ಕಾರವಾರದಲ್ಲೊಬ್ಬ ಭಗೀರಥ; ಏಕಾಂಗಿಯಾಗಿ ಬಾವಿ ತೋಡಿ ಊರ ಜನರ ದಾಹ ನೀಗಿಸಿದ ವ್ಯಕ್ತಿ

ಊರ  ಪಕ್ಕದಲ್ಲೇ ಸಮುದ್ರ ಇರೋದ್ರಿಂದ  ಬಿರು ಬೇಸಿಗೆಯಲ್ಲಿ ಬಾವಿಯ  ನೀರು ಉಪ್ಪಾಗಿ ಪರಿವರ್ತನೆಯಾಗುತ್ತದೆ.  ಹೀಗಾಗಿ ಊರ ಮಂದಿಯೆಲ್ಲಾ ಖಾಲಿ ಕೊಡ ಹಿಡಿದು ನೀರಿಗಾಗಿ ಪರದಾಡುವ ಸಮಸ್ಯೆ ಸಾಮಾನ್ಯವಾಗಿದೆ.

ಆಧುನಿಕ ಭಗೀರಥ ಮಹದೇವ ಮಂಕಾಳ ನಾಯ್ಕ

ಆಧುನಿಕ ಭಗೀರಥ ಮಹದೇವ ಮಂಕಾಳ ನಾಯ್ಕ

  • Share this:
ಕಾರವಾರ(ಜೂ.07): ಕಷ್ಟಪಟ್ಟು ದುಡಿದರೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ. ಈಗಂತೂ ಲಾಕ್​ಡೌನ್ ಇರೋದ್ರಿಂದ  ಬಹಳಷ್ಟು ಜನರು ಮನೆಯಲ್ಲೇ ಕುಳಿತು ಬೋರ್ ಅನುಭವಿಸಿದ್ದಾರೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಮಂಜಗುಣಿ ಗ್ರಾಮದಲ್ಲಿ ಮಾದೇವ್ ನಾಯ್ಕ್ ಎನ್ನುವ ವ್ಯಕ್ತಿ ಏಕಾಂಗಿಯಾಗಿ  ಬಾವಿ ತೋಡಿ ಊರಿನವರ  ನೀರಿನ ದಾಹ ತೀರಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಯಾರು ಈತ ಆಧುನಿಕ ಭಗೀರಥ?

ಇವರ ಹೆಸರು ಮಹಾದೇವ ಮಂಕಾಳು ನಾಯ್ಕ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜುಗುಣಿ ಗ್ರಾಮದ  ನಿವಾಸಿ. ಇವರು ಕಲ್ಲಿನ ನೆಲದಲ್ಲಿ ಬಾವಿ  ತೋಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪ್ರತಿ ವರ್ಷ ಬೇಸಿಗೆ ಬಂತಂದ್ರೆ ಈ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ.  ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ  ಇರುವ ಒಂದೇ ಒಂದು ಬಾವಿಯಲ್ಲಿ 60ಕ್ಕೂ  ಹೆಚ್ಚು ಮನೆಯವರು  ನೀರು ತರಬೇಕು. ಮಳೆ ಸುರಿಯೋಕೆ ಮುನ್ನ  ಕೆಲ ತಿಂಗಳು ಈ ಗ್ರಾಮದಲ್ಲಿ ನೀರಿಗಾಗಿ ಆಹಾಕಾರ ಉಂಟಾಗುತ್ತದೆ.

ಇದನ್ನೂ ಓದಿ:Astrology: ಸೋಮವಾರದ ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಅಂತರ್ಜಲ ಬತ್ತಿ ಹೋಗೋದ್ರಿಂದ  ವಾರಕ್ಕೊಮ್ಮೆ  ಗ್ರಾಮಪಂಚಾಯ್ತಿ ನೀಡುವ  ನೀರೇ ಗತಿ. ಇಲ್ಲಿ  ಕೆಲವರ ಮನೆಯಲ್ಲಿ ಬಾವಿ ಇದೆ. ಆದ್ರೆ ಸಮರ್ಪಕವಾಗಿ ನೀರು ಸಿಗೋದಿಲ್ಲ. ಊರ  ಪಕ್ಕದಲ್ಲೇ ಸಮುದ್ರ ಇರೋದ್ರಿಂದ  ಬಿರು ಬೇಸಿಗೆಯಲ್ಲಿ ಬಾವಿಯ  ನೀರು ಉಪ್ಪಾಗಿ ಪರಿವರ್ತನೆಯಾಗುತ್ತದೆ.  ಹೀಗಾಗಿ ಊರ ಮಂದಿಯೆಲ್ಲಾ ಖಾಲಿ ಕೊಡ ಹಿಡಿದು ನೀರಿಗಾಗಿ ಪರದಾಡುವ ಸಮಸ್ಯೆ ಸಾಮಾನ್ಯವಾಗಿದೆ.

ಹೀಗಾಗಿ ಮಹಾದೇವ ತಮ್ಮ ಮನೆಯ ಹಿತ್ತಲಲ್ಲಿ ಒಂದು ಬಾವಿ ತೆಗೆಯುವ ಆಲೋಚನೆ ಮಾಡಿ ಕೆಲಸ ಪ್ರಾರಂಭಿಸಿಯೇ ಬಿಟ್ರು. ಕಳೆದ ಲಾಕ್ ಡೌನ್ ಅವಧಿಯಲ್ಲಿ ಕೆಲಸ ಕೂಡ ಇಲ್ಲದೇ ಮನೆಯಲ್ಲಿ ಕುಳಿತಿದ್ರಿಂದ ಸುಮಾರು 28 ಅಡಿ ಆಳದ ಬಾವಿ ತೋಡಿದರೂ ನೀರು ಬಂದಿರಲಿಲ್ಲ.   ಈ ಬಾರಿಯ ಲಾಕ್ ಡೌನ್ ಅವಧಿಯನ್ನ ಸದುಪಯೋಗಪಡಿಸಿಕೊಂಡು ಮತ್ತೆ ನಾಲ್ಕು ಅಡಿ  ತೋಡಿದ್ದರಿಂದ ಭರಪೂರ ನೀರು ಬಂದಿದೆ. ಇದರಿಂದ ಮಹಾದೇವ ತುಂಬಾ ಖುಷಿಗೊಂಡಿದ್ದಾರೆ.Development Index: ಅಭಿವೃದ್ಧಿ ಸೂಕ್ಯಾಂಕದಲ್ಲಿ ಮತ್ತೆ ಎರಡು ಸ್ಥಾನ ಕುಸಿದ ಭಾರತ: ಬಾಂಗ್ಲಾ, ನೇಪಾಳ ಶ್ರೀಲಂಕಾ, ಭೂತಾನ್‍ಗಳಿಗಿಂತ ಹಿಂದೆ!

ಕೂಲಿ ಮಾಡುವ ಮಾದೇವ್ ನಾಯ್ಕ್...

ಕೂಲಿ ಕೆಲಸ ಮಾಡುವ ಮಹಾದೇವ ಅವರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ  ಸ್ವಂತ ಬಾವಿ ತೆಗೆಸಲು ಸಾಧ್ಯವಿರಲಿಲ್ಲ. ಹೀಗಾಗಿ  ಲಾಕ್ ಡೌನ್ ಅವಧಿಯಲ್ಲಿಯೇ ಕೂಲಿ ಕೆಲಸವಿಲ್ಲದೇ ಮನೆಯಲ್ಲೇ ಕೂರುವ ಬದಲು ನೀರನ್ನ ಕಾಣಲೇಬೇಕೆಂದು ಸತತ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ತಮ್ಮ  ಪತ್ನಿ ಹಾಗೂ ಊರಿನ ಮಹಿಳೆಯರು ಪಡುವ ಕಷ್ಟವೂ ಕಾರಣವಾಗಿತ್ತು. ಸತತ ಪರಿಶ್ರಮದಿಂದ  ಬಂಡೆಗಲ್ಲನ್ನ  ಕಡಿದು  ಬರಪೂರ ನೀರು ಚಿಮ್ಮುತ್ತಿದೆ. ಇದೀಗ ಮನೆಯವರು ನೀರನ್ನ ಬಳಸುವ ಜೊತೆಗೆ ಊರವರಿಗೆ ನೀರು ನೀಡುತ್ತಿದ್ದಾರೆ ಮಹಾದೇವ ನಾಯ್ಕ.

ಒಟ್ಟಿನಲ್ಲಿ ಈ ಆಧುನಿಕ ಭಗೀರಥನ ಸಾಧನೆಗೆ ಊರಿನವರು  ಹರ್ಷ ವ್ಯಕ್ತಪಡಿಸಿದ್ದು, ತಮಗೂ ಕೂಡ  ನೀರು ಕೊಡುತ್ತಿರುವ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏನೇ ಆಗಲಿ ಸಮಯವನ್ನ  ಸದುಪಯೋಗ ಪಡಿಸಿಕೊಂಡು ಶ್ರಮ ಮತ್ತು ಛಲ ಇದ್ದರೇ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಬಡ ಕೂಲಿ ಕಾರ್ಮಿಕ ಸಾಕ್ಷಿಯಾಗಿದ್ದಾನೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿ ಯೊಬ್ಬರು ಕೈ ಜೋಡಿಸಬೇಕು.
Published by:Latha CG
First published: