ಅರಾಜಕತೆ ಸೃಷ್ಠಿಸೋದು ನಾಯಕತ್ವದ ಲಕ್ಷಣ ಅಲ್ಲ; ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿ.ಟಿ. ರವಿ ಗುಡುಗು‌

ಬೆದರಿಕೆ ಮೂಲಕ ಸರ್ಕಾರವನ್ನು ಮಣಿಸಲು ಸಾಧ್ಯವಿಲ್ಲ. ಸಾರಿಗೆ ಸಚಿವರು ಮೇ2 ರ ವರೆಗೆ ಸಮಯ ಕೋಡುವಂತೆ ಕೇಳಿಕೊಂಡಿದ್ದಾರೆ. ನೌಕರರು ಅಲ್ಲಿಯವರೆಗೆ ಸಮಯ ಕೊಟ್ಟು ನೋಡಬೇಕು. ಸರ್ಕಾರ ಹಾಗೂ ಬಿಜೆಪಿ ನಿಮ್ಮ ಬೇಡಿಕೆಯ ಪರವಾಗಿದೆ ಎಂದು ಸಿಟಿ ರವಿ ತಿಳಿಸಿದ್ದಾರೆ.

ಸಿ ಟಿ ರವಿ.

ಸಿ ಟಿ ರವಿ.

  • Share this:
ಚಿಕ್ಕಮಗಳೂರು : ಕೋಡಿಹಳ್ಳಿ ಚಂದ್ರಶೇಖರ್ ಇಷ್ಟು ದಿನ ರೈತ ನಾಯಕರಾಗಿದ್ದರು ಈಗ ಕಾರ್ಮಿಕ ನಾಯಕರಾಗಿದ್ದಾರೆ. ನೌಕರರನ್ನ ಎತ್ತಿಕಟ್ಟಿ ಅರಾಜಕತೆ ಸೃಷ್ಟಿಸುವುದು ಸುಲಭ ಆದರೆ, ಹರಾಜಕತೆ ಸೃಷ್ಟಿಸುವುದು ನಾಯಕತ್ವದ ಲಕ್ಷಣ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ರೈತ-ಕಾರ್ಮಿಕ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ಸರ್ಕಾರ ರೈತರ ಪರವಾಗಿ ತೆಗೆದುಕೊಂಡ ನಿಲುವುಗಳನ್ನು ರೈತ ವಿರೋಧಿ ಎಂದು ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕೋಡಿಹಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾವು ಬೆಳೆದ ಬೆಳೆಯನ್ನ ಮುಕ್ತವಾಗಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದಿದ್ದರು. ಈಗ ಸರ್ಕಾರ ಮುಕ್ತ ಮಾರಾಟಕ್ಕೆ ಅವಕಾಶ ಕೊಟ್ಟಿದೆ, ಆದರೂ ರೈತ ವಿರೋಧಿ ಎನ್ನುತ್ತಿದ್ದಾರೆ" ಎಂದು ವ್ಯಂಗ್ಯವಾಡಿದರು.

"ಬೆದರಿಕೆ ಮೂಲಕ ಸರ್ಕಾರವನ್ನು ಮಣಿಸಲು ಸಾಧ್ಯವಿಲ್ಲ. ಸಾರಿಗೆ ಸಚಿವರು ಮೇ2 ರ ವರೆಗೆ ಸಮಯ ಕೋಡುವಂತೆ ಕೇಳಿಕೊಂಡಿದ್ದಾರೆ. ನೌಕರರು ಅಲ್ಲಿಯವರೆಗೆ ಸಮಯ ಕೊಟ್ಟು ನೋಡಬೇಕು. ಸರ್ಕಾರ ಹಾಗೂ ಬಿಜೆಪಿ ನಿಮ್ಮ ಬೇಡಿಕೆಯ ಪರವಾಗಿದೆ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಯನ್ನು ಎದುರಿಸುವಂತಹ ವೇಳೆಯಲ್ಲೂ ನೌಕರರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಹಾಗಾಗಿ ಮುಷ್ಕರವನ್ನು ಹಿಂತೆಗೆದುಕೊಳ್ಳುವಂತೆ ನೌಕರರಲ್ಲಿ ಮನವಿ ಮಾಡಿದರು. ಮೊದಲೇ ಸಂಕಷ್ಟದಲ್ಲಿದ್ದ ಸಾರಿಗೆ ಇಲಾಖೆ ಕೋವಿಡ್‍ನಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಹಕರಿಸುವಂತೆ" ಮಾಜಿ ಸಚಿವ ಸಿ.ಟಿ. ರವಿ ವಿನಂತಿಸಿದರು.

ಇದನ್ನೂ ಓದಿ: ರಾಜಕೀಯ ದ್ವೇಷ ಮತ್ತು ವಿರೋಧ ಪಕ್ಷಗಳನ್ನು ಹಣಿಯಲು ಕೇಂದ್ರದ ಏಜೆನ್ಸಿಗಳ ದುರುಪಯೋಗ; ಶಿವಸೇನೆ

ಸೈನಿಕರ ಹತ್ಯೆ ದುರಾದೃಷ್ಟಕರ

ಯಡಪಂಥೀಯ ನಿಲುಗಳಿಂದ ದುಷ್ಪ್ರೇರಣೆ ಪಡೆದ ಜನರು ಛತ್ತಿಸಘಡದಲ್ಲಿ 27 ಜನ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಇದು ದುರಾದೃಷ್ಟಕರ  ಸೈನಕರಿಗೆ ಶತ್ರು ಆದವರು ದೇಶಕ್ಕೂ ಸಹ ಶತ್ರುಗಳೇ. ಯಾರು ಸಂವಿಧಾನವನ್ನು ನಂಬುವುದಿಲ್ಲವೋ ಅವರು ಬ್ಯಾಲೆಟ್ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ. ಈ ದೇಶದ ಸಂವಿಧಾನದ ಮೇಲೆ ನಂಬಿಕೆ ಇರುವವರಿಗೆ ಬ್ಯಾಲೆಟ್ ಮೇಲೆ ನಂಬಿಕೆ ಇರುತ್ತದೆ. ಬುಲೆಟ್ ಮೇಲೆ ನಂಬಿಕೆ ಇರುವವನಿಗೆ ಸಂವಿಧಾನದ ಮೇಲೆ ನಂಬಿಕೆ ಇರುವುದಿಲ್ಲ.

ಸೈನಿಕರನ್ನು ಶತ್ರು ಎಂದು ಪರಿಗಣಿಸುವವನು ದೇಶದಲ್ಲಿ ಇರುವುದಕ್ಕೆ ಅರ್ಹತೆ ಪಡೆದಿಲ್ಲ. ನಾನು ಗೌರಿ ಎಂದು ಮುಂಬತ್ತಿ ಹಿಡಿದವರು 27 ಜನ ಸೈನಿಕರು ಸತ್ತಾಗ ಏಕೆ ಮುಂಬತ್ತಿ ಹಿಡಿಯಲಿಲ್ಲ ಎಂದು ಪ್ರಶ್ನಿಸಿದರು. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದ್ದು, ಸಣ್ಣ ಸಣ್ಣ ವಿಷಯಗಳನ್ನು ವೈಭವಿಕರಿಸಿ ಹರಾಜಕತೆಯನ್ನು ಸೃಷ್ಟಿಸಿ ದೇಶವನ್ನು ಹೊಡೆಯುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಜನಜಾಗೃತಿ ಉಂಟು ಮಾಡುವ ಅನಿವಾರ್ಯತೆ ಇದೆ" ಎಂದಿದ್ದಾರೆ.
Published by:MAshok Kumar
First published: