HOME » NEWS » District » THIS YOUTH COMMITS SEVERAL CRIMES TO PRESENT GIFTS TO HIS LOVER GIRLS GVTV SNVS

ಬಾರ್ ಗರ್ಲ್ ಐಸ್ ಕ್ರೀಂ ಕೇಳಿದ್ರೆ ಇಡೀ ಐಸ್ ಕ್ರೀಂ ಪಾರ್ಲರ್ ದೋಚುತ್ತಿದ್ದ ಲವರ್ ಬಾಯ್ ಕಳ್ಳ

ಚೆಂದುಳ್ಳಿ ಚೆಲುವೆಯರಾಗಿದ್ದ ಬಾರ್ ಗರ್ಲ್​ಗಳನ್ನ ಪಟಾಯಿಸುತ್ತಿದ್ದ ಈ ಖತರ್ನಾಕ್ ಕಳ್ಳ, ಅವರು ಐಸ್ ಕ್ರೀಂ ಕೇಳಿದ್ರೆ ಯಾವುದಾದರೂ ಐಸ್ ಕ್ರೀಮ್ ಪಾರ್ಲರನ್ನೇ ದೋಚುತ್ತಿದ್ದ. ಚಪ್ಪಲಿ ಕೇಳಿದ್ರೆ ಚಪ್ಪಲಿ ಅಂಗಡಿಯೇ ಕನ್ನಹಾಕುತ್ತಿದ್ದ. ಈ ಐನಾತಿ ಕಳ್ಳನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

news18-kannada
Updated:March 2, 2021, 12:48 PM IST
ಬಾರ್ ಗರ್ಲ್ ಐಸ್ ಕ್ರೀಂ ಕೇಳಿದ್ರೆ ಇಡೀ ಐಸ್ ಕ್ರೀಂ ಪಾರ್ಲರ್ ದೋಚುತ್ತಿದ್ದ ಲವರ್ ಬಾಯ್ ಕಳ್ಳ
ಬಾರ್ ಗರ್ಲ್ ಜೊತೆ ಕಳ್ಳ
  • Share this:
ಬೆಂಗಳೂರು: ಅವನು ಬೆಂಗಳೂರು ಸೌತ್ ಪೊಲೀಸರ ನಿದ್ದೆ ಕೆಡಿಸಿದ್ದ ಖರ್ತನಾಕ್ ಕಳ್ಳ. ಪೊಲೀಸರ ಕೈಗೆ ಸಿಗದೆ, ಬಾರ್ ಗರ್ಲ್ಸ್ ಜೊತೆ ಪ್ರೀತಿ ಪ್ರೇಮ ಪ್ರಣಯ ಅಂತ ಡುಯೆಟ್ ಆಡುತ್ತಿದ್ದ. ಬಾರ್ ಗರ್ಲ್ಸ್ ಹುಡುಗಿಯರನ್ನ ಕಲರ್ ಕಲರ್ ಕಾಗೆ ಹಾರಿಸಿ ಪಟಾಯಿಸುವುದನ್ನ ಪಾರ್ಟ್ ಟೈಂ ಜಾಬ್ ಮಾಡ್ಕೊಂಡಿದ್ದ. ನೈಟ್ ಟೈಮ್ ಕನ್ನಾ ಹಾಕಿ ಕಳವು ಮಾಡೋದನ್ನೆ ಫುಲ್ ಟೈಂ ಜಾಬ್ ಮಾಡ್ಕೊಂಡಿದ್ದ. ಆದ್ರೆ ಪೊಲೀಸರ ಕೈಗೆ ಸಿಕ್ಕಾಗ ಆರೋಪಿ ಹೇಳಿದ ಕಥೆ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ.

ಹೀಗೆ ಕಲರ್ ಕಲರ್ ಹೈದನ ಹೆಸರು ಇಸ್ಮಾಯಿಲ್. ಬೆಂಗಳೂರು ಸೌತ್ ಪೊಲೀಸರಿಗೆ ಹತ್ತಕ್ಕೂ ಹೆಚ್ಚು ಕೇಸ್​ಗಳಲ್ಲಿ ಬೇಕಾಗಿದ್ದ ಖರ್ತನಾಕ್ ಕಳ್ಳ. ಇಸ್ಮಾಯಿಲ್ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 12 ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರ ಕೈಗೆ ಸಿಗದೇ ಚಳ್ಳೆ ಹಣ್ಣು ತಿನ್ನಿಸಿದ್ದ ಆರೋಪಿ ಇಸ್ಮಾಯಿಲ್. ಕಳೆದ ಫೆಬ್ರವರಿ 10 ರಂದು ಜಯನಗರ ಬಳಿ ಈತ ಬರುವ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಯೋಜಿತವಾಗಿ ದಾಳಿ ಮಾಡಿದರು. ಆರೋಪಿಯನ್ನ ಬೆನ್ನತ್ತಿದ್ದ ಜಯನಗರ ಠಾಣೆ ಇನ್ಸ್​ಪೆಕ್ಟರ್ ಸುದರ್ಶನ್ ಮತ್ತು ತಂಡವು ಇಸ್ಮಾಯಿಲ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿತ್ತು. ಆರೋಪಿಯನ್ನ ವಶಕ್ಕೆ ಪಡೆದ ನಂತರ ವಿಚಾರಣೆ ನಡೆಸಿದಾಗ ಇಸ್ಮಾಯಿಲ್ ಕೊಟ್ಟಿರುವ ಮಾಹಿತಿ ಕೇಳಿ ಪೊಲೀಸರೇ ಗರ ಬಡಿದಂತಾಗಿದ್ಧಾರೆ.

ಇದನ್ನೂ ಓದಿ: ಮಂಗಗಳಿಂದ ಬೆಳೆ ಉಳಿಸಿಕೊಳ್ಳಲು ಜಮೀನಿಗೆ ಹುಲಿಯನ್ನೇ ತಂದ ರೈತ..!

ಆರೋಪಿ ಇಸ್ಮಾಯಿಲ್​ಗೆ ಬಾರ್ ಗರ್ಲ್ಸ್ ಶೋಕಿ ಇತ್ತು. ಬಾರ್ ಪಬ್​ಗಳಿಗೆ ಗೆಳೆಯರ ಜೊತೆ ಹೋಗೋದು, ಬಾರ್ ಗರ್ಲ್ಸ್ ಮೇಲೆ ದುಡ್ಡು ಹೊಡೆಯೋ ಶೋಕಿ ಇತ್ತು. ಇದರ ಜೊತೆಗೆ ಚೆನ್ನಾಗಿರುವ ಹುಡುಗಿಯರನ್ನ ಪಟಾಯಿಸುವ ಖಯಾಲಿ ಹೊಂದಿದ್ದ ಇಸ್ಮಾಯಿಲ್, ಬಾರ್ ಗರ್ಲ್​ಗಳಿಗೆ ಕೇಳಿದ ಗಿಫ್ಟ್ ಕೊಡಲಿಕ್ಕೆ ದುಡ್ಡು ಇಲ್ಲದಿದ್ದಾಗ ಹಿಂದು ಮುಂದೂ ನೋಡದೇ ಕಳ್ಳತನಕ್ಕೆ ಇಳಿದುಬಿಡುತ್ತಿದ್ದ.

ಇಸ್ಮಾಯಿಲ್ ಗೆಳತಿಯಾಗಿದ್ದ ಬಾರ್ ಗರ್ಲ್​ವೊಬ್ಬಳು ಚಪ್ಪಲಿ ಕೇಳಿದ್ದಕ್ಕೆ ಚಪ್ಪಲಿ ಅಂಗಡಿಯನ್ನೇ ದೋಚಿದ್ದ ಇಸ್ಮಾಯಿಲ್, ಆಕೆಗೆ ಐವತ್ತು ಜೊತೆ ಚಪ್ಪಲಿಯನ್ನ ಗಿಫ್ಟ್ ಕೊಟ್ಟಿದ್ದನಂತೆ. ಇನ್ನೊಂದು ಬಾರಿ ಐಸ್ ಕ್ರೀಂ ಕೇಳಿದ್ದಕ್ಕೆ ಐಸ್ ಕ್ರೀಂ ಪಾರ್ಲರನ್ನೇ ಈತ ದೋಚಿದ್ದಾನೆ. ಚಾಕಲೇಟ್ ಬೇಕಂದ್ರೆ ಸಾವಿರಾರು ರೂಪಾಯಿ ಬೆಲೆಬಾಳುವ ಚಾಕ್ ಲೇಟ್​ಗಳನ್ನೇ ಅಂಗಡಿಗಳಿಂದ ಎತ್ತೊಯ್ತಿದ್ದನಂತೆ. ಅಲ್ಲದೇ ಆರೋಪಿ ಬಳಸುತ್ತಿದ್ದ ಬಟ್ಟೆ, ಗಾಗಲ್, ಶೂ, ಜ್ಯುವೆಲ್ಸ್ ಎಲ್ಲವನ್ನೂ ಕಳವು ಮಾಡಿ ಮಿರಿಮಿರಿ ಮಿಂಚುತ್ತಿದ್ದ ಈತ ಬಾರ್ ಗರ್ಲ್ಸ್​ಗಳನ್ನ ಪಟಾಯಿಸುತ್ತಿದ್ದ. ಕಳ್ಳತನ ಮಾಡಿ ಬಂದು ದುಡ್ಡಲ್ಲಿ ಬಿಂದಾಸ್ ಆಗಿ ಲೈಫ್ ಲೀಡ್ ಮಾಡ್ತಿದ್ದನಂತೆ‌.

ಇದನ್ನೂ ಓದಿ: ಒಳ್ಳೆಯವನಾದ್ದರಿಂದ ದೇವರು ಬದುಕಿಸಿದ್ದಾನೆ – ಗುಂಡೇಟಿನಿಂದ ಗುಣಮುಖನಾದ ಬಳಿಕ ಮಹಾದೇವ ಭೈರಗೊಂಡ ಹೇಳಿಕೆ

ಸದ್ಯ 12 ಕ್ಕೂ ಹೆಚ್ಚು ಕಳ್ಳತನ ಕೇಸಲ್ಲಿ ಫಿಟ್ಟಾಗಿರೋ ಆರೋಪಿ ಇಸ್ಮಾಯಿಲ್ ಅನ್ನ ಜಯನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರೀತಿ ಪ್ರೇಮ ಪ್ರಣಯ ಅಂತ ಕಳ್ಳತನ ಮಾಡಿದ ದುಡ್ಡಲ್ಲಿ ಹುಡುಗಿಯರ ಶೋಕಿ ಮಾಡಲು ಹೋದ ಪರಿಣಾಮ ಈ ಲವರ್ ಬಾಯ್ ಕಳ್ಳ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದಾನೆ.ವರದಿ: ಗಂಗಾಧರ ವಾಗಟ
Published by: Vijayasarthy SN
First published: March 2, 2021, 12:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories