಳುತ್ತಿದ್ದಾರೆ. ಕೊರೋನಾ ಬಂದವರು ನಿಮ್ಮ ರೀತಿ ಧೈರ್ಯವಾಗಿ ಹೆದರಿಸಿದ್ರೆ ಬೇಗನೇ ಗುಣಮುಖರಾಗೋದ್ರಲ್ಲಿ ಅನುಮಾನವಿಲ್ಲ ಎನ್ನುತ್ತಿದ್ದಾರೆ ಈ ಹಿರಿ ಜೀವಗಳು.

news18-kannada
Updated:August 29, 2020, 7:22 AM IST
ಕೊರೋನಾ ಗೆದ್ದು ಬಂದ ವೃದ್ದ ದಂಪತಿಗಳಿಂದ ಭಯಪಡುವವರಿಗೆ ಟಿಪ್ಸ್..!
ಸಾಂದರ್ಭಿಕ ಚಿತ್ರ.
  • Share this:
ಹಾಸನ ; ಕೊರೋನಾ ಎಂಬ ಹೆಸರು ಕೇಳಿದ್ರೆ ಸಾಕು ಎಲ್ಲರೂ ಬೆಚ್ಚಿ ಬೀಳ್ತಾರೆ. ಅಯ್ಯೋ ಕೊರೋನಾ ಬಂದ್ರೆ ಏನಪ್ಪ ಗತಿ ಅಂತ ಆತಂಕ ಪಡುತ್ತಾರೆ. ಇಷ್ಟೆಲ್ಲ ಆತಂಕದ ನಡುವೆ ಹಾಸನದಲ್ಲಿ ವೃದ್ಧ ದಂಪತಿಗಳು ಕೊರೋನಾ ಗೆದ್ದು ಬಂದಿದ್ದಾರೆ. ಅಷ್ಟೇ ಅಲ್ಲದೇ ಕೊರೋನಾ ಗೆಲ್ಲೋಕೆ ಬೇಕಾಗಿರೋದೇನು? ಎಂಬ ಟಿಪ್ಸ್ ಕೂಡ ಕೊಟ್ಟಿದ್ದಾರೆ‌. ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

ಈ ಹಿರಿಯ ದಂಪತಿಗಳ ಹೆಸರು ಜಯರಾಮ್ ಮತ್ತು ಜಯಮ್ಮ. ಹಾಸನದ ದಾಸರಕೊಪ್ಪಲು ನಿವಾಸಿಗಳಾದ ಜಯರಾಮ್ ಮತ್ತು ಜಯಮ್ಮ ದಂಪತಿಗೆ ಕಳೆದ 15 ದಿನದ ಹಿಂದೆ ಕೊರೋನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಜಯರಾಮ್ ಅವರಿಗೆ 85 ವರ್ಷ ವಯಸ್ಸಾಗಿದ್ರೆ ಜಯಮ್ಮ ಅವರಿಗೆ 75 ವರ್ಷ ವಯಸ್ಸು. ಇದೀಗ ಕೊರೋನಾ ಗೆದ್ದು ಬಂದಿರುವ ಹಿರಿಯ ಜೋಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಗೆಲುವಿನ ನಗು ಬೀರುತ್ತಿದ್ದಾರೆ.

"ಕೊರೋನಾ ಬಂದ ಸಮಯದಲ್ಲಿ ನಮಗೆ ತುಂಬಾ ಭಯ ಆಯ್ತು. ನಾನು ಎಲ್ಲಿದ್ದೇನೆ ಅಂತಾನೇ ಗೊತ್ತಾಗುತ್ತಿರಲಿಲ್ಲ. ಮಾತಾಡುವ ಶಕ್ತಿಯೂ ಇರಲಿಲ್ಲ. ಆಸ್ಪತ್ರೆಗೆ ಬಂದಾಗ ನಾನು ಎಲ್ಲಿದ್ದೇನೆ ಎಂದು ಕೇಳಿದ್ದೇನೆ. ಊಟದ ಮೇಲೆ ನಿಗಾ ಇರಲಿಲ್ಲ.‌ ಆನಂತರ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಬಂದಿದ್ರಿಂದ ಕೊರೋನಾ ಜಯಿಸಿದ್ದೇವೆ. ಕೊರೋನಾ ಬಗ್ಗೆ ಯಾವ ಆತಂಕವೂ ಬೇಡ. ಗೆಲ್ಲಲು ಧೈರ್ಯವೇ ಮಖ್ಯ ಕಾರಣ. ಈಗ ನಮಗೆ ತುಂಬಾ ಸಂತೋಷ ಆಗುತ್ತಿದೆ.‌ ಆಸ್ಪತ್ರೆಯಲ್ಲೂ ಕೂಡ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡರು ಅಂತಿದ್ದಾರೆ" ಈ ಹಿರಿಯ ಜೋಡಿ.

ಇದನ್ನೂ ಓದಿ : ಜಿಎಸ್‌ಟಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜ್ಯಕ್ಕೆ ಬಗೆದಿರುವ ದ್ರೋಹವನ್ನು ಸಹಿಸಲು ಸಾಧ್ಯವಿಲ್ಲ; ಸಿದ್ದರಾಮಯ್ಯ

ಹಿರಿಯ ಜೋಡಿಯ ಧೈರ್ಯದ ಮಾತು ಕೇಳಿ ಹಾಸನ ಜನ ಕೂಡ ನೀವು ಹೇಳ್ತಿರೋದು ಅಪ್ಪಟ ಸತ್ಯ ಎಂದು ಹೇಳುತ್ತಿದ್ದಾರೆ. ಕೊರೋನಾ ಬಂದವರು ನಿಮ್ಮ ರೀತಿ ಧೈರ್ಯವಾಗಿ ಹೆದರಿಸಿದ್ರೆ ಬೇಗನೇ ಗುಣಮುಖರಾಗೋದ್ರಲ್ಲಿ ಅನುಮಾನವಿಲ್ಲ ಎನ್ನುತ್ತಿದ್ದಾರೆ ಈ ಹಿರಿ ಜೀವಗಳು.
Published by: MAshok Kumar
First published: August 29, 2020, 7:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories