HOME » NEWS » District » THOUSANDS OF HOME GUARD STAFF LOST THEIR JOBS DUE TO CORONA EFFECT LG

ಕೊರೋನಾ ಎಫೆಕ್ಟ್​​: ಕೆಲಸ ಕಳೆದುಕೊಂಡ ಗೃಹ ರಕ್ಷಕ ಸಿಬ್ಬಂದಿ

ರಾಜ್ಯದಲ್ಲಿ ಲಾಕ್‌ ಡೌನ್‌ನ್ನು ಸಡಿಲಗೊಳಿಸಲಾಗಿದ್ದರೂ ಬಿಆರ್‌ಟಿಎಸ್ ಬಸ್‌ಗಳು ಹವಾನಿಯಂತ್ರಿತ ಆಗಿರುವುದರಿಂದ ಬಸ್ ಸಂಚಾರ ಪ್ರಾರಂಭಿಸಿಲ್ಲ. ಇದರಿಂದ ಬಿಆರ್‌ಟಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದ 70 ಹೋಂ ಗಾರ್ಡ್ ಗಳಿಗೆ ಲಾಕ್‌ಡೌನ್ ಸಡಿಲಗೊಂಡರೂ ಬಿಆರ್‌ಟಿಎಸ್ ಬಸ್ ಸಂಚಾರ ಇಲ್ಲದೇ ಕೆಲಸ ಇಲ್ಲವಾಗಿದೆ.

news18-kannada
Updated:June 5, 2020, 3:49 PM IST
ಕೊರೋನಾ ಎಫೆಕ್ಟ್​​: ಕೆಲಸ ಕಳೆದುಕೊಂಡ ಗೃಹ ರಕ್ಷಕ ಸಿಬ್ಬಂದಿ
ಸಾಂದರ್ಭಿಕ ಚಿತ್ರ
  • Share this:
ಧಾರವಾಡ(ಜೂ.05): ಪೊಲೀಸರಂತೆ ಹಗಲಿರುಳು ಕೆಲಸ ಮಾಡುತ್ತಿರುವ ಹೋಂ ಗಾರ್ಡ್  (ಗೃಹ ರಕ್ಷಕ ದಳ ) ಸಿಬ್ಬಂದಿಗೆ ಕೊರೋನಾ ಸಂಕಷ್ಟ ತಂದಿದೆ. ಸರ್ಕಾರದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ದಿನದ ವೇತನ ಪಡೆದು ಪೊಲೀಸರಂತೆ ಕೆಲಸ ಮಾಡುತ್ತಿದ್ದ ಗೃಹರಕ್ಷಕ ದಳ ಸಿಬ್ಬಂದಿಗಳ ಉದ್ಯೋಗವನ್ನೇ ಇದೀಗ ಕೊರೋನಾ ಕಸಿದುಕೊಳ್ಳಲು ಮುಂದಾಗಿದೆ. ನೂರಾರು ಜನ ಸಿಬ್ಬಂದಿಗಳು ಈಗ ಬದುಕು ಸಾಗಿಸಲು ಪರದಾಡುವ ಪರಿಸ್ಥಿತಿ ಬಂದಿದೆ.

ಧಾರವಾಡ ಜಿಲ್ಲೆಯಲ್ಲಿ 640 ಹೋಂ ಗಾರ್ಡ್ ಗಳು ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಪ್ರತಿದಿನ 380 ರೂಪಾಯಿ ದಿನಕೂಲಿ ಪಡೆದು ಕೆಲಸ ಮಾಡುತ್ತಿದ್ದಾರೆ. ಸರಕಾರದ ವಿವಿಧ ಇಲಾಖೆಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಹೋಂ ಗಾರ್ಡ್ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ.  ಇದರಲ್ಲಿ ಬಿಆರ್‌ಟಿಎಸ್, ಪ್ರವಾಸೋದ್ಯಮ ಇಲಾಖೆ ಮತ್ತು ಇತರ ಸರಕಾರಿ ಕಚೇರಿ, ಸಂಸ್ಥೆಗಳು ಲಾಕ್‌ಡೌನ್‌ನಿಂದ ಬಂದ್ ಆದವು. ಇದರಿಂದ ಗೃಹರಕ್ಷಕ ದಳದ ನೂರಾರು ಸಿಬ್ಬಂದಿ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ.

ಹುಬ್ಬಳ್ಳಿ- ಧಾರವಾಡ ಅವಳಿನಗರದ ಮಧ್ಯದ ಬಿಆರ್‌ಟಿಎಸ್ ರಸ್ತೆಯಲ್ಲಿ ಹಾಗೂ ಕಚೇರಿಯಲ್ಲಿ 70 ಕ್ಕೂ ಹೆಚ್ಚು ಹೋಂ ಗಾರ್ಡ್​​ಗಳು, ಪ್ರವಾಸೋದ್ಯಮ ಇಲಾಖೆಯಲ್ಲಿ 24 ಜನರು ಹಾಗೂ ಸರಕಾರದ ಇತರ ಕೆಲ ಇಲಾಖೆಗಳ ಕಚೇರಿ, ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ 100 ಕ್ಕೂ ಹೋಂ ಗಾರ್ಡಗಳಿಗೆ ಉದ್ಯೋಗ ಇಲ್ಲವಾಗಿದೆ. ಹೀಗಾಗಿ ದುಡಿಯದೇ ಸಂಬಳ ಇಲ್ಲವಾಗಿದೆ. ದುಡಿಯಬೇಕೆಂದರೆ ಬೇರೆ ಉದ್ಯೋಗವಿಲ್ಲ. ಇದರಿಂದ ತಿಂಗಳಿಗೆ ಬರುತ್ತಿದ್ದ ಅಲ್ಪ ಕೂಲಿಯು ಸಿಗದೆ ಕುಟುಂಬ ನಿರ್ವಹಣೆ ಸಹ ಕಷ್ಟವಾಗುತ್ತಿದೆ.

ಆನ್ ಲೈನ್ ಕ್ಲಾಸ್ ನಡೆಸಬೇಕೋ? ಬೇಡವೋ? ನಾಳೆ ಸರ್ಕಾರದ ಆದೇಶ

ರಾಜ್ಯದಲ್ಲಿ ಲಾಕ್‌ ಡೌನ್‌ನ್ನು ಸಡಿಲಗೊಳಿಸಲಾಗಿದ್ದರೂ ಬಿಆರ್‌ಟಿಎಸ್ ಬಸ್‌ಗಳು ಹವಾನಿಯಂತ್ರಿತ ಆಗಿರುವುದರಿಂದ ಬಸ್ ಸಂಚಾರ ಪ್ರಾರಂಭಿಸಿಲ್ಲ. ಇದರಿಂದ ಬಿಆರ್‌ಟಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದ 70 ಹೋಂ ಗಾರ್ಡ್ ಗಳಿಗೆ ಲಾಕ್‌ಡೌನ್ ಸಡಿಲಗೊಂಡರೂ ಬಿಆರ್‌ಟಿಎಸ್ ಬಸ್ ಸಂಚಾರ ಇಲ್ಲದೇ ಕೆಲಸ ಇಲ್ಲವಾಗಿದೆ.

ಲಾಕ್ ಡೌನ್ ಅವಧಿಯಲ್ಲಿಯೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಎಸ್‌.ಪಿ ಕಚೇರಿಯ ವಾಪ್ತಿಯಲ್ಲಿ 41 ಹಾಗೂ ಹು- ಧಾ ಪೊಲೀಸ್ ಆಯುಕ್ತರ ಕಚೇರಿಯ ವ್ಯಾಪ್ತಿಯಲ್ಲಿ 231  ಹೋಂ ಗಾರ್ಡ್ ಗಳಿಗೆ ಕೆಲಸ ಸಿಕ್ಕಿದೆ. ಆದರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಗಾರ್ಡ್ ಗಳಿಗೆ ಕೆಲಸ ಇಲ್ಲವಾಗಿದೆ ಎಂದು ಹೆಸರು ಹೆಳಲು ಇಚ್ಚಿಸದ ಸಿಬ್ಬಂದಿಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Youtube Video
 
First published: June 5, 2020, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories