• Home
  • »
  • News
  • »
  • district
  • »
  • Sandalwood Smuggling; ತುಮಕೂರು ಜಿಲ್ಲೆಯಲ್ಲಿ ಹೆಚ್ಚಿದ ತಮಿಳುನಾಡು ಮೂಲದ ಶ್ರೀಗಂಧ ಕಳ್ಳರ ಹಾವಳಿ; ಮೂವರ ಸೆರೆ

Sandalwood Smuggling; ತುಮಕೂರು ಜಿಲ್ಲೆಯಲ್ಲಿ ಹೆಚ್ಚಿದ ತಮಿಳುನಾಡು ಮೂಲದ ಶ್ರೀಗಂಧ ಕಳ್ಳರ ಹಾವಳಿ; ಮೂವರ ಸೆರೆ

ಅರಣ್ಯ ಇಲಾಖೆಯವರು ದಾಳಿ ನಡೆಸಿದ ಸ್ಥಳ

ಅರಣ್ಯ ಇಲಾಖೆಯವರು ದಾಳಿ ನಡೆಸಿದ ಸ್ಥಳ

ಕಳೆದ ಆಗಸ್ಟ್ 21 ರಂದು ಕುಣಿಗಲ್ ನ ಕಂಪ್ಲಾಪುರದಲ್ಲಿಯೂ ಇದೇ ರೀತಿ ಶ್ರೀಗಂಧ ಕಳ್ಳರ ಮೇಲೆ ನಡೆಸಿದ ದಾಳಿಯಲ್ಲಿ ಚೋರರ ಪ್ರತಿದಾಳಿ ಎದುರಿಸುವ ಸಲುವಾಗಿ ಓರ್ವನನ್ನ ಎನ್ ಕೌಂಟರ್ ಮಾಡಲಾಗಿತ್ತು. ಇದೀಗ ಇಂತಹದ್ದೇ ಘಟನೆ ನಡೆದಿದೆ.

  • Share this:

ತುಮಕೂರು: ಶ್ರೀಗಂಧ ಮರ ಕಳವು (Sandalwood Smuggling) ಪ್ರಕರಣ ರಾಜ್ಯದ ಎಲ್ಲ ಕಡೆ ನಡೆಯುತ್ತಿದೆ. ಸರ್ಕಾರಿ ಕಚೇರಿಗಳ ಮುಂದೆ, ಮನೆಯ ಮುಂದೆ, ಜಮೀನಿನಲ್ಲಿ ಬೆಳೆದ ಶ್ರೀಗಂಧದ ಮರಗಳನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ದ, ಕದ್ದೊಯ್ಯುತ್ತಿರುವ ಪ್ರಕರಣಗಳನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ಅದರಲ್ಲೂ ತುಮಕೂರು ಜಿಲ್ಲೆಯಲ್ಲಿ ತಮಿಳುನಾಡು ಮೂಲದ ಕಳ್ಳರ (Sandalwood Smugglers) ಹಾವಳಿ ಹೆಚ್ಚಾಗಿದೆ. ಬಹುತೇಕ ಅರಣ್ಯ ಸಂಪತ್ತಿನ ಮೇಲೆಯೇ ಕಣ್ಣಿಟ್ಟಿರೋ ಕಳ್ಳರು ಜಿಲ್ಲಾದ್ಯಂತ ಅರಣ್ಯ ಸಂಪತ್ತನ್ನ ಮನಸೋ ಇಚ್ಛೇ ಲೂಟಿ ಮಾಡುತ್ತಿದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ  ಹೆಚ್ಚಿನದಾಗಿ ಶ್ರೀ ಗಂಧವನ್ನೇ ಟಾರ್ಗೆಟ್ ಮಾಡಿರೋ ಕಳ್ಳರು, ಹೊಂಚು ಹಾಕಿ ಯಾರ ಗಮನಕ್ಕೆ ಬಾರದ ಹಾಗೆ ಶ್ರೀಗಂಧದ ಮರಗಳನ್ನು ಕಡಿದು ಕಳ್ಳ ಸಾಗಾಣೆ ಮಾಡುತ್ತಿದ್ದಾರೆ‌. ಶ್ರೀಗಂಧ ಮರ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಡಬಲ್ ಬ್ಯಾರಲ್ ಬಂದೂಕುಗಳಿಗೆ ಕೆಲಸ ಕೊಟ್ಟಿದ್ದಾರೆ.


ಹೌದು, ಕಳೆದ ತಿಂಗಳು ಕುಣಿಗಲ್ ನ ಸಾಮಾಜಿಕ ಅರಣ್ಯ ವ್ಯಾಪ್ತಿಯ ಕಂಪ್ಲಾಪುರದಲ್ಲಿ ಶ್ರೀಗಂಧ ಮರ ಕಡಿಯುವವನ ಎನ್ ಕೌಂಟರ್ ಮಾಡಿದ ಸುದ್ದಿ ಇನ್ನೂ ಮಾಸಿಲ್ಲ. ಈಗ ಮತ್ತೊಂದು ಅಂತಹದ್ದೇ ಪ್ರಕರಣ ನಡೆದಿದ್ದು ಈ ಬಾರಿ ಶ್ರೀಗಂಧ ಕಳ್ಳರನ್ನು ಮಾಲು ಸಮೇತ ಅರಣ್ಯ ಇಲಾಖೆಯ ಗಾರ್ಡ್ ಗಳು ಎಡೆಮುರಿ ಕಟ್ಟಿದ್ದಾರೆ. ಹೌದು. ಇಡೀ ರಾಜ್ಯವನ್ನೇ ತಿರುಗಿ ನೋಡುವಂತೆ ಮಾಡಿದ್ದ ಕುಣಿಗಲ್ ನ ಕಂಪ್ಲಾಪುರ ಅರಣ್ಯ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ಓರ್ವನ ಸಾವು ಪ್ರಕರಣ ಜೀವಂತ ಇರುವಾಗಲೇ ಈಗ ಗುಬ್ಬಿ ತಾಲೂಕಿನಲ್ಲೂ ಶ್ರೀಗಂಧ ಕಳ್ಳರನ್ನು ಬಂಧಿಸಲು ಅರಣ್ಯ ಇಲಾಖೆ ಗಾರ್ಡ್ ಗಳು ಫೈರಿಂಗ್ ನಡೆಸಿದ್ದಾರೆ. ಇದರ ಪರಿಣಾಮ ಓರ್ವ ಗಾಯಗೊಂಡಿದ್ದು ಮತ್ತಿಬ್ಬರು ಶ್ರೀಗಂಧ ಚೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಗುಬ್ಬಿ ತಾಲೂಕಿನ ಹರಗಲದೇವೀ ಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ನಿನ್ನೆ ಭಾನುವಾರ ಶ್ರೀಗಂಧ ಕಳ್ಳತನಕ್ಕೆ ಯತ್ನಿಸುತ್ತಿದ್ದ 10 ರಿಂದ 12 ಜನರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಪ್ರತಿದಾಳಿಗೆ ಮುಂದಾಗಿ ಕಲ್ಲು ಎಸೆದು ತಪ್ಪಿಸಿಕೊಳ್ಳಲು ಯತ್ನಿಸಿದ ಮೂರ್ತಿ ಎಂಬಾತನ ಮೇಲೆ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಎನ್ನುವವರು ಫೈರಿಂಗ್ ಮಾಡಿದ್ದಾರೆ. ಇದರಿಂದ ಮೂರ್ತಿ ಎಂಬ ಚೋರನ ತಲೆಗೆ ಪೆಟ್ಟಾಗಿದೆ. ಉಳಿದಂತೆ ಮತ್ತಿಬ್ಬರು ಕಳ್ಳರನ್ನೂ ಕೂಡ ಯಶಸ್ವಿಯಾಗಿ ಬಂಧಿಸಲಾಗಿದೆ.


ತಮಿಳುನಾಡು ಮೂಲದ ಈ ಶ್ರೀಗಂಧ ಕಳ್ಳರ ತಂಡ ಜಿಲ್ಲೆಯ ವಿವಿಧಡೆ ಇರುವ ಅಮೂಲ್ಯ ಶ್ರೀಗಂಧ ಮರದ ಮೇಲೆ ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಕದ್ದು ಮಾರಾಟ ಮಾಡುತ್ತಿದ್ದು ಇವರನ್ನ ಹಿಡಿಯಲು ತುಮಕೂರು ಅರಣ್ಯ ಇಲಾಖೆಯವರು ಟೊಂಕ ಕಟ್ಟಿ ನಿಂತಿದ್ದಾರೆ. ನಿನ್ನೆ ಭಾನುವಾರ ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿ ಮೂವರನ್ನ ಬಂಧಿಸಿದ್ದು ಉಳಿದವರ ಪತ್ತೆಗೂ ಕೂಡ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಈಗ ಪ್ರಕರಣ ಗುಬ್ಬಿ ಠಾಣೆ ಮೆಟ್ಟಿಲೇರಿದ್ದು ತುಮಕೂರು ಅರಣ್ಯ ಇಲಾಖೆ ಜಂಟಿಯಾಗಿ ತನಿಖೆ ಆರಂಭಿಸಿದ್ದಾರೆ.


ಇದನ್ನು ಓದಿ:  High Court: ಧ್ವಜ ಹಾರಿಸಲು ಕಂಬ ಕೊಂಡೊಯ್ಯುವಾಗ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವು; 10 ಲಕ್ಷ ಪರಿಹಾರ ನೀಡಲು ಹೈಕೋರ್ಟ್ ಆದೇಶ


ಕಳೆದ ಆಗಸ್ಟ್ 21 ರಂದು ಕುಣಿಗಲ್ ನ ಕಂಪ್ಲಾಪುರದಲ್ಲಿಯೂ ಇದೇ ರೀತಿ ಶ್ರೀಗಂಧ ಕಳ್ಳರ ಮೇಲೆ ನಡೆಸಿದ ದಾಳಿಯಲ್ಲಿ ಚೋರರ ಪ್ರತಿದಾಳಿ ಎದುರಿಸುವ ಸಲುವಾಗಿ ಓರ್ವನನ್ನ ಎನ್ ಕೌಂಟರ್ ಮಾಡಲಾಗಿತ್ತು. ಇದೀಗ ಇಂತಹದ್ದೇ ಘಟನೆ ನಡೆದಿದ್ದು ಪೊಲೀಸರು ಕಾಡುಗಳ್ಳರ ನಿಯಂತ್ರಿಸಲು ಬೇಕಂತಲೇ ಗನ್ ಕೈಗೆತ್ತಿಕೊಂಡರಾ ಅಥವಾ ನಿರಂತರವಾಗಿ ಹೆಚ್ಚಾಗುತ್ತಿರುವ ಕಾಡುಗಳ್ಳರನ್ನ ನಿಯಂತ್ರಿಸಲು ವಿಫಲರಾಗ್ತಿದ್ದಾರಾ ಎನ್ನುವುದು ಈಗ ಸಾರ್ವಜನಿಕ ಪ್ರಶ್ನೆಯಾಗಿದೆ..

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು