HOME » NEWS » District » THIS MAN IN BADAMI WATERS TREES EVERY SINGLE DAY FOR THE LOVE OF GREEN RBK SKTV

ಬರದ ಊರಿನಲ್ಲಿ ಗಿಡಗಳಿಗೆ ನೀರುಣಿಸೋ ಉದ್ಯಮಿ, ಉಸಿರಿರುವ ತನಕ ಹಸಿರು ಕಾಪಾಡುವ ತವಕ

ರಸ್ತೆ ಅಕ್ಕಪಕ್ಕದ ಸಾವಿರಾರು ಗಿಡಗಳಿಗೆ ಖುದ್ದಾಗಿ ನೀರುಣಿಸುತ್ತಾರೆ. ಬೆಳಗಿನ ಜಾವ  ಎರಡು ತಾಸು  ಖುದ್ದಾಗಿ ಇವರೆ ಟ್ಯಾಂಕರ್ ನಲ್ಲಿ ನೀರನ್ನು ತುಂಬಿಕೊಂಡು ನೀರನ್ನು ಗಿಡಗಳಿಗೆ ಹಾಕುತ್ತಾರೆ. ನಂತರ ಕಾರ್ಮಿಕರಿಂದ ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದರವರೆಗೂ ಬಾದಾಮಿ ಪಟ್ಟಣ ಹಾಗೂ ಸುತ್ತಮುತ್ತಲಿನ 30-40 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ಪಕ್ಕ ನೆಟ್ಟ ಗಿಡಕ್ಕೆ ನೀರುಣಿಸಿ ಹಸಿರು ಕ್ರಾಂತಿ ಮಾಡುತ್ತಿದ್ದಾರೆ.

news18-kannada
Updated:April 14, 2021, 8:58 AM IST
ಬರದ ಊರಿನಲ್ಲಿ ಗಿಡಗಳಿಗೆ ನೀರುಣಿಸೋ ಉದ್ಯಮಿ, ಉಸಿರಿರುವ ತನಕ ಹಸಿರು ಕಾಪಾಡುವ ತವಕ
ರಮೇಶ್ ಹಾದಿಮನಿ
  • Share this:
ಬಾಗಲಕೋಟೆ: ಬೇಸಿಗೆಯಲ್ಲಿ ಕುಡಿಯುವದಕ್ಕೆ ನೀರು ಸಿಗುವುದಿಲ್ಲ.ಅಂತಹದರಲ್ಲಿ ಬಾದಾಮಿಯಲ್ಲೊಬ್ಬ ಸಾವಿರಾರು ಗಿಡಮರಗಳಿಗೆ ನೀರು ಹಾಕುವದರ ಮೂಲಕ ಮರಗಳ ರಕ್ಷಕನಾಗಿದ್ದಾನೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣ ಹಾಗೂ ಸುತ್ತಮುತ್ತಲಿನ ರಸ್ತೆಯಲ್ಲಿರುವ ಗಿಡಮರಗಳಿಗೆ ನೀರುಣಿಸುವ ಕಾರ್ಯವನ್ನು  ರಮೇಶ್ ಹಾದಿಮನಿ ಎಂಬುವರು ಮಾಡುತ್ತಾ ಬಂದಿದ್ದಾರೆ, ಇವರೊಬ್ಬರು ಉದ್ಯಮಿಯಾಗಿ ಕೇವಲ ವ್ಯವಹಾರ, ಲಾಭ ಎಂದು ವಿಚಾರ ಮಾಡಬಹುದಿತ್ತು. ಆದರೆ ರಮೇಶ್ ಹಾದಿಮನಿ ಮಾತ್ರ ಕೇವಲ ಉದ್ಯಮಿ ಅಷ್ಟೇ ಅಲ್ಲದೇ ಒಬ್ಬ ಪರಿಸರ ಪ್ರೇಮಿ ಎಂದು ಹೇಳಬಹುದು. ಯಾಕೆಂದರೆ ಇವರು ದಿನ ಬೆಳಗಾದರೆ ಸಾಕು ತಮ್ಮ ಟ್ರ್ಯಾಕ್ಟರ್ ನಿಂದ ಟ್ಯಾಂಕರ್ ನಲ್ಲಿ ನೀರನ್ನು ತುಂಬಿಕೊಂಡು ರಸ್ತೆಗೆ ಇಳಿಯುತ್ತಾರೆ.

ರಸ್ತೆ ಅಕ್ಕಪಕ್ಕದ ಸಾವಿರಾರು ಗಿಡಗಳಿಗೆ ಖುದ್ದಾಗಿ ನೀರುಣಿಸುತ್ತಾರೆ. ಬೆಳಗಿನ ಜಾವ  ಎರಡು ತಾಸು  ಖುದ್ದಾಗಿ ಇವರೆ ಟ್ಯಾಂಕರ್ ನಲ್ಲಿ ನೀರನ್ನು ತುಂಬಿಕೊಂಡು ನೀರನ್ನು ಗಿಡಗಳಿಗೆ ಹಾಕುತ್ತಾರೆ. ನಂತರ ಕಾರ್ಮಿಕರಿಂದ ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದರವರೆಗೂ ಬಾದಾಮಿ ಪಟ್ಟಣ ಹಾಗೂ ಸುತ್ತಮುತ್ತಲಿನ 30-40 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ಪಕ್ಕ ನೆಟ್ಟ ಗಿಡಕ್ಕೆ ನೀರುಣಿಸಿ ಹಸಿರು ಕ್ರಾಂತಿ ಮಾಡುತ್ತಿದ್ದಾರೆ.

ಇದನ್ನು ತಮ್ಮ ಉಸಿರು ಇರುವರೆಗೂ‌ ಮುಂದುವರೆಸಿಕೊಂಡು ಹೋಗುವ ಸಂಕಲ್ಪ ಹೊಂದಿದ್ದು, ಗಿಡಗಳ ರಕ್ಷಕರಾಗಿ ಹೊರಹೊಮ್ಮಿದ್ದಾರೆ. ಇನ್ನು ಪರಿಸರ ಪ್ರೇಮಿ ಎಸ್ ಎಚ್ ವಾಸನ್ ಅವರ ಪರಿಸರ ಪ್ರೇರಣೆಯಿಂದ ನಾಲ್ಕು ವರ್ಷಗಳಿಂದ ಮರಗಳಿಗೆ ನೀರುಣಿಸುವ ಕಾರ್ಯ ಮಾಡುತ್ತಿರುವುದು ಖುಷಿಯಿದೆ ಎನ್ನುತ್ತಾರೆ ರಮೇಶ್ ಹಾದಿಮನಿ. ಸದ್ಯ ಬಿರುಬೇಸಿಗೆ ನದಿ ಹಳ್ಳಕೊಳ್ಳಗಳು ಸಂಪೂರ್ಣ ಬತ್ತಿ ಹೋಗಿವೆ. ಜನ ಜಾನುವಾರು ಪ್ರಾಣಿ ಪಕ್ಷಿಗಳಿಗೆ ನೀರಿನ ಅಭಾವ ಸಾಕಷ್ಟಿರುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ರಮೇಶ್ ಹಾದಿಮನಿ ಮಾತ್ರ ಗಿಡಗಳಿಗೆ ಒಂದು ದಿನವೂ ನೀರುಣಿಸುವದನ್ನು ಬಿಟ್ಟಿಲ್ಲ.

ಕಳೆದ ನಾಲ್ಕು ವರ್ಷಗಳಿಂದ  ಇವರು ದಿನಾಲೂ ಒಂದು ಟ್ಯಾಂಕರ್ ಇದಕ್ಕೆಂದೇ ಮೀಸಲಿಟ್ಟಿದ್ದಾರೆ. ಬಾದಾಮಿ ಪಟ್ಟಣ ಹಾಗೂ ಬಾದಾಮಿ ಪಟ್ಟಣದಿಂದ 30-40 ಕಿಮೀ ರಸ್ತೆ ಪಕ್ಕದಲ್ಲಿ ಗಿಡಗಳು  ಹಸಿರಿನಿಂದ ಕಂಗೊಳಿಸುತ್ತಿವೆ ಅಂದರೆ ಅದಕ್ಕೆ ರಮೇಶ್ ಹಾದಿಮನಿ ಅವರೇ ಕಾರಣ ಎನ್ನಬಹುದು. ಇದುವರೆಗೂ ರಮೇಶ್ ಹಾದಿಮನಿ  ಬೇಸಿಗೆಯಲ್ಲಿ ಗಿಡಮರಗಳಿಗೆ ನೀರುಣಿಸುವ ಮೂಲಕ ಹತ್ತು ಸಾವಿರಕ್ಕೂ ಹೆಚ್ಚು ಗಿಡಗಳನ್ನು ರಕ್ಷಣೆ ಮಾಡಿದ್ದಾರೆ.

ಇವರು ಒಂದು ಟ್ರ್ಯಾಕ್ಟರ್ ಶೋ ರೂಮ್, ಪೆಟ್ರೋಲ್ ಪಂಪ್ ಹೊಂದಿದ್ದು ,ದಿನಾಲೂ ತಾವಾಯಿತು ತಮ್ಮ ಉದ್ಯಮ ಎಂದು ಇರಬಹುದಿತ್ತು. ಆದರೆ ಉದ್ಯಮಿಯಲ್ಲೊಬ್ಬ ಪರಿಸರ ಪ್ರೇಮಿ ಇರುವದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅರಣ್ಯ ಇಲಾಖೆಯವರು ಕೇವಲ ಗಿಡ ನೆಟ್ಟು ಒಂದೋ ಎರಡು ತಿಂಗಳ ಆರೈಕೆ  ಮಾಡಿ ಕೈ ತೊಳೆದುಕೊಳ್ತಾರೆ. ಮುಂದೆ ತಿರುಗಿಯೂ ನೋಡುವದಿಲ್ಲ. ಆದರೆ ರಮೇಶ್ ಹಾದಿಮನಿ  ಅರಣ್ಯ ಇಲಾಖೆಯವರು ನೆಟ್ಟ ಎಲ್ಲ ಗಿಡಗಳನ್ನು ನಿತ್ಯ ನೀರುಣಿಸಿ ಬದುಕಿಸಿದ್ದಾರೆ. ಅರಣ್ಯ ಇಲಾಖೆಯವರು ಎಷ್ಟೇ ಗಿಡ ನೆಡಲಿ ಅವುಗಳಿಗೆ ನೀರುಣಿಸುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಬೇಸಿಗೆ ಆರಂಭ ಮಾರ್ಚ್, ಏಪ್ರಿಲ್,ಮೇ ತಿಂಗಳಾಂತ್ಯದವರೆಗೆ ನೀರುಣಿಸ್ತಾರೆ.

ಇದಕ್ಕಾಗಿ ಟ್ಯಾಂಕರ್ ವೊಂದನ್ನು ಖರೀದಿಸಿದ್ದು, ಪ್ರತಿದಿನ ಕಾರ್ಮಿಕರು ,ಇತರೇ ವೆಚ್ಚ ಸೇರಿ 2 ಸಾವಿರ ಹಣ ಖರ್ಚು ಮಾಡುತ್ತಿದ್ದಾರೆ.  ಇನ್ನು ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು, ರಮೇಶ್ ಹಾದಿಮನಿ ಸ್ನೇಹಿತರು ಸಾಥ್ ನೀಡಿದ್ದಾರೆ. ಇವರ ಕಾರ್ಯಕ್ಕೆ  ಎಲ್ಲರೂ ಸಂತಸ ವ್ಯಕ್ತಪಡಿಸಿದ್ದು ಇದು ಎಲ್ಲರಿಗೂ ಮಾದರಿ.
Youtube Video

ಒಟ್ಟಿನಲ್ಲಿ  ಬಿಸಿಲು, ಬಿಸಿಲಿನ ಬೇಗೆಯಲ್ಲಿ ಜನರಿಗೆ ನೀರಿಲ್ಲದ ವೇಳೆ, ಈ ಯುವಕ ಗಿಡಗಳ ದಾಹ ನೀಗಿಸಲು ಪಣ ತೊಟ್ಟು ನಿಂತಿದ್ದಾರೆ. ಇವರ ಪರಿಸರ ಪ್ರೇಮ, ಗಿಡಗಳಿಗೆ  ಜೀವಜಲ ನೀಡಿ ಗಿಡಗಳ ರಕ್ಷಣಾ ಕಾರ್ಯ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.
Published by: Soumya KN
First published: April 14, 2021, 8:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories