HOME » NEWS » District » TIME HAS COME START DR B R AMBEDKAR UNIVERSITY IN CHAMARAJANAGARA NCHM HK

ಚಾಮರಾಜನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಿ.ವಿ ಸ್ಥಾಪನೆಯಾಗುವ ಕಾಲ ಸನ್ನಿಹಿತ

ಮೊದಲ ಹಂತವಾಗಿ ಈಗಿರುವ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಕ್ಕೆ ಪೂರ್ಣ ಪ್ರಮಾಣದ ಹುದ್ದೆಗಳ ನೇಮಕಾತಿಯ ಅನುಮೋದನೆಗಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

news18-kannada
Updated:December 2, 2020, 6:06 PM IST
ಚಾಮರಾಜನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಿ.ವಿ ಸ್ಥಾಪನೆಯಾಗುವ ಕಾಲ ಸನ್ನಿಹಿತ
ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ
  • Share this:
ಚಾಮರಾಜನಗರ(ಡಿಸೆಂಬರ್. 02): ಅಧ್ಯಯನವೊಂದರ ಪ್ರಕಾರ ಉನ್ನತ ಶಿಕ್ಷಣದಲ್ಲಿ ಚಾಮರಾಜನಗರ ಜಿಲ್ಲೆ ಬಹಳ ಹಿಂದುಳಿದಿದೆ. ಜಿಲ್ಲೆಯ ಅಭಿವೃದ್ಧಿ ಸೂಚ್ಯಂಕದಲ್ಲು ಇದು ಪ್ರಸ್ತಾಪವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಜಿಲ್ಲೆಯಾದ ಎಷ್ಟೋ ವರ್ಷಗಳ ನಂತರ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗು ಸರ್ಕಾರಿ ಮೆಡಿಕಲ್ ಕಾಲೇಜು ತಲೆ ಎತ್ತಿವೆ. ಇನ್ನೊಂದೆಡೆ ಕಾನೂನು ಕಾಲೇಜು ಸಹ ಮಂಜೂರಾಗಿದೆ. ಇದೀಗ ಈ  ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾನಿಲಯ ಸೇರುವ ಕಾಲ ಸನ್ನಿಹಿತವಾಗಿದೆ. ಈಗಾಗಲೇ ಚಾಮರಾಜನಗರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. 2010-11 ನೇ ಸಾಲಿನಲ್ಲಿ  ಖಾಸಗಿ ಶಿಕ್ಷಣ ಸಂಸ್ಥೆಯ ಕೊಠಡಿಯೊಂದರಲ್ಲಿ ಪ್ರಾರಂಭವಾದ ಈ ಸ್ನಾತಕೋತ್ತರ ಕೇಂದ್ರ ಹಂತಹಂತವಾಗಿ ಅಭಿವೃದ್ಧಿ ಹೊಂದುತ್ತಾ  ಜೋಡಿ ರಸ್ತೆಯಲ್ಲಿರುವ ರೇಷ್ಮೆ ಇಲಾಖೆಯ ಕಟ್ಟಡಕ್ಕ ಸ್ಥಳಾಂತರಗೊಂಡಿತ್ತು.

ನಂತರ 2015-16ನೇ ಸಾಲಿನಲ್ಲಿ ಮರಿಯಾಲದ ಬಳಿ 55 ಎಕರೆ ಪ್ರದೇಶದ ಸ್ವಂತ ಭೂಮಿ ಹೊಂದಿ ಸುಸಜ್ಜಿತ ಕಟ್ಟಡವೂ ಸಹ ನಿರ್ಮಾಣಗೊಂಡಿದೆ. ಈ ಕ್ಯಾಂಪಸ್ ಗೆ ಸುವರ್ಣ ಗಂಗೋತ್ರಿ ಎಂದು ಸಹ ನಾಮಕರಣ ಮಾಡಲಾಗಿದ್ದು ಇದೀಗ ಪ್ರತ್ಯೇಕ ವಿಶ್ವವಿದ್ಯಾನಿಲಯವಾಗುವುದರತ್ತ ದಾಪುಗಾಲು ಹಾಕಿದೆ. ಆರಂಭದಲ್ಲಿ ಕೇವಲ 70 ವಿದ್ಯಾರ್ಥಿಗಳಿದ್ದ ಈ ಕೇಂದ್ರದಲ್ಲಿ ಈಗ 550ಕ್ಕು ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ಈ ಸ್ನಾತಕೋತ್ತರ ಕೇಂದ್ರದಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಕನ್ನಡ, ಗಣಿತ, ಕಂಪ್ಯೂಟರ್ ಸೈನ್ಸ್, ಲೈಬ್ರರಿ ಸೈನ್ಸ್, ಎಂಎಸ್.ಡಬ್ಲ್ಯು, ಎಂಕಾಂ ಹಾಗು ಎಂಬಿಎ ಕೋರ್ಸ್ ಗಳಿದ್ದು, ಈ ಶೈಕ್ಷಣಿಕ ವರ್ಷದಿಂದ ಭೌತಶಾಸ್ತ್ರ ಹಾಗು ರಸಾಯನಶಾಸ್ತ್ರ, ಕೋರ್ಸ್ ಗಳನ್ನು ಸಹ ಆರಂಭಿಸಲಾಗಿದೆ ಹಾಗು ಮಧ್ಯೆದಲ್ಲೇ ನಿಂತು ಹೋಗಿದ್ದ ಎಂಎ ಇನ್ ಇಂಗ್ಲೀಷ್ ಕೋರ್ಸ್ ನ್ನು ಸಹ ಈ ವರ್ಷದಿಂದ ಮತ್ತೆ ಆರಂಭಿಸಲಾಗಿದೆ ಎಂದು ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಶಿವಬಸವಯ್ಯ ನ್ಯೂಸ್ 18 ಗೆ ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾದರೂ ಉನ್ನತ ಶಿಕ್ಷಣಕ್ಕೆ ಮೈಸೂರು ಇಲ್ಲವೆ ದೂರದ ಬೆಂಗಳೂರನ್ನೇ ಅವಲಂಬಿಸಬೇಕು. ಹಿಂದುಳಿದ ವರ್ಗದವರು, ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯಲ್ಲಿ ಈ ವರ್ಗದ ವಿದ್ಯಾರ್ಥಿಗಳು  ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಈ ಜಿಲ್ಲೆಯಲ್ಲೇ ಅವರಿಗೆ ಉನ್ನತ ಶಿಕ್ಷಣ ಸಿಗುವಂತಾಗಬೇಕು ಎಂಬ ದೃಷ್ಟಿಯಿಂದ ಸುವರ್ಣ ಗಂಗೋತ್ರಿ ಕ್ಯಾಂಪಸ್ ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ  ಕೇಂದ್ರವನ್ನು ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾನಿಲಯವಾಗಿ ಪರಿವರ್ತಿಸುವ ಅಗತ್ಯವನ್ನು ಮೈಸೂರು ವಿ.ವಿ.ಯ ಅಕಾಡೆಮಿಕ್ ಕೌನ್ಸಿಲ್ ಮನಗಂಡಿದೆ.

ಇದನ್ನೂ ಓದಿ : ಲೋಕಸಭಾ ಉಪಚುನಾವಣೆಯಲ್ಲಿ ನನ್ನ ಹೆಸರು ತೇಲಿಬಿಟ್ಟವರ ಹುಡುಕುತ್ತಿದ್ದೇನೆ; ಜಗದೀಶ್​ ಶೆಟ್ಟರ್

ಈ ಹಿನ್ನಲೆಯಲ್ಲಿ ಮೊದಲ ಹಂತವಾಗಿ ಈಗಿರುವ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಕ್ಕೆ ಪೂರ್ಣ ಪ್ರಮಾಣದ ಹುದ್ದೆಗಳ ನೇಮಕಾತಿಯ ಅನುಮೋದನೆಗಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಭಾಗದ ಜನಪ್ರತಿನಿಧಿಗಳು ಸರ್ಕಾರ ಮೇಲೆ ಒತ್ತಡ ತಂದು ಅನುಮೋದನೆ ಕೊಡಿಸಿದ್ದೇ ಆದಲ್ಲೇ ಈ ಕೇಂದ್ರವು  ಒಂದು ವಿಶ್ಯವಿದ್ಯಾನಿಲಯಕ್ಕೆ ಬೇಕಾದ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಹೊಂದಲಿದೆ.
ಪ್ರಸ್ತುತ ಈ ಕೇಂದ್ರದಲ್ಲಿ 60ಕ್ಕು ಹೆಚ್ಚು ಅತಿಥಿ ಉಪನ್ಯಾಸಕರು, ಮೂವರು ಸಂದರ್ಶಕ ಪ್ರಾಧ್ಯಾಪಕರು ಕಾರ್ಯ ನಿರ್ವಹಿಸುತ್ತಿದ್ದು, ಪ್ರತ್ಯೇಕ ವಿಶ್ವವಿದ್ಯಾನಿಲಯಕ್ಕೆ ಬೇಕಾದ ವಿಸ್ತಾರವಾದ ಕ್ಯಾಂಪಸ್, ಕಟ್ಟಡ, ಹೀಗೆ ಬಹುತೇಕ  ಸೌಲಭ್ಯಗಳು ಇದ್ದು ಅಕಾಡೆಮಿಕ್ ಕೌನ್ಸಿಲ್ ಸಲ್ಲಿಸಿರುವ ಪ್ರಸ್ತಾವನೆ ಸರ್ಕಾರದಿಂದ ಅನುಮೋದನೆಗೊಂಡಲ್ಲಿ ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದಲ್ಲೆ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ರೆಗ್ಯುಲರ್ (ಸಾಮಾನ್ಯ) ವಿಶ್ವವಿದ್ಯಾನಿಲಯವೊಂದು ರಚನೆಯಾಗಲಿದೆ.
Published by: G Hareeshkumar
First published: December 2, 2020, 6:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories