• Home
  • »
  • News
  • »
  • district
  • »
  • Nipah Virus- ಚಿಕ್ಕಮಗಳೂರಿನ ಈ ರಸ್ತೆಯಲ್ಲಿ ಸಾವಿರಾರು ಬಾವುಲಿಗಳು; ನಿಫಾ ವೈರಸ್ ಭೀತಿಯಲ್ಲಿ ಜನರು

Nipah Virus- ಚಿಕ್ಕಮಗಳೂರಿನ ಈ ರಸ್ತೆಯಲ್ಲಿ ಸಾವಿರಾರು ಬಾವುಲಿಗಳು; ನಿಫಾ ವೈರಸ್ ಭೀತಿಯಲ್ಲಿ ಜನರು

ಚಿಕ್ಕಮಗಳೂರು ಡಿಸಿ ಕಚೇರಿ ಬಳಿ ಮರಳಗಳಲ್ಲಿ ಜೋತು ಬಿದ್ದಿರುವ ಬಾವಲಿಗಳು

ಚಿಕ್ಕಮಗಳೂರು ಡಿಸಿ ಕಚೇರಿ ಬಳಿ ಮರಳಗಳಲ್ಲಿ ಜೋತು ಬಿದ್ದಿರುವ ಬಾವಲಿಗಳು

Bats hanging on trees in Chikkamagaluru- ಕೇರಳದಲ್ಲಿ ಹರಡುತ್ತಿರುವ ನಿಪಾ ವೈರಸ್​ಗೆ ಬಾವುಲಿಗಳೇ ಮೂಲ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ನಗರಸಭೆ ರಸ್ತೆಯಲ್ಲಿ ಹಲವು ಮರಗಳ ಮೇಲೆ ಲೆಕ್ಕವಿಲ್ಲದಷ್ಟು ಬಾವುಲಿಗಳು ನೆಲಸಿವೆ. ನಗರದ ಜನರು ನಿಪಾ ಭಯದಿಂದ ಈ ರಸ್ತೆ ಕಡೆಯೇ ಬರಲು ಹೆದರುತ್ತಿದ್ದಾರೆ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು: ಜಿಲ್ಲಾಧಿಕಾರಿಗಳ (Chikkamagaluru DC Office) ನಿವಾಸ ಹಾಗೂ ನಗರಸಭೆ ಆವರಣದ ಮರಗಳಲ್ಲಿ ತಲೆಕೆಳಗಾಗಿ ಜೋತು ಬಿದ್ದಿರೋ ಬಾವುಲಿಗಳನ್ನ (Bats) ಕಂಡು ಕಾಫಿನಾಡಿನ ಜನ ವಿಚಲಿತರಾಗಿದ್ದಾರೆ. ನಗರಸಭೆಯ ರಸ್ತೆಯಲ್ಲಿ ಚಿಕ್ಕಮಗಳೂರಿನ ಜನ ಆತಂಕದಲ್ಲೇ ಓಡಾಡ್ತಿದ್ದಾರೆ. ಯಾಕಂದ್ರೆ, ನಿಫಾ ವೈರಸ್​ಗೆ (Nipah Virus) ಈ ಬಾವುಲಿಯೇ ಮೂಲ ಎಂಬ ಕಾರಣಕ್ಕೆ. ನಗರದ ಕೇಂದ್ರ ಬಿಂದುವಾಗಿರೋ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಎಸ್​ಪಿ ಆಫೀಸ್ ಮತ್ತು ಮನೆ, ಡಿಸಿ ಮನೆ, ನಗರಸಭೆ, ಕೋರ್ಟ್, ಆಸ್ಪತ್ರೆ, ಶಾಲೆ ಸೇರಿದಂತೆ ಇತರೇ ಸರ್ಕಾರಿ ಕಚೇರಿಗಳೂ ಇವೆ. ನಗರಸಭೆ ಆವರಣದಲ್ಲಿರೋ ಹತ್ತಾರು ವರ್ಷಗಳ ಮರಗಳಲ್ಲಿ ಲೆಕ್ಕವಿಲ್ಲದಷ್ಟು ಬಾವುಲಿಗಳು ನೆಲಸಿವೆ. ಒಂದಲ್ಲ, ಎರಡರಲ್ಲ, ಸಾವಿರಾರು ಬಾವುಲಿಗಳು ಈ ಮರಗಳಲ್ಲಿ ಜೋತು ಬಿದ್ದು ಬದುಕುತ್ತಿವೆ. ಈಗ ನಿಫಾ ಹೆಸರು ಕೇಳುತ್ತಿದ್ದಂತೆ ಆತಂಕಕ್ಕೀಡಾಗಿರುವ ಅಧಿಕಾರಿಗಳು, ಸಾರ್ವಜನಿಕರು ಬಾವುಲಿಗಳ ಸ್ಥಳಾಂತರಕ್ಕೆ ಒತ್ತಾಯಿಸುತ್ತಿದ್ದಾರೆ.


ಮುಗಿಲೆತ್ತರದ ಮರಗಳ ತುದಿಯಲ್ಲಿರೋ ಬಾವುಲಿಗಳನ್ನ ಸಾಗಿಸೋದು ಅಷ್ಟು ಸುಲಭವೂ ಅಲ್ಲ. ಹಾಗಾಂತ ಸಾಯಿಸೋದಕ್ಕೂ ಆಗೋದಿಲ್ಲ. ಆದ್ರೆ, ನಿಫಾ ವೈರಸ್ ಕರ್ನಾಟಕಕ್ಕೆ ಅಷ್ಟಾಗಿ ತಾಗಿಲ್ಲ. ನೇರವಾಗಿ ಕೇರಳದಿಂದ ನಮ್ಮಲ್ಲಿಗೆ ಬರುವವರು ಕಡಿಮೆ. ಸದ್ಯಕ್ಕೆ ನಮಗೆ ಆತಂಕ ಇಲ್ಲ. ಆದರೂ ನಿಫಾ ಬಗ್ಗೆ ನಿಗಾ ವಹಿಸುತ್ತೇವೆ, ಸೂಕ್ತ ಕ್ರಮಕೈಗೊಳ್ಳಲಿದ್ದೇವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.


ಸಾಲದಕ್ಕೆ ನಗರಸಭೆ ಆವರಣದಲ್ಲಿ ಬೃಹತ್ತಾದ ಪಾರ್ಕ್ ಕೂಡ ಇದೆ. ದಿನಂಪ್ರತಿ ಸಾವಿರಾರು ಜನ ಓಡಾಡ್ತಾರೆ. ಮಕ್ಕಳು ಆಟವಾಡ್ತಾರೆ. ಹಿರಿಯರು ವಿಶ್ರಾಂತಿ ಪಡೆಯುತ್ತಾರೆ. ಪಾರ್ಕ್ ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆಯೂ ಇದೆ. ಸರ್ಕಾರ ನೋಡೊಣ ಮಾಡೋಣ ಅನ್ನೋದಕ್ಕಿಂತ ಮುಂಜಾಗೃತ ಕ್ರಮ ಕೈಗೊಳ್ಳೋದು ಸೂಕ್ತ ಅನ್ಸುತ್ತೆ. ಹಾಗಾಗಿ, ಸ್ಥಳಿಯರು ಕೂಡ ಸರ್ಕಾರ ಬಾವುಲಿಗಳನ್ನ ಸ್ಥಳಾಂತರಿಸಬೇಕು ಅಥವ ಅವುಗಳ ಮಲ-ಮೂತ್ರ ಕೆಳಗೆ ಬೀಳದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ, ಜಿಲ್ಲೆಗೆ ಕೇರಳ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ. ಹಾಗಾಗಿ, ಸರ್ಕಾರ ಜಿಲ್ಲೆಗೆ ಬರುವ ಕೇರಳ ಪ್ರವಾಸಿಗರನ್ನ ಸಂಪೂರ್ಣ ನಿಷೇಧ ಮಾಡುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿರುವ ಇಲ್ಲಿನ ಸ್ಥಳಿಯರು, ಕೇರಳದಿಂದ ಪ್ರವಾಸಿಗರು ಇಲ್ಲಿಗೆ ಬರುವುದನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಇನ್ಫೋಸಿಸ್ ಕಂಪನಿಯಲ್ಲಿ ಲಕ್ಷಗಟ್ಟಲೇ ಸಂಬಳದ ಉದ್ಯೋಗ ಬಿಟ್ಟು ಯಶಸ್ವಿ ಕೃಷಿಕಳಾದ ಮಹಿಳೆ


ಒಟ್ಟಾರೆ, ಕಾಫಿನಾಡಲ್ಲಿ ಈ ವೈರಸ್ ಪತ್ತೆಯಂತೂ ಆಗಿಲ್ಲ. ಆದ್ರೆ, ಜೀವಭಯವನ್ನಂತೂ ತರಿಸಿದೆ. ಮರಗಳಲ್ಲಿ ಜೋತುಬಿದ್ದಿರೋ ಬಾವುಲಿಗಳನ್ನ ಕಂಡು ವೈರಸ್ ನಮಗೂ ಬಂದ್ರೆ ಎಂದು ಜನ ಆತಂಕದಲ್ಲೇ ಬದುಕ್ತಿದ್ದಾರೆ. ಅವರಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಇಲ್ಲಿಗೆ ಕೆಲಸ-ಕಾರ್ಯಗಳಿಗೆ ಬರೋ ಜನರೇ ಹೆಚ್ಚು. ಆದ್ದರಿಂದ ಕೂಡಲೇ ಜಿಲ್ಲಾಡಳಿತ ನಾಳೆ-ನಾಡಿದ್ದು ಅಂತ ದಿನ ದೂಡೋ ಬದಲು, ಕೂಡಲೇ ಅವುಗಳನ್ನ ಸ್ಥಳಾಂತರಗೊಳಿಸಿ ನಮ್ಮ ಆತಂಕವನ್ನ ದೂರ ಮಾಡಬೇಕೆಂದು ಜನಸಾಮಾನ್ಯರು ಜಿಲ್ಲಾಡಳಿತಕ್ಕೆ ಮನವಿ ಮಾಡ್ಕೊಂಡಿದ್ದಾರೆ.


ನಿಪಾ ವೈರಸ್ ಕಳೆದ 3 ವರ್ಷದಲ್ಲಿ ಕೇರಳದಲ್ಲಿ ಮೂರನೇ ಬಾರಿ ದಾಳಿ ಮಾಡಿದೆ. ಮೊದಲನೆ ಸಲ ಕೋಳಿಕೋಡ್​ನಲ್ಲಿ ಕಾಣಿಸಿಕೊಂಡಾಗ 18 ಮಂದಿ ಸಾವನ್ನಪ್ಪಿದ್ದರು. ವಿವಿಧ ಕ್ರಮಗಳಿಂದಾಗಿ ವೈರಸ್ ಹರಡುವುದನ್ನು ಹತೋಟಿಗೆ ತರಲಾಗಿತ್ತು. ಕಳೆದ ವರ್ಷ ಎರಡನೇ ಬಾರಿ ಬಂದಾಗ ಒಬ್ಬರಿಗೆ ಮಾತ್ರ ಸೋಂಕು ಸೀಮಿತವಾಗಿತ್ತು. ಈಗ ಕೇರಳದಲ್ಲಿ ಹತ್ತಾರು ಮಂದಿಗೆ ಸೋಂಕು ತಗುಲಿದೆ. ಒಬ್ಬ ಬಾಲಕ ಸಾವನ್ನಪ್ಪಿದ್ದಾರೆ. ಬಾವುಲಿ ಕಚ್ಚಿದ ಹಣ್ಣೊಂದನ್ನು ಬಾಲಕ ತಿಂದ ಪರಿಣಾಮ ಸೋಂಕು ಹರಡಿರಬಹುದು ಎಂಬ ಬಲವಾದ ಶಂಕೆ ಇದೆ.


ವರದಿ: ವೀರೇಶ್ ಹೆಚ್ ಜಿ

Published by:Vijayasarthy SN
First published: