HOME » NEWS » District » THIS YEARS BUDGET WILL BE SMALLER SAYS CM BS YEDIYURAPPA PMTV SNVS

ಗಣಿಗಾರಿಕೆ ನಿಲ್ಲಿಸಲು ಸಾಧ್ಯವಿಲ್ಲ; ಈ ಬಾರಿ ಬಜೆಟ್ ಗಾತ್ರ ತಗ್ಗಿಸುತ್ತೇನೆ: ಸಿಎಂ ಬಿಎಸ್​ವೈ

ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯದ ಹಣಕಾಸು ಪರಿಸ್ಥಿತಿ ಜನತೆಗೂ ಗೊತ್ತಿದೆ. ಈ ಬಾರಿ ಬಜೆಟ್ ಗಾತ್ರ ತಗ್ಗಿಸುವುದು ಅನಿವಾರ್ಯವಾಗಿದೆ ಎಂದು ಮೈಸೂರಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

news18-kannada
Updated:January 23, 2021, 12:58 PM IST
ಗಣಿಗಾರಿಕೆ ನಿಲ್ಲಿಸಲು ಸಾಧ್ಯವಿಲ್ಲ; ಈ ಬಾರಿ ಬಜೆಟ್ ಗಾತ್ರ ತಗ್ಗಿಸುತ್ತೇನೆ: ಸಿಎಂ ಬಿಎಸ್​ವೈ
ಮೈಸೂರಿನಲ್ಲಿ ಬಿಎಸ್ ಯಡಿಯೂರಪ್ಪ
  • Share this:
ಮೈಸೂರು: ಈ ವರ್ಷದ ರಾಜ್ಯ ಬಜೆಟ್‌ನ ಗಾತ್ರ ತಗ್ಗಲಿದೆ. ನಾನೇ ಸ್ವತಹ ಈ ಬಾರಿಯ ಬಜೆಟ್ ಗಾತ್ರ ತಗ್ಗಿಸುತ್ತೇನೆ ಅಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇಂದು ಮೈಸೂರು ಪ್ರವಾಸ ಕೈಗೊಂಡಿರುವ ಬಿಎಸ್‌ವೈ ಸಂಪನ್ಮೂಲ ಕೊರತೆ ಕಾರಣ ಕಳೆದ ಬಾರಿಗಿಂತ ಈ ಬಾರಿ ಬಜೆಟ್ ಗಾತ್ರ ತಗ್ಗಿಸುವುದು ಅನಿವಾರ್ಯವಾಗಿದೆ. ರಾಜ್ಯದ ಪರಿಸ್ಥಿತಿ ಇಡೀ ಜನರಿಗೆ ಗೊತ್ತಿದೆ.  ಕೋವಿಡ್ ಕಾರಣದಿಂದ ಹಲವು ಯೋಜನೆಗಳ ಅನುದಾನದಲ್ಲಿ ವ್ಯತ್ಯಾಸ ಆಗಲಿದೆ, ಆದರೂ ಕೋವಿಡ್ ನಿಯಂತ್ರಣಕ್ಕೆ ಬೇಕಾದ ಎಲ್ಲ ಅಗತ್ಯ ಮೂಲಭೂತ ಸೌಕರ್ಯಗಳನ್ನ ಸರ್ಕಾರವೇ ಪೂರೈಸಲಿದೆ. ರಾಜ್ಯದಲ್ಲಿ ಶೇಕಡ 90ರಷ್ಟು ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ. ವ್ಯಾಕ್ಸಿನ್ ಕೂಡ ಬಂದಿದ್ದು ಶೀಘ್ರವೇ ಕರ್ನಾಟಕವನ್ನ ಕೊರೊನಾ ಮುಕ್ತ ಮಾಡಲಿದ್ದೇವೆ ಅಂತ ಸಿಎಂ ಭರವಸೆ ನೀಡಿದ್ದಾರೆ.

ಇನ್ನು ಶಿವಮೊಗ್ಗದಲ್ಲಿ ನಡೆದ ಗಣಿ ಸ್ಪೋಟದ  ದುರ್ಘಟನೆಯ ಸ್ಥಳಕ್ಕೆ ಇಂದು ಭೇಟಿ ನೀಡುತ್ತೇನೆ ಎಂದು ಹೇಳಿದ ಸಿಎಂ,ಘಟನೆಯಿಂದ ಮನೆಗಳು ಜಖಂ ಆಗಿರುವುದನ್ನು ಪರಿಶೀಲಿಸುತ್ತೇವೆ. ಸ್ಥಳದಲ್ಲಿ ಘಟನೆ ಸಂಪೂರ್ಣ ವಿವರ ಕಲೆ‌ ಹಾಕಿ ಘಟನೆಯಿಂದ ಯಾವೆಲ್ಲ ಹಾನಿಯಾಗಿದೆ ಎಲ್ಲದಕ್ಕೂ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಅತ್ತ ಗಣಿಗಾರಿಕೆ ನಿಲ್ಲಿಸಬೇಕು ಎಂಬ ಚರ್ಚೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ರಾಜ್ಯದಲ್ಲಿ ಗಣಿಗಾರಿಕೆ ಬೇಕು. ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಹಾಕಿ ಅದನ್ನು ಸಕ್ರಮ ಮಾಡಿಕೊಳ್ಳಬಹುದು, ಒಂದೇ ಒಂದು ಘಟನೆ ಉದಾಹರಣೆಯಾಗಿಟ್ಟುಕೊಂಡು ಗಣಿಗಾರಿಕೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಸಿನಿಮೀಯ ಸ್ಟೈಲ್​ನಲ್ಲಿ ದರೋಡೆ; ಮುತ್ತೂಟ್ ಫೈನಾನ್ಸ್​ನಲ್ಲಿ ಏಳೂವರೆ ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ; ಕಳ್ಳರ ಬಂಧನ

ಅಕ್ರಮವಾಗಿ ಗಣಿಗಾರಿಕೆ ನಡೆಸುವಂತಿಲ್ಲ, ಹಾಗೇನಾದರೂ ಅಕ್ರಮ ಗಣಿಗಾರಿಕೆ ನಡೆದರೆ ಸ್ಥಳ ಪರಿಶೀಲನೆ ಮಾಡಿ, ತಪ್ಪಿತಸ್ಥರ ವಿರುದ್ದ ತನಿಖೆ ಮಾಡಿ ಕ್ರಮ ಕೈಗೊಳ್ಳಲು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಯಾರೇ ತಪ್ಪಿತಸ್ಥರಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಾರೆ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಶಿವಮೊಗ್ಗ ಪ್ರಕರಣವೊಂದನ್ನೇ ಇಟ್ಟುಕೊಂಡು ಗಣಿಗಾರಿಕೆ ನಿಲ್ಲಿಸಲು ಸಾಧ್ಯವಿಲ್ಲ. ಅಕ್ರಮವಾಗಿದ್ದರೆ ಅರ್ಜಿ ಕೊಟ್ಟು ಅದನ್ನ ಸಕ್ರಮ ಮಾಡಿಸಿಕೊಳ್ಳಿ ಅಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದರು. ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ಕಾಮಗಾರಿಗಳು ಅಪಾರ ಪ್ರಮಾಣದಲ್ಲಿ ನಡೆಯುತ್ತಿವೆ. ಹೀಗಾಗಿ ಕಲ್ಲು ಗಣಿಗಾರಿಕೆ‌ ಅಗತ್ಯವಾಗಿದೆ. ಆದರೆ ಅನುಮತಿ ಪಡೆದು ಲೈಸೆನ್ಸ್‌ನೊಂದಿಗೆ ಗಣಿಗಾರಿಕೆ ಮಾಡಿಲು ನಮ್ಮದೇನೂ ಅಭ್ಯಂತರ ಇಲ್ಲ. ಅಕ್ರಮವಾಗಿ ಗಣಿಗಾರಿಕೆ ನಡೆಸಲು ಮಾತ್ರ ಅವಕಾಶ ನೀಡುವುದಿಲ್ಲ, ಈ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ‌ ಅಂತ ಬಿಎಸ್‌ವೈ ತಿಳಿಸಿದರು.

ಇದನ್ನೂ ಓದಿ: ಆತ್ಮರಕ್ಷಣೆಗೆ ಕೈ ಮಾಡಿದ ಸೌಮ್ಯ ರೆಡ್ಡಿ ಪರವಾಗಿ ನಾವೆಲ್ಲರೂ ನಿಲ್ಲುತ್ತೇವೆ; ಡಿಕೆ ಶಿವಕುಮಾರ್ಶಿವಮೊಗ್ಗದಲ್ಲಿ ಸ್ಪೋಟದಿಂದ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದೇವೆ. ಮನೆಗಳಿಗೂ ಹಾನಿಯಾಗಿದೆ ಅಂತ ಗೊತ್ತಾಗಿದೆ‌. ‌ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ನಂತರ ಹಾನಿ ಪ್ರದೇಶಗಳಿಗೆ ಪರಿಹಾರ ನೀಡುವ ಭರವಸೆ ನೀಡುತ್ತೇನೆ ಅಂತ ಸಿಎಂ ಬಿಎಸ್‌ವೈ ಹೇಳಿದರು.

ಇಂದು ಮೈಸೂರಿನಲ್ಲಿ ಅಕ್ಕಮಹಾದೇವಿ ಪ್ರತಿಮೆ ಅನಾವರಣ ಮಾಡಿದ ಸಿಎಂ ಬಿಎಸ್‌ವೈ, ವಿಜಯನಗರ ಬಡಾವಣೆಯಲ್ಲಿ ಬಸವಭವನ ಉದ್ಘಾಟಿಸಿ ಶಿವಮೊಗ್ಗ ಜಿಲ್ಲೆಗೆ ಪ್ರವಾಸ ಕೈಗೊಂಡರು.‌

ವರದಿ: ಪುಟ್ಟಪ್ಪ
Published by: Vijayasarthy SN
First published: January 23, 2021, 12:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories