news18-kannada Updated:September 7, 2020, 4:00 PM IST
ಮೈಸೂರು ದಸರಾದ ಜಂಬೂ ಸವಾರಿಯ ದೃಶ್ಯ
ಮೈಸೂರು(ಸೆಪ್ಟೆಂಬರ್. 07): ಮೈಸೂರಲ್ಲಿ ಈ ಬಾರಿ ಸರಳ ದಸರಾ ನಡೆಯುವುದು ಬಹುತೇಕ ಫೈನಲ್ ಆಗಿದ್ದು, ಅದರ ರೂಪುರೇಷೆ ಮಾತ್ರ ಸಿದ್ದವಾಗಬೇಕಿದೆ. ಈ ನಡುವೆ ನಾಳೆ ಬೆಂಗಳೂರಲ್ಲಿ ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಇದ್ದು, ಈ ಸಭೆಯಲ್ಲಿ ಮೈಸೂರು ಪ್ರವಾಸೋದ್ಯಮ ಬೂಸ್ಟ್ ಮಾಡುವುದಕ್ಕೆ ಹೊಸದೊಂದು ವಿಷಯ ಪ್ರಸ್ತಾಪ ಆಗಲಿದೆ. ಅದಕ್ಕೆ ಮೇಯರ್ ತಸ್ನೀ ನಾಂದಿ ಹಾಡಿದ್ದು, ದಸರಾ ಮುಗಿದ ಮೇಲೆ ಮೈಸೂರು ಹಬ್ಬ ಮಾಡುವ ಚಿಂತನೆಯಲ್ಲಿದ್ದಾರೆ. ಮೈಸೂರು ದಸರಾ ಅಂದ್ರೆ ಸಾಕು ಕಲೆ ವೈಭವ, ಸಂಸ್ಕೃತಿ, ಪರಂಪರೆ ಬಿಂಬಿಸುವ ನಾಡಹಬ್ಬದ ಪ್ರತೀಕ ಅಂತೀವಿ. ಇಂತಹ ದಸರಾ ಇದೀಗ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ಚಿಂತನೆ ನಡೆಯುತ್ತಿದ್ದು, ಇದು ಬಹುತೇಕ ಫೈನಲ್ ಕೂಡ ಅಗಲಿದೆ. ಈ ನಡುವೆ ನಾಳೆ ಬೆಂಗಳೂರಲ್ಲಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಸಭೆಯಲ್ಲಿ ದಸರಾ ರೂಪುರೇಷೆ ಹೇಗಿರಬೇಕು ಎಂಬುದು ಅಂತಿಮವಾಗಲಿದೆ.
ಈ ನಡುವೆ ದಸರಾದಲ್ಲಿ ಅರ್ಜುನ ಆನೆ ಬದಲಿಗೆ ಅಭಿಮನ್ಯುವಿಗೆ ಈ ಅಂಬಾರಿಯ ನೇತೃತ್ವ ವಹಿಸುವ ಸಾಧ್ಯತೆ ಇದ್ದು, ಸುಪ್ರೀಂಕೋರ್ಟ್ ಆದೇಶದನ್ವಯ 60ವರ್ಷ ಮೇಲ್ಪಟ್ಟ ಆನೆಯನ್ನ ಬಳಸಿಕೊಳ್ಳುವಂತಿಲ್ಲ ಎಂಬ ಸೂಚನೆ ಸಹ ಇದೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಹ ಈ ಬಗ್ಗೆ ಚರ್ಚೆ ನಡೆಸುತ್ತಿದ್ದು, ಕಾನೂನು ತಜ್ಞರ ಸಲಹೆಗೆ ಮುಂದಾಗಿದೆ.
ಈ ಮಧ್ಯೆ ಮೈಸೂರು ಮಹಾನಗರ ಪಾಲಿಕೆ ಹೊಸದೊಂದು ಮೆಗಾ ಪ್ಲಾನ್ ಮಾಡಿಕೊಂಡು ಆ ಪ್ಲಾನ್ನ ಪ್ರಸ್ತಾಪ ಸಹ ದಸರಾ ಸಭೆಯಲ್ಲಿ ಮುಂದಿಡಲಿದೆ. ಇದರಿಂದ ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಚಿಂತನೆ ಮಾಡಿದ್ದು, ದಸರಾವನ್ನ ಸರಳವಾಗಿ ಆಚರಿಸಿ ಮಾರ್ಚ್ ವೇಳೆ ಮೈಸೂರು ಹಬ್ಬ ಹೆಸರಿನಲ್ಲಿ ಫೆಸ್ಟ್ ಮಾಡಲು ನಿರ್ಧರಿಸಿದೆ. ಈ ಹಬ್ಬದಲ್ಲಿ ದಸರಾ ವೇಳೆ ನಡೆಯಬೇಕಿದ್ದ ಕೆಲವೊಂದು ಕಾರ್ಯಕ್ರಮವನ್ನ ಅಳವಡಿಸಿ ಕುಸಿದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಿದ್ದತೆ ಮಾಡಿಕೊಂಡಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ' ಸಣ್ಣಪುಟ್ಟ ವ್ಯಾಪಾರಸ್ಥರಿಗು ಅನುಕೂಲ ಆಗಲಿದೆ. ಇದರಿಂದ ಈ ವಿಚಾರ ನಾಳೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸುವುದಾಗಿ ಮೇಯರ್ ತಸ್ನೀಂ ಹೇಳುತ್ತಾರೆ.
ಇದನ್ನೂ ಓದಿ :
ಬೆಳಗಾವಿ ಜಿಲ್ಲೆಯಾದ್ಯಂತ ಪೊಲೀಸರ ಭರ್ಜರಿ ದಾಳಿ ; 144 ಕೆ.ಜಿ ಗಾಂಜಾ ವಶ
ಇನ್ನು ಸರಳ ದಸರಾ ಆಚರಣೆ ಅಂದರೇ ಅಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಬೀಳಲಿದೆ. ಇದನ್ನ ಮಾರ್ಚ್ ವೇಳೆ ಮಾಡಿದ್ರೆ ವ್ಯಾಪಾರದ ಜೊತೆಗೆ ಪ್ರವಾಸೋದ್ಯಮಕ್ಕು ಹೆಚ್ಚಿನ ಆದ್ಯತೆ ಸಿಕ್ಕು ಎಲ್ಲರಿಗು ಅನುಕೂಲ ಆಗಲಿದೆ. ಇದಕ್ಕೆ ಮೈಸೂರು ಫೆಸ್ಟ್ ಅಥವಾ ಮೈಸೂರು ಹಬ್ಬ ಅಂತ ಹೆಸರಿಟ್ಟು, ಮೈಸೂರು ಪ್ರವಾಸೋದ್ಯಮ ರೀ ಜೆನರೇಟ್ ಮಾಡಿದ್ರೆ ಉತ್ತಮ ಎನ್ನುವುದು ಸಹ ಮೈಸೂರಿಗರ ಮಾತು.
ಒಟ್ಟಾರೆ ಪಾಲಿಕೆಯ ಐಡಿಯಾ ಏನೋ ಸೂಪರ್ ಆಗಿದ್ದು, ಮೈಸೂರಿನ ಪ್ರವಾಸೋದ್ಯಮವನ್ನ ಮೇಲೆತ್ತಲು ಮೆಗಾ ಪ್ಲಾನ್ ಸಿದ್ದವಾಗಿದೆ. ಆದರೆ, ಇದಕ್ಕೆ ಸಿಎಂ ಹಾಗೂ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳ ಒಪ್ಪಿಗೆ ನೀಡುತ್ತಾರೆ ಎಂಬುದೇ ಸದ್ಯದ ಕುತೂಹಲದ ಪ್ರಶ್ನೆ..!
Published by:
G Hareeshkumar
First published:
September 7, 2020, 3:54 PM IST