HOME » NEWS » District » THOSE WHO OPPOSE COVAXIN NOW THEY KNEW THE TRUTH SAYS UNION MINISTER PRAHLAD JOSHI RHHSN MYD

ಕೋವ್ಯಾಕ್ಸಿನ್ ಬಗ್ಗೆ ವಿರೋಧ ಮಾಡಿದವರಿಗೆಲ್ಲ ಈಗ ಸತ್ಯ ಅರಿವಾಗಿದೆ: ವಿಪಕ್ಷ ನಾಯಕರ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ

ಈ ಮುಂಚೆಯೂ ಹಲವಾರು ಬಾರಿ ಸಭೆ ನಡೆಸಿದ್ದೇವೆ. ಆಸ್ಪತ್ರೆಯವರ ಸಮಸ್ಯೆ ಬಗ್ಗೆಯೂ ಇದೀಗ ಚರ್ಚೆ ಮಾಡಿದ್ದೇವೆ. ಆಸ್ಪತ್ರೆಯವರು ಸರಕಾರದ ನಿರ್ಧಾರಕ್ಕೆ ಸಿದ್ಧರಿದ್ದೇವೆ ಅಂದಿದ್ದಾರೆ. ಸಹಕಾರ ಕೊಡೋದಾಗಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಹೆಲ್ಪ್ ಲೈನ್ ಆರಂಭಿಸಲಾಗಿದೆ. ಜಿಲ್ಲೆಯ ಜನರು ಸಹಾಯವಾಣಿ ಸಂಖ್ಯೆ 08047168111 ನಂಬರ್ ಗೆ ಕರೆ ಮಾಡಬಹುದು ಎಂದು ತಿಳಿಸಿದರು.

news18-kannada
Updated:May 1, 2021, 7:25 AM IST
ಕೋವ್ಯಾಕ್ಸಿನ್ ಬಗ್ಗೆ ವಿರೋಧ ಮಾಡಿದವರಿಗೆಲ್ಲ ಈಗ ಸತ್ಯ ಅರಿವಾಗಿದೆ: ವಿಪಕ್ಷ ನಾಯಕರ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
  • Share this:
ಧಾರವಾಡ: ಆರಂಭದಲ್ಲಿ ಕೋವಿಡ್ ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿದ್ದರು. ಅಡೆ ತಡೆ ಹಾಕಿ ಭಯ ಹುಟ್ಟಿಸದಿದ್ದರೆ ಲಸಿಕೆ ಹಂಚಿಕೆ ಪ್ರಮಾಣ ಇನ್ನೂ ಜಾಸ್ತಿ ಆಗುತ್ತಿತ್ತು. ಕೋವ್ಯಾಕ್ಸಿನ್ ಬಗ್ಗೆ ಯಾರ ಯಾರೋ ಏನೇನೋ ಮಾತನಾಡಿದರು. ತುಂಬಾ ಕೆಟ್ಟದಾಗಿಯೂ ಮಾತನಾಡಿದ್ದರು. ಕೋವ್ಯಾಕ್ಸಿನ್ ಬಗ್ಗೆ ವಿರೋಧ ಮಾಡಿದವರಿಗೆಲ್ಲ ಈಗ ಸತ್ಯದ ಅರಿವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಪಕ್ಷ ನಾಯಕರಿಗೆ ತಿವಿದಿದ್ದಾರೆ.

ಧಾರವಾಡದ ಜಿಲ್ಲಾ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆಗಳ ‌ಮುಖ್ಯಸ್ಥರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು,‌ ಈಗ ಕೋವ್ಯಾಕ್ಸಿನ್ ಸೇಫ್ ಅಂತಾ ಆಗಿದೆ. ಅತಿ ಕೆಟ್ಟದಾದ ಪ್ರತಿಕ್ರಿಯೆಗಳನ್ನು ನಾವು ಎದುರಿಸಬೇಕಾಯಿತು. ಆಗ ನಿರೀಕ್ಷಿತ ಬೆಂಬಲ ಸಿಕ್ಕಿದ್ದರೆ ಲಸಿಕೆ ಹಾಕಿ ಎಲ್ಲ ಮುಗಿಯುತಿತ್ತು. ಆರೋಪ‌ ಮಾಡಿದವರಿಗೆ ಈಗ ಸತ್ಯ ಸಂಗತಿ ಅರಿವಾಗಿದೆ.‌ ಕೋವಿಶಿಲ್ಡ್ ಮಾತ್ರ ವಿದೇಶದಿಂದ ಬರಬೇಕು. ಅದು ಸಹ ಬರುತ್ತೇ ಕೋವ್ಯಾಕ್ಸಿನ್ ಉತ್ಪಾದನೆ ಆಗುತ್ತಿದೆ ಎಂದರು.

ಎರಡು ಕೆಜಿ ಪಡಿತರ ಅಕ್ಕಿ ಬಗ್ಗೆ ಸಚಿವ ಉಮೇಶ ಕತ್ತಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಜೋಶಿ ಅವರು, ಕೇಂದ್ರದಿಂದ ಒಟ್ಟು 5 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಇತ್ತೀಚೆಗೆ ಸಚಿವ ಉಮೇಶ ಕತ್ತಿ ನನ್ನ ಹತ್ತಿರ ಬಂದಿದ್ದರು. ಅಧಿವೇಶನ ನಡೆದಾಗ ಭೇಟಿಯಾಗಿದ್ದರು. ಸ್ಥಳೀಯವಾಗಿ ಜೋಳ, ರಾಗಿ ಕೊಡಲು ಅನುಮತಿ ಕೇಳಿದ್ದರು‌ ಎಂದು ಸ್ಪಷ್ಟಪಡಿಸಿದರು.  ಅಕ್ಕಿಗೆ ಭಾರತ ಸರ್ಕಾರ ಹಣ ಕೊಡುತ್ತೇ. ಹೀಗಾಗಿ ಐದು ಕೆಜಿಯಲ್ಲಿ ಇನ್ನು 3 ಕೆಜಿ ಜೋಳ ಅಥವಾ ರಾಗಿ ಕೊಡುತ್ತಾರೆ ಎಂದರು.

ಇದನ್ನು ಓದಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ಕೋವಿಡ್ ಎರಡನೇ ಅಲೆ ಪರಿಸ್ಥಿತಿಯ ಬಗ್ಗೆ ಪರಮಾರ್ಶೆ!

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು, ಖಾಸಗಿ ಆಸ್ಪತ್ರೆ ಮುಖ್ಯಸ್ಥರರೊಂದಿಗೆ ಸಭೆ ಮಾಡಿದ್ದೇವೆ. ನಮಗೆ ಇನ್ನಷ್ಟು ಬೆಡ್ ಅವಶ್ಯಕತೆ ಇದೆ. ಶೇ. 50 ರಷ್ಟು ಮೀಸಲಿಡಲು ಆದೇಶಿಸಲಾಗಿದೆ. ಈ ಮುಂಚೆಯೂ ಹಲವಾರು ಬಾರಿ ಸಭೆ ನಡೆಸಿದ್ದೇವೆ. ಆಸ್ಪತ್ರೆಯವರ ಸಮಸ್ಯೆ ಬಗ್ಗೆಯೂ ಇದೀಗ ಚರ್ಚೆ ಮಾಡಿದ್ದೇವೆ. ಆಸ್ಪತ್ರೆಯವರು ಸರಕಾರದ ನಿರ್ಧಾರಕ್ಕೆ ಸಿದ್ಧರಿದ್ದೇವೆ ಅಂದಿದ್ದಾರೆ. ಸಹಕಾರ ಕೊಡೋದಾಗಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಹೆಲ್ಪ್ ಲೈನ್ ಆರಂಭಿಸಲಾಗಿದೆ. ಜಿಲ್ಲೆಯ ಜನರು ಸಹಾಯವಾಣಿ ಸಂಖ್ಯೆ 08047168111 ನಂಬರ್ ಗೆ ಕರೆ ಮಾಡಬಹುದು ಎಂದು ತಿಳಿಸಿದರು.
Youtube Video

ವಾರ್ ರೂಮ್ ನಿಂದ ಆಸ್ಪತ್ರೆ, ಬೆಡ್ ಬಗ್ಗೆ ವ್ಯವಸ್ಥೆ ಮಾಡಲಾಗುತ್ತೆ. ಬಳಿಕ ಆಸ್ಪತ್ರೆ ಹೆಸರು, ಬೆಡ್ ಸಂಖ್ಯೆಯನ್ನು ರೋಗಿಗೆ ತಿಳಿಸಲಾಗುತ್ತೆ. ಖಾಸಗಿಯವರು ಆರಂಭದಲ್ಲಿ ಬೆಡ್ ಕೊಡಲು ನಿರಾಕರಿಸಿದ್ದರು. ಅವರಿಗೆ ನೋಟಿಸ್ ಕೊಟ್ಟಿದ್ದೆವು. ಕಾನೂನು ಸಂಘರ್ಷಕ್ಕೆ ಅವಕಾಶ ಕೊಡೋದು ಬೇಡ. ಹೀಗಾಗಿ ಸಹಕಾರ ಕೊಡಿ ಅಂತಾ ಹೇಳಿದ್ದೇವೆ. ಅದಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಕೋವಿಡ್ ಅಲ್ಲದ ರೋಗಿಗಳಿಗೂ ಸರಿಯಾದ ಚಿಕಿತ್ಸೆ ಕೊಡಲಾಗುವುದು‌ ಎಂದು ಸ್ಪಷ್ಟಪಡಿಸಿದರು.ವರದಿ: ಮಂಜುನಾಥ ಯಡಳ್ಳಿ
Published by: HR Ramesh
First published: May 1, 2021, 7:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories