ಹಾವೇರಿಯಲ್ಲಿ ಇದೆಂಥಾ ಮೂಢನಂಬಿಕೆ?; ಹಸುಗೂಸುಗಳ ಪ್ರಾಣಕ್ಕೆ ಸಂಚಕಾರ ತರುವ ಆಚರಣೆಗೆ ಜಿಲ್ಲಾಡಳಿತ ಕಡಿವಾಣ

ಮಕ್ಕಳು ಆಗದೆ ಇರುವವರು ಜೊತೆಗೆ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆದರೆ ಹಾವೇರಿ ಜಿಲ್ಲೆಯ ಜನ ಆಸ್ಪತ್ರೆಗೆ ಹೋಗುವ ಬದಲು ಹಜರತ್ ಪೀರ್ ಸಯ್ಯದ್ ಅಲ್ಲಾವುದ್ದೀನ್ ಶಾ ಖರ್ದಿ ದರ್ಗಾಕ್ಕೆ ತೆರಳಿ ಹರಕೆ ಕಟ್ಟಿಬರುವ ಪದ್ದತಿ ಹಲವು ವರ್ಷಗಳಿಂದ ಇದೆ.

ಹಾವೇರಿ ಜಿಲ್ಲಾಧಿಕಾರಿ ಯೋಗೇಶ್ವರ್‌.

ಹಾವೇರಿ ಜಿಲ್ಲಾಧಿಕಾರಿ ಯೋಗೇಶ್ವರ್‌.

  • Share this:
ಹಾವೇರಿ; ಹಸುಗೂಸುಗಳನ್ನು ತೊಟ್ಟಿಲಿಗೆ ಹಾಕಿ ಬಾವಿಗೆ ಇಳಿಸುವ ಮೂಢನಂಬಿಕೆಯ ಘಟನೆಯೊಂದು ಹಾವೇರಿಯ ಬಂಕಾಪುರ ಪಟ್ಟಣದ ಹಜರತ್ ಪೀರ್ ಸಯ್ಯದ್ ಅಲ್ಲಾವುದ್ದೀನ್ ಶಾ ಖದ್ರಿ ದರ್ಗಾದಲ್ಲಿ ನಡೆದಿದೆ.

ಈ ವಿಚಿತ್ರ ಆಚರಣೆ ಸುಮಾರು ವರ್ಷಗಳಿಂದ ನಡೆಯುತ್ತಿದ್ದು, ಇದರಿಂದಾಗಿ  ಪುಟಾಣಿ ಮಕ್ಕಳ ಜೀವಕ್ಕೆ ಸಂಚಕಾರ ತರುವಂತಿದೆ. ಮಕ್ಕಳು ಆಗದೆ ಇರುವವರು ಜೊತೆಗೆ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆದರೆ ಇಲ್ಲಿನ ಜನ ಆಸ್ಪತ್ರೆಗೆ ಹೋಗುವ ಬದಲು ಹಜರತ್ ಪೀರ್ ಸಯ್ಯದ್ ಅಲ್ಲಾವುದ್ದೀನ್ ಶಾ ಖರ್ದಿ ದರ್ಗಾಕ್ಕೆ ತೆರಳಿ ಹರಕೆ ಕಟ್ಟಿಬರುವ ಪದ್ದತಿ ಹಲವು ವರ್ಷಗಳಿಂದ ಇದೆ.

ಈ ರೀತಿಯ ಆಚರಣೆಯಿಂದ ಮಕ್ಕಳು ಆರೋಗ್ಯವಂತರಾಗಿರುತ್ತಾರೆ ಎಂಬುದು ಇಲ್ಲಿನ ಜನರ ಮೂಢನಂಬಿಕೆಯಾಗಿದೆ. ಕೊಂಚ ಯಡವಟ್ಟಾದ್ರು ಇಲ್ಲಿ ಮಕ್ಕಳ ಪ್ರಾಣಕ್ಕೆ ಅಪಾಯ ಗ್ಯಾರಂಟಿ. ಆದರೂ, ಇಲ್ಲಿನ ಪೋಷಕರು ಮಾತ್ರ ಈ ಅನಿಷ್ಟ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಮಕ್ಕಳನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಗೆ ಇಳಿಸಿ ಬಾವಿಯಲ್ಲಿರೋ ನೀರನ್ನು  ಸ್ಪರ್ಶಿಸಿ ಮತ್ತೆ ಮೇಲಕ್ಕೆತ್ತುವ ಮೂಢನಂಬಿಕೆಯನ್ನು ಕೆಲವು ಸ್ಥಳೀಯರು ವಿರೋಧಿಸಿದರು ಈ ಆಚರಣೆಗೆ  ಕಡಿವಾಣ ಹಾಕುವುದು ಸಾಧ್ಯವಾಗುತ್ತಿಲ್ಲ.

ಇನ್ನೂ ಈ ಪದ್ದತಿಗೆ ಯಾವುದೇ ಇತಿಹಾಸವಿಲ್ಲ. ಹಿಂದೆ ಎಂದು ಈ ತರಹದ ಪದ್ದತಿಯನ್ನು ಇಲ್ಲಿ ಆಚರಣೆ ಮಾಡಿರುವ ಉಲ್ಲೇಖವಿಲ್ಲ. ಆದರೆ, ಈ ಆಚರಣೆ ಇತ್ತಿಚಿನ ದಿನಗಳಲ್ಲಿ ಹುಟ್ಟಿಕೊಂಡಿರುವುದು ವಿಪರ್ಯಾಸ ಎನ್ನಲಾಗುತ್ತಿದೆ.

ಇದನ್ನೂ ಓದಿ : ವಿಕಾಸಸೌಧ, ಶಕ್ತಿಸೌಧಕ್ಕೂ ಕಾಲಿಟ್ಟ ಕೊರೋನಾ; ಕಚೇರಿಗಳು ಸೀಲ್‌ಡೌನ್, ಆತಂಕದಲ್ಲಿ ವಿಧಾನಸೌಧ ಸಿಬ್ಬಂದಿಗಳು

ಈ ಕುರಿತು ನ್ಯೂಸ್18ಕನ್ನಡ ಗೆ ಪ್ರತಿಕ್ರಿಯಿಸಿರುವ ಹಾವೇರಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಯೋಗೆಶ್ವರ್, "ಕೂಡಲೇ ಶಾ ಖದ್ರಿ ದರ್ಗಾವನ್ನು ಸೀಲ್ ಮಾಡಿ ಇದರಲ್ಲಿ ತೊಡಗಿರುವವರ ವಿರುದ್ದ ಕಾನೂನು ಕ್ರಮ ಜರುಗಿಸುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಪದ್ದತಿಯನ್ನು ತಳ ಹಂತದಿಂದ ಹೋಗಲಾಡಿಸಲು ಬೇಕಾದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
First published: