• Home
  • »
  • News
  • »
  • district
  • »
  • Kodagu: ಲಾಕ್​​ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದೆ ಈ ಪಂಚಾಯಿತಿ

Kodagu: ಲಾಕ್​​ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದೆ ಈ ಪಂಚಾಯಿತಿ

ಅಗತ್ಯ ವಸ್ತುಗಳ ಹಂಚಿಕೆ

ಅಗತ್ಯ ವಸ್ತುಗಳ ಹಂಚಿಕೆ

ಪ್ರತೀ ವಾರ್ಡಿಗೆ 3 ಜನರಿರುವ ಕೊರೊನಾ ವಾರಿಯರ್ಸ್ ಗಳ ಒಂದು ತಂಡ ಕೆಲಸ ಮಾಡುತ್ತಿದೆ. ಇದೇ ರೀತಿ ಒಟ್ಟು ಏಳು ತಂಡಗಳು, ಏಳು ವಾರ್ಡುಗಳಲ್ಲೂ ಮನೆ ಮನೆಗೆ ತೆರಳಿ ಈ ಆಹಾರ ಕಿಟ್ ಗಳನ್ನು ತಲುಪಿಸುತ್ತಿವೆ.

  • Share this:

ಕೊಡಗು(ಮೇ 30): ಕೋವಿಡ್ ನಿಯಂತ್ರಿಸೋದಕ್ಕೆ ಸರ್ಕಾರ ಬರೀ ನಿಯಮ ಜಾರಿ ಮಾಡಿದ್ರೆ ಸಾಕೆ.? ಆದರೆ ಕೊಡಗಿನ ಗ್ರಾಮ ಪಂಚಾಯಿತಿಯೊಂದು ನಿಯಮದ ಜೊತೆಗೆ ಜನರ ಮನೆ ಬಾಗಿಲಿಗೆ ಎಲ್ಲಾ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಜನರನ್ನು ಮನೆಯಿಂದ ಹೊರಗೆ ಬರದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಹೌದು, ಇಂತಹ ವಿಶೇಷ ಕೆಲಸದ ಮೂಲಕ ಕೋವಿಡ್ ನಿಯಂತ್ರಿಸಲು ಜಾರಿ ಮಾಡಿರುವ ಲಾಕ್​​ಡೌನ್​​ಗೆ ಜನರು ಸಂಪೂರ್ಣ ಸ್ಪಂದಿಸುವಂತೆ ಮಾಡಿರುವುದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ. ಅಗತ್ಯ ವಸ್ತುಗಳ ಪೂರೈಸುವುದಕ್ಕಾಗಿ ಪಂಚಾಯಿತಿ ಸಾಮಾನ್ಯ ಸಭೆ ನಡೆಸಿ ಪಂಚಾಯಿತಿಯ ಸ್ವಲ್ಪ ಅನುದಾನವನ್ನು ಬಳಸಿಕೊಂಡಿದೆ. ಅದಕ್ಕಿಂತ ಮುಖ್ಯವಾಗಿ ಈ ಕೆಲಸಕ್ಕೆ ಬೇಕಾಗಿರುವ ವೆಚ್ಚ ಭರಿಸುವುದಕ್ಕಾಗಿ ಪಂಚಾಯಿತಿಯ ಎಲ್ಲಾ ನೌಕರರು ತಮ್ಮ ಎರಡು ತಿಂಗಳ ಸಂಬಳವನ್ನು ನೀಡಿದ್ದಾರೆ.


ಜೊತೆಗೆ ಪಂಚಾಯತಿ ಅಧ್ಯಕ್ಷ, ಸದಸ್ಯರು ತಮ್ಮ ಎರಡು ತಿಂಗಳ ಗೌರವ ಧನವನ್ನು ನೀಡಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಏಳು ವಾರ್ಡುಗಳಿದ್ದು ಎರಡು ಸಾವಿರ ಕುಟುಂಬಗಳಿವೆ. ಅಷ್ಟೂ ಕುಟುಂಬಗಳಿಗೂ ಕನಿಷ್ಠ 15 ದಿನಗಳಿಗೆ ಬೇಕಾಗಿರುವ ತರಕಾರಿ, ಸಾಂಬಾರ ಪದಾರ್ಥಗಳ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ. ಕೊಡಗಿನ ನೆಲ್ಯಹುದಿಕೇರಿ ಮತ್ತು ಸಿದ್ಧಾಪುರ ಭಾಗದಲ್ಲಿ ಜನರು ಮರಗೆಣಸನ್ನು ಹೆಚ್ಚು ಉಪಯೋಗಿಸುವುದರಿಂದ ಪ್ರತೀ ಕುಟುಂಬಕ್ಕೂ ವಿಶೇಷವಾಗಿ ಎರಡು ಕೆ.ಜಿ. ಗೆಣಸನ್ನು ವಿತರಣೆ ಮಾಡಿದ್ದಾರೆ.


ಇದನ್ನೂ ಓದಿ:ಅತ್ಯಾಚಾರ ಆರೋಪ: ಮಂಡ್ಯದಲ್ಲಿ ಅರೆಸ್ಟ್‌ ಆದ Kangana Ranaut ಬಾಡಿಗಾರ್ಡ್


ಪ್ರತೀ ವಾರ್ಡಿಗೆ 3 ಜನರಿರುವ ಕೊರೊನಾ ವಾರಿಯರ್ಸ್ ಗಳ ಒಂದು ತಂಡ ಕೆಲಸ ಮಾಡುತ್ತಿದೆ. ಇದೇ ರೀತಿ ಒಟ್ಟು ಏಳು ತಂಡಗಳು, ಏಳು ವಾರ್ಡುಗಳಲ್ಲೂ ಮನೆ ಮನೆಗೆ ತೆರಳಿ ಈ ಆಹಾರ ಕಿಟ್ ಗಳನ್ನು ತಲುಪಿಸುತ್ತಿವೆ. ನೆಲ್ಯಹುದಿಕೇರಿಯ ಗ್ರಾಮ ಪಂಚಾಯಿತಿಯಿಂದ ದೊಡ್ಡ ದೊಡ್ಡ ವಾಹನಗಳಲ್ಲಿ ಆಹಾರದ ಕಿಟ್ ಗಳನ್ನು ಭರ್ತಿ ಮಾಡಿಕೊಂಡು ಸಾಗಿಸುವ ತಂಡಗಳು ಮನೆಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿವೆ.


ಅಷ್ಟೇ ಅಲ್ಲ ಜೊತೆಗೆ ಈ ತಂಡಗಳೇ ತಮ್ಮ ವಾರ್ಡುಗಳ ಜನರಿಗೆ ಇತರೆ ಯಾವುದೇ ವಸ್ತುಗಳು ಬೇಕಾಗಿದ್ದರೂ ಅವುಗಳ ಪಟ್ಟಿ ಪಡೆದು ಪಟ್ಟಣದಿಂದ ಖರೀದಿಸಿ ಮನೆ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿವೆ. ಮಾತ್ರೆ ಔಷಧಿಗಳು ಬೇಕಾಗಿದ್ದರೂ ಅವುಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತಿವೆ.


ಇದನ್ನೂ ಓದಿ:Karnataka Politics: ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ; ಸಿಪಿವೈಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು


ವಾರದಲ್ಲಿ 3 ದಿನ ಕೊಡಗು ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೂ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರು ಮಾತ್ರ ಮನೆಯಿಂದ ಹೊರಗೆ ಬರದಂತೆ ನಿಯಂತ್ರಿಸಲು ಜನರಿಗೆ ಅನುಕೂಲವಾಗುವಂತೆ ಪಂಚಾಯಿತಿ ಮಹತ್ವದ ಕೆಲಸ ಮಾಡುತ್ತಿರೋದು ನಿಜಕ್ಕೂ ಶ್ಲಾಘನೀಯ ಕೆಲಸವೇ ಸರಿ.


ಒಟ್ಟಿನಲ್ಲಿ ನಿಯಮಗಳನ್ನಷ್ಟೇ ಮಾಡಿದರೆ ಸಾಲದು, ಅದರ ಜೊತೆಗೆ ಸೌಲಭ್ಯಗಳನ್ನೂ ಒದಗಿಸಬೇಕು ಎನ್ನೋದನ್ನ ಮಾಡಿ ತೋರಿಸುವ ಮೂಲಕ ನೆಲ್ಯಹುದಿಕೇರಿ ಗ್ರಾಮ  ಪಂಚಾಯಿತಿ ಈಗ ಕೊಡಗು ಜಿಲ್ಲೆಗೆ ಮಾದರಿಯಾಗಿದೆ.

Published by:Latha CG
First published: