ಟಿಎಚ್‌ಓ ಆತ್ಮಹತ್ಯೆ ಪ್ರಕರಣ; ನ್ಯಾಯಕ್ಕಾಗಿ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದಿಂದ ಸಿಎಂಗೆ ಪತ್ರ

ಕೊರೋನಾ ವಾರಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ನಂಜನಗೂಡು ಟಿಎಚ್​ಒ ಡಾ. ನಾಗೇಂದ್ರ ಇತ್ತೀಚೆಗೆ ಕೆಲಸದ ಒತ್ತಡದ ಕಾರಣದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಾವಿಗೆ  ಜಿ.ಪಂ. ಸಿಇಒ ಪ್ರಶಾಂತ್ ಮಿಶ್ರಾ ಅವರೇ ಕಾರಣ ಎನ್ನಲಾಗುತ್ತಿದೆ. ಈ ಪ್ರಕರಣ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯದ ವೈದ್ಯರು ಒಮ್ಮತದಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೈಸೂರಿನಲ್ಲಿ ವೈದ್ಯರು ತಮ್ಮ ಮುಷ್ಕರವನ್ನು ಮುಂದುವರಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವೈದ್ಯಾಧಿಕಾರಿ.

ಆತ್ಮಹತ್ಯೆ ಮಾಡಿಕೊಂಡ ವೈದ್ಯಾಧಿಕಾರಿ.

 • Share this:
  ಬೆಂಗಳೂರು (ಆಗಸ್ಟ್‌ 22); ಕೊರೋನಾ ಸಾಂಕ್ರಾಮಿಕ ರೋಗದಂತಹ ಸಂದಿಗ್ಧ ಸಮಯದಲ್ಲಿ ರಾಷ್ಟ್ರಾದ್ಯಂತ ಎಲ್ಲೆಡೆ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಮತ್ತು ದಾದಿಯರು ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಿದ್ದಾರೆ. ಹಲವಾರು ಸವಾಲುಗಳನ್ನು ಎದುರುಗೊಳ್ಳುತ್ತಿದ್ದಾರೆ. ಆದರೆ, ಅಂತಹ ಕೆಲಸಕ್ಕೆ ಮುಂದಾಗುವವರ ವಿರುದ್ಧ ಅಸೂಷ್ಮತೆ ನಡವಳಿಕೆ ಸರಿಯಲ್ಲ. ಹೀಗಾಗಿ ವೈದ್ಯರು ಮತ್ತು ದಾದಿಯರ ಯೋಗಕ್ಷೇಮದ ಕುರಿತು ರಾಜ್ಯ ಸರ್ಕಾರ ಗಮನವಹಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ಇಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದೆ.

  ಕೊರೋನಾ ವಾರಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ನಂಜನಗೂಡು ಟಿಎಚ್​ಒ ಡಾ. ನಾಗೇಂದ್ರ ಇತ್ತೀಚೆಗೆ ಕೆಲಸದ ಒತ್ತಡದ ಕಾರಣದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಾವಿಗೆ  ಜಿ.ಪಂ. ಸಿಇಒ ಪ್ರಶಾಂತ್ ಮಿಶ್ರಾ ಅವರೇ ಕಾರಣ ಎನ್ನಲಾಗುತ್ತಿದೆ. ಈ ಪ್ರಕರಣ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯದ ವೈದ್ಯರು ಒಮ್ಮತದಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೈಸೂರಿನಲ್ಲಿ ವೈದ್ಯರು ತಮ್ಮ ಮುಷ್ಕರವನ್ನು ಮುಂದುವರಿಸಿದ್ದಾರೆ.

  ಇವತ್ತೂ ಕೂಡ ಮೈಸೂರಿನ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ವೈದ್ಯರು, ನಂಜನಗೂಡು ಟಿಎಚ್​ಒ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದ್ದಾರೆ. ಡಾ. ನಾಗೇಂದ್ರ ಸಾವಿಗೆ ಕಾರಣವಾಗಿರುವ ಜಿ.ಪಂ. ಸಿಇಒ ಪ್ರಶಾಂತ್ ಮಿಶ್ರಾ ಅವರನ್ನ ಅಮಾನತು ಮಾಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

  ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಭಾರತೀಯ ವೈದ್ಯಕೀಯ ಸಂಘ, "ದುಃಖ ಮತ್ತು ಕಾಳಜಿಯ ಭಾವನೆಯೊಂದಿಗೆ ನಾವು ಈ ಘಟನೆಯನ್ನು ನಿಮ್ಮ ಗಮನಕ್ಕೆ ತರುತ್ತೇವೆ. ನೀವು ಒಂದು ಬದಲಾವಣೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ರಾಜ್ಯದಲ್ಲಿ ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಒತ್ತಡದಲ್ಲಿದ್ದಾರೆ.

  ಸಿಎಂಗೆ ಬರಯಲಾಗಿರುವ ಪತ್ರ


  ಸಿಎಂಗೆ ಬರಯಲಾಗಿರುವ ಪತ್ರ
  ಪ್ರಸ್ತುತ ಸಾಂಕ್ರಾಮಿಕದಿಂದ ಉಂಟಾಗುವ ಸವಾಲುಗಳನ್ನು ಎದುರಿಸುತ್ತಿರುವ ಅವರು ಸ್ನೇಹಪರ ಕೆಲಸದ ವಾತಾವರಣ, ಸುರಕ್ಷತೆ ಮತ್ತು ಕುಟುಂಬ ವರ್ಗದ ಜೊತೆಗೆ ಸಮಯ ಕಳೆಯುವ ಅವಕಾಶ ಪಡೆಯಲು ಅರ್ಹರು. ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಇಂತಹ ಸಂದರ್ಭದ ಸೂಷ್ಮತೆ ಅರ್ಥವಾಗುತ್ತದೆ. ಆದರೆ, ದೇಶದಾದ್ಯಂತ ಅನೇಕ ಕಡೆಗಳಲ್ಲಿ ವೈದ್ಯರ ಮೇಲೆ ನಡೆಯುತ್ತಿರುವ ಅಸೂಕ್ಷ್ಮ ಘಟನೆಗಳು ವರದಿಯಾಗುತ್ತಲೇ ಇದೆ.

  ಇದನ್ನೂ ಓದಿ : ನಂಜನಗೂಡು ಟಿಎಚ್ಒ ಆತ್ಮಹತ್ಯೆ ಪ್ರಕರಣ: ಜಿ.ಪಂ. ಸಿಇಒ ಮೇಲೆ ಎಫ್ಐಆರ್; ವರ್ಗಾವಣೆ

  ವೈದ್ಯಕೀಯ ಸೇವೆಯಲ್ಲಿ ಡೆಡ್‌ಲೈನ್ ಅಥವಾ ಟಾರ್ಗೆಟ್‌ ಇಟ್ಟುಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ, ನಂಜನಗೂಡು ಟಿಎಚ್‌ಓ ಡಾ. ನಾಗೇಂದ್ರ ಅವರಿಗೆ ಅಧಿಕಾರಿಗಳು ಟಾರ್ಗೆಟ್‌ ಡೆಡ್‌ಲೈನ್‌ ನೀಡಿದ್ದಾರೆ. ಈ ಒತ್ತಡದಿಂದಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದು ನಿಜಕ್ಕೂ ದುರಾದೃಷ್ಟಕರ.

  ಈ ಘಟನೆಯಿಂದ ಇಡೀ ವೈದ್ಯಕೀಯ ಸಮೂಹ ಆಘಾತಕ್ಕೊಳಗಾಗಿದೆ. ಹೀಗಾಗಿ ಈ ಘಟನೆಗೆ ಸಂಬಂಧಿಸಿದಂತೆ ನಮಗೆ ನ್ಯಾಯ ದೊರಕಿಸಿಕೊಡಿ ಮತ್ತು ಇಂತಹ ಘಟನೆಗಳು ಮತ್ತೆ ಜರುಗದಂತೆ ನೋಡಿಕೊಳ್ಳಿ" ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
  Published by:MAshok Kumar
  First published: