HOME » NEWS » District » THREE STUDENTS FROM KERALA ACCUSED OF RAGGING IN MANGALORE COLLEGE KKM SNVS

ಮಂಗಳೂರಿನಲ್ಲಿ ಕೇರಳದ ವಿದ್ಯಾರ್ಥಿಗಳಿಂದ ಪುಂಡಾಡಿಕೆ; ಕರಾವಳಿಯನ್ನು ಬಿಟ್ಟೂಬಿಡದೆ ಕಾಡುತ್ತಿದೆ ರ್‍ಯಾಗಿಂಗ್ ಭೂತ

ಮಂಗಳೂರಿನಲ್ಲಿ ಮತ್ತೆ ಮತ್ತೆ ರ್‍ಯಾಗಿಂಗ್ ನಡೆಯುತ್ತಿದೆ. ಕರಾವಳಿಯನ್ನು ಬಿಟ್ಟೂಬಿಟ್ಟು ಕಾಡುತ್ತಿದೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಕೇರಳದ ಮೂವರು ವಿದ್ಯಾರ್ಥಿಗಳನ್ನ ಬಂಧಿಸಿದ್ದಾರೆ.

news18-kannada
Updated:March 12, 2021, 11:18 AM IST
ಮಂಗಳೂರಿನಲ್ಲಿ ಕೇರಳದ ವಿದ್ಯಾರ್ಥಿಗಳಿಂದ ಪುಂಡಾಡಿಕೆ; ಕರಾವಳಿಯನ್ನು ಬಿಟ್ಟೂಬಿಡದೆ ಕಾಡುತ್ತಿದೆ ರ್‍ಯಾಗಿಂಗ್ ಭೂತ
ಮಂಗಳೂರಿನಲ್ಲಿ ಬಂಧಿರಾದ ಕೇರಳದ ವಿದ್ಯಾರ್ಥಿಗಳು
  • Share this:
ಮಂಗಳೂರು: ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿ ಅತೀ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ನಗರ ಮಂಗಳೂರು. ಇಲ್ಲಿನ ಕಾಲೇಜುಗಳಿಗೆ ರಾಜ್ಯದವರು ಮಾತ್ರವಲ್ಲದೇ ಹೊರ ರಾಜ್ಯ, ಹೊರ ದೇಶದ ವಿದ್ಯಾರ್ಥಿಗಳು ಕಲಿಕೆಗೆಂದು ಇಲ್ಲಿಗೆ ಬರುತ್ತಾರೆ. ಆದ್ರೆ ಇದೇ ರೀತಿ ಕಲಿಕೆಗೆಂದು ಬಂದ ಕೇರಳ ರಾಜ್ಯದ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡೋಕೆ ಹೋಗಿ ಅಂದರ್ ಆಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕೇರಳದಿಂದ ಬಂದು ರ್‍ಯಾಗಿಂಗ್ ಮಾಡಿದ 11 ಜನ ವಿದ್ಯಾರ್ಥಿಗಳು ಇದೇ ರೀತಿ ಅಂದರ್ ಆಗಿದ್ದರು. ಈಗ ಮತ್ತೆ ಮೂರು ಜನ ಕೇರಳ ವಿದ್ಯಾರ್ಥಿಗಳನ್ನು ಪೋಲೀಸರು ಬಂಧಿಸಿದ್ದಾರೆ. 

ಪ್ರಕರಣ 1:

ಮಂಗಳೂರಿನ ಬಲ್ಮಠದಲ್ಲಿರುವ ಯೆನಪೋಯ ಡಿಗ್ರಿ ಕಾಲೇಜು ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿ ಬಂಧನವಾಗಿದ್ದಾರೆ. ಕೇರಳದ ಕಣ್ಣೂರು ನಿವಾಸಿ ಲಿಯಾಕತ್ ಸೆಕೆಂಡ್ ಇಯರ್ ಬಿಕಾಂ ವಿದ್ಯಾರ್ಥಿ, ರಿಜಿನ್ ರಿಯಾಜ್ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿ, ಕೇರಳದ ಕ್ಯಾಲಿಕಟ್ ನಿವಾಸಿ, ಮಹಮ್ಮದ್ ನಿಜಾಮುದ್ದೀನ್ ಬಿಪಿ, ಎರಡನೇ ವರ್ಷದ ಬಿಎಸ್ಸಿ ವಿದ್ಯಾರ್ಥಿ, ಕೇರಳದ ಕಣ್ಣೂರು ನಿವಾಸಿ, ಇವರೆಲ್ಲಾ ಫಸ್ಟ್ ಇಯರ್ ಸ್ಟೂಡೆಂಟ್‌ಗೆ ರ್ಯಾಗಿಂಗ್ ಮಾಡಿ ಇದೀಗ ಜೈಲುಕಂಬಿ ಎಣಿಸುವಂತಾಗಿದೆ. ಇವರೆಲ್ಲಾ ಪಂಪ್​ವೆಲ್ ಲೇನ್​ನಲ್ಲಿರುವ ಉಮರ್ ಅನ್ಸಾರ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಇನ್ನು ತಮ್ಮ ಮನೆಗೆ ಜೂನಿಯರ್ ವಿದ್ಯಾರ್ಥಿಗಳನ್ನು ಕರೆಸಿ ರ್ಯಾಗಿಂಗ್ ಮಾಡಿ ಹಲ್ಲೆ ಮಾಡಿದ್ದಾರೆ ಅಂತಾ ದೂರಿನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ಪ್ರೀತಿ ನಿರಾಕರಿಸಿದ ಪ್ರೇಯಸಿಯ ಮನೆಗೆ ನುಗ್ಗಿ ಕೊಂದ ಭಗ್ನ ಪ್ರೇಮಿ!

ಇನ್ನು ಜೂನಿಯರ್ ವಿದ್ಯಾರ್ಥಿಗಳಿಗೆ ರೂಂ ನಲ್ಲಿ ಚಹಾ ಮಾಡೋದಕ್ಕೆ ಹೇಳಿ ಟಾರ್ಚರ್ ಮಾಡಿದ್ದಾರೆ. ತಲೆ ಮತ್ತು ಮೀಸೆ-ಗಡ್ಡೆ ಬೋಳಿಸಬೇಕು. 10 ನಿಮಿಷದಲ್ಲಿ ಹೇರ್ ಕಟ್ ಮಾಡಿಸಿಕೊಂಡು ಬರಬೇಕು ಅಂತಾ ರ್‍ಯಾಗಿಂಗ್ ಮಾಡುತ್ತಿದ್ದರು. ಕಾಲೇಜಿನಲ್ಲಿ ವಿದ್ಯಾರ್ಥಿನಿಯರನ್ನ ಮಾತನಾಡಿಸಬಾರದು. ಇನ್ನು ಈ ವಿಚಾರದ ಬಗ್ಗೆ ಹೊರಗಡೆ ಹೇಳಿದ್ರೆ ಅಷ್ಟೆ ಎಂದೂ ಜೀವ ಬೆದರಿಕೆ ಹಾಕಿದ್ದಾರೆ. ಬಂಧಿತರು ಕೇರಳ ಮೂಲದವರಾಗಿದ್ದು, ಎಲ್ಲರನ್ನೂ ಈಗ ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿದೆ.

ಪ್ರಕರಣ 2:

ಸುರತ್ಕಲ್‌ನ ಖಾಸಗಿ ಇಂಜಿನೀಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗೆ ಅದೇ ಕಾಲೇಜಿನ ಫೈನಲ್ ಇಯರ್ ಎಂಜಿನಿಯರಿಂಗ್ ಸ್ಟೂಡೆಂಟ್ಸ್ ಮಹಮ್ಮದ್ ಭಾಝಿಲ್, ಸಂಭ್ರಮ್ ಆಳ್ವ, ಅಶ್ವಿತ್ ಜಾನ್ಸನ್, ಶಮೀಲ್ ಅವರು ರ್‍ಯಾಗಿಂಗ್ ಮಾಡಿದ್ದರು. ರೂಮ್‌ಗೆ ಕರೆಸಿಕೊಂಡು ಫುಲ್ ಶೇವ್, ಕಟ್ಟಿಂಗ್ ಮಾಡಿಸಬೇಕು, ಯಾರ ಜೊತೆಯು ಮಾತಾಡಬಾರದು ಎಂಬ ಕೆಲ ನಿರ್ಬಂಧ ವಿಧಿಸಿದ್ದರು. ಇದಿಷ್ಟೇ ಅಲ್ಲದೇ ಈ ವಿಚಾರವನ್ನು ರ್‍ಯಾಗಿಂಗ್ ತಡೆ ಸಮಿತಿಯಲ್ಲಿ ವಿಚಾರಣೆ ನಡೆಸಿದ ದ್ವೇಷಕ್ಕೆ ಕೆಮಿಸ್ಟ್ರಿ ಲೆಕ್ಚರರ್ ಮೇಲೆಯೂ ಹಲ್ಲೆ ನಡೆಸಿ ಈ ಆರೋಪಿಗಳು ಅಂದರ್ ಆಗಿದ್ದಾರೆ.ಇದನ್ನೂ ಓದಿ: ಕಳ್ಳರ ಹಾವಳಿಗೆ ಬೆಚ್ಚಿಬಿದ್ದ ಹಾವೇರಿ: ಜಿಲ್ಲೆಯಲ್ಲಿ ಸದ್ದಿಲ್ಲದೆ ಕೆಲಸ ಮಾಡ್ತಿದೆ ಕಳ್ಳರ ಗ್ಯಾಂಗ್!

ಪ್ರಕರಣ 3

ಇನ್ನೊಂದು ಪ್ರಕರಣದಲ್ಲಿ, ಕಂಕನಾಡಿ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಒಂಬತ್ತು ಮಂದಿ ವಿದ್ಯಾರ್ಥಿಗಳ ರೂಮ್‌ಗೆ ನುಗ್ಗಿದ್ದ ಮೂರು ಜನ ಸೀನಿಯರ್ಸ್ ರ್‍ಯಾಗಿಂಗ್ ಮಾಡಿದ್ದಾರೆ. ಒಂದೇ ಕಾಲೇಜಿನಲ್ಲಿದ್ದ ಇವರು ಫಸ್ಟ್ ಇಯರ್ ಡಿಗ್ರಿ ಸ್ಟೂಡೆಂಟ್ಸ್‌‌ನ್ನು ಹೆದರಿಸಿ ಗಡ್ಡ, ಮೀಸೆ ತೆಗಿಬೇಕು, ಹುಡುಗಿಯರ ಜೊತೆ ಮಾತನಾಡಬಾರದು ಎಂದು ಬೆದರಿಸಿದ್ದಾರೆ. ಅವರ ಕೈಯಿಂದಲೇ ಬಲತ್ಕಾರದಿಂದ ಟೀ ಮಾಡಿಸಿಕೊಂಡು ಕುಡಿದು ನಿಂಧಿಸಿ ತೆರಳಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಯೊಬ್ಬ ದೂರು ನೀಡಿದ್ದು ರ್ಯಾಗಿಂಗ್ ಮಾಡಿದ ಕೇರಳ ಮೂಲದ ಮಹಮ್ಮದ್ ಅದೀಲ್, ರಿಜಿನ್ ರಿಯಾಸ್, ಮಹಮ್ಮದ್ ನಿಜಾಮುದ್ದೀನ್ ಎಂಬುವವರನ್ನು ಬಂಧಿಸಲಾಗಿದೆ.

ಇಲ್ಲಿವರೆಗೆ ರ್‍ಯಾಗಿಂಗ್ ನಡೆಸಿದವರಲ್ಲಿ ಕೇರಳ ಮೂಲದವರೇ ಹೆಚ್ಚು ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಓದೋಕೆ ಅಂತಾ ಬಂದು ಫೈನಲ್ ಇಯರ್‌ನಲ್ಲಿ ಈ ರೀತಿಯ ದೌರ್ಜನ್ಯ ನಡೆಸುವವರ ವಿರುದ್ದ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದ್ದು, ಇನ್ನಾದರೂ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

ಇನ್ಮುಂದೆ ಕಾಲೇಜುಗಳಲ್ಲಿ ಈ ರೀತಿಯಾಗದಂತೆ ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗಳಿಗೆ ಮಂಗಳೂರು ಕಮೀಷನರ್ ಎಚ್ಚರಿಕೆಯನ್ನು ನೀಡಿದ್ದಾರೆ. ಅದೇನೆ ಇದ್ದರೂ ಸಾಲು ಸಾಲು ರ್ಯಾಗಿಂಗ್ ಪ್ರಕರಣಗಳು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಉಂಟು ಮಾಡಿದೆ. ಇನ್ನು ಈ ಬಗ್ಗೆ ವಿದ್ಯಾರ್ಥಿಗಳು ಅರಿತು ವಿದ್ಯಾಭ್ಯಾಸದ ಮೇಲೆ ಗಮನಹರಿಸಬೇಕಿದೆ.

ವರದಿ: ಕಿಶನ್ ಕುಮಾರ್
Published by: Vijayasarthy SN
First published: March 12, 2021, 11:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories