• Home
  • »
  • News
  • »
  • district
  • »
  • ಹಾವೇರಿಯ ಈ ಆರಕ್ಷಕ ಜನರ ಜೀವರಕ್ಷಕ ಕೂಡಾ ಹೌದು, ಪೋಲೀಸಪ್ಪನ ಅದ್ಭುತ ಪ್ರತಿಭೆ !

ಹಾವೇರಿಯ ಈ ಆರಕ್ಷಕ ಜನರ ಜೀವರಕ್ಷಕ ಕೂಡಾ ಹೌದು, ಪೋಲೀಸಪ್ಪನ ಅದ್ಭುತ ಪ್ರತಿಭೆ !

ನಾಗರಹಾವಿನೊಂದಿಗೆ ಕಾನ್ಸ್​​ಟೇಬಲ್ ರಮೇಶ್

ನಾಗರಹಾವಿನೊಂದಿಗೆ ಕಾನ್ಸ್​​ಟೇಬಲ್ ರಮೇಶ್

ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಘಟಕದಲ್ಲಿ ಕಾನಸ್ಟೇಬಲ್ ಆಗಿ ಕೆಲಸ ಮಾಡುತ್ತಿರೋ ರಾಮಪ್ಪ ಹರಿಜನ ವೃತ್ತಿಯಲ್ಲಿ ಆರಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಆಪ್ತರಕ್ಷಕರಾಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಕಾನಸ್ಟೇಬಲ್ ವೃತ್ತಿ ಮಾಡ್ತಿದ್ರೂ ಸ್ನೇಕ್ ರಮೇಶ ಅಂತಾ ಹೆಸರುವಾಸಿ ಆಗಿದ್ದಾರೆ. ಕಳೆದೊಂದು ವರ್ಷದಿಂದ ಕೊರೊನಾ ಆರ್ಭಟ ಶುರುವಾಗಿದೆ. ಅದ್ರಲ್ಲೂ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಹರಡೋದನ್ನ ತಡೆಯಲು ಟಫ್ ರೂಲ್ಸ್ ಘೋಷಣೆಯಾದ್ಮೇಲೆ ಕಾನಸ್ಟೇಬಲ್ ರಮೇಶ ಅವರಿಗೆ ಒಂದೆಡೆ ಇಲಾಖೆಯ ವೃತ್ತಿ, ಮತ್ತೊಂದೆಡೆ ಹಾವು ಹಿಡಿದು ಕಾಡಿಗೆ ಬಿಡೋ‌‌ ಮೂಲಕ ಜನರ ಮತ್ತು ಹಾವಿನ ಪ್ರಾಣ ರಕ್ಷಣೆ ಮಾಡೋ ಪ್ರವೃತ್ತಿ.

ಮುಂದೆ ಓದಿ ...
  • Share this:

    ಹಾವೇರಿ: ಪೊಲೀಸ್ ಇಲಾಖೆ ಅಂದ್ರೆ ಸಾಕು ಅದು ಬಿಡುವಿಲ್ಲದ ಕೆಲಸದ ಇಲಾಖೆ ಅಂತಾ ಎಲ್ಲರಿಗೂ ಗೊತ್ತು. ಅದರಲ್ಲೂ ಕೊರೊನಾ ಆರ್ಭಟ ಶುರುವಾದ್ಮೇಲಂತೂ ಪೊಲೀಸರು ಹಗಲು ರಾತ್ರಿ ಅನ್ನದೆ ಕೆಲಸ ಮಾಡ್ತಿದ್ದಾರೆ. ಇಂಥಾ ಬಿಡುವಿಲ್ಲದ ಪೊಲೀಸ್ ವೃತ್ತಿ ಮಾಡ್ತಿರೋ ಕಾನಸ್ಟೇಬಲ್ ಒಬ್ರು ತಮ್ಮ ವೃತ್ತಿ ಜೊತೆಗೆ ಜನರ ಪ್ರಾಣ ರಕ್ಷಣೆ ಮಾಡೋ ಕೆಲಸವನ್ನೂ ಮಾಡ್ತಿದ್ದಾರೆ.


    ಹೌದು, ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಘಟಕದಲ್ಲಿ ಕಾನಸ್ಟೇಬಲ್ ಆಗಿ ಕೆಲಸ ಮಾಡುತ್ತಿರೋ ರಾಮಪ್ಪ ಹರಿಜನ ವೃತ್ತಿಯಲ್ಲಿ ಆರಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಆಪ್ತರಕ್ಷಕರಾಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಕಾನಸ್ಟೇಬಲ್ ವೃತ್ತಿ ಮಾಡ್ತಿದ್ರೂ ಸ್ನೇಕ್ ರಮೇಶ ಅಂತಾ ಹೆಸರುವಾಸಿ ಆಗಿದ್ದಾರೆ. ಕಳೆದೊಂದು ವರ್ಷದಿಂದ ಕೊರೊನಾ ಆರ್ಭಟ ಶುರುವಾಗಿದೆ. ಅದ್ರಲ್ಲೂ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಹರಡೋದನ್ನ ತಡೆಯಲು ಸರಕಾರ ಟಫ್ ರೂಲ್ಸ್ ಜಾರಿಗೆ ತಂದಿದೆ. ಟಫ್ ರೂಲ್ಸ್ ಘೋಷಣೆಯಾದ್ಮೇಲೆ ಕಾನಸ್ಟೇಬಲ್ ರಮೇಶ ಅವರಿಗೆ ಕೆಲಸದ ಒತ್ತಡ ಸಹಜವಾಗಿ ಹೆಚ್ಚಾಗಿದೆ. ಯಾಕಂದ್ರೆ ಒಂದೆಡೆ ಇಲಾಖೆಯ ವೃತ್ತಿ, ಮತ್ತೊಂದೆಡೆ ಹಾವು ಹಿಡಿದು ಕಾಡಿಗೆ ಬಿಡೋ‌‌ ಮೂಲಕ ಜನರ ಮತ್ತು ಹಾವಿನ ಪ್ರಾಣ ರಕ್ಷಣೆ ಮಾಡೋ ಪ್ರವೃತ್ತಿ. ಹೀಗಿ ಕೊರೊನಾ ಕರ್ತವ್ಯದ ಜೊತೆಗೆ ರಮೇಶ ಈಗಲೂ ಹಾವು ಇದೆ ಅಂತಾ ಯಾರಾದ್ರೂ ಕರೆ ಮಾಡಿದ್ರೆ ತಕ್ಷಣವೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಹಾವು ಇದ್ದಲ್ಲಿಗೆ ಹೋಗಿ ಹಾವು ಹಿಡಿದು ಹಾವಿನ ರಕ್ಷಣೆ ಮಾಡ್ತಾರೆ. ಇದರ ಜೊತೆಗೆ ಜನರ ಪ್ರಾಣ ಕೂಡ ರಕ್ಷಣೆ ಮಾಡ್ತಿದ್ದಾರೆ.


    ರೈತರ ಜಮೀನಿನಲ್ಲಿರೋ ಮೆಕ್ಕಜೋಳದ ತೆನೆಗಳ ರಾಶಿಯಲ್ಲಿ ಹೆಚ್ಚಾಗಿ ಹಾವು ಕಾಣಿಸಿಕೊಳ್ತಿವೆ. ಉಳಿದಂತೆ ಜನರ ಮನೆ, ಹಿತ್ತಿಲು ಸೇರಿದಂತೆ ಅಲ್ಲಲ್ಲಿ ಹಾವು ಕಾಣಿಸಿಕೊಳ್ತಿವೆ. ನಾಗರಹಾವು, ಕೊಳಕುಮಂಡಲ, ಕೇರೆ ಹಾವು ಹೀಗೆ ಬೇರೆ ಬೇರೆ ಬಗೆಯ ಹಾವುಗಳು ಕಾಣಿಸಿಕೊಳ್ಳುತ್ತವೆ. ಜಿಲ್ಲೆಯ ಎಲ್ಲಿಯೇ ಹಾವು ಕಾಣಿಸಿಕೊಂಡ್ರೂ ಜನರು ಕಾನಸ್ಟೇಬಲ್ ರಮೇಶಗೆ ಕರೆ ಮಾಡಿದ್ರೆ ಸಾಕು ತಕ್ಷಣವೆ ಅಲ್ಲಿಗೆ ಧಾವಿಸಿ ಹಾವು ಎಂಥದ್ದೆ ಇದ್ರೂ ಅದನ್ನ ಸುರಕ್ಷಿತವಾಗಿ ಹಿಡಿತಾರೆ. ಈಗ ಎಲ್ಲೆಲ್ಲೂ ಕೊರೊನಾ ಆಲೆಯ ಅಬ್ಬರ ಜೋರಾಗಿದೆ. ಕಾನಸ್ಟೇಬಲ್ ರಮೇಶ ಕೂಡ ಬಿಡುವಿಲ್ಲದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಕೆಲವೊಮ್ಮೆ ಡಿಎಆರ್ ಆಫೀಸ್ ಮುಂದೆ ಆಫೀಸ್ಗೆ ಬರೋ ಸಿಬ್ಬಂದಿ ಮತ್ತು ಜನರನ್ನ ತಪಾಸಣೆ ಮಾಡಿ ಒಳಗೆ ಕಳಿಸೋ ಡ್ಯೂಟಿ ಮಾಡ್ತಿದ್ದಾರೆ.


    ಇದರ ಜೊತೆಗೆ ಆಗಾಗ ಜನರು ಅನಗತ್ಯವಾಗಿ ಓಡಾಡದಂತೆ ತಡೆಯೋ‌ ಕೆಲಸ, ಕೊರೊನಾ ಜಾಗೃತಿ ಮೂಡಿಸೋ ಕೆಲಸ ಹೀಗೆ ಹತ್ತು ಹಲವು ಕೆಲಸಗಳನ್ನ ನಿರ್ವಹಿಸ್ತಿದ್ದಾರೆ. ಇದೆಲ್ಲದರ ಜೊತೆಜೊತೆಗೆ ಜನರು ಹಾವು ಅಂತಾ ಕರೆ ಮಾಡಿದ‌ ಕೂಡಲೆ ಅವರ ಮೇಲಧಿಕಾರಿಗಳ ಗಮನಕ್ಕೆ ತಂದು ಕಾನಸ್ಟೇಬಲ್ ರಮೇಶ ಹಾವು ಹಿಡಿದು ಕಾಡಿಗೆ ಬಿಟ್ಟು ಬರ್ತಿದ್ದಾರೆ. ಕೊರೊನಾ ಸಮಯ ಮಾತ್ರವಲ್ಲ‌ ವೃತ್ತಿಗೆ ಸೇರಿದಾಗಿನಿಂದಲೂ ವೃತ್ತಿ ಜೊತೆಗೆ ಹಾವು ಹಿಡಿದು ರಕ್ಷಣೆ ಮಾಡೋ ಪ್ರವೃತ್ತಿಯನ್ನ ಬೆಳೆಸಿಕೊಂಡಿದ್ದಾರೆ. ಈವರೆಗೆ ಸಾವಿರಾರು ಹಾವುಗಳನ್ನ ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ. ಈಗ ಕೊರೊನಾ ಸಮಯದ ಡ್ಯೂಟಿಯ ಜೊತೆಗೆ ಹಾವು ಹಿಡಿದು ಕಾಡಿಗೆ ಬಿಡೋ ಮೂಲಕ ಜನರ ಪ್ರಾಣ ರಕ್ಷಣೆಯ ಕೆಲಸ ಕೂಡ ಮಾಡ್ತಿದ್ದಾರೆ. ಕಾನಸ್ಟೇಬಲ್ ರಮೇಶ ವೃತ್ತಿ ಜೊತೆಗೆ ಬೆಳೆಸಿಕೊಂಡಿರೋ ಹಾವು ಹಿಡಿದು ಕಾಡಿಗೆ ಬಿಡೋ ಪ್ರವೃತ್ತಿಗೆ ಸಾರ್ವಜನಿಕರು ಭೇಷ್ ಅಂತಿದ್ದಾರೆ.


    ಈಗ ಎಲ್ಲೆಲ್ಲೂ ಕೊರೊನಾ ಎರಡನೆ ಅಲೆಯ ಅಬ್ಬರ ಇರೋದ್ರಿಂದ ಸಾಕಷ್ಟು ಜನರು ಬೇರೆಯವರ ಮನೆಗಳಿಗೆ ಹೋಗೋಕೆ ಭಯ ಪಡ್ತಿದ್ದಾರೆ. ಆದ್ರೆ ಕಾನಸ್ಟೇಬಲ್ ರಮೇಶ ಮಾತ್ರ ಮಾಸ್ಕ್ ಧರಿಸಿಕೊಂಡು, ಆಗಾಗ ಸ್ಯಾನಿಟೈಸರ್ ಬಳಕೆ ಮಾಡ್ತಾ ಹಾವು ಇದೆ ಅಂತಾ ಕರೆ ಮಾಡಿದವರ ಮನೆಗೆ ಧಾವಿಸಿ ಹಾವು ರಕ್ಷಣೆಯ ಜೊತೆಗೆ ಜನರ ಪ್ರಾಣ ರಕ್ಷಣೆ ಕೂಡ ಮಾಡ್ತಿದ್ದಾರೆ‌. ಕಾನಸ್ಟೇಬಲ್ ರಮೇಶ ಮಾಡ್ತಿರೋ ಕೆಲಸಕ್ಕೆ ಇಲಾಖೆ ಮಾತ್ರವಲ್ಲದೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗ್ತಿದೆ.


    (ವರದಿ: ಮಂಜುನಾಥ್ ತಳವಾರ)

    Published by:Soumya KN
    First published: