HOME » NEWS » District » THREE ARRESTED FOR ATTEMPTING TO KIDNAP AT MANGALORE KKM SNVS

Kidnap Case - ಮಕ್ಕಳ ಕಿಡ್ನಾಪ್​ಗೆ ಯತ್ನಿಸಿದ್ರು; ಸಿಕ್ಕಿಬಿದ್ದಾಗ ಪ್ರಾಂಕ್ ವಿಡಿಯೋ ಅಂದ್ರು

ದೇವಸ್ಥಾನದಿಂದ ಹೊರಬಂದ ಬಾಲಕರನ್ನು ಅಪಹರಿಸಲು ವಿಫಲಯತ್ನ ನಡೆಸಿದ ಮೂವರು ವ್ಯಕ್ತಿಗಳನ್ನ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ. ತಾವು ಪ್ರಾಂಕ್ ವಿಡಿಯೋ ಮಾಡಲು ಕಿಡ್ನಾಪ್ ಡ್ರಾಮಾ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ.

news18-kannada
Updated:January 19, 2021, 11:51 AM IST
Kidnap Case - ಮಕ್ಕಳ ಕಿಡ್ನಾಪ್​ಗೆ ಯತ್ನಿಸಿದ್ರು; ಸಿಕ್ಕಿಬಿದ್ದಾಗ ಪ್ರಾಂಕ್ ವಿಡಿಯೋ ಅಂದ್ರು
ಮಂಗಳೂರಿನಲ್ಲಿ ಅಪಹರಣಕ್ಕೆ ಯತ್ನಿಸಿ ಬಂಧಿತರಾದ ಆರೋಪಿಗಳು
  • Share this:
ಮಂಗಳೂರು: ಆ ಬಾಲಕರ ತಂಡ ತಮ್ಮ ಗೆಳೆಯನ ಹುಟ್ಟುಹಬ್ಬದ ಕಾರಣ ದೇವಸ್ಥಾನಕ್ಕೆ ಹೋಗಿ ಇನ್ನೇನು ದೇವರ ದರುಶನ ಪಡೆದು ಹೊರಗೆ ಬರುವಷ್ಟರಲ್ಲಿ ಕಿಡ್ನಾಪ್ ಆಗುವುದರಿಂದ ಸ್ವಲ್ಪದರಲ್ಲಿ ಬಚಾವಾಗಿದ್ದಾರೆ. ಮಂಗಳೂರಿನಲ್ಲಿ ಈ ಘಟನೆ ಆಗಿದ್ದು, ಕಿಡ್ನಾಪ್ ಮಾಡಲು ಯತ್ನಿಸಿದ ಅಪಹರಣಕಾರರು ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಮಂಗಳೂರು ನಗರದ ಪದವಿನಂಗಡಿ ಬಳಿ ಇರೋ ಮಹಾಲಸ ದೇವಸ್ಥಾನದ ಮುಂಭಾಗದಲ್ಲಿ ಈ ಕಿಡ್ನಾಪ್ ಯತ್ನ ನಡೆದಿದೆ. ಜ.13 ರಂದು ಪದವಿನಂಗಡಿಯ ನಾಲ್ವರು ಬಾಲಕರ ಟೀಂ ಈ ದೇವಸ್ಥಾನಕ್ಕೆ ಬಂದಿತ್ತು. ಗೆಳೆಯನ ಹುಟ್ಟುಹಬ್ಬದ ಕಾರಣ ದೇವರ ದರುಶನ ಮುಗಿಸಿ ಹೊರಗೆ ಬಂದು ಇನ್ನೇನು ಮನೆಗೆ ಹೊರಡಬೇಕು ಅನ್ನುವಷ್ಟರಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂವರು ವ್ಯಕ್ತಿಗಳು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ. ವಾಹನದಿಂದ ಇಳಿದ ಓರ್ವ ವ್ಯಕ್ತಿ ಬಾಲಕನೊಬ್ಬನಿಗೆ ಗೋಣಿಚೀಲ ಹಾಕಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಆತ ತಪ್ಪಿಸಿಕೊಂಡಿದ್ದರಿಂದ ಇನ್ನೊಬ್ಬ ಬಾಲಕನ ಮುಖಕ್ಕೆ ಗೋಣಿಚೀಲ ಹಾಕುವ ಪ್ರಯತ್ನ ಮಾಡಿದ್ದಾನೆ. ಆಗ ಬಾಲಕರ ಟೀಂನಲ್ಲಿದ್ದ ಶಿವಂ ಕಾಮತ್ ಎಂಬ ಹುಡುಗ ಕಿಡ್ನಾಪರ್ಸ್ ಮೇಲೆ ಕಲ್ಲು ಎಸೆದಿದ್ದಾನೆ. ಇದಾದ ಬಳಿಕ ಕಿಡ್ನಾಪರ್ಸ್ ತಕ್ಷಣ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಈ ವಿಚಾರವನ್ನು ಮಕ್ಕಳು ಮನೆಯಲ್ಲಿ ಬಂದು ಹೇಳಿದ್ದಾರೆ. ಆದ್ರೆ ಈ ಬಗ್ಗೆ ಗೊಂದಲಕ್ಕೆ ಒಳಗಾದ ಪೋಷಕರು ದೇವಸ್ಥಾನದ ಹೊರಭಾಗದಲ್ಲಿ ಅಳವಡಿಸಿದ್ದ ಸಿ.ಸಿ ಕ್ಯಾಮರಾ ಚೆಕ್ ಮಾಡಿಸಿದ್ದಾರೆ. ಆಗ ಘಟನೆ ನಡೆದಿರೋದು ನಿಜ ಎಂದು ಗೊತ್ತಾಗಿದೆ. ತಕ್ಷಣ ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿ.ಸಿ ಟಿ.ವಿ ಫೂಟೇಜ್ ಎಲ್ಲಾ ಗಮನಿಸಿ ತನಿಖೆ ನಡೆಸಿದ ಪೊಲೀಸರು ಕಿಡ್ನಾಪ್ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ಕಾವೂರು ಹಾಗೂ ಬೋಂದೆಲ್ ನಿವಾಸಿಗಳಾಗಿರುವ ರಕ್ಷಕ್ ಶೆಟ್ಟಿ, ಅಲೆಸ್ಟರ್, ರಾಹುಲ್ ಸಿನ್ಹ ಬಂಧಿತ ಆರೋಪಿಗಳಾಗಿದ್ದು, ವಿಚಾರಣೆ ವೇಳೆ ಇವರು ಪ್ರಾಂಕ್ ವೀಡಿಯೋಸ್‌ಗಾಗಿ (ತಮಾಷೆಗಾಗಿ) ಕಿಡ್ನಾಪ್ ಮಾಡಿದ್ದು ಅಂತಾ ಹೇಳಿದ್ದಾರೆ. ಆದ್ರೆ ಈ ಬಗ್ಗೆ ಆಧಾರ ದೊರೆಯದ ಕಾರಣ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಕಾರವಾರ ಕದಂಬ ನೌಕಾ ನೆಲೆಗೆ ಭೇಟಿ ನೀಡಲಿದೆ ಕೇಂದ್ರ ಸಂಸದರ ತಂಡ; ಕರಾವಳಿಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್!

ಈ ಆರೋಪಿಗಳು ಈ ಹಿಂದೆ ಡ್ರಗ್ಸ್ ಕೇಸ್‌ನಲ್ಲಿ ಭಾಗಿಯಾಗಿದ್ದರು. ಹೀಗಾಗಿ ಆರೋಪಿಗಳ ನಿಜವಾದ ಉದ್ದೇಶ ಏನಾಗಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಈ ಘಟನೆಯಿಂದ ಪೋಷಕರು ಬೆಚ್ಚಿ ಬಿದ್ದಿದ್ದು, ಕಿಡ್ನಾಪರ್ಸ್ ಕೈಯಿಂದ ಬಚವಾದ ಮಕ್ಕಳು ನಿಟ್ಟುಸಿರು ಬಿಟ್ಟಿದ್ದಾರೆ.

ಆರೋಪಿ ರಕ್ಷಕ್ ಶೆಟ್ಟಿ ವಿರುದ್ಧ ಕಾವೂರು ಠಾಣೆಯಲ್ಲಿ 2018 ರಲ್ಲಿ ಹಲ್ಲೆ,ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಅಲಿಸ್ಟರ್ ತಾವ್ರೊ ಹಾಗೂ ರಾಹುಲ್ ಸಿನ್ಹ ವಿರುದ್ದ ಡ್ರಗ್ಸ್ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ NDPS ಕಾಯಿದೆಯಡಿ ಕಾವೂರು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು; ಹಲ್ಲೆಗೆ ಯತ್ನಿಸಿದ ರೌಡಿ ಕಾಲಿಗೆ ಪೊಲೀಸರಿಂದ ಗುಂಡೇಟುಪ್ರಾಂಕ್ ಮಾಡಿ ಅದನ್ನು ಯೂಟ್ಯೂಬ್​ಗೆ ಅಪ್​ಲೋಡ್ ಮಾಡುವ ಉದ್ದೇಶ ಹೊಂದಿದ್ದೆವು ಎಂದು ಬಂಧಿತರು ವಿಚಾರಣೆ ವೇಳೆ ಹೇಳಿದ್ದಾರೆ. ಆದರೆ ಪೊಲೀಸರು ಮಾತ್ರ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಹೇಳಿಕೆಯನ್ನು ನಂಬಲಾಗದು. ಒಂದು ಸ್ಕೂಟರ್​ನಲ್ಲಿ ಮೂವರು ಬಂದು ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಅಪ್ರಾಪ್ತ ಮಕ್ಕಳನ್ನು ಗೋಣಿಚೀಲದಲ್ಲಿ ತುಂಬಿಸಿ ಎತ್ತಿಕೊಂಡು ಹೋಗಲು ಯತ್ನಿಸಿರೋದು ತಪ್ಪು. ಹಾಗಾಗಿ ಇವರೆಲ್ಲರ ವಿರುದ್ದ ಅಪಹರಣ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತಾ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.

ವರದಿ: ಕಿಶನ್ ಕುಮಾರ್
Published by: Vijayasarthy SN
First published: January 19, 2021, 11:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories