Lonely Man: ಅಂಬಾಸಿಡರ್ ಕಾರು ಈತನ ಮನೆ, ಹಾವು-ಕಾಡುಕೋಣ-ಆನೆಗಳೇ ನೆರೆಹೊರೆ, 17 ವರ್ಷಗಳಿಂದ ಕಾಡಿನಲ್ಲಿ ಬದುಕುತ್ತಿರೋ ವಿಚಿತ್ರ ವ್ಯಕ್ತಿ

Lonely Man in Forest: ಕಾಡಿನಲ್ಲಿ ಹರಿಯುವ ಹೊಳೆಯಲ್ಲಿ ಸ್ನಾನ ನಿತ್ಯಾದಿಕರ್ಮಗಳನ್ನು ಚಂದ್ರಶೇಖರ್ ಮುಗಿಸುತ್ತಾರೆ..ಕಾಡಿನಲ್ಲಿ ಸಿಗುವ ಬಳ್ಳಿ ಗಳಿಂದ ಬುಟ್ಟಿಯನ್ನು ತಯಾರಿಸಿ ಅಡ್ತಲೆಯ ಒಂದು ಅಂಗಡಿಗೆ ಮಾರಿ ಅಕ್ಕಿ,ಸಕ್ಕರೆ ಸೇರಿದಂತೆ ಆಹಾರ ಸಾಮಾಗ್ರಿಗಳನ್ನು ಖರೀಸುತ್ತಾರೆ..ಚಂದ್ರಶೇಖರ್ ಗೆ ಕಾಡಿನ ಮಧ್ಯದಲ್ಲಿರುವ ಕಾರಿನ ಒಳಭಾಗವೇ ಪ್ರಪಂಚ.

ಕಾಡಿನಲ್ಲಿರುವ ತಮ್ಮ ಬಿಡಾರದಲ್ಲಿ ಚಂದ್ರಶೇಖರ್

ಕಾಡಿನಲ್ಲಿರುವ ತಮ್ಮ ಬಿಡಾರದಲ್ಲಿ ಚಂದ್ರಶೇಖರ್

  • Share this:
Man Alone: ಪೃಕೃತಿ ಒಂದು ಅಗೋಚರ ಶಕ್ತಿ..ಪೃಕೃತಿ ಗೆ ಮನುಷ್ಯನ ಸುಪ್ತ ಮನಸ್ಸಿನಲ್ಲಿರುವ ಭಾವನೆಗಳು ಅರ್ಥ ಆಗುತ್ತದೆ.. ಒಮ್ಮೆ ಪೃಕೃತಿ ಯಲ್ಲಿ ಲೀನವಾದರೆ ಮತ್ತೆ ಹೊರಬರುವುದು ಬಹಳ ಕಷ್ಟ..ಸರಿ ಸುಮಾರು 17 ವರ್ಷಗಳ ಹಿಂದೆ ತಾನು ಸಾಲ (Debt) ತೆಗೆದುಕೊಂಡ ಸಹಕಾರಿ ಬ್ಯಾಂಕ್ ನವರು ಮೋಸ ಮಾಡಿದರು ಎಂಬ ಕಾರಣಕ್ಕಾಗಿ ಬೇಸರದಿಂದ ನಾಡು ಬಿಟ್ಟು ಕಾಡು (Forest dweller) ಸೇರಿದ ವ್ಯಕ್ತಿ ಇಂದಿಗೂ ದಟ್ಟರಾಣ್ಯದಲ್ಲಿ ತನ್ನ ನೆಚ್ಚಿನ ಕಾರಿನೊಂದಿಗೆ (Inside the car) ವಾಸಿಸುತ್ತಿರುವ ವಿಲಕ್ಷಣ ಘಟನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಸಾಕ್ಷಿಯಾಗಿದೆ.. ಸುಳ್ಯ ತಾಲೂಕಿನಿಂದ ಹತ್ತಾರು ಕಿಲೋಮೀಟರ್ ದೂರದಲ್ಲಿರುವ ಅರಂತೋಡು ಗ್ರಾಮದ ಅಡ್ತಲೆ-ನೆಕ್ಕರೆ ದುರ್ಗಮ ಅರಣ್ಯದ ನಡುವೆ ಸಾಗಿದರೆ ಸಾಕು, ಒಂದು ಸಣ್ಣ ಪ್ಲಾಸ್ಟಿಕ್ ಹೊದಿಕೆಯುಳ್ಳ ಗುಡಿಸಲು ಕಾಣಸಿಗುತ್ತದೆ.. ಗುಡಿಸಲಿನ ಒಳಗೆ ಹಳೆಯ ಅಂಬಾಸಿಡರ್ ಕಾರ್ (Ambassador Car), ಕಾರ್ ನ ಮೇಲೊಂದು ರೇಡಿಯೋ.

ರೆಡಿಯೋದಲ್ಲಿ ಕೇಳುತ್ತಿರುವ ಮಂಗಳೂರು ಆಕಾಶವಾಣಿ ಕೇಂದ್ರದ ಹಳೆಯ ಹಿಂದಿ ಹಾಡುಗಳು..ಕಾರ್ ನ ಎದುರಲ್ಲೊಂದು ಹಳೆಯ ಸೈಕಲ್,ಆಗತಾನೇ ಮಾಡಿಟ್ಟ ನಾಲ್ಕೈದು ಬುಟ್ಟಿಗಳು..ಗುಡಿಸಲಿನ ಮೂಲೆಯಲ್ಲಿರುವ ಒಲೆಯಿಂದ ಹೊರ ಬರುತ್ತಿರುವ ಹೊಗೆ..ಈ ಹೊಗೆಯ ನಡುವೆ ಕುರುಚಲು ಗಡ್ಡ, ಹರಿದ ಅಂಗಿ, ಹವಾಯಿ ಚಪ್ಪಲಿ ಧರಿಸಿರುವ ವ್ಯಕ್ತಿ..ಹೆಸರು ಚಂದ್ರಶೇಖರ್.

ಕಾಡಿಗೆ ಸೇರಲು ಕಾರಣ ಇದು

ಈ ಚಂದ್ರಶೇಖರ್ ಕಾಡಿನಲ್ಲಿ ಕಾರಿನಲ್ಲಿ ಹೀಗೆ ಇರೋಕೆ ಒಂದು ಕಾರಣವಿದೆ. ಈ ಚಂದ್ರಶೇಖರ್ ಮೂಲತಃ ಸುಳ್ಯ ತಾಲೂಕಿನ ನೆಕ್ರಾಲ್ ಕೆಮ್ರಾಜೆ ಗ್ರಾಮದವರು. 2003ರವರೆಗೆ ಚಂದ್ರಶೇಖರ್ ಬಾಳಲ್ಲಿ ಎಲ್ಲವೂ ಸರಿಯಿತ್ತು. ಒಂದೂವರೆ ಎಕರೆ ಪ್ರದೇಶದಲ್ಲಿ ಅಡಿಕೆ ಕೃಷಿ ಹೊಂದಿದ ಚಂದ್ರಶೇಖರ್ ಒಳ್ಳೆಯ ಜೀವನವನ್ನು ನಡೆಸುತ್ತಿದ್ದರು..ಎಲಿಮಲೆ ಸಹಕಾರಿ ಬ್ಯಾಂಕ್ ನಿಂದ ನಲ್ವತ್ತು ಸಾವಿರ ಸಾಲ ಪಡೆದುಕೊಂಡ ಚಂದ್ರಶೇಖರ್ ಸಾಲ ಮರುಪಾವತಿ ಮಾಡಲಾಗದೆ ಇಕ್ಕಟ್ಟಿಗೆ ಸಿಲುಕಿದ್ದರು.

ಇದನ್ನೂ ಓದಿ: ಲಾಕ್‍ಡೌನ್‍ನಲ್ಲಿ ಯೂಟ್ಯೂಬ್ ಚಾನಲ್ ಆರಂಭಿಸಿ ಲಕ್ಷಗಟ್ಟಲೆ ದುಡಿಯುತ್ತಿರುವ ಒಡಿಶಾದ ಬುಡಕಟ್ಟು ಹುಡುಗ

ನಿಯಮದಂತೇ ಬ್ಯಾಂಕ್ ನವರು ಚಂದ್ರಶೇಖರ್ ಆಸ್ತಿಯನ್ನು ಹರಾಜಿಗಿಟ್ಟರು..ಬ್ಯಾಂಕ್ ನವರು ಸಣ್ಣ ಮೊತ್ತಕ್ಕೆ ತನ್ನ ಕೃಷಿ ಜಮೀನಿನನ್ನು ಹರಾಜಿಗಿಟ್ಟ ಬಗ್ಗೆ  ಚಂದ್ರಶೇಖರ್ ಶಾಕ್ ಗೆ ಒಳಗಾದರು. ತನ್ನ ಅಂಬಾಸಿಡರ್ ಕಾರ್ ನೊಂದಿಗೆ ತನ್ನ ಅಕ್ಕನ ಮನೆಯಾದ ಅರಂತೋಡು ಗ್ರಾಮದ ಅಡ್ತಲೆಗೆ  ಚಂದ್ರಶೇಖರ್ ಬಂದಿದ್ದಾರೆ..ಕಾಲಕ್ರಮೇಣ ಅಕ್ಕನ ಮನೆಯಲ್ಲೂ ಮನಸ್ತಾಪದಿಂದ ಚಂದ್ರಶೇಖರ್ ಒಬ್ಬಂಟಿಯಾಗಿ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಕಾಡಮಧ್ಯೆ ಕಾರನ್ನಿರಿಸಿ, ಕಾರಿನ ಮೇಲ್ಭಾಗಕ್ಕೆ ಪ್ಲಾಸ್ಟಿಕ್‌ ಹೊದಿಕೆ ಹಾಕಿ ಚಂದ್ರಶೇಖರ್ ಜೀವನ ಮಾಡುತ್ತಿದ್ದಾರೆ. ಚಂದ್ರಶೇಖರ್ ಕಾಡಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಏಕಾಂಗಿಯಾಗಿದ್ದರೂ,ಯಾರ ಸಹಾಯವನ್ನೂ ಈವರೆಗೆ ಪಡೆದಿಲ್ಲ.

ಇಷ್ಟೇ ಇವರ ದೈನಂದಿನ ಬದುಕು

ಕಾಡಿನಲ್ಲಿ ಹರಿಯುವ ಹೊಳೆಯಲ್ಲಿ ಸ್ನಾನ ನಿತ್ಯಾಧಿಕರ್ಮಗಳನ್ನು ಚಂದ್ರಶೇಖರ್ ಮುಗಿಸುತ್ತಾರೆ..ಕಾಡಿನಲ್ಲಿ ಸಿಗುವ ಬಳ್ಳಿ ಗಳಿಂದ ಬುಟ್ಟಿಯನ್ನು ತಯಾರಿಸಿ ಅಡ್ತಲೆಯ ಒಂದು ಅಂಗಡಿಗೆ ಮಾರಿ ಅಕ್ಕಿ, ಸಕ್ಕರೆ ಸೇರಿದಂತೆ ಆಹಾರ ಸಾಮಾಗ್ರಿಗಳನ್ನು ಖರೀಸುತ್ತಾರೆ.
ಚಂದ್ರಶೇಖರ್ ಗೆ ಕಾಡಿನ ಮಧ್ಯದಲ್ಲಿರುವ ಕಾರಿನ ಒಳಭಾಗವೇ ಪ್ರಪಂಚ. ತನ್ನ ಜಮೀನನ್ನು ಮೋಸದಿಂದ ಹರಾಜು ಮಾಡಿದವರಿಗೆ ಶಿಕ್ಷೆಯಾಗಿ ಮತ್ತೆ ಆ ಜಮೀನು ನನಗೆ ಸಿಗಬೇಕು ಅನ್ನೋದೇ ಚಂದ್ರಶೇಖರ್ ಬದುಕಿನ ಏಕಮಾತ್ರ ಕೊರಗು.

This man from Sullia DK Karnataka lives in an ambassador car parked in the middle of the forest from 17 years real cast away
ಅಡವಿಯಲ್ಲಿ ಚಂದ್ರಶೇಖರ್


ಹೀಗೆ ಚಂದ್ರಶೇಖರ್ ಕಾರಿನಲ್ಲಿ, ಕಾಡಿನಲ್ಲಿ ಏಕಾಂಗಿಯಾಗಿ ಇರುವ ಬಗ್ಗೆ ಮಾಹಿತಿ ತಿಳಿದು, ಈ ಹಿಂದೆ ದ.ಕ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಎ.ಬಿ ಇಬ್ರಾಹಿಂ ಚಂದ್ರಶೇಖರ್ ಇರುವ ಸ್ಥಳಕ್ಕೆ ಖುದ್ದು ತೆರಳಿದ್ದರು. ಚಂದ್ರಶೇಖರ್ ಗೆ ಬೇರೊಂದು ಕಡೆ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡುವ ಬಗ್ಗೆ ಭರವಸೆ ನೀಡಿದರು. ಜಿಲ್ಲಾಧಿಕಾರಿ ಮಾತಿನಂತೇ ನಡೆದರೂ, ಅಧಿಕಾರಿಗಳು ಚಂದ್ರಶೇಖರ್ ಗೆ ನೀಡಿದ ಜಾಗ ಅದು ರಬ್ಬರ್ ಕಾಡು...ಜಾಗ ಹಿಡಿಸದ ಚಂದ್ರಶೇಖರ್ ಮತ್ತೆ ಕಾಡಿಗೆ ಮರಳಿ ಕಾರಿನಲ್ಲಿ ವಾಸವಾಗಿದ್ದಾರೆ.

ಪ್ರಾಣಿಗಳೆಲ್ಲಾ ಇವರ ಗೆಳೆಯರು

ಚಂದ್ರಶೇಖರ್ ಇರುವ ಕಾರಿನವರೆಗೂ ಕಾಡಾನೆಗಳು ಬಂದು ಹೋಗಿವೆ..ಕಡವೆ ಚಿರತೆ,ಕಾಡುಹಂದಿ,ಕಾಡುಕೋಣಗಳೂ ಚಂದ್ರಶೇಖರ್ ಕಣ್ಣಳತೆ ದೂರದಲ್ಲೇ ಹಾದು ಹೋಗಿದೆ‌. ವಿಷ ಕಾರ್ಕೋಟಕ ಹಾವುಗಳು ಚಂದ್ರಶೇಖರ್ ಕಾರಿನೊಳಗೆ ಆಗಾಗ ನುಸುಳುತ್ತಿರುತ್ತದೆ..ಕೆಲವೇ ದಿನಗಳ ಹಿಂದೆ ರಾತ್ರಿ, ಬೆಳಕಿಲ್ಲದೇ ಕರಿನಾಗನ ಬಾಲ ಹಿಡಿದಿದ್ದರಂತೇ ಚಂದ್ರಶೇಖರ್...ಆದರೂ ಕಾಡು ಬಿಡಲ್ಲೊಪ್ಪದ ಚಂದ್ರಶೇಖರ್, ಕಾಡಿನಲ್ಲಿ ಕಾರಿನಲ್ಲಿ ವಾಸವಿದ್ದಾರೆ.

This man from Sullia DK Karnataka lives in an ambassador car parked in the middle of the forest from 17 years real cast away
ಕಾಡಿನಲ್ಲಿರುವ ಚಂದ್ರಶೇಖರ್ ವಾಸಸ್ಥಳ


ಚಂದ್ರಶೇಖರ್ ಕಾಡೊಳಗೆ ಇದ್ದರೂ ಪೃಕೃತಿಗೆಂದೂ ಅಪಚಾರವೆಸಿದಿಲ್ಲ..ಕಾಡಿನ‌ ಒಂದು ಗಿಡವೂ ಕಡಿದಿಲ್ಲ..ಕಾಡು ಬಳ್ಳಿಯನ್ನು ಮಾತ್ತ ಬುಟ್ಟಿಗೆ ಉಪಯೋಗಿಸುತ್ತಾರೆ...ಇದಕ್ಕಾಗಿ ಅರಣ್ಯ ಇಲಾಖೆಯೇ ಚಂದ್ರಶೇಖರ್ ಗೆ ಕಾಡಿನಲ್ಲಿರೋಕೆ ಅವಕಾಶ ನೀಡಿದೆ. ಕಾಡಿನಲ್ಲಿರುವ ಯಾವುದೇ ಉತ್ಪನ್ನ ಗಳನ್ನು ನಾನು ಬಳಸೋದಿಲ್ಲ. ಕಾಡಿನಲ್ಲಿ ಸಿಗುವ ಬೆತ್ತವನ್ನೂ ನಾನು ಕಡಿಯೋದಿಲ್ಲ. ಒಂದು ಸಣ್ಣ ಗಿಡ ಕಡಿದರೂ ಅರಣ್ಯ ಇಲಾಖೆ ನನ್ನ ಮೇಲಿರುವ ನಂಬಿಕೆಗೆ ನಾನು‌ದ್ರೋಹ ಬಗೆದಂತೇ ಅಂತಾ ಹೇಳಿ ಚಂದ್ರಶೇಖರ್ ಪ್ರಾಮಾಣಿಕತೆ ಮೆರೆದಿದ್ದಾರೆ.

ಕಾಡಿನಲ್ಲಿದ್ದರೂ ಕೋವಿಡ್ ಲಸಿಕೆ ಪಡೆದಿದ್ದಾರೆ

ಚಂದ್ರಶೇಖರ್ ಗೆ ಆಧಾರ್ ಕಾರ್ಡ್ ಇಲ್ಲದಿದ್ದರೂ, ಅರಂತೋಡು ಗ್ರಾಮ ಪಂಚಾಯತ್ ಕೊರೊನಾ ಲಸಿಕೆ‌ ನೀಡಿದೆ. ಲಾಕ್ ಡೌನ್ ಸಂಧರ್ಭದಲ್ಲಿ ಆಹಾರಕ್ಕೆ ತುಂಬಾ ಕಷ್ಟಪಟ್ಟ ಅವರು, ನೀರನ್ನು ಕುಡಿದು, ಕಾಡಿನಲ್ಲಿ ಸಿಗುವ ಹಣ್ಣುಗಳನ್ನು ತಿಂದು ಹಲವು ದಿನಗಳ ಕಾಲ ಬದುಕಿದ್ದಾರೆ. ಚಂದ್ರಶೇಖರ್ ನಿರುಪದೃವಿ ಜೀವಿ. ಚಂದ್ರಶೇಖರ್ ಹೊರಗಿನ ವೇಷ ಭೂಷಣ, ಜೀವನ ಶೈಲಿ ಭಯಗೊಳಿಸಿದರೂ ಆಂತರ್ಯದಲ್ಲಿರೋದು ಹಾಲು ಮನಸ್ಸು.  ಒಂದು ಘಟನೆಯಿಂದ ಮಾನಸಿಕವಾಗಿ ಆಘಾತಕ್ಕೊಳಗಾಗಿರುವ ಚಂದ್ರಶೇಖರ್ ತಾನಾಯಿತು ತನ್ನ ಬದುಕಾಯಿತು ಅಂತಾ ಬದುಕುತ್ತಿದ್ದಾರೆ.

ಇಂದಲ್ಲ ನಾಳೆ ತಾನು ಕಳೆದುಕೊಂಡಿರುವ ಭೂಮಿ ಮರಳಿ ಸಿಗುವ ವಿಶ್ವಾಸದಿಂದ ಎಲ್ಲಾ ದಾಖಲೆಗಳನ್ನು ಜತನದಿಂದ ಕಾಪಾಡಿಕೊಂಡಿದ್ದಾರೆ. ಚಂದ್ರಶೇಖರ್ ಗೆ ಸದ್ಯ ಬೇಕಾಗಿರೋದು ಇರುವುದಕ್ಕೊಂದು ಭದ್ರ ವಾದ ಸೂರು, ಘಾಸಿಯಾದ ಮನಸ್ಸಿಗೊಂದು ಚಿಕಿತ್ಸೆ. ಚಂದ್ರಶೇಖರ್ ನಾಗರಿಕ ಸಮಾಜದೊಂದಿಗೆ ಬದುಕಬೇಕಾದರೆ ಮಾನಸಿಕವಾಗಿ ಕುಗ್ಗಿರುವ ಮನಸ್ಸಿಗೆ ಚಿಕಿತ್ಸೆ ನೀಡಿ ಮಾನವ ಸಮಾಜದೊಳಗೆ ಸೇರಿಸಿಕೊಳ್ಳಬೇಕಾಗಿದೆ..
Published by:Soumya KN
First published: