Kalaburagi Boys Death:ದೀಪಾವಳಿಯಂದು ಹೆತ್ತವರ ಬಾಳಲ್ಲಿ ಕತ್ತಲೆ; ನೀರಲ್ಲಿ ಮುಳುಗಿ ಮೂವರು ಬಾಲಕರ ದುರ್ಮರಣ

ಇಂದು ರಜೆ ಇದ್ದ ಕಾರಣ ಬಡಾವಣೆಯ ಮೂವರು ಬಾಲಕರು ಪಕ್ಕದ ನಿರ್ಮಾಣ ಹಂತದ ಕಟ್ಟಡದ ಪಾಯಕ್ಕೆ ಅಗೆದಿದ್ದ ಗುಂಡಿಗೆ ಇಳಿದಿದ್ದಾರೆ. ಆಳ ತಿಳಿಯದೇ ನೀರಿಗಿಳಿದ ಬಾಲಕರು ಸಾವಿಗೀಡಾಗಿದ್ದಾರೆ.

ಘಟನಾ ಸ್ಥಳ

ಘಟನಾ ಸ್ಥಳ

  • Share this:
    ಕಲಬುರಗಿ: ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಆ ಮನೆಗಳಲ್ಲಿ ದೀಪಾವಳಿ ಹಬ್ಬ (Deepavali Festival) ಸಂಭ್ರಮ ಇರಬೇಕಿತ್ತು. ದೀಪ ಬೆಳಗಿ ಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆ ಆಗಿತ್ತು. ಮಳೆ‌ ನೀರು (Rain Water) ತುಂಬಿದ್ದ ತಗ್ಗು ಗುಂಡಿಯಲ್ಲಿ ಇಳಿದ ಮೂವರು ಪುಟ್ಟ ಬಾಲಕರು (THREE BOYS) ಬಾರದ ಲೋಕಕ್ಕೆ ಹೋಗಿದ್ದಾರೆ.  ಮಕ್ಕಳನ್ನ ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.  ಮನಕಲಕುವ ಘಟನೆಗೆ ಕಲಬುರಗಿ ನಗರದ ಮಹಾಲಕ್ಷ್ಮಿ ಲೇಔಟ್ (Mahalakshmi Layout)​​ ಸಾಕ್ಷಿಯಾಗಿದೆ.  ಮಹಾಲಕ್ಷ್ಮಿ ಲೇಔಟ್‌ನಲ್ಲಿಂದು ದೀಪಾವಳಿ ಹಬ್ಬದ ಸಡಗರ ಸಂಭ್ರಮ ಬಿಟ್ಟು ಸ್ಮಶಾನಮೌನ ಆವರಿಸಿದೆ. 

    ಮೂವರು ಬಾಲಕರ ದುರಂತ ಅಂತ್ಯ

    ಲೇಔಟ್‌ನಲ್ಲಿ ಮಹಾಜನ್ ಎಂಬುವರು ಮನೆ ಕಟ್ಟಲು ಅಂತಾ ಕಳೆದೆರಡು ದಿನಗಳ ಹಿಂದೆ ಹಳ್ಳ ತೋಡಿದ್ದರು. ಆದರೆ ಕಳೆದ ರಾತ್ರಿ ಸುರಿದ ಧಾರಕಾರ ಮಳೆಯಿಂದ ಇಡೀ ನಿರ್ಮಾಣ ಹಂತದ ಕಟ್ಟಡದ ತಗ್ಗುಗುಂಡಿ ತುಂಬಿ ಹೋಗಿತ್ತು. ಇಂದು ಬೆಳಗ್ಗೆ ಮೂವರು ಬಾಲಕರಾದ 10 ವರ್ಷದ ಪ್ರಶಾಂತ, 12 ವರ್ಷದ ದರ್ಶನ್ ಮತ್ತು 9 ವರ್ಷದ ವಿಘ್ನೇಶ್ ಆಟವಾಡಲು ನೀರಿಗಿಳಿದಿದ್ದಾರೆ.  ಇಂದು ಬೆಳಗ್ಗೆ ದರ್ಶನ್ ಅವರ ತಾಯಿ ಮನೆಗೆಲಸಕ್ಕೆ ಅಂತ ಹೋಗಿದ್ರು ಅಲ್ಲಿನ ಮನೆ ಮಾಲೀಕ ದರ್ಶನ್ ಗೆ 50 ರೂಪಾಯಿ ನೀಡಿದ್ದ. ಹಾಗಾಗಿ ತಾಯಿ ಹಣ ತಗೊಂಡು ಹೋಗಿ ಕಟಿಂಗ್ ಮಾಡಿಸ್ಕೊ ಅಂತ ಹೇಳಿದ್ದಾರೆ.

    ಸೈಟ್ ಮಾಲೀಕನ ನಿರ್ಲಕ್ಷ್ಯ? 

    ಅಲ್ಲಿಂದ ಸೀದಾ ಹೇರ್  ಕಟ್ಟಿಂಗ್ ಶಾಪ್ ಗೆ ಹೋಗಿದ್ರೆ ಪಾಪ ಜೀವ ಉಳಿತಿತ್ತು ಆದ್ರೆ ವಿಧಿ ಆಟ ಯಾರ ಬಲ್ಲವರು ಹೇಳಿ ಸಾವು ಆತನನ್ನ ಹೊಂಡಕ್ಕೆ ಕರ್ಕೊಂಡು ಹೋಗಿದೆ. ಮೂರು ಜನ ಸ್ನೇಹಿತರು ನೀರಿನ ಆಳ ಅರಿಯದೆ ಹೊಂಡಕ್ಕೆ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ. ಇನ್ನು ಮನೆ ಮಾಲೀಕ ಅಷ್ಟೊಂದು ಆಳ ಅಗೆದು ಅದಕ್ಕೆ ಸೇಷ್ಟ್ ಪ್ರೀಕಾಶನ್ ತಗೆದುಕೊಂಡಿದ್ರೆ ಈ ದುರಂತ ಆಗ್ತಾ ಇಲ್ಲಿಲ್ಲ. ಸೈಟ್ ಮಾಲೀಕನ ನಿರ್ಲಕ್ಷ್ಯ ಕ್ಕೆ ತಮ್ಮ ಮಕ್ಕಳು ಬಲಿ ಆಗಿದ್ದಾರೆ ಅಂತ ಪೋಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಹೆತ್ತವರು ಇಲ್ಲದ ಹುಡುಗನ ದುರ್ಮರಣ 

    ಮೃತಪಟ್ಟ ಮೂವರು ಬಾಲಕರ ಪೈಕಿ ಪ್ರಶಾಂತ ತಂದೆ ತಾಯಿಯಿಲ್ಲದ ಬಾಲಕ.‌ ಅಕ್ಕನ ಮನೆಯಲ್ಲಿ ಇದ್ದ ಬಾಲಕ ಶಾಲೆಗೆ ಹೋಗುತ್ತಿದ್ದ‌. ಆದರೆ ಇಂದು ರಜೆ ಇದ್ದ ಕಾರಣ ಬಡಾವಣೆಯ ಮೂವರು ಬಾಲಕರು ಪಕ್ಕದ ನಿರ್ಮಾಣ ಹಂತದ ಮನೆಯ ಬುನಾದಿಗೆ ಇಳಿದಿದ್ದಾರೆ.. ನೀರಿನ ಆಳ ಲೆಕ್ಕಿಸದೇ ನೀರಿಗಿಳಿದ ಬಾಲಕರು ಬಾರದ‌ ಲೋಕಕ್ಕೆ ಹೋಗಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    ಇದನ್ನೂ ಓದಿ: Kalaburagi Crime News: ತಂಗಿಯನ್ನು ಓಡಿಸಿಕೊಂಡು ಹೋಗಿದವನ ಹೆಣ ಕೆಡವಿದ್ದ ಅಣ್ಣ; ಆರೋಪಿಗಳು ಅಂದರ್

    ಮೃತ ಮೂವರು ಬಾಲಕರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಕೊಂಡೊಯಲಾಗಿದೆ.. ದೊಡ್ಡ ಪ್ರಮಾಣದ ಮನೆ ಕಟ್ಟುವುದಕ್ಕೆ ಆಳವಾದ ಬುನಾದಿ ತೋಡಿ, ಅದರ ಸುತ್ತ ಮಕ್ಕಳು ಹೋಗಬಾರದೆಂದು ಬ್ಯಾರೀಕೆಡ್ ಹಾಕದೇ ಇರೋದ್ರಿಂದ ಈ ದುರಂತ ಸಂಭವಿಸಿದೆ ಅಂತಾ ಪೋಷಕರು ಮನೆ ಮಾಲೀಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಕೂಡಲೇ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ. ಅದೆನೇ ಇರಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿದ್ದ ಕುಟುಂಬಗಳಲ್ಲಿ‌ ಇದೀಗ ಕಾರ್ಮೋಡ ಆವರಿಸಿದ್ದು, ಮಕ್ಕಳನ್ನ ಕಳೆದುಕೊಂಡು ಪೋಷಕರು ದಿಗ್ಭ್ರಾಂತರಾಗಿದ್ದಾರೆ. ಇನ್ನೂ ಪ್ರಕರಣ ದಾಖಲಿಸಿಕೊಂಡಿರುವ ನ್ಯೂ ರಾಘವೇಂದ್ರ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    (ವರದಿ: ಅರುಣ್​ ಕುಮಾರ್​) 
    Published by:Kavya V
    First published: